Advertisement

Tag: ಸೂರ್ಯಕೀರ್ತಿ

ಸೂರ್ಯಕೀರ್ತಿ ಬರೆದ ಐದು ಕವಿತೆಗಳು

“ಪ್ರೇಮ ಪರೀಕ್ಷೆಯಲ್ಲಿ
ಈ ಜಗತ್ತು ರೋಗಿಯಾಗಿದೆ.
ಸದಾ ಬಳಲುವ, ತೃಷೆಯ
ತೂತು ಮಡಿಕೆಯ ಹೋಲುತ್ತದೆ.
ಯುದ್ಧ, ಅಹಂಕಾರ, ಮದ
ಕಾಮ, ಮೋಹದ ಬಲೆಯಲ್ಲಿ
ಈ ಜಗತ್ತು ರೋಗದ ಮನೆಯಾಗಿದೆ.”- ಸೂರ್ಯಕೀರ್ತಿ ಬರೆದ ಐದು ಕವಿತೆಗಳು

Read More

ಮೊಟ್ಟೆಕೋಳಿಯೇ ಬೇಕೆಂದ ಅಳಿಯರು!: ಸೂರ್ಯಕೀರ್ತಿ ಪ್ರಬಂಧ

‘ಏನೇ ನಿಮ್ಮವ್ವ ಅಳಿಯಂದ್ರ ನೋಡೋ ಹುಟ್ಟೇನೆ ಇದು, ಇದೊಂದು ಬಾಳಾಟ ಅಂತ ನಾನು ಅಂದುಕೊಂಡಿರಲಿಲ್ಲ, ಅಕ್ಕಪಕ್ಕದವರೆಲ್ಲ ಎಷ್ಟು ಚೆಂದವಾಗಿ ಅಳಿಯರನ್ನು ಕರ್ದು ಕಳಿಸ್ತಾರೆ ಅನ್ನೋದ್ನ ನೋಡಿ ಕಲಿಬೇಕು’ ಎಂದೆಲ್ಲ ಅಂದಿದ್ದನ್ನು ನೋಡಿ. ಮೇಯಲು ಹೋದ ಕೋಳಿಗಳ ಬಿಡದೆ ಅಟ್ಟಾಡಿಸಿಕೊಂಡು ಹಿಡಿದು ಕೂಯ್ದು ತಿಂದು ತಮ್ಮ ಹೆಂಡತಿಯರ ಜೊತೆ ಹೊರಟು ನಿಂತರು. ಅಜ್ಜಿ ಮಕ್ಕಳ ಖುಷಿಯ ನೋಡಿ ತನ್ನೆರಡು ಕೈಗಳ ಎತ್ತಿ ಆಶೀರ್ವಾದದ ಜೊತೆ ಒಂದಿಷ್ಟು ಕಣ್ಣೀರು ಹಾಕಿದಳು. ಎಲ್ಲರಿಗೂ ತಿಂಡಿ ತಿನಸುಗಳ ಕಟ್ಟಿ ‘ಜೋಪಾನ’ ಎಂದು ಹೇಳಿದಳು.
ಇತ್ತೀಚೆಗೆ ಬಿಡುಗಡೆಯಾದ ಸೂರ್ಯಕೀರ್ತಿ ಅವರ ಪ್ರಬಂಧಗಳ ಸಂಕಲನ “ಮಳೆ”ಯ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಮೀನು ಕುಡಿದ ಕಡಲಿನ ವಿಷಯ

ಲೋಕವನ್ನು ಕವಿತೆಯ ಮೂಲಕ ಅಸಾಮಾನ್ಯವಾಗಿ ಮರು ರೂಪಿಸುವ ಸೂರ್ಯಕೀರ್ತಿಯವರು, ಅದೇ ಹೊತ್ತಲ್ಲಿ ಸಾಂಪ್ರದಾಯಕ ಸಂಕೇತಗಳನ್ನು ನಿರ್ದಯವಾಗಿ ನಾಶಗೊಳಿಸುತ್ತಾರೆ. ಅವರು ಕಾಣುವ ಹಸಿವಿನ ಅನ್ನದ ಮುಂದೆ ಶಿವನ ಧ್ಯಾನ, ಮುದ್ರಿಕೆ, ನಾಥ ಪಟ್ಟಗಳೂ ಶೂನ್ಯವಾಗುತ್ತವೆ. ದೈವ ಕಲ್ಪನೆಯೇ ವ್ಯರ್ಥವಾಗುತ್ತದೆ. ಗಾಂಧಿಯ ಕನ್ನಡಕವು ಕೂಡಾ ಪಾಚಿಗಟ್ಟಿದ ಕಣ್ಣುಗಳಲ್ಲಿ ಮರೆಯಾಗುತ್ತದೆ. ಬಾಗಿಲ ಸಂದುಗೊಂದುಗಳಲ್ಲಿ ಚಂದ್ರಮತಿಯರು ನಡುಗುತ್ತಾರೆ, ಜನ್ನನ ಸುನಂದೆ, ಅಮೃತಮತಿಯರು ಪಿಸುಗುಡುತ್ತಾ ನರಳುತ್ತಾರೆ.
ಸೂರ್ಯಕೀರ್ತಿ ಬರೆದ “ಮೀನು ಕುಡಿದ ಕಡಲು” ಕವನ ಸಂಕಲನಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ