ಸಾಫ್ಟವೇರ್ ಪ್ರಪಂಚದಲ್ಲೊಂದು ಕಮ್ಯೂನಿಸ್ಟ್ ಕ್ರಾಂತಿ: ಮಧುಸೂದನ್ ಅಂಕಣ
“ನಿಮಗೆ ಗೊತ್ತೇ, ಇವತ್ತಿನ ಇಡೀ “ಕ್ಲೌಡ್”, ಲಿನಕ್ಸ್ ಮೇಲೆ ಕೂತಿದೆ. ಹಾಗೆ ನೋಡಿದರೆ ಜಗತ್ತಿನ ಮುಕ್ಕಾಲು ಭಾಗ ಸಾಫ್ಟವೇರ್ ಲಿನಕ್ಸ್ ಮೇಲೆ ಓಡುತ್ತಿದೆ. ಅದೆಲ್ಲ ಬಿಡಿ, ನಮ್ಮ ನಿಮ್ಮ ಕೈಯಲ್ಲಿರುವ ಮಾಣಿಕ್ಯ, ಜಗತ್ತನ್ನು ಚದುರಂಗದಂತೆ ಆಡಿಸುತ್ತಿರುವ ಆಂಡ್ರಾಯ್ಡ್ ಫೋನ್, ಲಿನಕ್ಸ್ ನ ರೂಪಾಂತರ. ಅಂದರೆ ಲಿನಕ್ಸ್ ಎಂಬ ಉಚಿತ ಮನೆಗೆ ಗೂಗಲ್ ಇನ್ನೊಂದಷ್ಟು…..”
ಮೊಬೈಲ್ ಸ್ಕೂಟರ್ ನ ‘ವಿಶೇಷ’ ಕತೆಗಳು: ವಿನತೆ ಶರ್ಮಾ ಅಂಕಣ
“ವಿಶೇಷ ಸಾಮರ್ಥ್ಯರಿಗೆ ಕಷ್ಟಗಳಿಗಿಂತ ಸವಾಲುಗಳೇ ಹೆಚ್ಚು. ಹೆಚ್ಚಿನಪಾಲು ಸಮಾಜ ಅವರನ್ನು, ಅವರ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸೋತಿದೆ ಅನಿಸುತ್ತದೆ. ನನ್ನ ಪಕ್ಕ ಸ್ಕೂಟರಿನಲ್ಲಿ ಸಾಗಿದ್ದ ಅವರಿಬ್ಬರೂ ರಸ್ತೆಯ ಏರುತಗ್ಗುಗಳ ಪ್ರಕಾರ ವೇಗವನ್ನು ನಿಯಂತ್ರಿಸುತ್ತಿದ್ದರು. ಅವನ, ಅವಳ ಅಂದಿನ ದಿನದಲ್ಲಿ ಅದೇನೆಲ್ಲಾ ಏರುತಗ್ಗುಗಳಿದ್ದವೋ ಯಾರು ಬಲ್ಲರು? ಇಬ್ಬರಿಗೂ ಆ ದಿನ ಎರಡು ಹೊತ್ತಿನ ಪೂರ್ತಿ ಊಟ ಸಿಕ್ಕಿತ್ತೇ?”
ಹುಣಸೇ ಮರದಡಿಯಲ್ಲಿ ಕಂಡ ಪ್ರೇತ: ಮುನವ್ವರ್ ಜೋಗಿಬೆಟ್ಟು ಕಥನ
“ನನ್ನ ಸಂಶಯಕ್ಕೂ ಕಾರಣವುಂಟು. ನಾನು ಕಾಡಿನಲ್ಲಿ ಅದೆಷ್ಟೋ ಹಕ್ಕಿಗಳನ್ನು ನೋಡಿದ್ದರೂ ಅಂತಹ ಅಗಲ ರೆಕ್ಕೆಯ ಬೀಸುತ್ತಾ ಹಾರುವ ಹಕ್ಕಿಯನ್ನು ನೋಡಿರಲೇ ಇಲ್ಲ. ಇದಾಗಿ ಸುಮಾರು ದಿನ ಕಳೆದಿರಬಹುದು. ಅವರಿವರಲ್ಲಿ ನಾನೂ ಸ್ವಲ್ಪ ಉಪ್ಪು ಖಾರ ಬೆರೆಸಿ ನನಗೆ ಕಂಡ ಪ್ರೇತದ ಬಗ್ಗೆ ಮಜಬೂತಾಗಿ ಹೇಳುತ್ತಿದ್ದೆ. ಅವರೆಲ್ಲರಿಗೂ ನಾನು ಪ್ರೇತ ನೋಡಿದವನೆಂಬ ನಂಬಿಕೆಯೂ ಹುಟ್ಟಿಸಿಬಿಟ್ಟಿದ್ದೆ.”
ಶಿಕ್ಷಕರ ದಿನಕ್ಕೆ ನೆನಪೇ ನಮನ: ಯೋಗೀಂದ್ರ ಮರವಂತೆ ಅಂಕಣ
“ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಮನೆಯಿಂದ ನಡಿಗೆಯಲ್ಲಿ ಇಡೀ ಊರಿನ ಮಕ್ಕಳು ಶಾಲೆ ತಲುಪುತ್ತಿದ್ದೆವು. ರಸ್ತೆಯಲ್ಲಿ ಗುರುಗಳು ಎದುರಾದರೆ ತಲೆ ತಗ್ಗಿಸಿ ‘ನಮಸ್ತೆ’ ಹೇಳದೆ ಅವರನ್ನು ಯಾವ ಮಕ್ಕಳೂ ಹಾದುಹೋಗುತ್ತಲೇ ಇರಲಿಲ್ಲ. ಗುರುಗಳ ಬಗ್ಗೆ ಗೌರವ ಭಯಗಳ ಜೊತೆಗೆ ನಮ್ಮ ಗುರುಗಳು ನಮ್ಮೊಡನೆಯೇ ಬದುಕುತ್ತಿದ್ದರೆನೋ ಅನಿಸುವ ಅನುಭವಗಳೂ ಶಾಲೆಯಲ್ಲಿ ಆಗುತ್ತಿದ್ದವು.”
ಜನಪ್ರಿಯತೆಯ ಕೂಪದಲ್ಲಿ ಹಾಡುಹಕ್ಕಿ: ಡಾ. ಲಕ್ಷ್ಮಣ ವಿ.ಎ.ಅಂಕಣ
“ಭಾರತೀಯ ಮನಸು ಯಾವಾಗಲೂ ಪವಾಡಗಳನ್ನು ಅಪಾರವಾಗಿ ನಂಬುತ್ತದೆ. ಅಷ್ಟೇ ಪ್ರತಿಭೆಯನ್ನೂ ಕೂಡ ಪೋಷಿಸುತ್ತದೆ. ಹೀಗಾಗಿ ಇಲ್ಲಿಯ ಅತಿರಂಜಿತ ಸಿನೇಮಾಗಳು ಹಿಟ್ ಆಗುತ್ತವೆ. ಈ ಸಿನೇಮಾ ಸೃಷ್ಟಿಸುವ ಮಿಥ್ ಗಳು ಬದುಕಿನಲ್ಲಿಯೂ ಒಂದಿಲ್ಲೊಂದು ದಿನ ನಿಜವಾಗುತ್ತದೆ ಎಂದು ಬದುಕುವವರು ಇಲ್ಲಿ ಅಂತಲ್ಲ ಎಲ್ಲೆಲ್ಲಿಯೂ ಇದ್ದಾರೆ. ಹೀಗಾಗಿ ಸಿನೇಮಾದಿಂದ ಪ್ರಭಾವಿತವಾಗಿಯೇ ಎಷ್ಟೊಂದು ಪ್ರೇಮಿಗಳು ಹುಟ್ಟಿಕೊಂಡಿರುತ್ತಾರೆ.”
ಬಿಡದೆ ಸುರಿವ ಮಳೆ ಮತ್ತು ಐಸ್ ಕ್ಯಾಂಡಿ ತಿಮ್ಮಪ್ಪಣ್ಣ: ಫಾತಿಮಾ ರಲಿಯಾ
“ಬೀದಿ ಬದಿಯ ಕನಸುಗಳನ್ನೂ ಹೆಕ್ಕಲು ಕಲಿಯುತ್ತಿದ್ದ ನಾವು ನಿಜಕ್ಕೂ ಮುಗಿ ಬೀಳುತ್ತಿದ್ದುದು ಅವನು ಮಾರುತ್ತಿದ್ದ ಕ್ಯಾಂಡಿಗೋ ಅಥವಾ ಅವನ ಕಥೆಗಳಿಗೋ ಅನ್ನುವುದೂ ಇವತ್ತಿಗೂ ಅರ್ಥವಾಗುವುದಿಲ್ಲ. ಮಂಗಳೂರಿನ ‘ಐಡಿಯಲ್’ನಲ್ಲಿ ಬೆಲ್ಲ ಕ್ಯಾಂಡಿ ಸಿಗುತ್ತೆ ಅಂತ ಸುದ್ದಿ ಆದಾಗ ತುಂಬ ಆಸೆ ಪಟ್ಟುಕೊಂಡಿದ್ದೆವು. ಎಳೆಯ ಮಗುವೊಂದು ಇದ್ದುದರಲ್ಲಿ ದೊಡ್ಡದನ್ನು ಆರಿಸಿ ತಿನ್ನುವಂತೆ ಅಲ್ಲಿದ್ದ ಅಷ್ಟೂ ಕ್ಯಾಂಡಿಗಳನ್ನು ಪರಿಶೀಲಿಸಿ, ಕೊಂಡು ಬಾಯಿಗಿಡುತ್ತಿದ್ದಂತೆ ಮುಖ ಹುಳ್ಳಹುಳ್ಳಗೆ.”
ಪದಗಳಾಗದ ಅವರ್ಣನೀಯ ಆನಂದ..: ಆಶಾ ಜಗದೀಶ್ ಅಂಕಣ
“ಅಕ್ಬರ್ ಅರಮನೆಗೆ ಮರಳಿ ಹಲವಾರು ದಿನಗಳಾದರೂ ಹರಿದಾಸರು ಅವರ ಸ್ಮೃತಿಯಿಂದ ದೂರವಾಗುವುದೇ ಇಲ್ಲ… ಕೂತರೂ ನಿಂತರೂ ಹರಿದಾಸರೇ… ಒಂದು ದಿನ ಅಕ್ಬರ್ “ತಾನಸೇನ್ ಅಂತಹಾ ಗುರುಗಳಿಂದ ಪಾಠ ಕಲಿತ ನಿಮ್ಮ ಗಾಯನವೇಕೆ ಆ ಮಟ್ಟಕ್ಕಿಲ್ಲ” ಎಂದು ಕೇಳುತ್ತಾರೆ. ಆಗ ತಾನಸೇನ್ ಹೇಳುತ್ತಾರೆ “ಜಹಾಪನಾ ನಾನು ನಿಮ್ಮನ್ನು ಮೆಚ್ಚಿಸಲಿಕ್ಕಾಗಿ ಹಾಡುತ್ತೇನೆ, ಹಾಗಾಗಿ ನನ್ನ ಕಲೆಗಾರಿಕೆ ಆ ದೈವತ್ವಕ್ಕೆ ಏರಲಿಲ್ಲ.”
ಪದ್ದಜ್ಜಿಯ ಕಣ್ಣಲಿ ಕಂಡ ನೆನಪುಗಳ ಜಲಪಾತ: ಪ್ರಸಾದ್ ಶೆಣೈ ಅಂಕಣ
“ಒಳ ಬಾಗಿಲಿಂದ ಇಣುಕಿದ ಪದ್ದಜ್ಜಿ ಈಗ ಹೊರಬಂದಳು. ಬೆನ್ನು ಬಾಗಿದ್ದರೂ, ಕೂದಲೆಲ್ಲಾ ಮುಪ್ಪಾಗಿದ್ದರೂ, ಮೈಯೆಲ್ಲಾ ಸುಕ್ಕುಗಟ್ಟಿದ್ದರೂ ಅವಳ ಕಣ್ಣುಗಳು ಫಳ್ಳನೇ ಹೊಳೆಯುತ್ತಿದ್ದವು. ಆ ಕಣ್ಣ ಬೆಳಕಿನಲ್ಲಿ ತಾನು ಕಂಡ ನೂರಾರು ಮಳೆಗಾಲ, ಹೊಳೆಯುವ ಬಿಸಿಲು, ಧಾರೆಯಾಗುವ ಮಂಜು, ಗುಡುಗು-ಸಿಡಿಲಿನ ಮೊರೆದಾಟಗಳು ಕಾಣಿಸುತ್ತಿತ್ತು. ಅವಳ ಸುಕ್ಕುಗಟ್ಟಿ ಭೂಮಿಗೂರಿದ ಪಾದಕ್ಕೆ ನಡೆದ ದಾರಿಯ ಮಣ್ಣಿನ, ಹುಲ್ಲಿನ, ಜಲಪಾತದ…”
ಭವಿಷ್ಯದಲ್ಲಿ ನಮ್ಮ ಅಡುಗೆ ಸಂಸ್ಕೃತಿ ಹೇಗಿರಬಹುದು?: ಮಧುಸೂದನ್ ಅಂಕಣ
“ಆಗಿನ ದಿನಗಳಲ್ಲಿ ಯಾರಾದರೂ ಬಹಿರಂಗವಾಗಿ ಹೋಟೆಲ್ಲಿನಲ್ಲಿ ಕಾಣಿಸಿಕೊಂಡರೆ ಒಂದೋ ಆತನೇ ಕೆಟ್ಟಿದ್ದಾನೆಂದರ್ಥ. ಅಥವಾ ಅವನ ಹೆಂಡತಿ ಕೆಟ್ಟಿದ್ದಾಳೆಂದರ್ಥ. ಮನೆಯಲ್ಲಿ ಸರಿಯಾಗಿ ಅಡಿಗೆ ಮಾಡಿದ್ದರೆ ಅವನು ಯಾಕೆ ಅಲ್ಲಿಗೆ ಹೋಗುತ್ತಿದ್ದ? ಅವನು ಹಣವನ್ನು ಪೋಲು ಮಾಡಲು ಬಿಟ್ಟು ಇವಳೇನು ಮಾಡುತ್ತಿದ್ದಾಳೆ? ಎಂಬುವಂಥ ಮಾತುಗಳು ಕೇಳಿಬರುತ್ತಿದ್ದವು.”










