ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು
ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್ ಹೆರಾಲ್ಡ್ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್ ಅವರು ಅನೇಕ ಸಾರಿ ನನ್ನ ಜತೆಗೆ ಹಂಚಿಕೊಂಡರು. ʻನೋಡಿ, ನೀವು ನಿಮ್ಮ ಚಿತ್ರ ಹಾಕಿಕೊಂಡು ಬರೆಯುತ್ತೀರಿ. ನಮಗೆ ಹೀಗೆ ಬರೆಯಲು ನಮ್ಮ ಕಾಲದಲ್ಲಿ ಅವಕಾಶವೇ ಇರಲಿಲ್ಲʼ ಎಂದು ಅವರು ಹೇಳುತ್ತಿದ್ದರು.
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಯವರ ವೃತ್ತಿ ಜೀವನದ ನೆನಪುಗಳ ಕೃತಿ “…ಉಳಿದಾವ ನೆನಪು” ಮೇ ೫ ರಂದು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದ್ದು, ಅದರ ಅಧ್ಯಾಯದ ಒಂದು ಭಾಗ ನಿಮ್ಮ ಓದಿಗೆ