ಕೊನೆ ಪಲ್ಲಕ್ಕಿ

ಹತ್ತದಿದ್ದರೂ ಯಾವ ಪಲ್ಲಕ್ಕಿನೂ
ಕೊನೆ ಪಲ್ಲಕ್ಕಿ ಹೂವು, ಪತ್ರಿ, ಊದಿನಕಡ್ಡಿ
ಅಲಂಕೃತ ಹತ್ತುವವರೇ ಎಲ್ಲ!

ಬುಸುಗುಡುವ ಉತ್ಕೃಷ್ಟ ಭಯದ ಸಾವು
ಡ್ರೋನ್ ನಂತೆ ತಲೆಯಿಂದ ಚೂರೇಚೂರು ಮೇಲೆ
ನಿತ್ಯ ಸುಳಿಯುವ ತಲೆನೋವಿನಂತೆ

ಚಿಂತೆಯಿಲ್ಲ ನನ್ನ ಪಲ್ಲಕ್ಕಿ
ಬಂದರೆ ಇದೋ ಹೊರಟೆನು
ಬಿಟ್ಟು ಎಲ್ಲರ ಹಿಂದೆ ನಗುತ್ತಲೇ

ನಾನಿದ್ದು, ಹೋದರೆ ನನ್ನ ಜೀವತಂತುಗಳು
ತೂಕದ ದುಃಖ ಯಾರಿಗೆ,ಹೋದವರ ಮುಂದೆ
ಬದುಕಿದ್ದವರಿಗೆ ಶಾಪ ಜೀವನ ಯಾವಾಗಲೂ

ಈಗ ಈ ಪಲ್ಲಕ್ಕಿಗಳ ಮೆರವಣಿಗೆ
ವಿಶ್ವವ್ಯಾಪಿ ಮದುವೆಗೆ ಹೋಗುವಂತೆ
ಜಾರುತ್ತಿದೆ ಕೈಯಿಂದ ಕೈ ಒಂದೊಂದೇ

ಹೇಳಿ ಸ್ವಾರ್ಥ ತಪ್ಪಾ?
ಕಣ್ಣೀರ ಅಂಬುಧಿಗೆ ಬೇಡ
ನನ್ನ ಪಾಲು, ಇರಲಿ ನನ್ನ ಜೀವ ತಂತುಗಳದೇ!!!


ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.

ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ.
ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ