Advertisement

Tag: ಶ್ರೀಧರ ಬಳಗಾರ

ಆಧುನಿಕ ವಿಕಾರಕ್ಕೊಂದು ಕನ್ನಡಿ: ಕಾವ್ಯಾ ಕಡಮೆ ಕಥಾ ಸಂಕಲನಕ್ಕೆ ಶ್ರೀಧರ ಬಳಗಾರ ಮುನ್ನುಡಿ

ತೊಟ್ಟು ಕ್ರಾಂತಿ ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನ ಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.
ಕಾವ್ಯಾ ಕಡಮೆ ಕಥಾ ಸಂಕಲನ “ತೊಟ್ಟು ಕ್ರಾಂತಿ”ಗೆ ಕತೆಗಾರ ಶ್ರೀಧರ ಬಳಗಾರ ಬರೆದ ಮುನ್ನುಡಿ ನಿಮ್ಮ ಓದಿಗೆ

Read More

ಸಹೃದಯರ ಅಂತರಂಗವನ್ನು ಘಾಸಿಗೊಳಿಸುವ ಕ್ಷಣಗಳಿವು

ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವ, ತಪ್ಪುಗಳನ್ನು ತಿದ್ದಿಕೊಳ್ಳುವ ಸುಂದರ ವಾತಾವರಣವು ಮಾಸಿ ಹೋಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಬರಹಗಾರರು ಗೊಂದಲದ ಮನಸ್ಥಿತಿಯಲ್ಲಿದ್ದಾರೆ. ನಿಜವಾಗಿಯೂ ಸಾಹಿತ್ಯ ಕೃತಿಯೊಂದರ ಉದ್ದೇಶವೇನಪ್ಪಾ ಎಂಬ ಪ್ರಶ್ನೆಯೊಂದು ಧುತ್ತನೇ ನಮ್ಮೆದುರು ನಿಂತಿರುವಂತಿದೆ. ಈ ಹಿನ್ನೆಲೆಯಲ್ಲಿ ಕಾದಂಬರಿಕಾರ ಶ್ರೀಧರ ಬಳಗಾರ ಅವರೊಡನೆ ಕೋಡಿಬೆಟ್ಟು ರಾಜಲಕ್ಷ್ಮಿ ನಡೆಸಿದ ಮಾತುಕತೆಯ ತುಣುಕೊಂದು ಇಲ್ಲಿದೆ.

Read More

ಪ್ರೀತಿ, ಕ್ರಾಂತಿ, ಸಾಹಿತ್ಯಕ್ಕೆ ಅಂತಃಕರಣವೇ ಅಂತರ್ಜಲ

ಕಥಾ ಪ್ರಕಾರದಲ್ಲಿ ನಾಗರೇಖ ಪ್ರಯೋಗಶೀಲರು ಎಂಬುದಕ್ಕೆ ‘ಸ್ಟಾಕ್ ಹೋಮ್ ಸಿಂಡ್ರೋಮ್’ನ್ನು ಹೆಸರಿಸಬಹುದು. ಕಥೆಗೆ ಮನಃಶಾಸ್ತ್ರದ ಹಿನ್ನೆಲೆ ಇದೆ. ನೋಯಿಸಿದವರನ್ನು ನಿಷ್ಠುರವಾಗಿ ನಿರಾಕರಿಸಲಾರದ ಅಸಹಾಯಕತೆಯಲ್ಲಿ ಅವರ ಬಾಂಧವ್ಯಕ್ಕೆ ಅಂಟಿಕೊಳ್ಳುವ ವಿಚಿತ್ರ ಮನೋವ್ಯಾಕುಲತೆಯಿದು. ಸಂಪ್ರೀತ, ಸಾತಮ್ಮ ಮತ್ತು ಡಾ. ಸುದತಿಯರ ಮನೋಮಾರ್ಗದ ಮೂಲಕ ಚಲಿಸುವ ಕಥಾ ರಥದ ನಿರೂಪಣೆ ವಿಶಿಷ್ಟವಾಗಿದೆ. ಡಾ. ಸುದತಿ ತನ್ನಂತೆಯೇ ಗಂಡನ ವ್ಯಗ್ರತೆಯನ್ನು ಪ್ರೀತಿಸುವ ಸಾತಮ್ಮನನ್ನು ವಿಷಾದದ ಕನ್ನಡಿಯಲ್ಲಿ ನೋಡುತ್ತಾಳೆ. ಸಿದ್ಧಾಂತವೊಂದರ ಅಳತೆಗೆ ಕಥೆಯನ್ನು ಹೊಲಿಯುವ ತಂತ್ರ ಹೊಸತನ್ನು ಹೇಳಲಾರದು.
ನಾಗರೇಖಾ ಗಾಂವಕರ ಹೊಸ ಕಥಾ ಸಂಕಲನ “ಮೌನದೊಳಗೊಂದು ಅಂತರ್ಧಾನ” ಕ್ಕೆ ಶ್ರೀಧರ ಬಳಗಾರ ಬರೆದ ಮುನ್ನುಡಿ

Read More

ಶ್ರೀಧರ ಬಳಗಾರ ಕಾದಂಬರಿಯ ಕುರಿತು ಶ್ರೀದೇವಿ ಕೆರೆಮನೆ ಬರಹ

“ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವುದು ಹವ್ಯಕ ಭಾಷೆಯ ಮಾತುಗಳು. ಇಡೀ ಉತ್ತರ ಕನ್ನಡದಲ್ಲಿ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಒಂದೊಂದು ಭಾಷೆ ಇದೆ. ಅದರದ್ದೇ ಆದ ಏರಿಳಿತಗಳಿವೆ. ಹಾಗೆಯೆ ಒಂದು ಪ್ರದೇಶದಲ್ಲಿ ಯಾವ ಜನಾಂಗ ಪ್ರಬಲವಾಗಿದೆಯೋ ಆ ಜನಾಂಗದ ಮಾತನ್ನು ಸಾಮಾಜಿಕವಾಗಿ ಕೆಳವರ್ಗದ ಜನಾಂಗಗಳೂ ಅನುಸರಿಸುತ್ತವೆ. ಅಂತಹದ್ದೊಂದು ರೂಢಿ ಇಲ್ಲಿದೆ. ಉಗ್ರಾಣಿ ಶಂಕ್ರನಿಂದ ಹಿಡಿದು ಹೆರಿಗೆಯ ಕೆಲಸಕ್ಕೆ ಬರುವ ಲಕ್ಷ್ಮಿಯವರೆಗೆ….”

Read More

ಶ್ರೀಧರ ಬಳಗಾರ ಕಾದಂಬರಿಗೆ ಓ. ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ

“ಚರಿತ್ರೆಗೆ ಸಲ್ಲದ ನಿರೂಪಕರ ಧ್ವನಿಗಳಲ್ಲಿ ನಿರೂಪಣೆ ಸಾಗುವುದೂ ಇಂಥ ಅನಿಸಿಕೆಗೆ ಒಂದಿಷ್ಟು ಬಲ ಕೊಡುತ್ತದೆ. ಆದರೆ ಸುಬ್ರಾಯಪ್ಪ ಉಗ್ರಾಣಿ ಶಂಕ್ರ, ಅಂತೆ, ಲಕ್ಷ್ಮಿ, ಬಂಟ್ ಮಾಸ್ತರ್, ತಂಗ, ನರಸಿಂಹ, ಗಪ್ಪತಿ ಈ ಎಲ್ಲ ನಿರೂಪಕರು ಹೇಳಿದ್ದನ್ನು ಬರೆಯುವ ಲೇಖಕ ನಿರೂಪಕ, ಅವನು ಬರೆದದ್ದರ ಮೊದಲ ಓದುಗಳಾಗುವ ಲೇಖಕನ ಪತ್ನಿ ಇವರೆಲ್ಲ ಸುಬ್ರಾಯಪ್ಪನ ಬದುಕಿನ ಒಂದೊಂದು ಪ್ರಮುಖ ಘಟ್ಟಗಳನ್ನು…”

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು…

Read More

ಬರಹ ಭಂಡಾರ