ಪರೀಕ್ಷೆ ತಪ್ಪಿಸಿಕೊಳ್ಳಲು ಮಾಡಿದ ಐಡಿಯಾ!!!: ಬಸವನಗೌಡ ಹೆಬ್ಬಳಗೆರೆ ಸರಣಿ
ನನಗೆ ಹಲವಾರು ಬಾರಿ ನಮ್ಮನೆ ಕಂಡೀಶನ್‌ಗೆ ಚೆನ್ನಾಗಿ ಓದಬೇಕು ಆದರೆ ಈ ರೀತಿ ಯಾಕೆ ಮಾಡ್ತಾ ಇದೀನಿ ಅನಿಸೋದು. ಆದರೆ ನಾನು, ಲಿಂಗರಾಜ, ಸುಧಾಕರ ಅಕ್ಟೋಬರ್ ವೇಳೆಗಾಗಲೇ ಈ ವರ್ಷ ರಿಜೆಕ್ಟ್ ಮಾಡಬೇಕು ಅಂತಾ ತೀರ್ಮಾನ ಮಾಡಿದ್ವಿ. ನಾನೂ ಈ ತೀರ್ಮಾನಕ್ಕೆ ಬರೋದಿಕ್ಕೂ ಒಂದು ಕಾರಣ ಇತ್ತು. ನಾನು ಮೊದಲ ಪಿಯೂಸಿಯಿಂದ ದ್ವಿತೀಯ ಪಿಯೂಸಿಗೆ ಕಾಲೇಜ್ ಬದಲಾಯಿಸಬೇಕು ಅಂತಾ ಹೋದಾಗ 2 ರಿಂದ 3 ತಿಂಗಳು ಬೋರ್ಡ್‌ಗೆ ಓಡಾಟದ ಮೂಲಕ ಸಮಯ ವ್ಯರ್ಥವಾಗಿ ಹೋಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ