Advertisement

ಅಂಕಣ

ನೀಲಿ ಕಡಲು, ಬೆಳ್ಳಿ ಚುಕ್ಕಿ ಮತ್ತು ಸಿಡ್ನಿ ಹಾಯಿದೋಣಿ ಸ್ಪರ್ಧೆ: ವಿನತೆ ಶರ್ಮಾ ಅಂಕಣ

ನೀಲಿ ಕಡಲು, ಬೆಳ್ಳಿ ಚುಕ್ಕಿ ಮತ್ತು ಸಿಡ್ನಿ ಹಾಯಿದೋಣಿ ಸ್ಪರ್ಧೆ: ವಿನತೆ ಶರ್ಮಾ ಅಂಕಣ

“ಬೇರೆಲ್ಲಾ ಪಂದ್ಯಗಳಂತೆ ಈ ಸ್ಪರ್ಧೆಯ ಕುರಿತಾಗಿ ಅನೇಕ ರೋಚಕ ಕಥೆಗಳೂ, ಸಾವುನೋವುಗಳೂ, ಸಾಧನೆಗಳೂ ಅಡಗಿವೆ. ೧೯೯೮ರ ಪಂದ್ಯದ ಸಮಯದಲ್ಲಿ ಸಂಭವಿಸಿದ ಅಸಾಧಾರಣ ತೀವ್ರ ಗಾಳಿಯಿಂದಾಗಿ ಐದು ದೋಣಿಗಳು ಮುಳುಗಿ, ಆರು ಜನ ಸತ್ತರಂತೆ. ಈ ದುರಂತದ ಕಾರಣದಿಂದ ಸ್ಪರ್ಧೆಯ ನಿಯಮಾವಳಿಗಳನ್ನ ಮತ್ತಷ್ಟು ಕಠಿಣಗೊಳಿಸಿದರಂತೆ. ಈ ವಿಷಯವನ್ನು ನನ್ನ ಗೆಳತಿಯ ಗಂಡ…”

read more
ಇದು ಪ್ರಕೃತಿ ಕಲಿಸುವ ಪಾಠವ?: ರೂಪಶ್ರೀ ಕಲ್ಲಿಗನೂರ್ ಅಂಕಣ

ಇದು ಪ್ರಕೃತಿ ಕಲಿಸುವ ಪಾಠವ?: ರೂಪಶ್ರೀ ಕಲ್ಲಿಗನೂರ್ ಅಂಕಣ

“ವಾರದ ಹಿಂದಿನವರೆಗೆ ಜಗತ್ತು ಅಭಿವೃದ್ಧಿಯ ಹೆಸರಲ್ಲಿ ಹೇಗೆಲ್ಲ ನಾಟ್ಯವಾಡುತ್ತಿತ್ತು? ಬದುಕಿನ ಬಗ್ಗೆ, ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರೀತಿ, ಕಾಳಜಿ ಇರುವ, ಮಹತ್ವ ಗೊತ್ತಿರುವವರ ಕಣ್ಣಲ್ಲಿ, ಅಭಿವೃದ್ಧಿ ಅನ್ನುವುದು ಹಗ್ಗ ಬಿಚ್ಚಿದ ಹುಚ್ಚು ಕುದುರೆಯ ಓಡಾಡುತ್ತ, ನಿಸರ್ಗವನ್ನು ಹಾಳುಮಾಡುತ್ತಿರುವಂತೆ ಕಂಡಿದ್ದಿರಬೇಕು. ಅದರ ಓಟಕ್ಕೊಂದು ಲಂಗು ಲಗಾಮು ಹಾಕಲು ಸಾಧ್ಯವೇ ಇಲ್ಲ ಅನ್ನುವಷ್ಟು ಅದು ವೇಗ ಪಡೆದುಕೊಂಡಿತ್ತು..”

read more
ಈ ಭಾವಕ್ಕೆ ಏನೆಂದು ಹೆಸರಿಡಲಿ….: ಆಶಾ ಜಗದೀಶ್ ಅಂಕಣ

ಈ ಭಾವಕ್ಕೆ ಏನೆಂದು ಹೆಸರಿಡಲಿ….: ಆಶಾ ಜಗದೀಶ್ ಅಂಕಣ

“ರಶೀದ್ ಪುರೋಳನ್ನು ಹೊತ್ತೊಯ್ದು ಮದುವೆಯಾಗಿರುತ್ತಾನೆ ನಿಜ. ಆದರೆ ಅವಳನ್ನು ನಿಜಕ್ಕೂ ಪ್ರೀತಿಸಿರುತ್ತಾನೆ. ಅವಳೂ ಸಹ ಮೊದಮೊದಲಿಗೆ ಇದ್ದ ಬೇಸರವನ್ನು ಅವನ ಒಳ್ಳೆಯ ನಡತೆಯಿಂದಾಗಿ ಮರೆತು ಅವನಲ್ಲಿ ಒಬ್ಬ ಒಳ್ಳೆಯ ಗಂಡನನ್ನು ಕಂಡುಕೊಂಡಿರುತ್ತಾಳೆ. ಪುರೋಳ ಅಣ್ಣ ಒಮ್ಮೆ ರಶೀದನ ಹೊಲಕ್ಕೆ ದ್ವೇಷದಿಂದ ಬೆಂಕಿ ಹಾಕಿದಾಗ ರಶೀದನ ಸಂಬಂಧಿಗಳು ಅವನ ಮೇಲೆ ಕಂಪ್ಲೇಂಟ್ ಮಾಡಲು ಹೇಳುತ್ತಾರೆ.”

read more
ಕೊರೋನಾ ಎಂಬ ಸಾವಿನ ರೂಪಕ: ಲಕ್ಷ್ಮಣ ವಿ.ಎ. ಅಂಕಣ

ಕೊರೋನಾ ಎಂಬ ಸಾವಿನ ರೂಪಕ: ಲಕ್ಷ್ಮಣ ವಿ.ಎ. ಅಂಕಣ

“ನ್ಯಾಷನಲ್ ಜಿಯೋಗ್ರಾಫಿಕ್ ಚ್ಯಾನೆಲ್ ನಲ್ಲಿ ಆಫ್ರಿಕಾದ ಮಸಾಯ್ ಮಾರಾ ಕಾಡಿನಲ್ಲಿ ಹಸಿದ ಹುಲಿಗಳು ಬೇಟೆಯಾಡುವುದನ್ನು ನೀವು ನೋಡಿರಬಹುದು. ಹುಲಿ ತನ್ನ ಬೇಟೆಯನ್ನು ಬಲು ಜಾಣ್ಮೆಯಿಂದ ಅಷ್ಟೇ ಎಚ್ಚರಿಕೆಯಿಂದ ಗುಂಪಿನಲ್ಲಿರುವ ಅತಿ ದುರ್ಬಲವಾದ ಪ್ರಾಣಿಯನ್ನೇ ಆಯ್ದುಕೊಂಡಿರುತ್ತದೆ. ಕಾರಣವಿಷ್ಟೇ ಹುಲಿಗೆ ಸುಲಭವಾಗಿ ಯಾವುದೇ ಪ್ರತಿರೋಧವಿಲ್ಲದೆ ತನ್ನ ಆಹಾರ ಸಂಪಾದಿಸಬೇಕೆನ್ನುವ ಇರಾದೆಯಷ್ಟೇ..”

read more
ನಮ್ಮೂರಿನ ಹಿಂದೂ ಮುಸ್ಲಿಂ ಕದನದ ಕತೆ: ಶ್ರೀಹರ್ಷ ಸಾಲಿಮಠ ಅಂಕಣ

ನಮ್ಮೂರಿನ ಹಿಂದೂ ಮುಸ್ಲಿಂ ಕದನದ ಕತೆ: ಶ್ರೀಹರ್ಷ ಸಾಲಿಮಠ ಅಂಕಣ

“ಈ ಎಲ್ಲಾ ಸಮಯದಲ್ಲೂ ನನಗೆ ಎದುರಿನ ಮನೆಯವರು ಕಾಣಲಿಲ್ಲ. ಈ ಸಮಯದಲ್ಲಿ ಕರ್ಫ್ಯೂ ವಿಧಿಸಿದ್ದರು. ಗಲಾಟೆ ಅದೆಷ್ಟು ಭಯಾನಕವಾಗಿತ್ತೆಂದರೆ ಬಿಬಿಸಿ ನ್ಯೂಸ್ ನಲ್ಲೂ ದಾವಣಗೆರೆಯ ಹೆಸರು ಬಂದಿತ್ತು. ಪೋಲೀಸರು “ಕಂಡಲ್ಲಿ ಗುಂಡು” ಅಂತ ರಸ್ತೆಯಲ್ಲಿ ಕೂಗುತ್ತಾ ತಿರುಗಾಡುತ್ತಿದ್ದರು. ನಾಯಿಗಳು ಪೋಲೀಸರ ಹಿಂದೆ ಬಿದ್ದು ಬೊಗಳುತ್ತಿದ್ದವು. ಅವರು ನಾಯಿಗಳನ್ನು “ಹಚಾ.. ಹಚಾ…” ಅಂತ ಓಡಿಸುತ್ತಿದ್ದುದು ಕೇಳಿಬರುತ್ತಿತ್ತು..”

read more
ಬೆಟ್ಟದಾ ಮೇಲೊಂದು ಮನೆಯ ಮಾಡಿ…: ವಿನತೆ ಶರ್ಮಾ ಅಂಕಣ

ಬೆಟ್ಟದಾ ಮೇಲೊಂದು ಮನೆಯ ಮಾಡಿ…: ವಿನತೆ ಶರ್ಮಾ ಅಂಕಣ

“ದಿನಗಳಿಕೆ ಆದಾಯವನ್ನೇ ನೆಚ್ಚಿಕೊಂಡವರಿಗೆ ಇದೆಷ್ಟು ಆತಂಕ ಹುಟ್ಟಿಡುವ ಪರಿಸ್ಥಿತಿ! ಈಗಂತೂ ಆಸ್ಟ್ರೇಲಿಯಾ ದೇಶ ಪೂರ್ತಿ ಹೆಚ್ಚಿನ ಉದ್ಯೋಗ ಸ್ಥಳಗಳಲ್ಲಿ ಚಾಲನೆಯಲ್ಲಿರುವುದು ಅರೆಕಾಲಿಕ ಮತ್ತು ತಾತ್ಕಾಲಿಕ ಕಾಂಟ್ರಾಕ್ಟ್ ಮಾದರಿ. ಅಂದರೆ ವಾರಕ್ಕಿಷ್ಟು ಗಂಟೆಗಳ ಕಾಲ ಕೆಲಸ- ಪ್ರತಿ ಕೆಲ ತಿಂಗಳ ಮಟ್ಟಿಗೆ ಮಾತ್ರ ಅನ್ನೋ ತರಹದ ಕಾಂಟ್ರಾಕ್ಟ್. ಅವರಿಗೆ ರಜೆ, ಬೋನಸ್, ಸಂಸ್ಥೆ ಕೊಡಬೇಕಾದ ಪೆನ್ಷನ್ ಸವಲತ್ತು ಇರಬಹುದು..”

read more
ಲೋಕದ ಕಣ್ಣಿಗೆ ಇವಳಿನ್ನೂ ರಾಧೆಯೇ… : ಆಶಾ ಜಗದೀಶ್ ಅಂಕಣ

ಲೋಕದ ಕಣ್ಣಿಗೆ ಇವಳಿನ್ನೂ ರಾಧೆಯೇ… : ಆಶಾ ಜಗದೀಶ್ ಅಂಕಣ

“ಅವಳಾದರೂ ಯಾಕೆ ಅಷ್ಟೊಂದು ಪ್ರೀತಿಸಬೇಕಿತ್ತು… ಅದೂ ತನ್ನನ್ನೇ ಕಳೆದುಕೊಳ್ಳುವಷ್ಟು, ಮರಳಿ ಪಡೆಯಲಾರದಷ್ಟು, ಅಳಿದು ಉಳಿಯುವಷ್ಟು, ಅಳಿಯದೆ ಇರಲಾರದಷ್ಟು… ಸ್ವಾರ್ಥವನ್ನು ತುಂಬಿಕೊಂಡು ಪ್ರೇಮದ ಲೇಪ ಹಚ್ಚಿ ಜಗತ್ತನ್ನು ಮೋಡಿಗೊಳಿಸಲು ಹೊರಡುವ ಮಹತ್ವಾಕಾಂಕ್ಷಿ ಸಮರ ಸಿಂಹರ ನಡುವೆ ಒಂದೇ ಒಂದು ಕೆಂಪು ಗುಲಾಬಿಯ ಸಸಿಯನ್ನು ಆ ಕಪ್ಪು ನೆಲದ ಮೇಲೆ ನೆಟ್ಟು ಹಿಂತಿರುಗುವ ಒಂದೇ ಒಂದು ಚಿಕ್ಕಾಸೆ ಹೊತ್ತು ನಡೆದವಳ ಹೆಜ್ಜೆ ಗುರುತುಗಳು…”

read more
ಈತನ್ ಎಮ್ಮೊಂದಿಗನುಮ್ ಎಮ್ಮ ನಂಟನುಮ್ ಅಕ್ಕುಮ್: ಆರ್. ದಿಲೀಪ್ ಕುಮಾರ್ ಅಂಕಣ

ಈತನ್ ಎಮ್ಮೊಂದಿಗನುಮ್ ಎಮ್ಮ ನಂಟನುಮ್ ಅಕ್ಕುಮ್: ಆರ್. ದಿಲೀಪ್ ಕುಮಾರ್ ಅಂಕಣ

“ಯಾವುದೇ ಭಾವದ ತೀವ್ರತೆ ಅತಿಯಾದಾಗ ಕ್ರಿಯಾತ್ಮಕವಾಗಿ ಯಶಸ್ವಿಯಾಗದೆ ಹೋದಾಗ ಅದು ಶೋಕವನ್ನು ಹೊದೆಯಲು ಮುಂದಾಗುತ್ತದೆ. ಅವನಲ್ಲಿನ ಶೋಕ ಇವನಲ್ಲಿನ ಶೃಂಗಾರಕ್ಕೆ ಪುಷ್ಟಿಕೊಡುತ್ತಿದೆ. ವಿಪ್ರಲಂಭವನ್ನು ವರ್ಣಿಸುತ್ತಲೇ ಕವಿಯು ಹೊಸದಾದ ಮತ್ತೊಂದು ಭಾವವನ್ನು ಕೊನೆಯ ಭಾಗದ ಪದ್ಯದಲ್ಲಿ ತಂದುಬಿಡುತ್ತಾನೆ. ಅದು ಉತ್ಕಟವಾದ ಶೋಕವಾಗುತ್ತದೆ….”

read more
ಇಸ್ಪೀಟಾಟ್ಟ ಮತ್ತು ಕ್ರಿಕೆಟ್ಟಾಟ ಎಂಬ ಆಧ್ಯಾತ್ಮ: ಲಕ್ಷ್ಮಣ ವಿ.ಎ. ಅಂಕಣ

ಇಸ್ಪೀಟಾಟ್ಟ ಮತ್ತು ಕ್ರಿಕೆಟ್ಟಾಟ ಎಂಬ ಆಧ್ಯಾತ್ಮ: ಲಕ್ಷ್ಮಣ ವಿ.ಎ. ಅಂಕಣ

“ಮಳೆ ಬೀಳದ ಊರಿನಲ್ಲಿ ಕೂಲಿ ನಾಲಿ ಕೆಲಸ ಸಿಗುವುದೂ ಅಷ್ಟರಲ್ಲೇ ಇತ್ತು, ಅಥವ ಇದೊಂದು ನೆಪವೇನೋ.. ಈ ಇಸ್ಪೀಟೆಲೆಗಳನ್ನು ನೀಟಾಗಿ ಯಾರಿಗೂ ಕಾಣದಂತೆ ಅಷ್ಟೇ ಕಲಾತ್ಮಕವಾಗಿ ಮಡಚಿ ಹಿಡಿಯುವುದು, ಮತ್ತೆ ಜೋಕರುಗಳು ಬಂದಾಗ ಒಳಗೊಳಗೇ ಖುಷಿಪಡುವುದು, ತಮಗೆ ಬೇಕಾದ ನಂಬರು ಸಿಗದಿದ್ದಾಗ ಆಕ್ರೋಶಗೊಂಡು ಪಟ್ ಅಂತ ಇಸ್ಪೀಟಿನೆಲೆ ನೆಲಕೆ ಬಡಿಯುವುದು…”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ