Advertisement

Tag: ಡಾ. ಎಸ್.ವಿ. ನರಸಿಂಹನ್‌

ಕೊಳದ ಬಕ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೊಳದ ಬಕಗಳು ಕೊಳ, ಕೆರೆ, ಗದ್ದೆ, ಕೆರೆ-ಕಾಲುವೆ, ಮುಂತಾದ ಪ್ರದೇಶಗಳಲ್ಲಿ ಹಾಗೂ ಜೊಂಡು-ಕೆಸರು ಇರುವೆಡೆಗಳಲ್ಲಿ, ಒಂಟಿಯಾಗಿ, ಅಥವಾ ತಮ್ಮ ಕುಟುಂಬಕ್ಕೆ ಸೇರಿದ ಇತರ ಹಕ್ಕಿಗಳೊಂದಿಗೆ ಗುಂಪಿನಲ್ಲಿ, ಬೇಟೆಯರಸುವುದನ್ನು ಕಾಣಬಹುದು. ಒಂದಿಷ್ಟೂ ಅಲುಗಾಡದೆ, ಒಂಟಿಕಾಲಿನ ಮೇಲೆ ನಿಂತು, ತದೇಕಚಿತ್ತದಿಂದ ಬೇಟೆಯಾಡುವ ಕೊಳದ ಬಕ, ಕೆಲವು ಸಾರಿ ಕೊಕ್ಕಿನಲ್ಲಿ ಸಣ್ಣ ಎರೆಹುಳವನ್ನು ಹಿಡಿದುಕೊಂಡು ಅದನ್ನು ನೀರಿನಲ್ಲಿ ಹಾಕಿ, ಸುತ್ತ ಮುತ್ತಲ ಮೀನುಗಳನ್ನು ಆಕರ್ಷಿಸುವ ಪರಿ ನಿಜಕ್ಕೂ ಕುತೂಹಲಕಾರಿ!
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಕೊಳದ ಬಕ” ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಕುಡುಗೊಕ್ಕು ಹರಟೆಮಲ್ಲ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇವು 22 ಸೆಂಮೀಟರ್ ಗಾತ್ರದ ಹಕ್ಕಿಗಳು. ಕಡುಗಂದು ಬಣ್ಣದ ದೇಹ; ಮುಖದಲ್ಲಿ ಎದ್ದು ಕಾಣುವ ಬಿಳಿ ಹುಬ್ಬು, ಬಿಳಿ ಬಣ್ಣದ ಗಲ್ಲ ಮತ್ತು ಎದೆ; ಕುಡುಗೋಲಿನಂತೆ ಬಾಗಿದ, ಹಳದಿ ಬಣ್ಣದ ಗಟ್ಟಿಮುಟ್ಟಾದ ಕೊಕ್ಕು, ಅಷ್ಟೇ ಬಲಿಷ್ಟವಾದ ಕಾಲು ಮತ್ತು ಪಾದಗಳು; ಬಹುದೂರ ಹಾರಲಾಗದ, ಸಣ್ಣ-ಗುಂಡಾದ ರೆಕ್ಕೆಗಳು. ಸಡಿಲವಾಗಿ ಅಂಟಿಸಿರುವಂತೆ ಕಾಣುವ ಬಾಲ. ಸಾಧಾರಣವಾಗಿ ಆರರಿಂದ ಏಳು ಪಕ್ಷಿಗಳು ಒಟ್ಟಾಗಿ ವಾಸಮಾಡುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕುಡುಗೊಕ್ಕು ಹರಟೆಮಲ್ಲ
ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಕೆಂಬೂತ: ಡಾ. ಎಸ್.ವಿ. ನರಸಿಂಹನ್‌‌ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

ಇವುಗಳದ್ದು ತುಂಬಾ ಸಂಕೋಚ ಸ್ವಭಾವ. ಇದರ ರೆಕ್ಕೆಗಳು ದುರ್ಬಲವಾದ್ದರಿಂದ ಇವು ಹೆಚ್ಚಾಗಿ ಮರ-ಪೊದೆಗಳಲ್ಲಿ ಕುಪ್ಪಳಿಸಿಕೊಂಡು ಆಹಾರವನ್ನು ಅರಸುತ್ತವೆ. ಕೆಂಬೂತಗಳ ಆಹಾರ ಬಲುಬಗೆಯ ಕೀಟಗಳು, ಹುಳುಗಳು, ಧಾನ್ಯಗಳು, ಹಣ್ಣುಗಳು, ಬೀಜಗಳು, ಅನ್ಯ ಹಕ್ಕಿಯ ಮೊಟ್ಟೆಗಳು, ಚಿಕ್ಕ ಹಾವುಗಳು, ಕೆಲ ವಿಷಕಾರಿ ಹಣ್ಣುಗಳು ಮತ್ತು ಅದರ ಬೀಜಗಳು. ಪಾಮ್ ಎಣ್ಣೆ ಮರದಲ್ಲಿನ ಹಣ್ಣನ್ನು ಬಯಸುವ ಇವು, ಪಾಮ್-ಮರದ ಕೃಷಿಕರಲ್ಲಿ ಬೆಳೆ ನಾಶಕ ಎಂದೆನಿಸಿವೆ. ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂಬೂತದ ಕುರಿತ ಬರಹ ಇಲ್ಲಿದೆ

Read More

ಕೆಂಪು ಟಿಟ್ಟಿಭ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೆಂಪು ಟಿಟ್ಟಿಭ, ಗೂಡು ಕಟ್ಟುವ ಪರಿ, ವಿಚಿತ್ರ ಮತ್ತು ವಿಶಿಷ್ಟ! ಮಾರ್ಚ್‌ನಿಂದ ಆಗಸ್ಟ್ ತಿಂಗಳುಗಳಲ್ಲಿ ಇವುಗಳ ಸಂತಾನಾಭಿವೃದ್ಧಿ. ಗಂಡು ಮತ್ತು ಹೆಣ್ಣು ಹಕ್ಕಿಗಳು ಸೇರಿ, ನೇರವಾಗಿ ನೆಲದ ಮೇಲೆಯೇ ಗೂಡನ್ನು ನಿರ್ಮಿಸುತ್ತವೆ. 3-4 ಮೊಟ್ಟೆಗಳನ್ನು ಇಟ್ಟು, ಮರಿ ಮಾಡುತ್ತದೆ. ಮೊಟ್ಟೆಗಳು ಕಂದು ಬಣ್ಣದ ಮೇಲೆ ವಿವಿಧ ಗಾತ್ರದ ಗಾಢ ಮಣ್ಣಿನ ಚುಕ್ಕೆಗಳಿದ್ದು, ಗೂಡುಗಳು ಮತ್ತು ಮೊಟ್ಟೆಗಳು ಅವುಗಳಿರುವ ನೆಲದ ಬಣ್ಣ ಹಾಗೂ ಸುತ್ತಲಿನ ವಸ್ತುಗಳನ್ನು ಹೋಲುವುದರಿಂದ ಅವುಗಳನ್ನು ಗುರುತಿಸುವುದು ಬಹಳ ಕಷ್ಟ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂಪು ಟಿಟ್ಟಿಭ ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಕೆಂದಲೆ ಗಿಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗಿಳಿಗಳು ಗೂಡುಗಳನ್ನು ನಿರ್ಮಿಸುವುದಿಲ್ಲ, ಮರದ ಒಣ ಕಾಂಡಗಳಲ್ಲಿ ಅಥವಾ ಹಳೆಯ ಗೋಡೆಗಳಲ್ಲಿ, ಕೊರೆದ ತೂತುಗಳೊಳಗೆ ಗುಂಪಾಗಿ ಗೂಡು ಕಟ್ಟುತ್ತವೆ. ಸಂತಾನೋತ್ಪತ್ತಿ ಮತ್ತು ವಾಸ, ಎರಡನ್ನೂ ಗಿಳಿಗಳು ಮರದ ಪೊಟರೆಯಲ್ಲಿಯೆ ನಡೆಸುತ್ತವೆ. ಈ ಅವಧಿಯಲ್ಲಿ, ಹೆಣ್ಣು ಗಿಳಿಗಳು 2-8 ಅಚ್ಚ ಬಿಳಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗೆ 17-20 ದಿನಗಳ ಕಾಲ, ಕಾವು ಕೊಡುವ ಇಡೀ ಕೆಲಸವನ್ನು ಹೆಣ್ಣು ಹಕ್ಕಿಯೇ ನಿರ್ವಹಿಸುತ್ತದೆ. ಆ ಸಮಯದಲ್ಲಿ ಗಂಡು ತನ್ನ ಸಂಗಾತಿಗೆ ಆಹಾರ ತಂದೊದಗಿಸುವುದು.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂದಲೆ ಗಿಳಿ ಕುರಿತ ಬರಹ ಇಲ್ಲಿದೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ