Advertisement

Tag: ಮೊಗಳ್ಳಿ ಗಣೇಶ್

ಒಳಗುದಿಯ ದೀಪ ಉರಿಯುತಿತ್ತು

ಆಗ ನನಗೆ ಒಂದು ಸುಂದರ ಹವ್ಯಾಸ ಇತ್ತು. ಈಗಲೂ ಅದನ್ನು ಬಿಟ್ಟಿಲ್ಲ… ಹಳೆಯ ಹಿಂದಿ ಸಿನಿಮಾ ಹಾಡುಗಳನ್ನು ಕೇಳುತ್ತಲೇ ಇರುವುದು… ಆ ಮುಖೇಶ್, ರಫೀ, ಸೈಗಲ್, ಕಿಶೋರ್ ಕುಮಾರ್, ಲತಾ ಅವರ ಕೊನೆ ಮೊದಲಿಲ್ಲದ ಹಾಡುಗಳ ನನ್ನ ಪೂರ್ವಿಕರಿಗೆಲ್ಲ ಕೇಳಿಸಬೇಕು ಎಂಬಂತೆ ಸುಪ್ತ ಪ್ರಜ್ಞೆಯಲ್ಲಿ ಮಲಗಿದ್ದ ಅವರನ್ನೆಲ್ಲ ಎಬ್ಬಿಸಿ ಈ ಹಾಡನ್ನು ಕೇಳಿ… ಈ ಅನಂತ ಹಿಂದೂಸ್ತಾನಿ ಸಂಗೀತದ ಸಮುದ್ರದ ಅಲೆಯ ರಾಗಗಳ ಆಲಿಸಿ ಎನ್ನುತ್ತಿದ್ದೆ. ನನ್ನ ಅಳಲನ್ನು ಈ ಸಂಗೀತಗಾರರು ಅದೆಷ್ಟು ಸಲ ಸಂತೈಸಿದ್ದಾರೊ ಏನೊ..ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆಯ 33ನೇ ಕಂತು

Read More

ಅಸ್ಪೃಶ್ಯ ಆಕಾಶದ ಚಲನೆ

ಚಲುವರಾಜನ ತಮ್ಮ ಚಂದ್ರ ಹಾಸ್ಟಲಲ್ಲೆ ಇದ್ದ. ಇನ್ನು ಚಿಕ್ಕವನು. ಬಾರೋ ಎಂದು ಕರೆದೊಯ್ದು ಎಲ್ಲ ಕ್ಲೀನ್ ಮಾಡಿಸಿದೆ. ಆ ಬ್ಯಾಗಲ್ಲಿದ್ದ ಅಕ್ಕಿ ಎಂತಾವು ನೋಡು ಎಂದೆ. ಯೋಗ್ಯ ಇದ್ದರೆ ಕೊಂಡೊಯ್ಯುವ ಎನಿಸಿತ್ತು. ಕಲ್ಲು ಮಿಶ್ರತ ಹುಳು ಹಿಡಿದ ಬೂಸ್ಲು ನುಚ್ಚಕ್ಕಿಯಾಗಿದ್ದವು. ಆ ನಾಯಿಗೆ ಇದನ್ನು ಬೇಯಿಸಿ ಹಾಕುತ್ತಿದ್ದರೆ ಈ ಪ್ರಾಧ್ಯಾಪಕರು.. ‘ನೀನೂ ಅದನ್ನೆ ಊಟ ಮಾಡಪ್ಪ’ ಎಂದಿದ್ದನಲ್ಲ ಮಹಾಶಯ! ಆ ನಾಯಿ ಮನೆ ಬಿಟ್ಟು ಹೋಗಿರುವುದರಲ್ಲಿ ನಮ್ಮ ಪಾಲು ಎಷ್ಟಿದೆಯೊ ಏನೊ!
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 32ನೇಯ ಕಂತು.

Read More

ಹೆಣ್ಣನ್ನು ಮುಟ್ಟಿದ್ದೀವಾ…

ಇಂತಹ ಹತ್ತಾರು ನಿದರ್ಶನಗಳಿಂದ ಆಕೆಗೆ ಏನೂ ತಿಳಿಯುತ್ತಿರಲಿಲ್ಲ. ನಾನು ಬಿಡಿಸಿ ಹೇಳುವಂತಿರಲಿಲ್ಲ. ಬೆದರಿ ಹೋಗಿದ್ದಳು. ಇದನ್ನು ಹೇಗೆ ಇಂಗ್ಲೀಷಿನಲ್ಲಿ ಸರಳೀಕರಿಸಿ ತಿಳಿಸಬಹುದು ಎಂದು ಮನದಲ್ಲೆ ಯತ್ನಿಸಿ; ಥತ್; ಇಂತಾ ಅಲ್ಕಾ ಟ್ರಾನ್ಸ್‌ಲೇಶನ್‌ನಿಂದಾಗಿ ಆಕೆ ನನ್ನ ಬಗ್ಗೆ ಕೆಟ್ಟದಾಗಿ ಭಾವಿಸಿ; ಎಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸುವಳೊ ಎಂದು ಆದಷ್ಟು ಅಂತರ ಕಾಯ್ದುಕೊಳ್ಳುತಿದ್ದೆ. ಆಕೆಯೊ ಲೈಬ್ರರಿಗೆ ಹುಡುಕಿ ಬಂದು ವಿವರಿಸು ಎಂದು ಒತ್ತಾಯಿಸುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ

Read More

ಮನುಷ್ಯ ಮೃಗ ಸತ್ತೇ ಇಲ್ಲ

ಪ್ರಾಯದಲ್ಲಿ ಸ್ಪರ್ಶವೇ ಸ್ವರ್ಗಸುಖ. ಮುಪ್ಪಾದಾಗ ಕೈಗೆಟುಕದೆ ಕಳೆದು ಹೋದದ್ದರ ನೆನಪೇ ನರಕ. ಅಶ್ವಥ್ ಅವರ ಮುಂದೆ ತಣ್ಣಗೆ ಹೊಂಗೆ ಮರದ ಕೆಳಗೆ ಮಧ್ಯೆ ಮಧ್ಯೆ ಚಹಾ ಕುಡಿಯುತ್ತ ಸಾಕಷ್ಟು ಹೊತ್ತು ಮಾತಾಡಿದ್ದೆ. ಪೋಲಂಕಿ ಅವರು ಹೇಳಿದ್ದನ್ನೆಲ್ಲ ನನಗೆ ಬೇಕಾದಂತೆ ಮರು ಸೃಷ್ಟಿ ಮಾಡಿಕೊಂಡಿದ್ದೆ. `ವುಮೆನ್ ಇನ್ ಲವ್’ ಹಾಗೂ `ಲೇಡಿ ಚಾಟೆರ್‍ಲೀಸ್ ಲವರ್’ ಹೆಸರಿನ ಲಾರೆನ್ಸ್‌ ಕಾದಂಬರಿಗಳ ತಿರುವಿ ಹಾಕಿದ್ದೆ. ಯಾರಾದರು ಬಲ್ಲವರು ಒಂದು ಅಪರೂಪದ ಸಂಗತಿಯ ಹೇಳಿದ ಕೂಡಲೆ ಅದನ್ನು ಅರೆದು ಕುಡಿದು ನನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುತ್ತಿದ್ದೆ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂವತ್ತನೆಯ ಕಂತು

Read More

ಕಾಮನ ಬಿಲ್ಲ ಎದೆಗೆ ಏರಿಸಿದ್ದೆ

ಪೆಂಟೆಗೆ ಬಂದೆ. ತೋಟದ ಮರೆಯಲ್ಲೊಂದು ಮಾಯಾಲೋಕ ಅದು. ಪಡ್ಡೆ ಹುಡುಗ ಹುಡುಗಿಯರೆ ಹೆಚ್ಚಿದ್ದರು. ಕುಡುಕರ ಸ್ವರ್ಗ. ಮಾಂಸಕ್ಕೆ ಕಾರ ಮಸಾಲೆ ಹಚ್ಚಿ ಸೌದೆ ಬೆಂಕಿಯಲ್ಲಿ ಸುಟ್ಟು ಎಂಡಗುಡುಕರಿಗೆ ಮಾರುತಿದ್ದರು. ವಿಚಿತ್ರ ಕಂಟು ಕಮಟು ವಾಸನೆ. ಟಿಕೇಟು ಪಡೆದೆ. ಇಷ್ಟವಾದ ಬಟಾಣಿ, ಕಡಲೆ ಬೀಜ ತಿನ್ನುತ್ತ ಕೂತಿದ್ದೆ. ಹತ್ತು ಗಂಟೆಗೆ ಸಿನಿಮಾ ಆರಂಭವಾಗುತ್ತಿದ್ದುದು. ಮೈಸೂರಿನದೇ ನೆನಪು. ತಾತನೂ ಸರಿ ಇಲ್ಲ ಎನಿಸಿತ್ತು. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಹೊಸ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ