ಮುಗ್ಧತೆಯಿಂದ ಪ್ರಬುದ್ಧತೆಯ ಕಡೆಗಿನ ಪಯಣದ ಕತೆಗಳು
ಇಂತಹ ಕಥನಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾದುದು. ಸ್ವಲ್ಪ ಎಡವಟ್ಟಾದರೆ ಕತೆ ಹೋಗಿ ಪ್ರಬಂಧವಾಗಿ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಆದರೆ ಅನಿಲ್ ಗುನ್ನಾಪೂರ ತಮ್ಮ ಮೊದಲ ಕಥಾ ಸಂಕಲನದಲ್ಲಿ ಇಂಥದ್ದೊಂದು ಅಪಾಯಕಾರಿ ಪ್ರಯೋಗ ಮಾಡಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇಲ್ಲಿನ ಕತೆಯ ನಿರೂಪಕನೊಂದಿಗೆ ತಮ್ಮನ್ನು ಸಮೀಕರಿಸಿಕೊಂಡಂತಿರುವ ಲೇಖಕನ ಕುತೂಹಲ, ಅವನ ಗೆಳೆಯ ಗೌತಮನ ದಿಟ್ಟತನ ಹಾಗೂ ಮುದುಕಿಯ ಅಂತಃಕರಣ ಈ ಮೂರರ ಹದವಾದ ಮಿಶ್ರಣ ಕತೆಗೆ ಒಂದು ತೆರನಾದ ನಯಗಾರಿಕೆಯನ್ನು ತಂದುಕೊಟ್ಟಿವೆ.
ಅನಿಲ್ ಗುನ್ನಾಪೂರ ಬರೆದ ‘ಕಲ್ಲು ಹೂವಿನ ನೆರಳು’ ಹೊಸ ಕಥಾಸಂಕಲನಕ್ಕೆ ಚನ್ನಪ್ಪ ಕಟ್ಟಿ ಬರೆದ ಮಾತುಗಳು