ನರಕದಲ್ಲಿ ಕ್ಷಣ ಬೆರಳದ್ದಿ ಬಂದಿದ್ದೆ
ನನ್ನ ಇತಿ ಮಿತಿಯಲ್ಲಿ ಅವುಗಳಲ್ಲಿ ಬೇಕಾದವನ್ನು ಆಯ್ದುಕೊಂಡೆ. ಬರೆವ ಬಣ್ಣಗಳು ಆಗಲೇ ಹೈಸ್ಕೂಲು, ಪಿಯು ಕಾಲೇಜಿನಲ್ಲೆ ಅಂಟಿಕೊಂಡಿದ್ದವು ಎಂದು ಹೇಳಿದ್ದೆ. ಲೈಬ್ರರಿಯ ತರಾವರಿ ಗ್ರಂಥಗಳ ಬೆಟ್ಟ ಕಂಡ ಕೂಡಲೆ ಬರೆಯುವುದನ್ನೆ ಮರೆತುಬಿಟ್ಟಿದ್ದೆ. ಹಾದಿ ಬೀದಿಯಲ್ಲಿ ಅಲೆವಾಗ ಎಷ್ಟೊಂದು ಚೆಲುವೆಯರ ಕಂಡೆ; ನಗರದ ಮೂಲೆ ಮೂಲೆಯ ನರಕವ ಕಂಡೆ…
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ