ಬ್ರಿಸ್ಬನ್ ನಗರದಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಡೇ ಆಚರಣೆ: ವಿನತೆ ಶರ್ಮ ಅಂಕಣ
“ಏರು ಮಧ್ಯಾಹ್ನದ ಬಿಸಿಲಲ್ಲಿ ಭಾಷಾಧಾರಿತ ಭಾರತ ದೇಶದ ರಾಜ್ಯಗಳನ್ನು ಪ್ರತಿನಿಧಿಸುತ್ತಾ ಸ್ಥಳೀಯ ಸಂಸ್ಥೆಗಳು ಪೆರೇಡ್ ನಡೆಸಿದವು. ಮರಾಠಿ ಸಂಸ್ಥೆಯವರು ಹೆಗಲ ಮೇಲೆ ದೊಡ್ಡದೊಡ್ಡ ಡೋಲುಗಳನ್ನು ಇಳಿಬಿಟ್ಟುಕೊಂಡು ಲಯಬದ್ಧವಾಗಿ ಬಾರಿಸುತ್ತಿದ್ದರು. ಬಿಳಿಯುಡುಪಿಗೆ ಹೊಂದುವಂತೆ ಬಿಳಿಬಣ್ಣದ ಡೋಲುಗಳು, ಬಿಸಿಲಿನ ಝಳವನ್ನು ತಡೆಹಿಡಿಯಲು ಕಣ್ಣಿಗೆ ತಂಪು ಕನ್ನಡಕ.”
ಹಲ್ಲಿ ಮೂತ್ರ ಕೈ ಸುಟ್ಟಿತೇ!: ಮುನವ್ವರ್ ಜೋಗಿಬೆಟ್ಟು ಅಂಕಣ
“ಕ್ರಿಕೆಟ್ ನೋಡಿ ಬರುವ ದಾರಿಯಲ್ಲಿ ಶೇನ್ ವಾರ್ನ್, ಅನಿಲ್ ಕುಂಬ್ಳೆ ಚೆಂಡು ತಿರುಗಿಸುವಂತೆ ಟಾರು ರೋಡು ಸೈಡಿಗೆ ಹಾಕಿದ್ದ ಜಲ್ಲಿ ಕಲ್ಲುಗಳನ್ನು ಸ್ಪಿನ್ ಮಾಡಿ ಎಸೆಯುತ್ತ ಊರವರಿಂದ ರಸ್ತೆಯಲ್ಲಿ ಬರುವ ವಾಹನದವರಿಂದ ಬೈಸಿಕೊಳ್ಳುವುದು ರೂಢಿಯಾಗಿತ್ತು. ಟಾರು ಬದಿಯ ಜಲ್ಲಿ ತೆಗೆದು ತೆಗೆದು ಅದು ಸಾಕಷ್ಟು ಬೇಗನೆ ಗುಳಿ ಬೀಳುವುದಕ್ಕೂ ನಾವು ಪರೋಕ್ಷ ಕಾರಣರಾಗಿ ಬಿಡುತ್ತಿದ್ದೆವು.”
“ಲಂಡನ್ ಡೈರಿ”ಯೊಳಗಿನಿಂದ ವಿಭಜನೆಯ ಕತೆಗಳು: ಯೋಗೀಂದ್ರ ಮರವಂತೆ ಅಂಕಣ
“ದೂರದ ಬ್ರಿಟನ್ನಿನಲ್ಲಿ ಹೀಗೊಂದು ಮೆಲುಕು ನಡೆದ ಹೊತ್ತಲ್ಲೇ ದೀರ್ಘ ಹೋರಾಟ ತ್ಯಾಗ ಬಲಿದಾನಗಳ ಫಲಶ್ರುತಿಯಾಗಿ ದೊರೆತ ಸ್ವಾತಂತ್ರ್ಯದ ಎಪ್ಪತ್ತೆರಡನೆಯ ಆಚರಣೆ ಭಾರತ ಪಾಕಿಸ್ತಾನಗಳಲ್ಲಿ ನಡೆದು ಹೋಗಿದೆ. ಸಂಭ್ರಮ ಸಡಗರ ಪತಾಕೆ, ಪಟಾಕಿ, ಭಾಷಣ, ಸಿಹಿ, ಕರತಾಡನ ಸೀಮೆಯ ಎರಡೂ ಕಡೆಗಳಲ್ಲಿ. ಈ ಎಲ್ಲ ಆಗುಹೋಗುಗಳ ಪ್ರಧಾನ ಪಾತ್ರಧಾರಿಯಾಗಿದ್ದ…”
ಕಡಲಿಗೆ ಬಂತು ಶ್ರಾವಣಾ ಕುಣಿದ್ಹಾಂಗ ರಾವಣಾ!: ಡಾ.ಲಕ್ಷ್ಮಣ ವಿ.ಎ. ಅಂಕಣ
“ಇದೆಲ್ಲ ಇವತ್ತು ಯಾಕೆ ನೆನಪಾಯಿತೆಂದರೆ ಹೀಗೆ ಕಲಿತು ಬೆರೆತು ಆಟವಾಡಿದ ನಮ್ಮ ಬಯಲು ಸೀಮೆಯ ಶಾಲೆಗಳೆಲ್ಲ ಇಂದು ಸ್ವಾತಂತ್ರ್ಯ ದಿನ ಬರುವ ಹೊತ್ತಿಗೆ ಸರಿಯಾಗಿ ನೆರೆ ನೀರು ತುಂಬಿ, ಮುಳುಗಿ, ಶಾಲೆಯ ಮುಂದಿನ ಧ್ವಜದ ಕಂಬವೂ ಮುಳುಗಿ, ಕಡಲಿಗೆ ಬಂದ ಶ್ರಾವಣ ಶಾಲೆಯ ಅಂಗಳಕ್ಕೂ ಬಂದು ರಾವಣನಂತೆ ಕುಣಿದಿದ್ದಾನೆ. ಪುಟ್ಟ ತನ್ನ ಪಾಟಿ, ಪೆನ್ಸಿಲು, ತನ್ನ ಪ್ರೀತಿಯ ಹಸು ಕರು ಅಂಗಳಕ್ಕೇ ಬಿಟ್ಟು..”
ನಾದಾನುಸಂಧಾನ…: ಆಶಾ ಜಗದೀಶ್ ಅಂಕಣ
“ಸಂಗೀತ ಗಂಧರ್ವ ಲೋಕದ ಕೊಡುಗೆಯಿರಬೇಕು. ಯಾರದೇ ಮನಸು ಎಷ್ಟೇ ದುಃಖದಲ್ಲಿರಲಿ ಎಂಥದೇ ನೋವಿರಲಿ ಅದನ್ನು ಮಾಯಿಸುವ ಶಕ್ತಿ ಸಂಗೀತಕ್ಕಿದೆ. ಹಾಡುತ್ತಾ ಕುಳಿತರೆ ಪ್ರಪಂಚವೇ ಮರೆತು ಹೋಗುತ್ತದೆ. ಒಂದೊಂದು ರಾಗವೂ ವಿಶಿಷ್ಟ. ಕೆಲ ರಾಗಗಳಿಗೆ ರೋಗಗಳನ್ನು ವಾಸಿಮಾಡುವ ಚಿಕಿತ್ಸಕ ಶಕ್ತಿಯೂ ಇದೆ. ನನ್ನಿಷ್ಟದ ಬಹಳ ಚಂದದ ರಾಗಗಳ ದೊಡ್ಡದೊಂದು ಪಟ್ಟಿಯೇ ಇದೆ.”
ತತ್ವಗಳ ಚರ್ಚಿಸುತ್ತಾ…: ಮಧುಸೂದನ್ ವೈ ಎನ್ ಅಂಕಣ
“ಪಶ್ಚಿಮರು ಅನುಭವಿಸುತ್ತಿದ್ದಂಥ ಕಷ್ಟಗಳನ್ನು ನಮ್ಮಲ್ಲಿ ಯಾರೂ ಅನುಭವಿಸಿಯೇ ಇಲ್ಲವೇ? ಇದ್ದಾರೆ ಆದರೆ ಇಲ್ಲಿನವರ ಕಷ್ಟಗಳ ಕಾರಣೀಕರ್ತನು ಬೇರೆ ಅಲ್ಲಿನ ಕಷ್ಟಗಳ ಕಾರಣೀಕರ್ತನು ಬೇರೆ. ಅಲ್ಲಿ ಶಿಕ್ಷೆ ಕೊಡುತ್ತಿದ್ದುದು ಪ್ರಕೃತಿ. ಪ್ರಕೃತಿ ಎಲ್ಲಾರಿಗೂ ಒಂದೇ ಮಾದರಿಯಲ್ಲಿ ಒಂದೇ ಮೊತ್ತದಲ್ಲಿ ಶಿಕ್ಷೆ ಕೊಡುವಂತಹ ವಿಶಿಷ್ಟ ಚಿತ್ರಗುಪ್ತ.”
‘ಕಾಣೆಯಾದವರ ವಾರ’ಕ್ಕೆ ಕಾಣೆಯಾದವರ ಎರಡು ಕತೆ: ವಿನತೆ ಶರ್ಮ ಅಂಕಣ
“ಕೆಲ ನಿಮಿಷಗಳ ನಂತರ ಬಂದ ಯಾರೋ ಆಗಂತುಕರ ಅವನನ್ನು ಕಾರಿನಲ್ಲಿ ಕೂರಿಸಿಕೊಂಡು ಎಲ್ಲಿಗೋ ಹೊರಟುಬಿಟ್ಟಿದ್ದರು. ಅಲ್ಲಿಂದ ಮುಂದೆ ಎಂದೆಂದಿಗೂ ಅವನು ಯಾರಿಗೂ ಕಾಣಿಸಲಿಲ್ಲ. ಕೇಳಿದ ಎಲ್ಲರ ಎದೆ ಢವಢವಿಸಿತ್ತು, ರಕ್ತ ತಣ್ಣಗಾಗಿತ್ತು. ಅವನ ಅಪ್ಪ-ಅಮ್ಮಂದಿರು, ಸರ್ಕಾರ, ಪೊಲೀಸರು ಅವನನ್ನು ಹುಡುಕುತ್ತಾ ಇಡೀ ಒಂದು ದಶಕವನ್ನೇ ಕಳೆದರು.”
ವಿಭಾ ಟೀಚರ್ ಕಥೆಗಳು ಮತ್ತು ನಿಧಿ ಹುಡುಕಾಟ: ಮುನವ್ವರ್ ಜೋಗಿಬೆಟ್ಟು ಕಥನ
“ನಾನು ನಿಧಿ ನಿಕ್ಷೇಪದ ಗುಂಗಿನಲ್ಲಿ ಸುಮ್ಮನೆ ಕಬ್ಬಿಣದ ರಾಡಿನಿಂದ ಅಗೆಯುತ್ತಲೇ ಇದ್ದೆ. ಅದೇನಾಯಿತೋ ಒಮ್ಮೆಲೆ ‘ಟನ್’ ಎಂಬ ಸದ್ದಾಯಿತು. ಮೈಯೆಲ್ಲಾ ಒಮ್ಮೆ ಮಿಂಚು ಪ್ರವಹಿಸಿದಂತಾಯಿತು. ಖಂಡಿತಾ ಚಿನ್ನದ ಮಡಕೆಯನ್ನು ಮಾರಿ ದೊಡ್ಡ ಮನೆ, ಮತ್ತೊಂದು ಕಾರು ಖರೀದೀಸಬೇಕೆಂದು ಲೆಕ್ಕ ಹಾಕಿ…”
ಬ್ರಿಸ್ಟಲ್ ಬಾನಿನಲ್ಲಿ ಬಿಸಿಗಾಳಿಯ ಬಲೂನುಗಳು: ಯೋಗೀಂದ್ರ ಮರವಂತೆ ಅಂಕಣ
“ಹತ್ತೋ ಇಪ್ಪತ್ತೋ ಜನರು ಹಿಡಿಸಬಲ್ಲ ಲೋಹದ ಬುಟ್ಟಿ ಬಲೂನಿಗೆ ಜೋತುಬಿದ್ದು ಗಾಳಿಸಂಚಾರ ಮಾಡುತ್ತದೆ. ವರ್ಷಕ್ಕೊಮ್ಮೆ ಬರುವ ನಾಲ್ಕು ದಿನಗಳ ಈ ಬಲೂನು ಹಬ್ಬದ ದಿನಗಳಲ್ಲಿ ಊಹೆಗೆ ನಿಲುಕದ “ಬ್ರಿಟಿಷ್ ವೆದರ್” ಸಹಕರಿಸದೇ ನಿರಾಶೆ ಹುಟ್ಟಿಸುವುದಿದೆ. ಹಾಗಂತ ಒಮ್ಮೆ ಹಾರಿದ್ದೆ ಹೌದಾದರೆ ನೆಲದ ಮೇಲೂ ಅಲ್ಲ, ವಿಮಾನಗಳಷ್ಟು ಎತ್ತರದಲ್ಲೂ…”










