ಹಿಂಸೆಯ ಹಲವು ರೂಪಗಳ ಶೋಧ: ‘ಬಹುವಚನ ಭಾರತʼ
“ಸಮಾಜದ ಬಗ್ಗೆ ತೀವ್ರ ಕಾಳಜಿಯುಳ್ಳ ಚಿಂತಕನೊಬ್ಬ ಕನಲಿದಂತೆ ಹಿಂಸೆಯ ಬಗ್ಗೆ ಪದೇಪದೇ ಬರೆಯುವುದೇಕೆಂದರೆ, ಅಂಥ ಕಥನಗಳನ್ನು ಕಿವಿಯಿಂದ ಕಿವಿಗೆ, ಹೃದಯದಿಂದ ಹೃದಯಕ್ಕೆ ದಾಟಿಸುತ್ತ ಅವು ನಮ್ಮ ಸಾಕ್ಷಿಪ್ರಜ್ಞೆಯಿಂದ ಅಳಿಸಿಹೋಗದಂತೆ ಮಾಡುವ ಕಾರಣಕ್ಕಾಗಿ. ಇಷ್ಟು ಗಂಭೀರವಾದ ಸಂಗತಿಗಳನ್ನು ಚರ್ಚಿಸುವಾಗಲೂ ಜಿಆರ್ ಹೈಸ್ಕೂಲು ಫೇಲಾದ ಹುಡುಗನಿಗೂ…”
ಒಂಟಿ ಸೇತುವೆಯ ಒಂಟಿ ಜೀವ ‘ಕೊಂಡಪಲ್ಲಿ ಕೋಟೇಶ್ವರಮ್ಮ’
“ಶಾಲೆಯ ದಿನಗಳಿಂದಲೇ ದೇಶಭಕ್ತಿ ಹಾಡುಗಳು, ತ್ಯಾಗರಾಜರ ಕೀರ್ತನೆಗಳನ್ನು ಆಲಾಪಿಸುತ್ತಿದ್ದವರು ಕೋಟೇಶ್ವರಮ್ಮ. ಸ್ವಾತಂತ್ರ್ಯಾಭಿಲಾಷೆಯಿಂದ ತಾಯಿ ಚರಕದಿಂದ ನೂಲು ತೆಗೆಯುತ್ತಿದ್ದರು. ಸೋದರಮಾವ ರಾಷ್ಟ್ರೀಯ ಚಳವಳಿಯಲ್ಲಿ ಹೋರಾಟಗಾರ. ಊರಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲಿ ಇವರ ಹಾಡು ಇದ್ದೇ ಇರುತ್ತಿತ್ತು. ಉಪಾಧ್ಯಾಯರ ಪ್ರೋತ್ಸಾಹದಿಂದ..”
ಬೇಯುವಿಕೆಯ ರೂಪಕವಾಗಿ ಹೆಲೆನ್, ಮರಿಯಾ ಕಲಸ್ ರನ್ನು ನೋಡುತ್ತ…
“ಪಕ್ಕಾ ಮಾಸ್ ಎಂಟರ್ಟೇನರ್ ನಾಟಕಗಳಲ್ಲಿ ನಟಿಸುತ್ತಿದ್ದವರು ‘ಜನಕಜಾತೆ ಸೀತೆ’ ಎಂಬ ಪ್ರಯೋಗಾತ್ಮಕ ನಾಟಕದಲ್ಲಿ ನಟಿಸುತ್ತಾರೆ ಮತ್ತು ದಾಖಲೆ ಮಾಡುತ್ತಾರೆ. ತಾವೇ ಒಂದು ಹವ್ಯಾಸಿ ರಂಗತಂಡ ಕಟ್ಟಿ ತಮ್ಮ ಕಲೆಕ್ಷನ್ ಡ್ರಾಮಗಳನ್ನ ಬಿಟ್ಟು ಶುದ್ಧ ಪ್ರಯೋಗಗಳಿಗೆ ನಿಲ್ಲುತ್ತಾರೆ. ಮಂಗಳಮುಖಿಯರನ್ನ ಕಲೆಹಾಕಿಕೊಂಡು ನಾಟಕ ಮಾಡಿಸಿ ಹೊಸ ನೋಟಕ್ರಮ ಹುಟ್ಟುಹಾಕುತ್ತಾರೆ. ‘ಖಾನಾವಳಿ ಚೆನ್ನಿ’ಯಲ್ಲಿನ ಹೆಲೆನ್..”
‘ಕಾವ್ಯಾ ಓದಿದ ಹೊತ್ತಿಗೆʼ: ಸುಟ್ಟ ನಂತರ ಅರಳುವುದು…
‘ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕಿ ಟೋನಿ ಮಾರಿಸನ್. ಸಿಂಗಲ್ ಮದರ್ ಆಗಿದ್ದ ಆಕೆ, ‘ತನ್ನ ಜೀವನದಲ್ಲಿ ಇರುವ ಆದ್ಯತೆಯ ವಿಷಯಗಳು ಎರಡೇ. ಮೊದಲನೆಯದು, ಮಕ್ಕಳನ್ನು ಚೆನ್ನಾಗಿ ಬೆಳೆಸುವುದು ಮತ್ತು ಎರಡನೆಯದು ಕಾದಂಬರಿಗಳನ್ನು ಬರೆಯುವುದು’ ಎಂದು ಹೇಳಿಕೊಂಡಿದ್ದರು. ಅಂದರೆ ಬರವಣಿಗೆ ಕುರಿತು ಅವರ ಆಸಕ್ತಿ ಎಷ್ಟು ತೀವ್ರವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ ಅಲ್ಲವೇ. ವರ್ಣಭೇದ ನೀತಿ, ಗುಲಾಮಗಿರಿಯ ವಿರುದ್ಧ ತಮ್ಮ….”
ಹುಡುಕುವ ಭರ, ಕಳೆದುಹೋಗುವ ಭಯ: ಪ್ರಶಾಂತ್ ಬೀಚಿ ಅಂಕಣ
ಯಶಸ್ಸಿನ ಮೆಟ್ಟಿಲು ಏರುತ್ತ ಹೋಗುವುದು ಎಷ್ಟೊಂದು ಸಂತಸದ ವಿಷಯ. ಆದರೆ ಇಷ್ಟೊಂದು ಮೆಟ್ಟಿಲು ಹತ್ತಿ ತಾನು ಒಂಟಿಯಾಗಿ ಬಿಟ್ಟಿರುವೆ ಎಂಬ ವಿಚಾರ ತುತ್ತತುದಿಯ ಮೆಟ್ಟಿಲನ್ನು ತಲುಪಿದ ಮೇಲೆಯೇ ಗೊತ್ತಾಗುವುದು. ಜೀವನದ ಇಂತಹ ಸಂದಿಗ್ಧ ಎಳೆಗಳನ್ನು ಹಿಡಿದು, ನವಿರು ವಿಶ್ಲೇಷಣೆಯ ಜೊತೆಗೆ ಕೆನಡಾದಲ್ಲಿರುವ ಕನ್ನಡದ ಲೇಖಕ ಪ್ರಶಾಂತ್ ಬೀಚಿ ಅವರು ಹದಿನೈದು ದಿನಗಳಿಗೊಮ್ಮೆ ಶನಿವಾರಗಳಂದು…”
ಸಿಂಗರನ ಬಾಲ್ಯಕಾಲದ ಕಥನ: ಸಬ್ಬತ್ನ ಆ ರಾತ್ರಿ ಮತ್ತು ಒಂದು ಘೋರ ಪ್ರಶ್ನೆ!
“ನಾನು ಎರಡು ವಿರೋಧ ಭಾವನೆಗಳ ಮಧ್ಯೆ ಛಿದ್ರವಾಗಿದ್ದೆ. ನನ್ನ ಭಯ ನನ್ನ ಕಣ್ಣುಗಳನ್ನು ಅಲ್ಲಿಂದ ಬೇರೆಡೆಗೆ ತಿರುಗಿಸಲು ಆದೇಶಿಸುತ್ತಿತ್ತು, ಆದರೆ ನನ್ನ ಕುತೂಹಲ ಮತ್ತೊಂದು ಬಾರಿ ನೋಡಲು ಕೋರಿಕೆ ಇಟ್ಟಿತ್ತು. ನನಗೆ ಗೊತ್ತಿತ್ತು ನಾನು ಇಲ್ಲಿ ನೋಡುವ ಪ್ರತಿ ನೋಟಕ್ಕೂ ದುಃಸ್ವಪ್ನಗಳು ಮತ್ತು ಯಾತನೆಯ ಮೂಲಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು. ಆದರೂ ಪ್ರತಿಬಾರಿ ಹೊಸದಾಗಿ ಆ ಜೀವಂತ ಸಮಾಧಿಯನ್ನ ನೋಡಲು ಮುಂದಾಗುತ್ತಿದ್ದೆ.”
ಸ್ಮಿತಾ ಮಾಕಳ್ಳಿ ಅನುವಾದಿಸುತ್ತಿರುವ ಬರಹ
ಎಳೆನಿಂಬೇಕಾಯಿಗೊಂದು ‘ಫಿರೀ’ ಗುಲಾಬಿ ಹೂವು
ಬ್ರಾಹ್ಮಣ ಕೇರಿಯ ಹುಡುಗಿಯರ ಸಂಕಟವು ಕೇವಲ ಮಾರುಕಟ್ಟೆಯಲ್ಲಿ ಗುಲಾಬಿ ಹೂವು ನೋಡುವುದರಲ್ಲೇ ಕಳೆದುಹೋಗುತ್ತಿತ್ತು. ಮನೆಯಲ್ಲಿ ಕಿರಿಯಳಾದ ನನಗೆ ಮೊಸರಿನ ಸರ್ಕಲ್ಲನ್ನು ಹಾದು ಜಮಾಲನ ಅಂಗಡಿಗೆ ಪ್ರತಿ ಶುಕ್ರವಾರ ಹೋಗಿ ಹೂವು ತರುವ ಜವಾಬ್ದಾರಿ ಹೆಗಲೇರಿತ್ತು. ಅದೊಂದು ಪುಟ್ಟ ವೃತ್ತಕ್ಕೆ ಮೊಸರಿನ ಸರ್ಕಲ್ ಎಂಬ ಹೆಸರು ಬರಲು ಕಾರಣ ಸುತ್ತಲ ಹತ್ತಾರು ಹಳ್ಳಿಗಳಿಂದ ಬಂದು ವೃತ್ತಾಕಾರವಾಗಿ ಕೂರುತ್ತಿದ್ದ ಗೌಳಿಗರು. ಹಳ್ಳಿಗಳಿಂದ ಬರುತ್ತಿದ್ದ ತಾಜಾ ಹಾಲು ಮೊಸರು …”
ಮರೆಯಾದ ಮಹಾಶಹರದ ಶೋಕಗೀತೆ
“ಶಹರದ ದಾರಿಗಳಲ್ಲಿ ಓಡಾಡುತ್ತ ಓರ್ಹಾನ್ ಇಸ್ತಾನ್ಬುಲ್ ಶಹರವನ್ನು ಓದುವ ಮತ್ತು ಅದರ ಕುರಿತು ಬರೆಯುವುದನ್ನು, ಅದರ ಕುರಿತು ಬರೆಯಲಾಗಿರುವ ಲೇಖನಗಳು ಮತ್ತು ಅದರ ಚಿತ್ರಗಳ ಮುಖೇನವೇ ಕಲಿತುಕೊಳ್ಳುತ್ತಾರೆ. ಇಸ್ತಾನ್ಬುಲ್ ಶಹರದ ಹಳೆಯ ಫೋಟೋಗಳು ಯುರೋಪಿನ ಮತ್ತು ಟರ್ಕಿಯ ಕಲಾವಿದರುಗಳು ಪ್ರಸ್ತುತಪಡಿಸಿರುವ ಶಹರದ ಸಂಸ್ಕೃತಿ, ಜೀವನಶೈಲಿ, ಇತಿಹಾಸ, ಕಲೆಗಳ ಕುರಿತಾದ ಟಿಪ್ಪಣಿಗಳನ್ನು ಒದಗಿಸುತ್ತವೆ. ಈ ಕೃತಿಯನ್ನು ಓದುತ್ತ ಹೋದ ಹಾಗೆ…”
ರಾಜಕಾರಣದ ನಾಟಕದಲ್ಲಿ ಸಾರ್ವಕಾಲಿಕ ಹಸಿತನ ಕಾಣದಿದ್ದರೆ…
“ಕೆವೈಎನ್ ಸರ್ ಅವರ ವಿಚಾರ ಲಹರಿ ಮೊದಲೇ ಚೂರುಪಾರು ನನಗೆ ತಿಳಿದಿತ್ತಾದ್ದರಿಂದ ಅದು ಹೇಗೆ ದೃಶ್ಯಗಳಾಗಿ ವಿಂಗಡಿಸಿಕೊಂಡಿದೆ ಎಂದು ಟ್ರೇಸ್ ಮಾಡುತ್ತಾ ಹೋದೆ. ಸಹಜವಾಗಿ ನಾಟಕದಲ್ಲಿ ಕೆವೈಎನ್ ಸರ್ ಅವರ ರಾಜಕೀಯ ಚಿಂತನೆಯ ಧಾಟಿ ಇದೆ. ರಾಜಕಾರಣದ ಒಳ ‘ಸುಳಿ’ಗಳು ಆಗಾಗ ಮಾತ್ರ ‘ಸುಳಿ’ಯುತ್ತವೆ ಎನ್ನುವುದು…”









