Advertisement

Tag: Maruthi Gopikunte

ಮಾವಿನ ತೋಪಿನ ಎರಡು ಕತೆಗಳು: ಮಾರುತಿ ಗೋಪಿಕುಂಟೆ ಸರಣಿ

ಅವನು ಓಡುವುದರಲ್ಲಿ ಯಾವಾಗಲೂ ಪ್ರಥಮ.. ಹಾಗಾಗಿ ಅವನೇನೊ ತಪ್ಪಿಸಿಕೊಂಡ. ಮರವನ್ನು ಹತ್ತುವುದರಲ್ಲಿ ಅಂತಹ ಅನುಭವವೇನು ಇಲ್ಲದ ನಾನು ನಿಧಾನವಾಗಿ ಮರ ಇಳಿಯುವುದರಲ್ಲಿ ಸಿಕ್ತಿಮ್ಮಜ್ಜ ಹತ್ತಿರವಾಗಿದ್ದ. ಅವನು ಹತ್ತಿರ ಬರುವುದು ಕಂಡದ್ದೇ ಎದೆಬಡಿತ ಜೋರಾಗಿತ್ತು. ಕೈ ಕಾಲುಗಳು ನಡುಗಲು ಪ್ರಾರಂಭಿಸಿದ್ದವು. ನನಗೆ ಬೇರೆ ದಾರಿ ಇರಲಿಲ್ಲ. ನಾನು ಮರದಿಂದ ಇಳಿಯಲಿಲ್ಲ, ಬದಲು ಅದರ ಮಧ್ಯದಲ್ಲಿ ಅವಿತುಕೊಂಡೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ

Read More

ಮಾಡಿದ ತಪ್ಪುಗಳು ಮತ್ತು ಅಪ್ಪನ ಶಿಕ್ಷೆ…

ಇಬ್ಬರ ನಾಗಾಲೋಟದ ಓಟ ರೇಸಿಗೆ ಬಿದ್ದಂತೆ ಸಾಗುತ್ತಿದೆ. ನಾನು ಮುಂದೆ ಅಪ್ಪ ಹಿಂದೆ. ಓಡಿದೆ ಓಡಿದೆ….. ಅಪ್ಪನೂ ನಿಲ್ಲಿಸಲಿಲ್ಲ… ಊರ ಹೊರಭಾಗದ ರಸ್ತೆಯನ್ನು ಒಂದು ಸುತ್ತು ಸುತ್ತಿಸಿದೆ. ಅಪ್ಪ ಸುಸ್ತಾದ ಅಂತ ಕಾಣುತ್ತದೆ. ಊರಿಗೆ ಹತ್ತಿರವಾಗಿ ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಜೋಳದ ಹೊಲ ಇತ್ತು ಅದು ಗುಂಪು ಗುಂಪಾಗಿತ್ತು. “ನಿಲ್ಲು ಓಡ್ಬೇಡ… ಓಡ್ಬೇಡ…” ಅಪ್ಪ ಕೂಗುತ್ತಲೆ ಇದ್ದ. ಅದಕ್ಕಾಗಿ ನಾನು ಓಡುವುದನ್ನು ನಿಲ್ಲಿಸಲಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಐದನೆಯ ಕಂತು ನಿಮ್ಮ ಓದಿಗೆ

Read More

ಗಂಟಲೊಳಗಿನ ನಾಣ್ಯ ಮತ್ತು ಆಸೆಯ ಕಣ್ಣು

ಹಟ್ಟಿಯ ಅಂಗಳಕ್ಕೆ ಬಂದವನೆ ಸಡನ್ನಾಗಿ ನಿಂತುಕೊಂಡೆ. ಅಪ್ಪ ಎದುರಿಗೆ ನಿಂತಿದ್ದಾನೆ. ಭೀಮನ ಗದೆಯಂತ ಕೋಲು ಹಿಡಿದು ತೇಪೆಯ ಅಂಗಿಯ ತೊಟ್ಟು.. ಸಿಟ್ಟಿಗೆ ಮುಖ ನಡುಗುತ್ತಿದೆ… ಕೈಯಲ್ಲಿನ ಕೋಲು ಕುಣಿಯುತ್ತಿದೆ. ನನಗೆ ಎಲ್ಲವೂ ಅರ್ಥವಾಗಿತ್ತು. ಅಪ್ಪನಿಗೆ ನಾನು ಹಣ ತೆಗೆದುಕೊಂಡಿದ್ದು ಗೊತ್ತಾಗಿದೆ. ಪಕ್ಕದಲ್ಲಿ ಅಕ್ಕ ನಿಂತಿದ್ದಳು. ಅವಳ ಮುಖದಲ್ಲಿ ನಗು ನೋಡಿ ಅರ್ಥವಾಯಿತು. ಓ.. ನಾನು ಬೆಳಿಗ್ಗೆ ತೆಗೆದುಕೊಳ್ಳುವಾಗ ಇವಳು ನೋಡಿರಬೇಕು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಬಾಯಿಗೆ ಸಿಗದ ಗೆಣಸು ಮತ್ತು ಮೇಷ್ಟ್ರು ಎಸೆದ ನೋಟ್ಬುಕ್

ಎಲ್ಲರಿಗಿಂತ ಚೆನ್ನಾಗಿಯೇ ಬರೆದಿದ್ದ ನನಗೆ, ಹಾಗೆ ಮೇಷ್ಟ್ರು ಹೊಡೆದದ್ದರಿಂದ ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ನಾನು ಸಾವರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಕಣ್ಣಿನಿಂದ ನೀರು ಸುರಿಯುತ್ತಿತ್ತು. ನೋಟ್ ಬುಕ್ ನನ್ನಿಂದ ಇಪ್ಪತ್ತೈದು ಮೀಟರ್‌ನಷ್ಟು ದೂರ ಬಿದ್ದಿತ್ತು. ಹಾಳೆಗಳು ಗಾಳಿಗೆ ಹಾರುತ್ತಿದ್ದವು. ಅವರ ತರಗತಿ ಮುಗಿದ ಮೇಲೆ ಈ ಹಿಂದೆ ನಮಗೂ ಹೀಗೆ ಮಾಡಿದ್ದರು ಎಂದು ನನ್ನ ಗೆಳೆಯರು ನನ್ನನ್ನು ಸಮಾಧಾನ ಮಾಡಿದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಅಜ್ಜಿ ಮತ್ತು ಹರಿದ ಹೋಳಿಗೆಯ ತುಂಡುಗಳು…

ಅಜ್ಜಿ ಹೋಳಿಗೆಯ ಮೇಲಿನ ಆಸೆ ಎಂದೂ ಬಿಟ್ಟಿರಲೆ ಇಲ್ಲ. ಯುಗಾದಿ ಹಬ್ಬದ ದಿನಗಳಲ್ಲಿ ಹೋಳಿಗೆ ಸಿಹಿ ಮಾಡುವುದು ವಾಡಿಕೆ. ಬಹುಃಶ ನಾವೆಲ್ಲಾ ಬಾಲ್ಯದ ದಿನಗಳಲ್ಲಿ ಸಿಹಿಯೂಟ ಸವಿಯುತ್ತಿದ್ದುದೆ ವರ್ಷಕ್ಕೊಮ್ಮೆ. ಮನೆಯಲ್ಲಿ ಸಿಹಿ ಮಾಡುವಷ್ಟು ಆರ್ಥಿಕ ಅನುಕೂಲತೆಯ ಕೊರತೆಯಿಂದಾಗಿ ಪಾಯಸವನ್ನಷ್ಟೇ ಮಾಡುತ್ತಿದ್ದರು. ಅಜ್ಜಿ ಎಂಬತ್ತರ ಆಸು ಪಾಸಿನಲ್ಲಿದ್ದರೂ ಇನ್ನೂ ಗಟ್ಟಿಯಾಗಿದ್ದರು ನಡಿಗೆಯಲ್ಲಿ ಸ್ವಲ್ಪ ನಿಧಾನವಿತ್ತು ಅಷ್ಟೇ.
ಮಾರುತಿ ಗೋಪಿಕುಂಟೆ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ