Advertisement

Tag: Dadapeer jayman

ಟಿಶ್ಯೂಮಾರುವ ಹುಡುಗ ಸುಳ್ಳು ಹೇಳಲಿ ಬಿಡಿ

ಕೊನೆಗೂ ಉಷಾ ಇದ್ದ ಅಪಾರ್ಟ್ಮೆಂಟ್ ಬಂತು. ಲಿಫ್ಟ್ ಕಾರ್ನರ್ ಪ್ರವೇಶ ಮಾಡುವ ಮೊದಲೇ ಒಂದು ಮಂಟಪದಂತಹ ಜಾಗದಲ್ಲಿ ನಿಂತು ಅದರ ನಾಲ್ಕೂ ಮೂಲೆಗೂ ಹಬ್ಬಿದ್ದ ಮಲ್ಲಿಗೆ ಬಳ್ಳಿಯನ್ನು ನೋಡುತ್ತಾ ಅದರ ಸುಗಂಧವನ್ನು ಅಘ್ರಾಣಿಸಲು ನಿಂತರು. ಇಹದಲ್ಲಿ ನಿಂತು ಪರಲೋಕಕ್ಕೆ ಕೈಚಾಚಿ ನಿಂತ ಘಳಿಗೆಯಾಗಿ ನನಗದು ಕಂಡಿತು. ಆ ಕ್ಷಣದಲ್ಲಿ ನನಗವರ ಮೇಲೆ ಕ್ಯಾಬಲ್ಲಿ ಉಕ್ಕಿದ್ದ ಕೋಪವೆಲ್ಲಾ ಮಾಯವಾಯಿತು. ಉಷಾಳ ಗಂಡ ಅನಿಕೇತ್ ನೋಡುವುದಕ್ಕೆ ನಿಜಕ್ಕೂ ಚೆನ್ನಾಗಿದ್ದ.
ದಾದಾಪೀರ್‌ ಜೈಮನ್‌ ಬರೆಯುವ ಅಂಕಣ

Read More

ರುಚಿಯ ದಾರಿ ಹಿಡಿದವರ ಕಥೆ

ಕೋವಿಡ್ ಮೊದಲನೇ ಅಲೆಯ ಕಾರಣದಿಂದ ಹಲವರು ಕೆಲಸ ಕಳೆದುಕೊಳ್ಳುತ್ತಿದ್ದರು. ಮತ್ತೊಂದಿಷ್ಟು ಕಡೆ ಪರ್ಸಂಟೇಜ್ ಸ್ಯಾಲರಿಗೆ ಬಂದು ನಿಂತಿತ್ತು. ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಮಿಸಸ್ ಪ್ರೆಸಿಲ್ಲಾ ಅವರನ್ನು ಹೆಚ್ಚುವರಿ ಹುದ್ದೆಗಳನ್ನು ವಜಾ ಮಾಡುವ ನೆಪ ಹೇಳಿ ಕೆಲಸದಿಂದ ತೆಗೆದು ಹಾಕಿದ್ದರು. ಅವರೇ ರೆಫರ್ ಮಾಡಿದ್ದ, ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಇಂಗ್ಲಿಷ್ ಭಾಷಾ ಅಧ್ಯಾಪಕರಾಗಿ ಸೇರಿಕೊಂಡರು. ನಾವೀಗ ಸಹೋದ್ಯೋಗಿಗಳಾಗಿದ್ದೆವು. ಜಂಕ್ಷನ್ ಪಾಯಿಂಟ್ ಅಂಕಣದಲ್ಲಿ ದಾದಾಪೀರ್ ಜೈಮನ್ ಬರಹ

Read More

ಹೀಗೊಂದು ‘ಭಿನ್ನ ಸಾಮಾನ್ಯ’ರ ಪ್ರೇಮಚರಿತೆ

‘ಜೀವನದಲ್ಲೊಂದು ಘಳಿಗೆ ಬಂದಿತು. ನಾನೊಬ್ಬ ಗೇ ಎನ್ನುವುದೇ ನನ್ನ ಟ್ರು ಐಡೆಂಟಿಟಿ ಎಂದು ಅನಿಸೋಕೆ ಶುರುವಾಯಿತು. ಆಗ ನಾನು ನನ್ನ ತಂದೆ ತಾಯಿಗೆ ಹೇಳಲೇಬೇಕಾಯಿತು. ಅಪ್ಪ ಮೊದಲಿಗೆ ನೀನು ಮನೆಗೆ ವಾಪಸ್ ಬರಬೇಕೆಂದರೆ ಅದೆಲ್ಲ ಬಿಡಬೇಕು ಎಂದರು. ಬಿಡುವುದಕ್ಕೆ ಅದೇನದು? ನನ್ನನ್ನ ನಾನಿರುವ ಹಾಗೆ ಒಪ್ಪಿಕೊಳ್ಳದಿದ್ದರೆ ನಾನು ಬರುವುದಿಲ್ಲ ಎಂದಿದ್ದೆ. ಕೂಡಲೇ ಫೋನ್ ಕಟ್ ಮಾಡಿದ್ದರು. ಆಮೇಲೇನಾಯಿತೋ ಏನೋ ಮತ್ತೆ ಅವರಿಂದ ಫೋನ್ ಬಂದಿತು… ನಾವಿಬ್ಬರು ಬೆಂಗಳೂರಿನಲ್ಲಿ ಜೊತೆಗಿರಲು ಶುರುಮಾಡಿದಾಗ ನಿನಗೊಬ್ಬಳು ಹೆಂಗಸು ಬೇಕೇ ಬೇಕು ಅಂದ್ರು.’

Read More

ಉಳಿದು ಬದುಕುವುದನ್ನೇ ಆಯ್ಕೆ ಮಾಡಿಕೊಂಡವನ ಕಥೆ

ಒಮ್ಮೊಮ್ಮೆ ಯೋಚಿಸಿದರೆ ನಮ್ಮ ಅಳತೆಗಳನ್ನು ಯೋಜನೆಗಳನ್ನು ಮೀರಿ ಜೀವನದಲ್ಲಿ ಏನೋ ಘಟಿಸುತ್ತಿರುತ್ತದೆ. ಒಮ್ಮೊಮ್ಮೆ ಅದಕ್ಕೊಂದು ಅರ್ಥವೇ ಇರುವುದಿಲ್ಲ. ತರಗೆಲೆಯಂತೆ ತೂರಿ ಎತ್ತೆತ್ತಲೋ ಹಾರಿ ಮತ್ತೆಲ್ಲೋ ಮತ್ಯಾವುದೋ ಮಣ್ಣಿನಲ್ಲಿ ಸೇರಿ ಕೊಳೆತು ಹೋಗಿಬಿಡುವ ಹಾಗೆ ಅನಿಸುತ್ತದೆ. ಬದುಕೇ ಹಾಗೆ! ಹುಡುಕುವಾಗ ನಾವು ಹುಡುಕುತ್ತಿರುವುದು ಸಿಗುವುದಿಲ್ಲ. ಹುಡುಕುವುದನ್ನು ನಿಲ್ಲಿಸಿದಾಗ ಧುತ್ತೆಂದು ತಂದು ಎಸೆಯುತ್ತದೆ. ಈ ಬದುಕಿಗೆ ಅರ್ಥ ಎನ್ನುವುದು ಇದೆಯೇ? ಈ ಬದುಕು ಅರ್ಥಗಳ ಹಂಗನ್ನು ಮೀರಿಕೊಳ್ಳಲು ಪ್ರಯತ್ನಿಸುತ್ತಿರುವ ಕವಿತೆಯೇ?

Read More

ದಾದಾಪೀರ್ ಜೈಮನ್ ಹೊಸ ಅಂಕಣ “ಜಂಕ್ಷನ್ ಪಾಯಿಂಟ್” ಇಂದು ಆರಂಭ

‘ನಾವು ಯಾವಾಗಲೂ ಹಾಗೆಯೇ ಅಲ್ಲವಾ? ನಮಗೆ ಗೊತ್ತಿರುವ ಯಾವುದೋ ಎಳೆ, ಬೇರೆಯವರ ಮಾತುಗಳಲ್ಲಿ ಬಂದಾಗ ಮಾತ್ರ ಅವರ ಮೇಲಿನ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹೆಚ್ಚುತ್ತದೆ. ಅಲ್ಲೂ ಹೀಗೆ ಆಯಿತು’ ಎನ್ನುತ್ತ ಪೀಜಿ ಹಾಸ್ಟೆಲ್ ರೂಮ್ ನಲ್ಲಿ ನಡೆದ ಭೇಟಿಯೊಂದರ ಕುರಿತು ಬರೆದಿದ್ದಾರೆ ಹೊಸ ತಲೆಮಾರಿನ ಕಥೆಗಾರ ದಾದಾಪೀರ್ ಜೈಮನ್. ತಮ್ಮ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಯ ಸಂದರ್ಭದಲ್ಲಿ ಹೀಗೆ ಭೇಟಿಯಾದ ವ್ಯಕ್ತಿಗಳ ಕುರಿತು, ಸನ್ನಿವೇಶಗಳ ಕುರಿತು ಅವರು ತಮ್ಮ ಹೊಸ ಅಂಕಣ…

Read More
  • 1
  • 2

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸುತ್ತಾಡಿದ ದೇಶಗಳ ಒಳಗೂ-ಹೊರಗೂ: ಕೆ.ಎನ್.ಲಾವಣ್ಯ ಪ್ರಭಾ ಬರಹ

ಒಮ್ಮೆ ಎಸ್ಕಲೇಟರಿನಲ್ಲಿ ಲೇಖಕಿ ಹೋಗುವಾಗ ಅಕಸ್ಮಾತ್ತಾಗಿ ಅವರ ಸೀರೆ ಸಿಕ್ಕಿಕೊಂಡು ಮೊಣಕಾಲಿನವರೆಗೂ ಹರಿದುಹೋಗುತ್ತಿದ್ದರೂ ಅಕ್ಕಪಕ್ಕದ ಜನ ತಮಗೆ ಸಂಬಂಧವೇ ಇಲ್ಲದವರಂತೆ ತಮ್ಮ ಪಾಡಿಗೆ ಹೋಗುವುದು, ಬಸ್‌ನಲ್ಲಿ ಕೂತಾಗ…

Read More

ಬರಹ ಭಂಡಾರ