Advertisement

Tag: film

ಉಪದ್ರವಿ ಸಾಹಿತಿಗಳು ಬೇಕಾಗಿದ್ದಾರೆ: ಕುಂ. ವೀರಭದ್ರಪ್ಪ

ಬಳ್ಳಾರಿಯ ಕಡಕ್ ಭಾಷೆಯಲ್ಲಿ ಮಾತನಾಡುವ ಸಾಹಿತಿ ಕುಂ.ವೀರಭದ್ರಪ್ಪ ಅವರು, ಪ್ರತಿಭಟನೆ, ಪ್ರಶ್ನಿಸುವ ಮನೋಭಾವವನ್ನು ಇಷ್ಟಪಡುವವರು. ಸ್ವಭಾವಕ್ಕೆ ತಕ್ಕಂತೆ ಬಂಡಾಯವನ್ನು ಮೆಚ್ಚಿಕೊಂಡು ಸಾಹಿತ್ಯ ಕೃಷಿ ಮಾಡಿದ ಅವರು ಬರೆದ ‘ಅರಮನೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಇತ್ತೀಚೆಗೆ ಅವರಿಗೆ ಜೀವಬೆದರಿಕೆಯ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಅವರೊಡನೆ ಒಂದಿಷ್ಟು ಹೊತ್ತು ಮಾತನಾಡಿದಾಗ ಕನ್ನಡ ಸಾಹಿತ್ಯ ಲೋಕದ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡರು.

Read More

ಚರಿತ್ರಾರ್ಹ ಲಕ್ಷಣಗಳಿರುವ ಫ್ರಾನ್ಸ್‌ನ ʻದ ಆರ್ಟಿಸ್ಟ್‌ʼ

ಮೂಕಿ ಚಿತ್ರವೊಂದು ಈಗ ಸವಾಲುಗಳನ್ನು ಎದುರಿಸಿ ಗೆಲ್ಲುವ ಸಾಧ್ಯತೆ ಇಲ್ಲ ಎನ್ನುವ ತೀವ್ರವಾದ ಅನಿಸಿಕೆಯಿದೆ. ಆದರೆ ಎಲ್ಲರ ಪೂರ್ವಗ್ರಹ, ಅನುಮಾನಗಳನ್ನು ಸಾರಾಸಗಟಾಗಿ ನೆಲಸಮ ಮಾಡಿ, ಅಷ್ಟೆತ್ತರಕ್ಕೆ ಪತಾಕೆ ಹಾರಿಸಿದ ಚಿತ್ರ ʻದ ಆರ್ಟಿಸ್ಟ್‌ʼ. ಹಳೆಯ ದಾರಿಗಳನ್ನು ಹೊಸದಾರಿಗಳನ್ನು ಅನ್ವೇಷಿಸುವಂತೆ ಸಂದೇಶ ನೀಡುವ ಫ್ರಾನ್ಸ್ ನ ಚಿತ್ರವಿದು. ಈ ಚಿತ್ರದ ಆಶಯವೇನು ಎಂಬ ಬಗ್ಗೆ ಪ್ರಶ್ನೆಗಳು ಮೂಡುವುದು ಸಹಜ. 2011ರಲ್ಲಿ ತೆರೆಕಂಡ ಚಿತ್ರವಿದು. ಹಾಗಾಗಿ ಅದರ ಪ್ರಭಾವ, ಮಹತ್ವಗಳ ಪೂರ್ಣ ಅರಿವು ದೊರೆಯಬೇಕಾದರೆ ಇನ್ನಷ್ಟು ಕಾಲ ಸರಿಯಬೇಕು. ಲೋಕಸಿನಿಮಾ ಟಾಕೀಸ್ ನಲ್ಲಿ ಎ.ಎನ್. ಪ್ರಸನ್ನ ಬರಹ ನಿಮ್ಮ ಓದಿಗಾಗಿ. 

Read More

ಸಿನೆಮಾ ನೋಡುವ ಖುಷಿಯ ಹಿಂದಿದೆ ಸುಖದುಃಖಗಳು

ಆಗ ಲಾಸ್ಟ್ ಶೋ  ರಾತ್ರಿ ಒಂಬತ್ತು ಗಂಟೆಗೆ ಇರುತ್ತಿತ್ತು; ಆಗಿನ ಕಾಲದಲ್ಲಿ ಒಂಬತ್ತು ಗಂಟೆ ಅಂದರೆ ಒಂಥರ ಅಪರಾತ್ರಿ ಇದ್ದಂತೆ, ಬರೀ ಗೂರ್ಖಾಗಳು, ಕುಡುಕರು, ನಾಯಿಗಳು ಮಾತ್ರ ರಸ್ತೆ ಮೇಲೆ ಕಾಣಸಿಗುತ್ತಿದ್ದರು. ಸಿನೆಮಾ ಬಿಡುತ್ತಿದುದು ರಾತ್ರಿ ಹನ್ನೆರೆಡುವರೆಯೇ ಆಗುತ್ತಿತ್ತು. ಗವ್ ಎನ್ನುವ ಕತ್ತಲೆಯಲ್ಲಿ ಸೋದರ ಮಾವಂದಿರ ಕೈಹಿಡಿದು ನಾಯಿಗಳನ್ನು, ಕಡುಕರನ್ನು ದೂರದಿಂದಲೇ ಗಮನಿಸುತ್ತ, ನೋಡಿರುವ ರಾಜಕುಮಾರನ ಸಿನೆಮಾದ ಬಗ್ಗೆ ಭಯಂಕರ ಚರ್ಚೆ ಮಾಡಿಕೊಂಡು ಬರುತ್ತಿದ್ದೆವು. -ಇಂಗ್ಲೆಂಡ್ ಪತ್ರದಲ್ಲಿ, ತಮಗೆ ಇಂಗ್ಲೆಂಡ್ ನಲ್ಲಿ ಸಿನಿಮಾ ನೋಡಲು ಲಭ್ಯವಾಗುವ ಅವಕಾಶಗಳ ಕುರಿತು ನೆನಪುಗಳನ್ನು ಮೆಲುಕು ಹಾಕಿದ್ದಾರೆ ಡಾ.ಕೇಶವ ಕುಲಕರ್ಣಿ. 

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ