ಆಸ್ಟ್ರೇಲಿಯನ್ ಜನಗಣತಿ ಕಥನಗಳು: ವಿನತೆ ಶರ್ಮ ಅಂಕಣ
ಸರಕಾರವು ಎಲ್ಲರೂ ಜನಗಣತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕಳೆದ ಎರಡು ತಿಂಗಳುಗಳಿಂದ ಭಾರಿ ಪ್ರಚಾರ ನಡೆಸಿತ್ತು. ವಿವರಗಳನ್ನು ಕೊಟ್ಟರಾಯ್ತು ಎಂದುಕೊಂಡು ಸುಮ್ಮನಾಗಿ ಕೊನೆಯಲ್ಲಿ ಆನ್ಲೈನ್ ಫಾರಂ ತುಂಬಲು ಹೊರಟಾಗ ಹೆಣಗಾಡಬೇಕಾಯ್ತು. ಒಂದು ಬಾಕ್ಸಿನಲ್ಲಿ ಮಾಹಿತಿಯನ್ನು ಕೊಟ್ಟರೆ ಅದು ಮತ್ತೊಂದು, ಮಗದೊಂದು ಬಾಕ್ಸ್‌ಗಳನ್ನು ತೆರೆದು ಕೊಡು ಮತ್ತಷ್ಟು ವಿವರ, ಎನ್ನುತ್ತಿತ್ತು. ಆರೋಗ್ಯದ ಬಗ್ಗೆ ವಿವರಗಳನ್ನು ಕೊಡುವಾಗ ಈ ಎಲ್ಲಾ ವಿವರಗಳು ಸರ್ಕಾರದ ಆರೋಗ್ಯ ವ್ಯವಸ್ಥೆಯಲ್ಲಿ ಈಗಾಗಲೇ ದಾಖಲಾಗಿದೆಯಲ್ಲಾ, ಮತ್ತೆ ಇಷ್ಟೆಲ್ಲಾ ಬರೆಯಬೇಕಾದ ಅಗತ್ಯವೇನಿತ್ತು ಎಂದೆನಿಸಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

