Advertisement

Tag: ಕೆಂಡಸಂಪಿಗೆ

ಸೌದಿ ಡೇಟ್ಸ್ – 2: ದರ್ಶನ್‌ ಜಯಣ್ಣ ಸರಣಿ

ಸೌದಿ ಆಧುನಿಕತೆಯನ್ನ ಎಲ್ಲರಂತೆ ಅಪ್ಪಿಕೊಂಡರೂ ಅದನ್ನ ಒಪ್ಪಿಕೊಂಡಿರಲಿಲ್ಲ. ಸಂಪ್ರದಾಯ ಮತ್ತು ಆಧುನಿಕತೆ, ಇಸ್ಲಾಂ ಮತ್ತು ಇತರೆ ಧಾರ್ಮಿಕ ಪದ್ಧತಿಗಳು, ಹಣ ಗಳಿಕೆ ಮತ್ತು ಜಾಗತಿಕ ಪ್ರಭಾವ, ಶಿಕ್ಷಣ ಮತ್ತು ಧರ್ಮ, ಸಂಪನ್ಮೂಲಗಳು ಮತ್ತು ನುರಿತ ಕೆಲಸಗಾರರು, ಕಮಾಂಡ್ ಅಂಡ್ ಕಂಟ್ರೋಲ್ ಇವೇ ಮುಂತಾದ ವಿಷಯಗಳನ್ನ ಎರಡು ದೋಣಿಯ ಪಯಣ ಅಂತಲೇ ಬಹುಶ ಭಾವಿಸಿತ್ತು ಅನ್ನಿಸುತ್ತದೆ. ಇತರೇ ಅರಬ್ ರಾಷ್ಟ್ರಗಳು ಇಲ್ಲಿಗೆ ಬಂದು ನೆಲಸಿ ನೌಕರಿ ಮಾಡುವವರನ್ನು ಮುಕ್ತವಾಗಿ ನಮ್ಮ ದೇಶವನ್ನ ಕಟ್ಟಿದವರಲ್ಲಿ ಇವರ ಪಾಲೂ ಹೆಚ್ಚಿದೆ ಎಂದು ಹೇಳಿದರೆ ಸೌದಿ ಅಂತಾ ಯಾವ ಹೇಳಿಕೆಯನ್ನೂ ಕೊಡುವುದಿಲ್ಲ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

Read More

ಬನ್ನಿ ನಾವೆಲ್ಲರೂ ಕಾಣೆಯಾಗೋಣ…: ಕನ್ನಡಕ್ಕೆ ಬಂದ ಮೇರಿ ಆಲಿವರ್‌ ಕವಿತೆಗಳು

“ನನ್ನ ಚಿತ್ತವನ್ನ ಅನಂತದ ಮೇಲೆ ಇರಿಸಲಿಲ್ಲವೆಂದಾದರೆ ಏನೋ ಸರಿ ಇಲ್ಲ ಅಂತ ಅನ್ನಿಸುವುದು. ಲೋಕದಲ್ಲಿ ನಾನೊಂದು ಪುಟಾಣಿ ಮೊಳೆಯಾಗಬೇಕು, ಪುಟ್ಟದಾದರೂ ಉಪಯೋಗಕ್ಕೆ ಬರುವಂಥದ್ದು. ಎಂದೆಂದಿಗೂ ಈ ತೊರೆಯಲ್ಲಿಯೇ ಇದ್ದು ಬಿಡಬೇಕೆನಿಸುತ್ತದೆ. ಗಾಳಿಮಡಿಲ ಹೂ, ಮುಳ್ಳು ಕಂಟಿಯ ಹೂ, ಬೇಲಿ ಹೂಗಳನ್ನ ತುಂಬು ಗೌರವದಿಂದ ಕಾಣಬೇಕೆನಿಸಿದೆ.”
ಅಮೆರಿಕದ ಕವಯತ್ರಿ ಮೇರಿ ಆಲಿವರ್‌ ಅವರ ಕೆಲವು ಕವಿತೆಗಳನ್ನು ಚೈತ್ರಾ ಶಿವಯೋಗಿಮಠ ಕನ್ನಡಕ್ಕೆ ತಂದಿದ್ದು “ಆಕಾಶ ನದಿ ಬಯಲು” ಶೀರ್ಷಿಕೆಯಡಿಯಲ್ಲಿ ಸಂಗ್ರಹ ಪ್ರಕಟವಾಗಿದೆ. ಈ ಕೃತಿಯ ಒಂದಷ್ಟು ಕವಿತೆಗಳು ಹಾಗೂ ಮೇರಿ ಆಲಿವರ್‌ ಪರಿಚಯಾತ್ಮಕ ಪುಟಗಳು ನಿಮ್ಮ ಓದಿಗೆ

Read More

ತಂದೆಯವರೊಂದಿಗಿನ, ಮಗನ ನೆನಪುಗಳು: ಪಾಲಾಕ್ಷಪ್ಪ ಎಸ್.ಎನ್. ಬರಹ

ಕುವೆಂಪುರವರನ್ನು ನೋಡಲು ಬರುವವರ ಬಗ್ಗೆ, ಸಂದರ್ಶನಗಳಿಂದ ವಿಶ್ರಾಂತಿಗೆ ಆಗುತ್ತಿದ್ದ ತೊಂದರೆ ಬಗ್ಗೆ, ಆಚರಿಸಿಕೊಳ್ಳದ ಹುಟ್ಟು ಹಬ್ಬದ ಬಗ್ಗೆ, ಅಣ್ಣನನ್ನು ಪ್ರೀತಿಸುವ ಜನರ ಬಗ್ಗೆ, ಸಾಹಿತ್ಯವಲಯದ ಪಿತೂರಿ, ಶೀತಲ ಸಮರದ ಬಗ್ಗೆ, ಎದುರಿಸಿದ ವಿರೋಧಗಳ ಬಗ್ಗೆ, ತಮ್ಮ ಹುದ್ದೆಯ ನಿರ್ವಹಣೆ ಸಂದರ್ಭದ ಕೆಲ ಘಟನೆಗಳ ಬಗ್ಗೆ, ಬಸವೇಶ್ವರ, ವಿವೇಕಾನಂದರ ಬಗೆಗಿನ ಅಭಿಪ್ರಾಯ, ಅಡ್ಡಪಲ್ಲಕ್ಕಿ, ಪಾದಪೂಜೆಗಳ ಬಗೆಗಿನ ತಿರಸ್ಕಾರ, ‘ಮಂತ್ರ ಮಾಂಗಲ್ಯ’ ಸರಳ ವಿವಾಹದ ಬಗ್ಗೆ, ಮಕ್ಕಳ ಮದುವೆಯನ್ನು ಸರಳವಾಗಿ ನೆರವೇರಿಸಿದ ಬಗ್ಗೆ ಒಂದಿಷ್ಟು ವಿವರಗಳು ಈ ಕೃತಿಯಲ್ಲಿವೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರೆದ “ಅಣ್ಣನ ನೆನಪು” ಕೃತಿಯ ಕುರಿತು ಪಾಲಾಕ್ಷಪ್ಪ ಎಸ್.ಎನ್. ಬರಹ ನಿಮ್ಮ ಓದಿಗೆ

Read More

ಮಹಾಮಾತೆ ನನ್ನತ್ತೆ: ಸುಮಾ ಸತೀಶ್ ಸರಣಿ

ಅವರ ಜೀವನ ಪ್ರೀತಿ ಬಲು ಹಿತವಾಗಿತ್ತು.‌ ಮನೆತುಂಬ ಮಕ್ಕಳಿದ್ದಾಗ ತರಾವರಿ ಅಡುಗೆ ಮಾಡುತ್ತಿದ್ದರು.‌ ಕೊನೆಗೆ ತಾವಿಬ್ಬರೇ ಇರುವಾಗಲೂ ಯಾವೊಂದು ತಿಂಡಿಯನ್ನೂ ಬಿಡದೆ ಮಾಡುತ್ತಿದ್ದರು. ಇಡ್ಲಿ, ದೋಸೆ, ಕಡುಬು, ಒಬ್ಬಟ್ಟು ಊಹೂ ಯಾವುದೂ ಬಿಡುತ್ತಿರಲಿಲ್ಲ. ಸೋಮಾರಿತನ ಇವರನ್ನು ಕದ್ದು ನೋಡಲೂ ಹೆದರಿ ಓಡುತ್ತಿತ್ತು. ಕೊನೆಗೆ ಮಾಮ ಹೋದ ಮೇಲೆ ಸುಮಾರು ವರ್ಷಗಳು ಒಬ್ಬರೇ ಇದ್ದಾಗಲೂ ಅದೇ ಆಹಾರ ಪದ್ಧತಿಯಿತ್ತು. ತಾವೊಬ್ಬರೇ ತಿನ್ನದೆ ಅಕ್ಕಪಕ್ಕದವರಿಗೆ, ಹತ್ತಿರದ ಬಡಮಕ್ಕಳಿಗೆ, ಕೂಲಿ ಕೆಲಸದವರಿಗೆ‌ ಕೊಟ್ಟು ತಿನ್ನುತ್ತಿದ್ದರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ

Read More

ಹುಬ್ಬಳ್ಳಿಗರ ಇಂಗ್ಲೀಷ್ ವ್ಯಾಮೋಹ: ರೂಪಾ ಜೋಶಿ ಬರೆದ ಲಲಿತ ಪ್ರಬಂಧ

ಇಲ್ಲಿಯ ಭಾಷೆಯಲ್ಲಿ ಎಲ್ಲರಿಗೂ “ರೀ”…. ಎಂಬ ಅಕ್ಷರ ಹಚ್ಚಿಯೇ ಮಾತಾಡುವ ರೂಢಿಯಿದೆ. ಅಪ್ಪಾರು, ಅವ್ವಾರು, ಅಕ್ಕಾರು, ಮಾಮಾರು, ಅಣ್ಣಾರು, ಅಜ್ಜಾರು ಹೀಗೇ. ಎಲ್ಲರನ್ನೂ ಬಹುವಚನದಲ್ಲೇ ಹೆಸರಿಸುವ ಈ ಪದ್ಧತಿ ನಿಜಕ್ಕೂ ಒಳ್ಳೆಯದೇ. ಅದೇ ಕಾರಣಕ್ಕೆ ಆಂಗ್ಲ ಪದ ಬಳಕೆ ಮಾಡಿದಾಗಲೂ ಅವರು ಅದಕ್ಕೆ ಕನ್ನಡದ ‘ರೀ’ ಮತ್ತೂ ‘ರು’ ಪದ ಹಚ್ಚಿ, ” ಮೇಡಮ್ರಿ, ಸರ್ರೀ, ಮಮ್ಮೀರೀ…. ಡ್ಯಾಡಿರೀ, ಅಜ್ಜಾರ್ರೀ, ಅಂಕಲ್ರೀ ಅಂತ ರೂಪಾಂತರಿಸಿ, ಅದು ನಮ್ಮ ಕನ್ನಡದ್ದೇ ಅನ್ನುವಷ್ಟು ಸಲೀಸಾಗಿ ಬಳಸುವುದನ್ನು ನೋಡಿ, ನನಗೆ ಮೊದ ಮೊದಲು ತುಂಬಾ ವಿಸ್ಮಯವೆನ್ನಿಸುತ್ತಿತ್ತು.
ರೂಪಾ ರವೀಂದ್ರ ಜೋಷಿ ಬರೆದ ಪ್ರಬಂಧ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ