ಸ್ಯಾನಿಟರಿ ಇಂಜಿನಿಯರ್ಸ್..: ಪೂರ್ಣೇಶ್ ಮತ್ತಾವರ ಪ್ರಬಂಧ
ಹೀಗೆ ನೀರು ಹೊತ್ತುಕೊಂಡು ಹೋದರೂ ಯಾವಾಗಲೂ ಉದ್ದನೆಯ ಸಾಲು, ನೂಕು ನುಗ್ಗಲು! ಸರಿ, ಈ ಎಲ್ಲಾ ಕಿರಿಕಿರಿ, ಪಡಿಪಾಟಲುಗಳನ್ನು ಅನುಭವಿಸುತ್ತಲೇ ಹತ್ತಾರು ನಿಮಿಷ ಕಾದು ಒಳ ಹೋದರೂ, ಹೋದವರು ಬಾಗಿಲು ಹಾಕಿ, ಬಾಗಿಲಿನ ಚಿಲಕ ಸರಿ ಇಲ್ಲವೆಂದು ಬಕೆಟನ್ನೇ ಬಾಗಿಲಿಗೆ ಅಡ್ಡವಾಗಿ ಇಟ್ಟು, ಕುಕ್ಕರುಗಾಲು ಹಾಕಿ ಕೂತು ಒಂದು ಕೈಲಿ ಬಕೆಟ್, ಮತ್ತೊಂದು ಕೈಲಿ ಸಹಿಸಲಾರದ ವಾಸನೆಗೆ ಮೂಗು ಮುಚ್ಚಿ ಶೌಚ ನಡೆಸಬೇಕೆನ್ನುವಷ್ಟರಲ್ಲೇ ದಡಬಡ ಬಾಗಿಲು ಬಡಿತ, ಸ್ವಲ್ಪ ತಡವಾದರೂ ಬಾಗಿಲನ್ನೇ ಮುರಿಯುವ ಬೆದರಿಕೆ, ಇತ್ಯಾದಿ, ಇತ್ಯಾದಿ..
ಪೂರ್ಣೇಶ್ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ