ವೈದೇಹಿ ಬರೆಯುವ ಕಳೆದುಹೋದ ಗಿರಿಬಾಲೆಯ ಚರಿತ್ರೆ – ೨
ಅಂದು ನಾನು ಲೇಖಕಿ `ಗಿರಿಬಾಲೆ’ಯನ್ನು ಕಂಡದ್ದು ಶಾರದೆಯ ನೇರ ಬಹಿರಂಗ ಭಕ್ತೆಯಾಗಿ. ಅಸ್ಖಲಿತ ವಾಗ್ಝರಿಯ, ವಯಸ್ಸಿಗೆ ಮಣಿದು ಮಸುಕಾಗದ ಸುಸ್ಪಷ್ಟ ನೆನಪುಗಳ, ಪುಟಿಪುಟಿವ ಚೇತನವನ್ನು. ಒಂದು ಪ್ರಶ್ನೆ ಹಾಕಿದರೆ ಸಾಕು ಆ ಕಾಲಕ್ಕೆ ಓಡುತ್ತಿದ್ದರು ಅವರು. ಆ ಪ್ರಾಯದಲ್ಲಿಯೇ ನಿಲ್ಲುತ್ತಿದ್ದರು. ಎರಡು ದಶಕಗಳ ಕಾಲ ಕನ್ನಡ ಸಾಹಿತ್ಯಕ್ಕೆ...
ವೈದೇಹಿ ಬರೆದ ಕಳೆದುಹೋದ ಗಿರಿಬಾಲೆಯ ಚರಿತ್ರೆ
ಕನ್ನಡದ ಈ ಗಿರಿಬಾಲೆಯ ಹೆಸರು ಶ್ರೀಮತಿ ಸರಸ್ವತೀಬಾಯಿ ರಾಜವಾಡೆ. ಸ್ರೀವಾದ, ಮಹಿಳಾ ಸಬಲೀಕರಣ ಇತ್ಯಾದಿ ಪದಗಳು ಕನ್ನಡದಲ್ಲಿ ಇನ್ನೂ ಕಣ್ತೆರೆಯದಿದ್ದ ಕಾಲದಲ್ಲಿಯೇ ತನ್ನ ಬರಹಗಳಲ್ಲಿ ಈ ಪದಗಳಿಗೆ ಜೀವಕೊಟ್ಟವರು ಈ ಗಿರಿಬಾಲೆ. ಅಪ್ರತಿಮ ಸುಂದರಿಯಾಗಿದ್ದ ಗಿರಿಬಾಲೆ ತನ್ನ ಕೊನೆಯ ದಿನಗಳನ್ನು ವಿರಾಗಿಣಿಯಂತೆ ಕಳೆದವರು. ಕನ್ನಡದ...
ವೈದೇಹಿ ಕಾಲಂ- ಹಾಯ್ಗುಳಿ ದೈವಕ್ಕೆ ಅಡ್ಡ ಬಿದ್ದೆ
ಹೀಗೆ ದಿನ ಹೋಗುತ್ತಿರಲು ಆ ಬಿಳಿಎಮ್ಮೆ ಗಬ್ಬ ಕಟ್ಟಿತು. ಹಾಯ್ಗುಳಿ ಇದಕ್ಕಾಗಿಯೇ ಕಾಯುತಿತ್ತೋ ಏನೋ. ಸುಮ್ಮನಿರುವ ಗುಣವೇ ಅದರದಲ್ಲವಲ್ಲ. ಎಮ್ಮೆ ಕರು ಹಾಕುವುದನ್ನೇ ಕಾಯುತ್ತ ಇತ್ತು ಬಹುಶಃ. ದಿನ ತುಂಬಿದ ಎಮ್ಮೆ ಕರು ಹಾಕಿತು.
ವೈದೇಹಿ ಕಾಲಂ – ಮೀನಾಕ್ಷಮ್ಮನ ಸಿನೆಮಾ ಕಥೆ
ಮೀನಾಕ್ಷಮ್ಮನಿಗೆ ಕತೆ ಕಾದಂಬರಿ ಮಾತ್ರವಲ್ಲ, ಸಿನೆಮಾವೆಂದರೂ ಪಂಚಪ್ರಾಣವಿತ್ತು. ಹೊಸ ಸಿನೆಮಾ ಬಂತೆಂದರೆ ಹೇಗಾದರೂ ಬಿಡುವು ಮಾಡಿಕೊಂಡು ಸೆಕೆಂಡ್ ಶೋಗೆ ಎದ್ದೇ ಬಿಡುವರು ಅವರು. ನೋಡುವುದೆಂದರೆ ಬರಿದೆ ನೋಡುವುದೆ? ಮರುದಿನ ಹೊಲಿಗೆ ಚಾವಡಿಯಲ್ಲಿ ಅದರ ಕತೆ, ವಿಮರ್ಶೆ ಎಲ್ಲ ಬಂದವರ ಜೊತೆ ಆಗಬೇಕು. ಅದು ಖಂಡಿತವಾಗಿಯೂ ನಡೆದದ್ದೇ ಅಂತ...
ಶಿವನೆಂಬ ಆನೆಮರಿ ಮತ್ತು ಗೀತಾಳೆಂಬ ಜೇನುಕುರುಬರ ತಾಯಿ
ಈ ತುಂಟ ಆನೆ ಮರಿಯೂ ಅಷ್ಟೇ, ಗೀತಾಳನ್ನು ಮರುಗಿಸಲೆಂದೇ ಬೇಕಾದಷ್ಟು ಕೀಟಲೆಗಳನ್ನೂ ಮಾಡುತ್ತದೆ. ತನ್ನ ಸೊಂಡಿಲಿನಿಂದ ಆಕೆಯ ತುರುಬನ್ನು ಎಳೆಯುವುದು, ಇತ್ಯಾದಿ ಮಾಡುತ್ತಾನೆ.
ಶ್ರೀರಾಮ್ ಡೈರಿ-ಗೆಂಟ್ ಕೋಟೆಯಲ್ಲಿ ಕೋಕಾಕೋಲಾ
ಗೆಂಟ್ ಪುಟ್ಟ ನಗರ. ಅಲ್ಲಿ ಸಣ್ಣ ರಸ್ತೆಗಳು. ಪುಟ್ಟ ಕಾರುಗಳು. ನಡೆದಾಡಿಯೇ ಊರು ಸುತ್ತಬಹುದು. ವೆನಿಸ್ಸಿನಂತೆ ಊರಿನ ಮಧ್ಯದಲ್ಲಿ ಒಂದು ನಾಲೆ, ಬೋಟಿನಲ್ಲಿ ಓಡಾಡಲೂಬಹುದು. ಹಳೆಯ ಹೊಸ ಕಟ್ಟಡಗಳು ಜೊತೆಜೊತೆಯಾಗಿ ನಿಂತಿವೆ.
ಶ್ರೀರಾಮ್ ಡೈರಿ – ರಿಸರ್ಚು, ರೀತಿ ರಿವಾಜು, ಮತ್ತು ರೇವಾದ ಜಲಪಾತ
ರಿಸರ್ಚ್ ಪ್ರಾಜೆಕ್ಟುಗಳಿಂದಾಗಿ ಆಗಾಗ ಕೆಲವು ಕುತೂಹಲಕಾರಿ ಜಾಗಗಳಿಗೆ ಹೋಗುವ ಅವಕಾಶ ನನಗೆ ಸಿಗುತ್ತದೆ. ಗ್ರಾಮೀಣ ಪ್ರದೇಶದ ಕುಟುಂಬಗಳು ತಮ್ಮ ಆರ್ಥಿಕ ವ್ಯವಹಾರಗಳನ್ನು ಯಾವ ರೀತಿಯಲ್ಲಿ ಕೈಗೊಳ್ಳುತ್ತಾರೆ, ಯಾವ ರೀತಿಯ ಅವಶ್ಯಕತೆಗಳಿಗಾಗಿ ಯಾವ ಮೂಲದಿಂದ ಹಣ ಮತ್ತು ಸವಲತ್ತುಗಳನ್ನು ಸಂಯೋಜಿಸುತ್ತಾರೆನ್ನುವ ಕುತೂಹಲಕಾರಿ...
ಶ್ರೀರಾಮ್ ಡೈರಿ – ಟಂಕಸಾಲೆಯ ಬಿಂಕ ಬಲ್ಲಿರೇನಯ್ಯಾ…
ಮುಹಮ್ಮದ್ ಬಿನ್ ತುಘಲಕ್ ಚರ್ಮದ ಹಣವನ್ನು ಜಾರಿಮಾಡಿದ್ದನೆಂಬ ಕಥೆಯನ್ನು ನಾನು ಕೇಳಿದ್ದೆ. ಆದರೆ ಆ ಬಗ್ಗೆ ಯಾವುದೂ…
ಶ್ರೀರಾಮ್ ಡೈರಿ – ಬ್ರಸಲ್ಸ್ನಲ್ಲಿ ಭಾರತ!
ಮುಂಜಾನೆ ಎದ್ದು ಯೂನಿವರ್ಸಿಟಿಯ ದಾರಿ ಹುಡುಕಿ ಹೊರಟೆ. ಯೂನಿವರ್ಸಿಟಿಯೆಂದರೆ ಒಂದು ದೊಡ್ಡ ಕ್ಯಾಂಪಸ್ಸಿರಬಹುದು ಎಂದು ಎಣಿಸಿದ್ದ ನನಗೆ…










