Advertisement

Tag: ಅರವಿಂದ ಕುಡ್ಲ

ಕತೆಗಳನ್ನು ಕೇಳುತ್ತ ಅರಳುವ ಅವರ ಕಂಗಳು

ಹಿಂದಿನ ದಿನ ಹೇಳಿದ ಕಥೆಯ ಸಣ್ಣ ಸಣ್ಣ ಸಂಗತಿಗಳನ್ನೂ ನೆನಪಿಟ್ಟುಕೊಂಡು ಒಬ್ಬರು ಇನ್ನೊಬ್ಬರಿಗೆ ಹೀಗೆ ಮಾಡು ಎಂದು ನಿರ್ದೇಶನ ಮಾಡುತ್ತಾ ಪಾತ್ರಗಳಾಗಿ ಅಭಿನಯಿಸುವ ಆಟ ಬಹಳ ಸೊಗಸಾಗಿ ನಡೆದಿತ್ತು. ಅವರಲ್ಲಿ ಮೂವರು ಐದು ವರ್ಷ ಆಸುಪಾಸಿನ ಮಕ್ಕಳು. ಅವರಿಗಿನ್ನೂ ಶಾಲೆಯಲ್ಲಿ ಕಲಿಸುವ ಅಕ್ಷರಾಭ್ಯಾಸವೇ ಆಗಿಲ್ಲ. ಆದರೂ ಕಥೆಯನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುವ, ಮತ್ತೆ ಅಲ್ಲಿ ಸಂದರ್ಭಕ್ಕೆ ಬೇಕಾದ ಸಂಭಾಷಣೆಯನ್ನು ತಾವೇ ಸೃಷ್ಟಿಸಿಕೊಳ್ಳುವ ಕೌಶಲ ಅವರಿಗಿತ್ತು.
ಅರವಿಂದ ಕುಡ್ಲ ಇಂದಿನ ಬರಹ

Read More

ಸಂತೋಷ ಪಡುತ್ತಾ ಕಲಿಯುವುದೂ ಸಾಧ್ಯ

ಬೇಸಿಗೆ ರಜೆಯ  ಕುರಿತು ಅನೇಕ ಅಭಿಪ್ರಾಯಗಳಿವೆ.  ವರ್ಷ ಪೂರ್ತಿ ಬಿಡುವಿಲ್ಲದೇ ಪಾಠ ಪ್ರವಚನಗಳು ನಡೆದು, ಕೊನೆಗೆ ಪರೀಕ್ಷೆಗಳು ಬರುತ್ತವೆ, ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಲಿಸಿದರೆ ಮಾತ್ರ ಮಗು ಮುಂದಿನ ಹಂತಕ್ಕೆ ಪ್ರವೇಶ ಪಡೆಯುತ್ತದೆ. ಅದೇನೇ ಇರಲಿ, ರಜೆಯ ಖುಷಿಯೇ ಶಾಲೆಯೊಳಗೇಕೆ ಬರಬಾರದು ಎಂದು ಅಚ್ಚರಿಪಡುತ್ತಾರೆ ಅರವಿಂದ ಕುಡ್ಲ. ಗಣಿತ ಮೇಷ್ಟರ ಶಾಲಾ ಡೈರಿಯಲ್ಲಿ ಹೊಸ ಬರಹ  ಇಲ್ಲಿದೆ. 

Read More

ಕಪಾಟು ತುಂಬ ಪಾಠ ಪುಸ್ತಕಗಳೇ ಇದ್ದರೆ..

ಅವತ್ತು ಉಡುಗೊರೆಯಾಗಿ ಬಂದ ಪುಸ್ತಕಗಳನ್ನು ಬಿಡಿಸಿ ನೋಡಿದಾಗ ನಮಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಬಂದ ಪುಸ್ತಕಗಳಲ್ಲಿ ಹೆಚ್ಚಿನವು ಶಾಲೆಯಲ್ಲಿ ಮುಂದಿನ ವರ್ಷದ ಪಾಠಪುಸ್ತಕಗಳು ಮತ್ತು ಬರೆಯಲು ಉಪಯೋಗವಾಗುವ ಖಾಲಿ ನೋಟ್‌ ಪುಸ್ತಕಗಳು. ಓದಲಿಕ್ಕೆ ಆಸಕ್ತಿ ಬರುವಂಥ ಕಥೆ ಪುಸ್ತಕಗಳು ಕೆಲವು ಮಾತ್ರ.
ಅರವಿಂದ ಕುಡ್ಲ ಬರೆಯುವ ‘ಗಣಿತ ಮೇಷ್ಟರ ಶಾಲಾ ಡೈರಿ’

Read More

ಗಣಿತವೊಂದು ಭಾಷೆಯೆಂಬ ಹೊಸ ದೃಷ್ಟಿ

ನಾವು ಬಳಸುವ ಸಂಖ್ಯೆಗಳು, ವಿಜ್ಞಾನದಲ್ಲಿ ಬರುವ ಅಳತೆಯ ಮಾನಗಳು, ಇತಿಹಾಸದ ಇಸವಿಗಳು, ಸಮಯ, ಕಾಲಗಣನೆ ಮೊದಲಾದ ಯಾವುದೇ ಸಂದರ್ಭವನ್ನು ತೆಗೆದುಕೊಳ್ಳಿ. ಅಲ್ಲಿ ಗಣಿತ ಎಂಬ ಭಾಷೆಯನ್ನು ಬಳಸದೇ ಇದ್ದರೆ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗಣಿತ ಎಂಬ ಭಾಷೆಗೆ ಅಂಕೆಗಳೇ ಅಕ್ಷರಗಳು. ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಅದರ ವ್ಯಾಕರಣ ಎಂದು ಒಮ್ಮೆ ಯೋಚಿಸಿ ನೋಡು ಆಗ ನೀನು ಗಣಿತ ವಿಷಯವನ್ನು ನೋಡುವ ದಿಕ್ಕೇ ಬದಲಾಗುತ್ತದೆ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಇಂದಿನ ಬರಹ

Read More

ಚೂಟಿ ಹುಡುಗನ ಸೃಜನಶೀಲತೆ ಹೇಳಿದ ಪಾಠ

ಯಾವಾಗ ಅಧ್ಯಾಪಕನಾಗಿ ಶಾಲೆ ಸೇರಿ, ನಾನೇ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾಡಲು ಪ್ರಾರಂಭ ಮಾಡಿದೆನೋ, ಮಕ್ಕಳಿಗೆ ಪರೀಕ್ಷೆಯ ತಯಾರಿಯ ಬಗ್ಗೆ ಹೇಳಬೇಕಾಗಿ ಬಂತೋ ಆಗ ಪೇಚಿಗೆ ಸಿಲುಕುತ್ತಿದ್ದೆ. ಮಕ್ಕಳಿಗೆ ಪರೀಕ್ಷಾ ತಯಾರಿಯ ಉಪದೇಶ ಮಾಡುವಾಗ ನಾನು ಕೇಳಿದ ನನ್ನಪ್ಪನ ಮತ್ತು ನನ್ನ ಗುರುಗಳ ಮಾತುಗಳು ನನಗೆ ಅರಿವಿಲ್ಲದಂತೆ ಬಾಯಿಗೆ ಬಂದು ಬಿಡುತ್ತಿತ್ತು. ಉಪದೇಶವನ್ನು ಮಾಡಿದ ಬಳಿಕವೂ ಮಕ್ಕಳು ಉತ್ತರಪತ್ರಿಕೆಯಲ್ಲಿ ಬಿಟ್ಟ ಖಾಲಿ ಜಾಗಗಳನ್ನು ನೋಡಿದಾಗ ನನ್ನ ಉಪದೇಶಗಳು ಪ್ರಯೋಜನಕ್ಕೆ ಬಾರದೇ ಇರುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ

Read More
  • 1
  • 2

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ