ದೀಪಾವಳಿ, ವಿಭಿನ್ನತೆ, ಏಕತೆ: ವಿನತೆ ಶರ್ಮ ಅಂಕಣ
“ಭಾರತೀಯರೆಲ್ಲರೂ ದೀಪಾವಳಿಯಲ್ಲಿ ಅದ್ದಿ ಮುಳುಗಿಕೊಂಡು ಇರುವಾಗಲೇ, ವಾರಾಂತ್ಯದ ಹಬ್ಬದ ಆಚರಣೆಗಳು ಇನ್ನೂ ಗಮ್ಮತ್ತಿನಿಂದ ನಡೆಯುತ್ತಿರುವಾಗಲೇ ಅತ್ತ ಕಡೆ ಯಾವುದೇ ಸದ್ದಿಲ್ಲದೇ ಗುಮ್ಮನಂತೆ ಕ್ರಿಸ್ಮಸ್ ಹಬ್ಬ ಅಂಗಳಕ್ಕೆ ಕಾಲಿಡುತ್ತದೆ. ಇದ್ದಕ್ಕಿಂದ್ದಂತೆ, ನೋಡನೋಡುತ್ತಾ ಇಡೀ ನಗರ ಕ್ರಿಸ್ಮಸ್ ಹಬ್ಬಕ್ಕೆ ಸಜ್ಜಾಗಿಬಿಡುತ್ತದೆ.”
ದಟ್ಟ ಕಾಡಿನ ನಡುವೆ ಕುರಿಂಗಲ್ಲು ಹೊಳೆಯಿತು:ಪ್ರಸಾದ್ ಬರೆಯುವ ಮಾಳ ಕಥಾನಕ
”ನಾವು ಮೇಲೆ ಹೋದಂತೆಲ್ಲಾ ಮಗಿಲಿನೆತ್ತರಕ್ಕೆ ತೇಲಿ ಹೋದಂತೆ, ಈವರೆಗೂ ಕಂಡಿರದ ವಿಸ್ಮಯ ಲೋಕವೊಂದನ್ನು ಬೆನ್ನಟ್ಟಿ ಹೋಗುವಂತೆ ಅನ್ನಿಸುತ್ತಿತ್ತು. ಕಾಡಿನ ಎಳೆಬಿಸಿಲು ರಚ್ಚೆ ಹಿಡಿದ ಮಗುವಿನಂತೆ ಮೆತ್ತಗಾಗಿದ್ದರೂ, ಅದರ ಪ್ರಖರತೆಗೆ ಮೈಯೆಲ್ಲಾ ಆಗಲೇ ಬೆವರಾಗಿತ್ತು. ಅಲ್ಲೊಂದು ಮರದ ನೆರಳಿನಲ್ಲಿ ಕೂತು ಸುಸ್ತಿನ ನಿಟ್ಟುಸಿರು ಬಿಟ್ಟು, ಮಗಿಲಿನೆತ್ತರಕ್ಕೆ ನೋಡಿದೆವು.”
ಸಾವೆಂಬ ತಲ್ಲಣ, ಸಾವೆಂಬ ಸಂಭ್ರಮ:ಕೃಷ್ಣ ದೇವಾಂಗಮಠ ಚಿಂತನ
”ಸಾವು, ಮರುಜನ್ಮಗಳ ವಿಷಯ ಸರಿ ಆದರೆ ಈ ಎಲ್ಲವನ್ನೂ ತಿಳಿದುಕೊಳ್ಳಲು ನಾವು ತಹತಹಿಸುವುದು ಯಾತಕ್ಕಾಗಿ? ತಿಳಿದುಕೊಂಡು ಏನು ಮಾಡಬೇಕಿದೆ? ನಾವು ಈ ದಿನ ಸಾಯುತ್ತೇವೆ ಅಂತಲೊ ಇಲ್ಲ ನಾವು ಮತ್ತೆ ಹುಟ್ಟುತ್ತೇವೆ ಅಂತಲೊ ತಿಳಿಯುವುದರಿಂದ ಏನಾಗಬೇಕಾಗಿದೆ? ಕುತೂಹಲ ತಣಿಯುವುದರ ಹೊರತಾಗಿ ಏನು ಸಾಧ್ಯವಿದೆ?”
ಪ್ರೀತಿ, ಮದುವೆ ಮತ್ತು ಜೀನ್ಸ್ ಪ್ಯಾಂಟ್ ಅಕ್ಕನ ಫ್ರೀಡಂ:ಫಾತಿಮಾ ಅಂಕಣ
“ಮದುವೆ ಅಂತೇನಿಲ್ಲ, ಪ್ರೀತಿ ಇರುವಷ್ಟು ದಿನ ಒಟ್ಟಿಗಿರುತ್ತೇವೆ. ಅವನ ಕಣ್ಣಿನಲ್ಲಿ ನನ್ನ ಬಿಂಬ,ನನ್ನ ಕಣ್ಣಿನಲ್ಲಿ ಅವನ ಬಿಂಬ ಮರೆಯಾದ ಕ್ಷಣ ಇಬ್ಬರೂ ಒಬ್ಬರಿಗೊಬ್ಬರ ಬದುಕಿನಿಂದ ಎದ್ದುಹೋಗುತ್ತೇವೆ.” ಅಂದರು. ನನ್ನದು ಮತ್ತೆ ಮೌನ.
ಜಾರಿಗೆ ಮನೆಯ ಮೌನದಲ್ಲಿ ಚಳಿಯಾಯಿತು:ಪ್ರಸಾದ್ ಬರೆಯುವ ಮಾಳ ಕಥಾನಕ
”ಇನ್ನು ಸ್ವಲ್ಪ ದಿನ ಬಿಟ್ಟರೆ ನವಜೋಡಿಗಳಂತೆ ಪ್ರೀತಿಸುತ್ತಿರುವ ಈ ದಂಪತಿಗಳ ನಗು, ಪ್ರೀತಿಯನ್ನು ಈ ಹಳೆ ಮನೆ ಕಳೆದುಕೊಳ್ಳುತ್ತದೆಯಲ್ವಾ? ಅಂತಂದುಕೊಂಡೇ ಮಾಳಿಗೆಯ ಕತ್ತಲಲ್ಲಿ ಕಳೆದು ಹೋದೆ.ಗೋರೆಯವರ ಪುಟ್ಟ ಮೊಮ್ಮಗ ಟಾರ್ಚು ಬೆಳಕಾಯಿಸಿದ.”
ಹೇಗೆಂದು ಹೇಳುವುದು ಹೇಗೆಂದು ಕೇಳುವುದು?:ವಿನತೆ ಶರ್ಮ ಅಂಕಣ
“ನನ್ನ ಆಸ್ಟ್ರೇಲಿಯಾದ ಆರಂಭದ ದಿನಗಳಲ್ಲಿ ಒಬ್ಬ ಹೆಂಗಸಾಗಿ ಮೊದಲ ಬಾರಿಗೆ ‘ಅಯ್ಯೋ, ಅವನು/ಅವರು ಬೇಕಂತಲೇ ಮೈ ತಾಕಿಸಬಹುದು,ಅಶ್ಲೀಲವಾಗಿ ಮಾತನಾಡಬಹುದು’ ಎಂಬ ಆತಂಕವಿಲ್ಲದೆ,ಅನುಮಾನವಿಲ್ಲದೆ ಆರಾಮಾಗಿ ವಲೊಂಗೊಂಗ್ ಬೀದಿಗಳಲ್ಲಿ, ಯೂನಿವರ್ಸಿಟಿಯಲ್ಲಿ ಓಡಾಡುವುದು ನನಗೆ ವಿಪರೀತ ಖುಷಿ ಕೊಟ್ಟಿತ್ತು.”
ಹೂವು ಕೀಳಲು ಹೋದ ಹುಡುಗಿಯ ಕಿತ್ತುಕೊಳ್ಳಲು ಹೋದ ಮುದುಕ
”ಆ ಅಜ್ಜನಲ್ಲಿ ಹೂವಿಗೆ ಬೇಡಿಕೆಯಿಟ್ಟದ್ದು ಶಾಲೆಗೆ ಹೋಗುವ ಪುಟ್ಟಪುಟ್ಟ ಮಕ್ಕಳು.ಆ ಮಕ್ಕಳು ಶಾಲೆಯ ಸಮವಸ್ತ್ರದಲ್ಲಿರುತ್ತಿದ್ದರೇ ಹೊರತೇ, ಯಾವುದೇ ತುಂಡುಡುಗೆಗಳಲ್ಲಿರಲಿಲ್ಲ. ಮತ್ತೆ ಹೇಗೆ ಒಬ್ಬ ಮುದಿ ಮುದುಕನಿಗೆ ತೀರಾ ತನ್ನ ಮೊಮ್ಮಕ್ಕಳಂಥಾ ಮಕ್ಕಳ ಮೇಲೆ ಕಣ್ಣುಬೀಳುತ್ತದೆ?”
ಇಲ್ಲಿನ ಶಿಕ್ಷಣ,ಇಲ್ಲಿನ ಶಿಕ್ಷಕರು ಮತ್ತು ಇಲ್ಲಿನ ಕೌತುಕದ ಮಕ್ಕಳು
ಇಲ್ಲಿನ ಶಿಕ್ಷಣದ ವಿಧಾನವೇ ಪೂರ್ತಿ ಬೇರೆ.ಅನುಭವ ಆಧಾರಿತ ಶಿಕ್ಷಣ. ಮಕ್ಕಳಿಗೆ ಹೇಳಿಕೊಟ್ಟು ಗಿಳಿಪಾಠ ಮಾಡಿಸಿ ಕಲಿಸುವುದಕ್ಕಿಂತ ಅವರೇ ಅನುಭವದ ಮೂಲಕ ಕಲಿಯುವಂತೆ ಪ್ರೇರೇಪಿಸುತ್ತಾರೆ.ಮಕ್ಕಳ ತೀರಾ ಚಿಕ್ಕ ಸಾಧನೆಯನ್ನೂ ದೊಡ್ಡದೆಂಬಂತೆ ಮಾಡಿ ಅವರನ್ನು ಪ್ರೋತ್ಸಾಹಿಸುತ್ತಾರೆ.
ಮಣಿಕಂಠನ ನಂಬಿದ್ದ ಕುಂಬಾರಿಕೆಯ ಫಕೀರಮ್ಮ:ಫಾತಿಮಾ ರಲಿಯಾ ಅಂಕಣ.
”ಮಡಕೆ ಮಾರುತ್ತಾ ಮಾರುತ್ತಾ ಆಕೆ ಬಂದು ಜಗಲಿಯಲ್ಲಿ ಕುಳಿತುಕೊಂಡು ಒಂದಿಷ್ಟು ಊರಿನ ಕಥೆಗಳನ್ನು ಹೇಳುತ್ತಿದ್ದಳು.ಆಕೆ ಮಾತಾಡಲು ಪ್ರಾರಂಭಿಸುತ್ತಿದ್ದರೆ ನಾವೇಕೆ,ದೊಡ್ಡವರೇ ಬಾಯಿ ತೆರೆದುಕೊಂಡು ಕೂತು ಬಿಡುತ್ತಿದ್ದರು.ಆಕೆ ಅಯ್ಯಪ್ಪನ ಪರಮಭಕ್ತೆ.”










