Advertisement

Tag: ಬಸವನಗೌಡ ಹೆಬ್ಬಳಗೆರೆ

ಚುಟುಕು ಹೇಳಿ ನಾನು ಎಲ್ಲರ ಮುಂದೆ ಚುಟುಕಾಗಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಾನು ಹೀಗೆ ಹೇಳಿದ ನಂತರ ಎಲ್ಲರೂ ನನ್ನ ಚುಟುಕನ್ನು ಮೆಚ್ಚುತ್ತಾರೆ ಎಂದುಕೊಂಡಿದ್ದೆ. ಆದರೆ ಆಗಿದ್ದೆ ಬೇರೆ. ಸಾಹಿತ್ಯದ ಬಗ್ಗೆ ಆಸಕ್ತಿಯಿದ್ದ ಬಿಕೆಎಂ ಸರ್ ಎದುರಿಗೆ ಹೇಳಿದ್ದರೆ ಅವರು ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆದರೆ ಅವರು ನನಗೆ ಹಿಗ್ಗಾ ಮುಗ್ಗಾ ಬಯ್ದರು. ಹುಡುಗಿಯರು ಜಗತ್ತಿನಲ್ಲಿ ನಾನೇನೋ ದೊಡ್ಡ ತಪ್ಪು ಮಾಡಿದ್ದ ರೀತಿಯಲ್ಲಿ ನನ್ನನ್ನು ನೋಡಲು ಶುರು ಮಾಡಿದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಮೌಲ್ಯಗಳಿರುವುದು ಪಾಲಿಸಲೇ ಹೊರತು, ಬರೀ ಬೋಧಿಸಲಿಕ್ಕಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಬಹುತೇಕರು ಮಕ್ಕಳಿಗೆ ತಮ್ಮ ಮಗುವಿನ ಆಸಕ್ತಿಯ ಕ್ಷೇತ್ರ ಯಾವುದು? ಎಂಬುದನ್ನೇ ಗುರುತಿಸಿಯೇ ಇರುವುದಿಲ್ಲ. ತಾವು ಏನನ್ನು ಅಂದುಕೊಂಡಿರುತ್ತಾರೋ ಅದನ್ನು ಸಾಧಿಸಲು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಟಿವಿ ಮಾಧ್ಯಮಗಳಲ್ಲಿ ಬರುವ ಸ್ಪರ್ಧೆಗಳಲ್ಲಿ ತಮ್ಮ ಮಗುವೂ ಭಾಗವಹಿಸಬೇಕು, ಬೇಗ ಫೇಮಸ್ ಆಗಬೇಕು ಎಂದು ಕೆಲವರು ತಮ್ಮ ಮಗುವಿಗೆ ಇಷ್ಟವಿದೆಯೋ ಇಲ್ಲವೋ ಎಂದು ಕೇಳದೇ ಸಿಕ್ಕ ಸಿಕ್ಕ ಕ್ಲಾಸ್‌ಗಳಿಗೆಲ್ಲಾ ಸೇರಿಸುತ್ತಾರೆ. ಜೊತೆಗೆ ಮಣಭಾರದ ಪುಸ್ತಕ, ಟ್ಯೂಷನ್! ಆ ಕೋಚಿಂಗ್, ಈ ಕೋಚಿಂಗ್ ಅಂತಾ ಮಕ್ಕಳ ಬಾಲ್ಯ ಇದರಲ್ಲೇ ಕಳೆದುಹೋಗುತ್ತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ನಿರ್ದಿಷ್ಟ ಗುರಿ ಹಾಗೂ ಸರಿಯಾದ ಗುರು ಇಲ್ಲದ ಪರಿಣಾಮ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ನನಗೆ ಒಂಥರಾ ಅನಿಸಿಬಿಡ್ತು. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ವೇಸ್ಟಾ… ಹಾಗಾದ್ರೆ ಡಿಗ್ರಿ ಬಿಟ್ಟು ಟಿಸಿಎಚ್ ಆದ್ರೂ ಓದಬಹುದಾ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡೋಕೆ ಶುರುವಾಯ್ತು. ಇಷ್ಟೇ ಅಲ್ಲದೇ ಆಗ ಟಿವಿಯಲ್ಲಿ ‘ದಂಡಪಿಂಡ’ಗಳು ಧಾರವಾಹಿ ಬೇರೆ ಬರ್ತಾ ಇತ್ತು. “ದಂಡಪಿಂಡಗಳು ಇವರು ದಂಡಪಿಂಡಗಳು ಬಿಎ, ಬಿಎಸ್ಸಿ ,ಬಿಕಾಂ ಮಾಡಿ…. ಕೆಲಸವೇ ಸಿಗದೇ ದಿನ ಅಲೆದಾಡಿ…” ಎಂಬ ಹಾಡಿನೊಂದಿಗೆ ಅದು ಶುರುವಾಗ್ತಾ ಇತ್ತು!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಜೀವಶಾಸ್ತ್ರದಲ್ಲಿ ಸ್ಕೋರ್ ಮಾಡಿಸಿದ ಕೈಬೆರಳ ತಂತ್ರ!! ಬಸವನಗೌಡ ಹೆಬ್ಬಳಗೆರೆ‌ ಸರಣಿ

ಊರಲ್ಲಿ ಫಲಿತಾಂಶ ಕೇಳಿ ಏನೂ ಹೇಳಲಿಲ್ಲ. “ವಿಜ್ಞಾನವೆಂದರೆ ಕಷ್ಟ; ಅಂತಾದ್ರಲ್ಲಿ ನೀನು ಇಷ್ಟಾದ್ರೂ ತೆಗೆದೆಯಲ್ಲಾ ಅಂತಾ ಖುಷಿ ಪಟ್ಟರು”! ಅವರು ನನ್ನ ಫಲಿತಾಂಶದಲ್ಲಿ ಬೇಸರ ಪಟ್ಟುಕೊಳ್ಳದಿರಲು ಇನ್ನೊಂದು ಕಾರಣವಿದೆ. ಅವರಿಗೆ ನನ್ನ ಹಾಸ್ಟೆಲ್ ಹುಡುಗರ ಫಲಿತಾಂಶ ಹೇಳಿದ್ದು. ನಮ್ಮ ಹಾಸ್ಟೆಲ್ಲಿನಲ್ಲಿ ಇದ್ದ ಸೆಕಂಡ್ ಪಿಯುಸಿಯ 24 ವಿದ್ಯಾರ್ಥಿಗಳ ಪೈಕಿ ಪಾಸ್ ಆಗಿದ್ದು ಇಬ್ಬರೇ!! ಅದು ನಾನು ಮತ್ತು ಲಿಂಗರಾಜ ಮಾತ್ರ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯ ಎಡವಟ್ಟಿನ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ಒತ್ತಡ ಶುರುವಾಗಿ ಪರೀಕ್ಷೆಯ ಪ್ರವೇಶ ಪತ್ರವನ್ನು ಎಲ್ಲಾ ಕಡೆ ಹುಡುಕಿದಾಗ ರಾತ್ರಿ 10 ಘಂಟೆಯವರೆಗೂ ನನಗೆ ಸಿಗಲಿಲ್ಲ. ನನಗೆ ಏನು ಮಾಡಬೇಕು ಅಂತಾನೆ ಗೊತ್ತಾಗಲಿಲ್ಲ. ಟೆನ್ಷನ್ ಆಗಿ ಏನು ಮಾಡಬೇಕು ಎಂದು ಗೊತ್ತಾಗದೇ ಕುಳಿತಿದ್ದಾಗ ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಸೀನಿಯರ್ ‘ಅನಿಲ್’ ಹಾಸ್ಟೆಲ್ ಮೈದಾನದಲ್ಲಿ ‘ನಿನ್ನ ಹಾಲ್ ಟಿಕೆಟ್ಟು ಸಿಕ್ಕಿತು’ ಎಂದು ತಂದುಕೊಟ್ಟಾಗ ‘ಬದುಕಿದೆಯಾ ಬಡ ಜೀವವೇ’ ಎಂದುಕೊಂಡು ಆಗ ಇಂಗ್ಲೀಷ್ ಓದಲು ಕುಳಿತೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ