ಎಂ.ಜಿ. ಶುಭಮಂಗಳ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ಬರೆದ ತೆಲುಗು ಕಥೆ ʼವಾತ್ಸಲ್ಯʼ
““ಈ ಪ್ಲ್ಯಾನ್ ಚೆನ್ನಾಗಿಯೇ ಇದೆ, ಮೊನ್ನೆ ಪ್ಲೇ ಗ್ರೌಂಡಿನಲ್ಲಿ ಪದ್ಮ ಸಿಕ್ಕಿದ್ದಳು, ಅವರ ಮಗಳನ್ನು ಕೂಡ ಇಂಡಿಯಾದಲ್ಲೇ ಬಿಟ್ಟು ಬಂದಿದ್ದಾರಂತೆ. ಅವಳು ಯಾವುದೋ ಕೋರ್ಸ್ ಕೂಡ ಮಾಡಿಕೊಂಡು, ಈಗ ಕೆಲಸಕ್ಕೆ ಟ್ರೈ ಮಾಡುತ್ತಿದ್ದಾಳಂತೆ”, ವೆಂಕಟ್ ಕೊಟ್ಟ ಹಾಲಿನ ಲೋಟ ತೆಗೆದುಕೊಳ್ಳುತ್ತ ಮುಂದುವರಿಸಿ “ಮುಂದಿನ ತಿಂಗಳು ನನಗೆ ಪ್ರಮೋಷನ್ ಬರುವುದಿದೆ, ಈಗ ನಾನು ಕೆಲಸ ಬಿಟ್ಟರೆ ಹೇಗೆ ಎಂದು ಯೋಚಿಸುತ್ತ ನಾನೇ ನಾನೇ ನಿಮಗೆ ಈ ಐಡಿಯಾ ಹೇಳೋಣವೆಂದುಕೊಂಡೆ.”
Read More