ಯುದ್ಧದಲ್ಲಿ ಗೆಲ್ಲುವುದು ಸಾವು ಮಾತ್ರ…
ಯುಸಿ಼ಫ್ ತನ್ನ ಹದಿನೈದು ವರ್ಷದ ಮಗ ಆದಮ್‌ನ ಹಿಂದೆ ನಿಂತ. ಅಂಬೆಗಾಲು ಹಾಕುತ್ತ ಜನರ ಕಾಲೊಳಗಿಂದ ಬಾಗಿಲ ಬಳಿ ಹೋಗಲು ಮಗನಿಗೆ ತಿಳಿಸಿದ. ಆದಮ್ ಪ್ರಯತ್ನಪಟ್ಟು ಬಾಗಿಲ ಬಳಿ ಬಂದು ಹೊರಗೆ ನುಸುಳಿ ಓಡತೊಡಗಿದ. ಆದರೆ ನಾಜಿಗಳ ಗುಂಡಿಗೆ ಗುರಿಯಾದ. ಮಗನನ್ನು ಹಿಂಬಾಲಿಸಿದ ಯುಸಿ಼ಫ್ ಮೇಲೂ ಗುಂಡು ಹಾರಿಸಲಾಯಿತು. ನಾಜಿಯೊಂದು ಓಡಿ ಬಂದು ಬಿದ್ದ ಯುಸಿ಼ಫ್‌ನನ್ನು ಬೂಟುಗಾಲಿನಿಂದ ಒದ್ದು, ಬಂದೂಕಿನಿಂದ ತಿವಿಯಲಾಯಿತು. ಖತಿನ್ ಅನುಭವಿಸಿದ ಕೊನೆ ಗಳಿಗೆಯನ್ನು ಮೂರ್ಛಾವಸ್ಥೆಯಲ್ಲಿದ್ದ ಯುಸಿ಼ಫ್ ನೋಡಲಾಗಲಿಲ್ಲ. ನಾಜಿಗಳು ಅಲ್ಲಿಂದ ಹೋದ ನಂತರ ನೆರೆ ಗ್ರಾಮದ ಜನರು ಯುಸಿ಼ಫ್‌ನನ್ನು ಬದುಕಿಸಿದರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ಸರಣಿ