Advertisement

Tag: ಜುಲೇಖಾ ಬೇಗಂ

ತಿರುವುಮುರುವಿನ ಹಾದಿಯಲ್ಲಿ….: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನು ಕಲಾವಿದೆ ಎಂಬುದು ಅವರಿಗೂ ತಿಳಿದಿರದ ವಿಷಯವೇನಲ್ಲ. ನನ್ನ ಬಗ್ಗೆ ಪೂರ್ತಿಯಾಗಿ ವಿಚಾರಿಸಿಕೊಂಡೇ ಬಂದಿದ್ದರು. ನನ್ನೊಳಗಿನ ಕಲೆಗೆ ಅವಮಾನ ಮಾಡಬಾರದೆಂದೂ ಹಾಗೇ ಅದನ್ನು ಪೋಷಿಸಬೇಕೆಂದು ಕಿವಿಮಾತೇನೊ ಹೇಳಿದರು. ಹೇಳಿದ ಮಾತು ಕಿವಿಯ ಮೇಲೆ ಬೀಳಲೇ ಇಲ್ಲ! ಆಗುವುದಿಲ್ಲ ಎಂದು ಮುಖಭಂಗಿಯಲ್ಲೇ ಕೂತಿದ್ದೆ. ಆಗುಹೋಗುಗಳನ್ನು ನೋಡುತ್ತಿದ್ದ ಅಪ್ಪ, ‘ಏನ್ ಮಾತಾಡ್ತೀಯೋ, ಮನ್ಷನೇನೊ ನೀನು? ನನ್ ಮಗ್ಳು ಏನ್ ಹೇಳ್ತಾ ಅದಾಳು!
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ಮೂರನೆಯ ಕಂತು

Read More

ಆಗಿಹೋಯಿತು ನನ್ನ ಮದುವೆ: ಜುಲೇಖಾ ಬೇಗಂ ಜೀವನ ವೃತ್ತಾಂತ

ಹಾಂ, ನಾನು ಕೊಪ್ಪಳದಲ್ಲಿರುವ ಸುದ್ದಿ ನನ್ನ ಸೋದರಮಾವ ಅಂದರೆ ತಾಯಿಯವರ ಅಣ್ಣನಿಗೆ ತಿಳಿಯಿತು. ಅವ್ವ ಸೋದರಮಾವನಿಗೆ ಪತ್ರ ಬರೆದಿದ್ದಳಂತೆ. ಅವ್ವ ನೀಡಿದ ವಿಳಾಸಕ್ಕೆ ಸರಿಯಾಗಿ ತಲುಪಿದ್ದರು. ಅವರ ಏಕೈಕ ಮಗನಿಗೆ ನನ್ನ ಕೊಟ್ಟು ಮದುವೆ ಮಾಡುವುದೆಂದು ಯೋಚಿಸಿದ್ದರು. ನನ್ನ ವಯಸ್ಸು ಮತ್ತವನ ವಯಸ್ಸು ಹೊಂದುತ್ತಿತ್ತೆಂದು, ಜೋಡಿ ಚೆನ್ನಾಗಿರುತ್ತದೆಂದು ಅವ್ವ ಮತ್ತು ಮಾವ ಮಾತಾಡಿಕೊಂಡಿದ್ದರು. ಮದುವೆ ಮಾಡುವ ಸಲುವಾಗಿಯೇ ನನ್ನನ್ನು ಕರೆದುಕೊಂಡು ಹೋದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೆರಡನೆಯ ಕಂತು

Read More

ಮತ್ತೊಮ್ಮೆ ಒಡೆಯಿತು ಹೃದಯ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅವರೇನೊ ಸುಲಭವಾಗಿ ಹೊರಟುಬಿಟ್ಟರು. ಏಕಾಂಗಿಯಾದ ನನ್ನ ಪಾಡು? ಗೋವಿಂದ ರೆಡ್ಡಿ ಅವರ ಪ್ರೀತಿಯ ಸುಳಿಯಲ್ಲಿ ಪೂರ್ತಿಯಾಗಿ ಸಿಲುಕಿಬಿಟ್ಟಿದ್ದೆ. ಅವರಿಲ್ಲದ ನಾನು ಒಂಟಿಯಾದಂತೆನಿಸಿತು. ಮದುವೆಯಾದರೆ ಇವರನ್ನೇ ಎಂದು ಮನಸ್ಸು ನಿರ್ಧರಿಸಿತ್ತಲ್ಲಾ! ಕೇಳಿ ಬರಲು ಹೋಗಿದ್ದು. ಗುರುಗಳು ಒಪ್ಪಿಗೆ ನೀಡುತ್ತಾರೆ. ಇಲ್ಲಾ, ಇವರೇ ಒಪ್ಪಿಗೆ ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಕಾದು ಬೆಂಗಾಡಾಗಿದ್ದ ಮನಸ್ಸನ್ನು ಸಮಾಧಾನಿಸುತ್ತಲೇ ಇದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೊಂದನೆಯ ಕಂತು

Read More

ಮೋಸದ ಆಟ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಮಾರನೇ ದಿನ, ನಾವೆಲ್ಲರೂ ಏಳುವ ಹೊತ್ತಿಗಾಗಲೇ ಸಾಲಗಾರರೆಲ್ಲ ಸೇರಿದ್ದರು. ಸಹಾಯರ್ಥ ಪ್ರದರ್ಶನ ಆಡಿದ ಮೇಲೆ, ಅದರಲ್ಲೂ ಹೌಸ್‌ಫುಲ್ ಕಲೆಕ್ಷನ್ ಗಳಿಸಿದ ಮೇಲೆ ದುಡ್ಡು ವಾಪಾಸು ಕೇಳಲು ಬರುವುದು ನ್ಯಾಯಸಮ್ಮತ ತಾನೆ. ಈ ಬಾರಿ, ಪಕ್ಕಾ ವ್ಯವಹಾರಸ್ಥರಂತೆ ಅವರೆಲ್ಲ ಕಂಡಿದ್ದರು. ನಾವೂ ಅಷ್ಟೇ, ಕಂಪೆನಿಯ ಸಾಲವನ್ನು ನಮ್ಮ ಮಾಲೀಕರು ಈಗ ತೀರಿಸುತ್ತಾರೆ ನೋಡಿ ಎಂಬ ಭಾವಭಂಗಿಯಲ್ಲೇ ನಿಂತಿದ್ದೆವು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹತ್ತೊಂಭತ್ತನೆಯ ಕಂತು

Read More

ಕಮರಿದ ಕನಸುಗಳು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದಹಾಗೆ, ಮಾಂಡ್ರೆ ಕವಿಗಳ ಕಂಪೆನಿಯಲ್ಲಿ ಆಗ ಬೇಬಿ ಬರುತ್ತಾಳೆಂಬುದೇ ದೊಡ್ಡ ಸುದ್ದಿ. ನನ್ನ ಮಗಳು ಬೇಬಿ ಬರುತ್ತಾಳೆ ಎಂದು ಓಡಾಡುತ್ತಿದ್ದ ಬಿ.ಪಿ.ಸಣ್ಣಪ್ಪ ಅವರ ಕಾಲು ನಿಂತಲ್ಲಿ ನಿಂತಿದ್ದೇ ಸುಳ್ಳು. ನಮಗೆಲ್ಲ ಬೇಬಿ ಅವರ ನಿಜವಾದ ಮಗಳೆಂದೇ ಎಣಿಕೆ. ಅವಳು ಬಂದರೆ ನಮ್ಮ ಕಂಪೆನಿ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲ ಹೇಳುತ್ತಿದ್ದದ್ದು ನಮಗೆ ಬೇಬಿ ಎಂದರೆ ದೇವಲೋಕದಿಂದ ಥಟ್ಟನೆ ರಾಮದುರ್ಗಕ್ಕೆ ಬಂದಿಳಿವ ದೇವತೆಯ ರೂಪದಂತೆ ಭಾಸವಾಗುತ್ತಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೆಂಟನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ