ನರೇಂದ್ರ ಶಿವನಗೆರೆ ಬರೆದ ಎರಡು ಹೊಸ ಕವಿತೆಗಳು
ಕೌಲಾಲುಂಪುರದ ಈ ಮಳೆಗಾಲದ
ಮಬ್ಬು ಸಂಜೆಯಲ್ಲಿ
ಮನೆಯ ಬಾಲ್ಕನಿಯಲ್ಲಿ ಕುಳಿತು
ಚಳಿಮೋಡಗಳ ಅಲೆದಾಟ ನೋಡುವುದು
ಒಂದು ಮುದ.
ಕೆಂಪು ಪೊಟ್ಟಣದ ಒಳಗುಳಿದ
ಉಪ್ಪು ಸವರಿ ಮೆತ್ತಗೆ ಹುರಿದ
ಮಂಗೋಲಿಯಾದ ಸೂರ್ಯಕಾಂತಿ ಬೀಜಗಳು
ಸಿಪ್ಪೆ ಕಳೆದು ಬಾಯಲ್ಲಿ ಬಿದ್ದಾಗ!…. ನರೇಂದ್ರ ಶಿವನಗೆರೆ ಬರೆದ ಎರಡು ಹೊಸ ಕವಿತೆಗಳು