Advertisement

Tag: Kannada Literature

ನವೀನ್‌ ತೇಜಸ್ವಿ ಬರೆದ ಈ ಭಾನುವಾರದ ಕತೆ “ಬಂಗಾರಕಡ್ಡಿ ಡೇರೆಹೂವು”

ನೇತ್ರಿ ಮೆಡಿಕಲ್ ಶಾಪಿನಲ್ಲಿ ಡಾಕ್ಟರ್ ಬರೆದಕ್ಕಿಂತ ಅರ್ಧರ್ಧವೆ ಮಾತ್ರೆ ತೆಗೆಸಿದಳು. ಟಾನಿಕ್ ಇರಲಿಲ್ಲ. ಸ್ವಲ್ಪ ದೂರದಲ್ಲಿ ಮತ್ತೊಂದು ಮೆಡಿಕಲ್ ಶಾಪಿತ್ತು. ಅಲ್ಲಿಗೆ ನಡೆದು ಹೋಗಿ ಅದನ್ನೂ ಕೊಂಡು ಆಸ್ಪತ್ರೆಯ ಕಡೆ ಬಂದರೆ ಕೂತ ಜಾಗದಲ್ಲಿ ಅವ್ವ ಮಗು ಇರಲಿಲ್ಲ! ಹಳದಿ ಕವರ್ರು ಮಾತ್ರವೇ ಬೆಂಚಿನ ಮೇಲಿತ್ತು. ಹೋಗಿ ಮಾತ್ರೆಯನ್ನು ನರ್ಸಿಗೆ ತೋರಿಸಿ ಮತ್ತೆ ಬೆಂಚಿನ ಬಳಿ ಬಂದಳು. ಪಕ್ಕ ಕೂತಿದ್ದ ಅಜ್ಜನೊಬ್ಬ “ತಂಗಿ ನಿಮ್ಮವ್ವ ಇಲ್ಲೆ ಎಲ್ಲೊ ಹೊರಗಡೆ ಹೋದ್ರು. ಹನುಮಂತನ ಗುಡಿ ಹತ್ರ ಇರ್ಬಕಂತೆ. ಬರ್ತಾಳಂತೆ” ಎಂದನು.
ನವೀನ್‌ ತೇಜಸ್ವಿ ಕಥಾಸಂಕಲನ “ಬಂಗಾರಕಡ್ಡಿ ಡೇರೆಹೂವು”, ಶೀರ್ಷಿಕೆ ಕತೆ

Read More

ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಸ್ಲಾ..ಟ್!”

ಹನ್ನೆರಡರ ಸುಮಾರಿಗೆ ಎಲ್ಲರೂ ಒಟ್ಟಾದರು. ಸೀನಪ್ಪ ಎಲ್ಲ ರೆಡಿ ಮಾಡಿಟ್ಟಿದ್ದ; ಇನ್ನೊಂದು ಅರ್ಧ ಗಂಟೆ ಒಳಗೆ ಎಲ್ಲಾ ಮುಗಿಸಿ ಬಿಡುವ ಸೂಚನೆ ಇತ್ತು. ಆಗ ಶುರುವಾಯಿತು ಏನೋ ಗಲಿಬಿಲಿ. ಸೀನಪ್ಪ ಬಂದ “ಸಾರ್ ನಾನು ಹೊರಗಿರುತ್ತೇನೆ ನಾನಾಗಲೇ ತೋರಿಸಿದ್ದೆನಲ್ಲ ಕೌಂಟರ್ ಎರಡರಲ್ಲಿ ದೇವರಾಜ ಅನ್ನುವವರನ್ನ, ಅವರೆಲ್ಲ ಮಾಡಿಕೊಡುತ್ತಾರೆ” ಎಂದ. ಬಾಯಿಗೆ ಕೈ ಅಡ್ಡ ಇಟ್ಟು “ಲೋಕಾಯುಕ್ತರು ಬಂದಿದ್ದಾರೆ ಹಾಗಾಗಿ ಸ್ವಲ್ಪ ತಡ ಆಗಬಹುದು, ಒಂದು ಮೂತ್ತರಿಂದ ಎರಡೂ ಮೂವತ್ತು ಊಟದ ಸಮಯ. ಅದು ಕೂಡ ಸ್ವಲ್ಪ ಹಿಂದೆ ಮುಂದೆ ಆಗಬಹುದು.”
ವಸಂತಕುಮಾರ್ ಕಲ್ಯಾಣಿ ಬರೆದ ಕತೆ “ಸ್ಲಾ..ಟ್!” ನಿಮ್ಮ ಈ ಭಾನುವಾರದ ಓದಿಗೆ

Read More

ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಈ ಭಾನುವಾರದ ಕತೆ “ಹರಿವ ಹೊಳೆಯ ಜೊತೆಯಲ್ಲಿ….”

ಮೈಲಾರಿಗೆ ಗೆಳೆಯನ ಅಪಾರ್ಥಕ್ಕಿಂತ, ಕಣ್ಮುಂದಿನ ಸಾವಿಗಿಂತ ಹೆಂಡತಿ ಪ್ರತಿಭಟಿಸದೇ ದೂರ ನಿಂತಿದ್ದು ಜೀರ್ಣಿಸಿಕೊಳ್ಳಲಾಗಲಿಲ್ಲ. ಕೈ ಮುಗಿಯುವಂತೆ ಕಣ್ಣಲ್ಲಿ ನೀರು ತಂದು ನಾನೇನೂ ತಪ್ ಮಾಡಿಲ್ಲ ಅನ್ನುವಂತೆ ಆಚೀಚೆ ಕತ್ತು ಆಡಿಸುತ್ತಾ ಒದ್ದಾಡುತ್ತಿದ್ದ. ಕೈಯ ಬಿಗಿತ ಜೋರಾದಂತೆ ಮೈಲಾರಿ ಕಣ್ಣು ಮ್ಯಾಲೆ ಕೆಳಗೆ ಮಾಡ್ತಿದ್ದ. ಗಂಟಲಲ್ಲಿ ಸರ್ ಸರ್ ಅನ್ನೋ ಸದ್ದು ಬಂದು ಒಂದೇ ಸಾರಿ ಶಬ್ಧ ನಿಶಬ್ಧವಾಯಿತು.
ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಈ ಭಾನುವಾರದ ಕತೆ “ಹರಿವ ಹೊಳೆಯ ಜೊತೆಯಲ್ಲಿ….” ನಿಮ್ಮ ಓದಿಗೆ

Read More

ವಾಸುದೇವ ಕೃಷ್ಣಮೂರ್ತಿ ಬರೆದ ಈ ಭಾನುವಾರದ ಕತೆ “ಪುನರಪಿ ಜನನಿ ಜಠರೇ ಶಯನಂ”

“ನಮ್ಮ ಅನಾಮಿಕೆ ರೂಮನ್ನು ಕ್ವಾರಿಯ ಸುಮಾರು 80 ಅಡಿ ಒಳಗಿನ ಹಳ್ಳಕ್ಕೆ ಹಾಕಿ ಕಲ್ಲು, ಇದ್ದಲು, ಸ್ಕ್ರಾಪ್ ಮೆಟೀರಿಯಲ್ಸ್‌ಗಳನ್ನು ಹೇಗೆ ತುಂಬಬೇಕೆಂದು ಬಹಾದ್ದೂರ್‌ಗೆ ತಯಾರಿಮಾಡಿ, ನಮ್ಮನ್ನು ಒಂದು ತಿಂಗಳ ನಂತರ ಹಳ್ಳದಿಂದ ತೆಗೆಯಬೇಕೆಂದು ಸುಮ್ಮನೆ ಹೇಳಿದ್ದೆ. ನನಗೆ ಖಾತ್ರಿಯಾಗಿತ್ತು ಒಂದು ತಿಂಗಳ ನಂತರ ಯಾವ ಜೀವಿಗಳು ಭೂಮಿಯ ಮೇಲೆ ಇರಲು ಸಾಧ್ಯವೇ ಇಲ್ಲ ಎಂದು. ಅವನ ಜೊತೆ ಅವನು ಬದುಕಿರುವವರೆಗೂ ಮಾತನಾಡಲು ವಾಕಿ- ಟಾಕಿ ಕೊಟ್ಟೆ. ಅವನನ್ನು ಗಟ್ಟಿಯಾಗಿ ಅಪ್ಪಿ, ಅವನು ಮತ್ತು ಅವನ ಸಂಗಡಿಗರಿಗೆಲ್ಲ ದೀರ್ಘದಂಡ ನಮಸ್ಕಾರ ಮಾಡಿದಾಗ….”
ವಾಸುದೇವ ಕೃಷ್ಣಮೂರ್ತಿ ಬರೆದ ಕತೆ “ಪುನರಪಿ ಜನನಿ ಜಠರೇ ಶಯನಂ”

Read More

ವಾಸುಕಿ ಸಿ.ಜಿ. ಬರೆದ ಈ ಭಾನುವಾರದ ಕತೆ “ಕನಸಿನ ಕಾಗೆ”

ಕೊನೆಗೂ ನಾನು ನೀರಿಗೆ ಇಳಿದೆ. ನೆನ್ನೆ ಆ ಮನುಷ್ಯ ಮಾಡಿದ್ದನ್ನೇ ನಾನೂ ಮಾಡಿದೆ. ಎರಡು ಅಂಗೈಗಳಲ್ಲಿ ನೀರನ್ನು ತುಂಬಿಸಿಕೊಂಡು ತಲೆಯ ಮೇಲೆ ಸುರಿದುಕೊಂಡೆ. ಮೈಗೆ ನೀರು ತಾಗಿದ್ದೇ ತಡ, ಹೊಸ ಹುಮ್ಮಸ್ಸು ಬಂದಂತಾಯಿತು. ಆ ಕ್ಷಣದಲ್ಲಿ ನನ್ನೊಳಗೆ ಏನೋ ಒಂದು ಬದಲಾವಣೆ ಆಯಿತು; ಇಂತಹ ಸುಖವನ್ನು ನಾನು ಅದಕ್ಕೂ ಮುಂಚೆ ಯಾವತ್ತೂ ಕಂಡವನಲ್ಲ. ತಲೆಯಲ್ಲಿ ಓಡುತ್ತಿದ್ದ ನೂರಾರು ಯೋಚನೆಗಳು ಇದಕ್ಕೆ ಕಾರಣ ಇರಬಹುದು. ಯಾವುದೋ ಸಿಂಹದ ತೂಕದ ಹೊರೆ ಮೈಮೇಲಿಂದ ಇಳಿದು ಹೋದಂತೆ ಹಗುರ ಎನಿಸಿತು.
ವಾಸುಕಿ ಸಿ.ಜಿ. ಬರೆದ ಕತೆ “ಕನಸಿನ ಕಾಗೆ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ