ಶಾಪಿಂಗ್ ಭೂತದ ಬೆನ್ನೇರಿ: ರೂಪಶ್ರೀ ಕಲ್ಲಿಗನೂರ್ ಅಂಕಣ
“ಚುಮ್ಮಿಗೆ ನಾನು “ಕರ್ನಾಟಕ” ಕೊಡಿಸಲ್ಲ ಅಂತ ಖಾತ್ರಿಯಾದದ್ದೇ, ಅವಳೂ ಓಡಾಟವನ್ನು ನಿಲ್ಲಿಸಿ, ಬಂದು ನನ್ನ ಪಕ್ಕದಲ್ಲಿ ಕುಳಿತಿದ್ದಳು. ನಮ್ಮೆದುರಿಗೇ ಬಿಲ್ಲಿಂಗ್ ಕೌಂಟರ್ ಇತ್ತು. ಅಂಗಡಿಯ ಹೊರಗೆ-ಒಳಗೆಲ್ಲ ಆಫರ್ ಬೋರ್ಡುಗಳ ಸುರಿಮಳೆ. ಆಫರ್ ಅಂದಮೇಲೆ ಗೊತ್ತಲ್ಲ. 900 ವಸ್ತುವಿಗೆ 1500 ರೂ ಬೆಲೆ ಹಾಕಿ, ಮತ್ತದರ ಮೇಲೆ ಗೀಟು ಎಳೆದು 300 ರೂ ಆಫರ್ ಅಂತ ಹಾಕಿರೋದನ್ನೂ ಕಣ್ಣುಮುಚ್ಚಿ ತೆಗೆದುಕೊಳ್ತಾರೆ.”
ಒಂದು ಮದುವೆಯ ಸಂಭ್ರಮ ಮತ್ತು ಮೂರು ಸಾವಿನ ಶೂನ್ಯ:ಫಾತಿಮಾ ರಲಿಯಾ ಅಂಕಣ
“ಪ್ರತೀ ಸಾವೂ ಒಂದು ವಿವರಿಸಲಾಗದ ಶೂನ್ಯವನ್ನೂ, ತಲ್ಲಣವನ್ನೂ ಸೃಷ್ಟಿಸುತ್ತದೆ. ಹಾಗೆ ನೋಡುವುದಾದರೆ ಯಾರ ಸಾವೂ, ಯಾವ ಸಾವೂ ನೆಮ್ಮದಿಯನ್ನು, ಸಂಭ್ರಮವನ್ನು ತರುವುದಿಲ್ಲ. ವರ್ಷಗಳ ಕಾಲ ಹಾಸಿಗೆ ಹಿಡಿದವನು, ಕೋಮಾದಲ್ಲಿದ್ದವನು ಮರಣ ಹೊಂದಿದರೂ ಒಂದು ಬಗೆಯ ಶೂನ್ಯತೆ ಕಾಡದೇ ಇರದು.”
ಅವರು ಬೀಳಿಸಿದ ಗೂಡಿನಲ್ಲಿ ಕಾಗೆಯ ಮರಿಗಳಿದ್ದವು: ಮುನವ್ವರ್ ಪರಿಸರ ಕಥನ
“ಅರೆ, ಇಷ್ಟು ಹೊತ್ತು ಭಯ ಹುಟ್ಟಿಸುವಂತೆ ಮಾಡಿ ಪುಸ್ತಕ ಓದನ್ನು ನಿಲ್ಲಿಸಿದ್ದು ಇದೇನಾ” ಎಂದು ಕಾಗೆ ಜನ್ಮಕ್ಕಿಷ್ಟು ಉಗಿದೆ. ತಕ್ಷಣ ಓಡಿಸಲೆಂದು ಬೊಬ್ಬೆ ಹಾಕಲು ಬಾಯಿ ತೆಗೆದವನು, ಏನೋ ನೆನಪಾಗಿ ಸುಮ್ಮನಾದೆ. ‘ಅಲ್ಲ, ಈ ಕಾಗೆಯೇಕೆ ಹಾಗೆ ವಿಚಿತ್ರವಾಗಿ ಕೂಗಿರಬಹುದು?’ ತಲೆಗೆ ಹುಳ ಬಿಟ್ಟುಕೊಂಡೆ.”
ಹಬ್ಬಿದಾ ಬಂಜಾರುಮಲೆಯ ಮಧ್ಯದೊಳಗೆ: ಪ್ರಸಾದ್ ಶೆಣೈ ಕಥಾನಕ
“ಕಾಡಿನ ಇಂತಹ ಯಾವುದೋ ಒಂದು ಜಲಪಾತ, ಒಂದೇ ಒಂದು ನೋಟ, ಒಂದೇ ಒಂದು ಹೂವು, ನಮ್ಮನ್ನು ಅಮೂರ್ತವಾಗಿಸಿ ಅಲ್ಲೇ ನಿಲ್ಲಿಸಿಬಿಡುತ್ತದೆ. ಈ ಕಾಡಿನ ಜಲಪಾತವೂ ಹಾಗೇ ನಿಲ್ಲಿಸಿಬಿಟ್ಟಿತು. ಒಮ್ಮೆ ಆಕಾಶದ ನೀಲಿಯನ್ನು ಸ್ವಲ್ಪ ಬಾಡಿಗೆಗೆ ತಗೊಂಡು ಪೂರ್ತಿ ನೀಲಿಯಾಗಿ ಹರಿಯುತ್ತಿದ್ದಂತೆ ಕಂಡಿತು.”
ಸೌಂದರ್ಯ ಉಪಾಸನೆಯಲ್ಲಿ ಕಳೆದುಹೋದವರು: ವಿನತೆ ಶರ್ಮಾ ಅಂಕಣ
“ದಶಕದ ಹಿಂದೆ ಸಮುದ್ರಕ್ಕೆ, ಪಾರ್ಕುಗಳಿಗೆ, ಹೋದಾಗಲೆಲ್ಲಾ ನನ್ನಂತೆ ಕರಿಕಂದು ಚರ್ಮದ ಜನ ಕಂಡರೆ ಸಾಕು ಉತ್ಸಾಹ ಗರಿಗೆದರುತ್ತಿತ್ತು. ನಂತರ ಮನಸ್ಸು ಚಿಂತೆಗೊಳಗಾಗುತ್ತಿತ್ತು. ಬಿಳಿಯರಲ್ಲದ ಇತರರು ಅಷ್ಟಾಗಿ ಕಾಣದಿದ್ದದ್ದು ಇನ್ನಷ್ಟು ಎತ್ತಿಕಾಣುತ್ತಿತ್ತು. ಯಾಕೆಂದು ಪ್ರಶ್ನೆ ಮೂಡುತ್ತಿತ್ತು. ನೇರ ಕಾರಣವೆಂದರೆ ಪಾಳೆಗಾರಿಕೆಯಿಂದ ದೇಶವನ್ನು ಆಕ್ರಮಿಸಿಕೊಂಡು ಆಸ್ಟ್ರೇಲಿಯಾವನ್ನು ಬಿಳಿಯರ ಪಾಶ್ಚಿಮಾತ್ಯ ಸಮಾಜವನ್ನಾಗಿ ಪರಿವರ್ತಿಸಿದ್ದು.”
ಔಪಚಾರಿಕವಲ್ಲದ ಉಪಚಾರದ ಸೊಬಗಂದ್ರೇ…: ರೂಪಶ್ರೀ ಅಂಕಣ
“ಈ ಹೊತ್ತಿನಲ್ಲಿಯೂ ಹಳ್ಳಿ ಮನೆಗಳಿಗೆ ಹೋದರೆ ನಮಗೆ ಉಪಚರಿಸುವ ಬಗೆ ಹೇಗೆಲ್ಲ ಇರುತ್ತೆ ಅನ್ನುವುದರ ಪರಿಚಯವಾಗುತ್ತೆ. ‘ಮಳೆ ಬಂದ್ರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ’ ಅನ್ನುವ ಗಾದೆಯಂತೆಯೇ ಮನೆಗೆ ಬಂದವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ.”
ಡಚ್ಚರ ನಾಡಿನ ಸುರಿನಾಮಿ ಹಿಂದೂಗಳ ಕಥನ: ಸೀಮಾ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ.
”ಭಾರತೀಯರು ಅಲ್ಲಿಯೇ ತಮ್ಮ ಅಸ್ಥಿತ್ವವನ್ನು, ಧರ್ಮವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ರಾಮಾಯಣವನ್ನೇ ಜೀವಾಳವಾಗಿಸಿಕೊಂಡರು. ಹಬ್ಬಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸಿದರು.ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಡುತ್ತಾರೆ. ಅಲ್ಲಿನ ಆಡಳಿತ ಭಾಷೆ ಡಚ್ ಆದರೂ ಹಿಂದಿ ಕೂಡ ಒಂದು ಮುಖ್ಯ ಭಾಷೆ.”
ಹವಾಮಾನ ಬದಲಾವಣೆ ಎಂಬ ಗೊಗ್ಗಯ್ಯ: ವಿನತೆ ಶರ್ಮಾ ಅಂಕಣ
ನಾವು ಈಗಲೂ ಪ್ರಜೆಗಳೇ, ಮುಂದೆಯೂ ಪ್ರಜೆಗಳೇ. ಈಗ ನಾವು ಕ್ರಮ ಕೈಗೊಳ್ಳದಿದ್ದರೆ ಈ ದಿನವೂ ಕೆಟ್ಟದ್ದೇ, ಮುಂದಿನ ದಿನಗಳಂತೂ ಇನ್ನೂ ಭಯಂಕರ. ನಮ್ಮ ಸರ್ಕಾರಗಳು, ಜನ ಪ್ರತಿನಿಧಿಗಳು ಈ ದಿನವನ್ನೂ, ನಾಳೆಯನ್ನೂ ಎರಡನ್ನೂ ಕುರಿತು ಆಲೋಚಿಸಬೇಕು, ಅಲ್ಲವೇ.”
ಕಡಲು ನೋಡಲು ಹೋದವಳು ಕಥೆ ಕೇಳಿಸಿಕೊಂಡು ಬಂದೆ
”ಕಡಲು ನೋಡಲು ಬಂದವಳು ಕಥೆ ಕೇಳುತ್ತಿದ್ದಾಳಲ್ಲಾ ಅನ್ನುವ ಖುಷಿಗೆ ಅಜ್ಜಿ ಮತ್ತಷ್ಟು ಕಳೆಕಳೆಯಾಗಿ “ಇಲ್ಲ ಮಾರಾಯ್ತಿ, ನಾವು ಈ ಊರಿನವರಲ್ಲ. ಊರಿನವರಲ್ಲ ಅಂದ್ರೆ ಪೂರ್ತಿ ಈ ಊರಿನವರಲ್ಲ ಅಂತಲ್ಲ.










