ಆಟದ ಸುತ್ತ ಒಂದು ಸುತ್ತು: ಚಂದ್ರಮತಿ ಸೋಂದಾ ಸರಣಿ
ಮಳೆಗಾಲ ಮುಗಿದ ಮೇಲೆ ಊರಿನ ಬೀದಿ ಶಾಲೆಯ ಅಂಗಳ, ದೇವಸ್ಥಾನದ ಮುಂದಿನ ಬಯಲು ಎಲ್ಲವೂ ನಮ್ಮ ಆಟಕ್ಕೆ ಸೂಕ್ತ ಎಂದು ಭಾವಿಸಿ ಆಡುತ್ತಿದ್ದೆವು. ಮುಟ್ಟಾಟ ಅಥವಾ ಹಿಡಿಯೋ ಆಟಕ್ಕೆ ಬಹಳ ಪ್ರಾಧಾನ್ಯವಿತ್ತು. ಅಟ್ಟಿಸಿಕೊಂಡು ಹೋಗಿ ಹಿಡಿಯುವುದು ಒಂಥರಾ ಖುಶಿ ಕೊಡುತ್ತಿತ್ತು. ಇದರ ಇನ್ನೊಂದ ರೂಪವೇ ʻಕೂತು ಹಿಡಿತಿಯೋ ನಿಂತು ಹಿಡಿತಿಯೋʼ ಎನ್ನುವುದು. ಕೇಳಿದಾಗ ನಿಂತು ಎಂದರೆ ನಿಂತಾಗ, ಇಲ್ಲವೆ ಕುಳಿತು ಎಂದರೆ ಕುಳಿತಾಗ ಅವರನ್ನು ಮುಟ್ಟಬೇಕು, ಆಗ ಅವರು ಆಟದಿಂದ ಹೊರಕ್ಕೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ