ನಿನ್ನ ಕಣ್ಣಿನ್ಯಾಗ

ನಿನ್ನ ಕಣ್ಣಿನ್ಯಾಗ
ಕನಸೊಂದ ಹುಟ್ಟಿತ್ತ
ನೆರಳ ಬೆಳಕೊಂದ ಮೂಡಿತ್ತ
ಹಸಿವ ದಣಿವಾ ನೋವಾ
ಪ್ರೇಮದನಿವಾಹಾರವಾಗಿ ಮರೆಸಿತ್ತ
ನನ್ನ ಚಿತ್ತ ನಿನ ಮ್ಯಾಲಯಿತ್ತ

ನಿನ್ನ ಕಣ್ಣಿನ್ಯಾಗ
ನನಗೊಂದ ಕನಸ ಕಟ್ಟಿತ್ತ
ಬದುಕ ಆಸೆ ಹುಟ್ಟಿತ್ತ
ಚಂದದ ಮನಿಗೊಂದ ಗ್ವಾಡಿ ಕಟ್ಟಿ
ಬಣ್ಣದಾಂಗ ಮಾಡಿ ಬೆಳಗ ಮೂಡಿಸಿತ್ತ

ಗಿರಾಣ ಹಿಡದಾಂಗಯಿತ್ತ
ನಿನ್ನ ಕಣ್ಣಾಗಿನ ಬೆಳಗ
ಬಿಡ್ಸಾಕ ಬಂದಿತ್ತ
ಚಿಮಣಿಯ ಬೆಳಕಿನಾಂಗ
ಆ ಬೆಳಕಿನ್ಯಾಗ ಕ್ರರಗಿದ್ದನಾ
ಬೆಳಗ ಆದಾಂಗ

ದೂರದ ಕತ್ತಲ ದಾರ್ಯಾಗ
ಲಾಟನ್ ಹಿಡದ ದಾರಿ ತೋರಿಸಿದಂಗಾ
ನೀ ಮುಂದಾ ಅಲ್ಲಾ
ನಾ ಮುಂದ ಅಲ್ಲಾ
ನನ್ನ ಮಗ್ಗಲಕ ನೀ ನಿಂತಾಂಗ
ಕಾಲಾಗಿನ ದಾರಿ ಬಾಳ ಸನೀಪಯಿತ್ತ

ನಿನ್ನ ಕಣ್ಣಾಗಿನ ಬದಕಾ
ದೂರದ ತೀರದ ಊರಾ ಸೇರಿತ್ತ
ನೀ ಕಂಡ್ಹಾಂಗ ಆಗಿತ್ತ
ನಿನ್ನ ಕಣ್ಣಿನ್ಯಾಗ ಅದಹೆಂತಾ ಕನಸಯಿತ್ತ

ಅಜೀತ ಪಾತ್ರೋಟ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದವರು.
ಸಧ್ಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ(phd) ಮಾಡುತ್ತಿದ್ದಾರೆ