ಕೂರಾಪುರಾಣ ೪: ಸೂಜಿಗಳೆಂದರೆ ಸಂಕಷ್ಟವೇ…

ಎರಡು ನಿಮಿಷಗಳ ಕಾಲ ಕೂರಾ ಅವಳನ್ನು ನಮ್ಮೊಡನೆ ಮಾತನಾಡಲು ಬಿಡಲೇ ಇಲ್ಲ. ಅವಳ ಮೇಲೆ ಹತ್ತುವುದು, ಅವಳ ಸುತ್ತ ಸುತ್ತುವುದು, ಅವಳ ಕೆನ್ನೆಯನ್ನು ನೆಕ್ಕುವುದು.. ಎಲ್ಲ ಮಾಡುತ್ತಿದ್ದ. ಒಳಗೆ ಬಂದಾಗ ಆಕೆ ಅವನಿಗೆ ಒಂದೆರಡು ಟ್ರೀಟಿನ ತುಂಡುಗಳನ್ನು ಕೊಟ್ಟಿದ್ದಳು. ಇದೆಲ್ಲ ಅವಳನ್ನು ಒಲಿಸಲಿಕ್ಕೆ ಮತ್ತು ಇನ್ನೆರಡು ತುಂಡುಗಳನ್ನು ಪಡೆಯಲಿಕ್ಕೆ ಎಂದು ನಮಗೆ ಗೊತ್ತಿತ್ತು. ನಿಧಾನವಾಗಿ ಆಕೆ ನಮ್ಮೊಡನೆ ಮಾತನಾಡುತ್ತ ನಾಯಿಗಳ ಆರೋಗ್ಯದ ಬಗ್ಗೆ ವಿವರಿಸತೊಡಗಿದಳು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ನಾಲ್ಕನೆಯ ಕಂತು

Read More