ನಾವೆಲ್ಲ ನದಿಗೆ ಬಿಟ್ಟ ಮೀನುಗಳಂತೆ ನಮ್ಮೆಲ್ಲ ಶಕ್ತಿಯೊಂದಿಗೆ ಈಜಲು ತೊಡಗಿದ್ದೆವು. P.C.L.ನ ಆಡಳಿತದಲ್ಲಿ ಸಹಾಯಕ ನಿರ್ದೇಶಕರನ್ನು ಮುಂದೆ ಮ್ಯಾನೇಜರ್ ಗಳು ಹಾಗೂ ನಿರ್ದೇಶಕರಾಗುವ ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತಿತ್ತು. ಆದ್ದರಿಂದ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಕ್ಷೇತ್ರಗಳಲ್ಲೂ ಅವರು ಪರಿಣತಿ ಪಡೆಯಬೇಕಿತ್ತು. ನಾವು ರೀಲುಗಳ ಡೆವಲಪಿಂಗ್ ನಲ್ಲಿ ಲ್ಯಾಬಿನಲ್ಲಿ ಸಹಾಯ ಮಾಡುತ್ತಿದ್ದೆವು, ಮೊಳೆಗಳು, ಸುತ್ತಿಗೆ, ಅಳತೆ ಟೇಪು ಎಲ್ಲವನ್ನೂ ಹೊತ್ತೊಯ್ಯುತ್ತಿದ್ದೆವು, ಚಿತ್ರಕಥೆ, ಸಂಕಲನಗಳಲ್ಲಿ ಕೂಡ ಸಹಾಯ ಮಾಡುತ್ತಿದ್ದೆವು. ಅಕಸ್ಮಾತ್ ಹೆಚ್ಚುವರಿ ನಟರು ಬೇಕಿದ್ದಲ್ಲಿ ನಟರಾಗಿ ಅಭಿನಯಿಸಬೇಕಿತ್ತು ಮತ್ತು ಶೂಟಿಂಗ್ ಲೊಕೇಷನ್ ಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳಬೇಕಿತ್ತು.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವ ಆತ್ಮಕತೆಯ ಅಧ್ಯಾಯ.

 

“ನೀವು ವಾಯುನೌಕೆಗಳನ್ನು (blimps) ಮಾಡುವ ಕಂಪನಿಯಲ್ಲಿ ಕೆಲಸ ಮಾಡುತ್ತೀರಾ?” ಅಂತ ಬಾರಿನ ಹುಡುಗಿಯೊಬ್ಬಳು ನನ್ನ ಕೇಳಿದಳು. ಲೆನ್ಸುಗಳ ಪಾರ್ಶ್ವನೋಟದ ಚಿತ್ರದ ಮೇಲೆ P.C.L. ಎಂದು ಬರೆಯಲಾಗಿದ್ದ ಬ್ಯಾಡ್ಜನ್ನು ಹಾಕಿಕೊಂಡಿದ್ದೆ. ಅದನ್ನೇ ನೋಡಿ ಆ ರೀತಿ ಕೇಳಿದ್ದಳು. ನಾವು ಹೇಗೆ ನೋಡುತ್ತಿವೋ ಹಾಗೇ. ಲೆನ್ಸ್ ಚಿತ್ರ ಆಕೆಗೆ ವಾಯುನೌಕೆಯಂತೆ ಕಂಡಿರಬಹುದು.

P.C.L. ಅಂದರೆ ಫೋಟೊ ಕೆಮಿಕಲ್ ಲ್ಯಾಬೊರೇಟರಿ. ಧ್ವನಿ ಚಿತ್ರಗಳಿಗೆ ಸಂಶೋಧನ ಸಂಸ್ಥೆಯ ಮಾದರಿಯಲ್ಲಿ ಆ ಕಂಪನಿಯನ್ನು ಸ್ಥಾಪಿಸಲಾಯಿತು. ಆಮೇಲೆ ಸ್ಟುಡಿಯೋ ನಿರ್ಮಿಸಿ ಸಿನಿಮಾ ನಿರ್ಮಾಣವನ್ನು ಆರಂಭಿಸಲಾಯಿತು. ಇದೇ ಕಾರಣದಿಂದಲೇ ಸ್ಥಾಪಿತ ಸ್ಟುಡಿಯೋಗಳಿಗಿಂತ ಇಲ್ಲಿನ ವಾತಾವರಣ ಭಿನ್ನವಾಗಿತ್ತು. ಇಲ್ಲಿ ಹೊಸತನವಿತ್ತು.

ಅಲ್ಲಿದ್ದದ್ದು ಕೆಲವೇ ನಿರ್ದೇಶಕರು ಆದರೆ ಅವರಲ್ಲಿ ಹಲವರು ಪ್ರಗತಿಪರರು ಹಾಗೂ ಕ್ರಿಯಾಶೀಲ ವ್ಯಕ್ತಿಗಳಾಗಿದ್ದರು. ಯಮಾಮೊಟೊ ಕಜಿರೊ (Yamamoto Kajiro), ನರುಸ್ ಮಿಕಿಯೊ (Naruse Mikio), ಕಿಮುರಾ ಸೊಟೊಜಿ (Kimura Sotoji), ಫುಶಿಮಿಜು ಶು (Fushimizu Shu) ಈ ಎಲ್ಲ ಯುವನಿರ್ದೇಶಕರ ಚಿತ್ರಗಳಲ್ಲಿ ಹೊಸತನವಿತ್ತು. ನಾನು ನೋಡಿದ್ದ ಜಪಾನಿ ಚಿತ್ರಗಳಿಗಿಂತ ಇವರ ಚಿತ್ರಗಳು ಭಿನ್ನವಾಗಿದ್ದವು. ಅವರ ಚಿತ್ರಗಳಲ್ಲಿ ವಸಂತಕಾಲ ಕುರಿತಾದ ಹಾಯ್ಕುಗಳಲ್ಲಿನ ಗಂಧವಿತ್ತು. “ಎಳೆ ಹಸಿರೆಲೆಗಳು”, “ಬೀಸು ಗಾಳಿ” ಅಥವ “ಸುವಾಸಿತ ತಂಗಾಳಿ” ಇಂತಹ ಶೀರ್ಷಿಕೆಗಳಡಿಯ ಹಾಯ್ಕುಗಳ ಗುಣವಿತ್ತು. ನಿರ್ದೇಶಕರ ಹೊಸತನ ಹಾಗೂ ಕ್ರಿಯಾಶೀಲತೆ ನರುಸ್ ನ Tsuma yo bara no yd ni (Wife! Be Like a Rose!, ಯಮಾಮೊಟೊನ Wagahai uia neko de aru (I Am a Cat), ಕಿಮುರಾನ Ani imoto (Older Brother, Younger Sister), ಫುಶಿಮಿಜುನ Furyu enkatai (The Fashionable Band of Troubadours) ಗಳಲ್ಲಿ ಎದ್ದುಕಾಣುವಂತಿತ್ತು.

ಆದರೆ ಈ ವಿದ್ಯಮಾನದಲ್ಲಿ ಅರ್ಧದಷ್ಟು ರಾಷ್ಟ್ರೀಯತೆಯೊಂದಿಗೆ ಗುರುತಿಸಿಕೊಳ್ಳದಿರುವ ಅಥವ ಅಸ್ಪಷ್ಟವಾಗಿರುವ ಗುಣವಿತ್ತು. ಆ ಸಮಯದಲ್ಲಿ ಜಪಾನಿನಲ್ಲಿ ಹಲವು ಕರಾಳ ಘಟನೆಗಳು ನಡೆಯುತ್ತಿದ್ದವು. ಲೀಗ್ ಆಫ್ ನೇಷನ್ ನಿಂದ ಹೊರಬಂದಿತ್ತು, “ 2- 26ರ ಘಟನೆ” ( ಯುವ ಸೈನ್ಯಾಧಿಕಾರಿಯೊಬ್ಬ ಕ್ಯಾಬಿನೆಟ್ ಮಂತ್ರಿಗಳನ್ನು ಅವರು ರೂಪಿಸಿದ ಪಾಲಿಸಿಗಳು ತನಗೆ ಸರಿತೋರದ ಕಾರಣಕ್ಕೆ ಹತ್ಯೆಗೈದಿದ್ದ), ಜರ್ಮನ್ – ಜಪಾನಿಸ್ ಆ್ಯಂಟಿ ಕಮಿನ್ಟರ್ನ್ ಪ್ಯಾಕ್ಟ್ ನೆಲೆಗೊಳ್ಳುತ್ತಿತ್ತು. ಈ ಘಟನೆಗಳ ನಡುವೆ ನಾವು ಹಿಬಿಯಾ ಉದ್ಯಾನದ ನಡುವೆ ಬೀಸುವ ತಂಗಾಳಿಯ ಹಾಡಿನಂತಹ ಸಿನಿಮಾಗಳನ್ನು ಮಾಡುತ್ತಿದ್ದೆವು. “2 -26 ಘಟನೆಯ ನಂತರ ಅಂದರೆ ಫೆಬ್ರವರಿ 26, 1936ರಂದು ನಾನು P.C.L. ಸೇರಿದೆ. ಆ ದಿನ ಸುರಿದಿದ್ದ ಭಾರಿ ಹಿಮಪಾತದ ಪಳೆಯುಳಿಕೆಗಳು ಸ್ಟುಡಿಯೋದ ಕಟ್ಟಡದಲ್ಲಿ ಅಲ್ಲಲ್ಲಿ ಉಳಿದಿದ್ದವು.

ಕಂಪನಿಯ ಅಧ್ಯಕ್ಷರು ಅಮೆರಿಕಾದಲ್ಲಿ ಸಿನಿಮಾ ನಿರ್ಮಾಣ ಹೇಗೆ ಮಾಡುತ್ತಾರೆ ಎಂದು ನೋಡಲು ಹೋಗಿಬಂದರು. ಅಲ್ಲಿ ಮುಖ್ಯ ಸಹಾಯಕ ನಿರ್ದೇಶಕರಿಗೆ ನೀಡುವ ಪ್ರಾಮುಖ್ಯತೆ ಹಾಗೂ ಅವರುಗಳು ಕೆಲಸ ಮಾಡುತ್ತಿದ್ದ ರೀತಿ ನೋಡಿ ಬಹಳ ಪ್ರಭಾವಿತರಾದರು. ಅಲ್ಲಿಂದ ಬಂದ ಮೇಲೆ ಸ್ಟುಡಿಯೋದಲ್ಲಿ “ಮುಖ್ಯ ಸಹಾಯಕ ನಿರ್ದೇಶಕರ ಆದೇಶಗಳನ್ನು ರಾಷ್ಟ್ರಪತಿಯ ಆದೇಶದಂತೆ ಪಾಲಿಸಬೇಕು” ಎಂದು ಬೋರ್ಡ್ ಬರೆಸಿ ಹಾಕಿದ್ದರು.

ಪ್ರಪಂಚದ ಇಷ್ಟೆಲ್ಲ ವಿದ್ಯಮಾನಗಳ ನಡುವೆ P.C.L. ಆ ಮಟ್ಟಕ್ಕೆ ಬೆಳೆದು ನಿಂತದ್ದು ನಿಜಕ್ಕೂ ವಿಸ್ಮಯಕಾರಿ. ಕಂಪನಿಯ ನಾಯಕರು ಹದಿಹರೆಯದ ಸಿನಿಪ್ರೇಮಿಗಳಂತೆ ಯುವಹುಮ್ಮಸ್ಸಿನ ತರುಣರಾಗಿದ್ದರು. ಹೊಸ ನೀತಿಗಳನ್ನು ಉತ್ಸಾಹದಿಂದ ರೂಪಿಸಿದರು. ಸ್ಟುಡಿಯೋದಲ್ಲಿ ಹವ್ಯಾಸಿ ಕಲಾವಿದರೆ ಹೆಚ್ಚಾಗಿದ್ದರು. ಇಂದಿನ ಅಸಂಬದ್ಧ ಚಿತ್ರಗಳಿಗೆ ಹೋಲಿಸಿದಲ್ಲಿ ಅಂದಿನ ನೇರನಿರೂಪಣೆಯ ಚಿತ್ರಗಳು ಹೆಚ್ಚು ಪ್ರಾಮಾಣಿಕವಾಗಿದ್ದವು ಎನ್ನುವುದು ನನ್ನ ಅಭಿಪ್ರಾಯ. P.C.L. ನಿಜಕ್ಕೂ ಒಂದು ಕನಸಿನ ಕೈಗಾರಿಕೆಯಾಗಿತ್ತು ಎನ್ನಬಹುದು.

ಕಂಪನಿಯ ನೀತಿಗನುಗುಣವಾಗಿ ಆಯ್ಕೆಯಾಗಿದ್ದ ಸಹಾಯಕ ನಿರ್ದೇಶಕರು ಉತ್ತಮ ವಿಶ್ವವಿದ್ಯಾಲಯಗಳ ಪದವೀಧರರಾಗಿದ್ದರು. ಒಬ್ಬನ್ನನ್ನು ಬಿಟ್ಟು ಉಳಿದವರೆಲ್ಲ ಟೊಕಿಯೊ ಇಂಪಿರಿಯಲ್, ಕ್ಯೊಟೊ ಇಂಪಿರಿಯಲ್, ಕೆಯೊ ಮತ್ತು ವಸೆಡ ವಿಶ್ವವಿದ್ಯಾಲಯದಿಂದ ಬಂದಿದ್ದರು. ಆ ವಿಚಿತ್ರ ಬಯೋಡೆಟಾ ಹೊಂದಿದ್ದ ವ್ಯಕ್ತಿ ಕುರೊಸೊವ ಅಕಿರ. ನಾವೆಲ್ಲ ನದಿಗೆ ಬಿಟ್ಟ ಮೀನುಗಳಂತೆ ನಮ್ಮೆಲ್ಲ ಶಕ್ತಿಯೊಂದಿಗೆ ಈಜಲು ತೊಡಗಿದ್ದೆವು. P.C.L.ನ ಆಡಳಿತದಲ್ಲಿ ಸಹಾಯಕ ನಿರ್ದೇಶಕರನ್ನು ಮುಂದೆ ಮ್ಯಾನೇಜರ್ ಗಳು ಹಾಗೂ ನಿರ್ದೇಶಕರಾಗುವ ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತಿತ್ತು. ಆದ್ದರಿಂದ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಕ್ಷೇತ್ರಗಳಲ್ಲೂ ಅವರು ಪರಿಣತಿ ಪಡೆಯಬೇಕಿತ್ತು. ನಾವು ರೀಲುಗಳ ಡೆವಲಪಿಂಗ್ ನಲ್ಲಿ ಲ್ಯಾಬಿನಲ್ಲಿ ಸಹಾಯ ಮಾಡುತ್ತಿದ್ದೆವು, ಮೊಳೆಗಳು, ಸುತ್ತಿಗೆ, ಅಳತೆ ಟೇಪು ಎಲ್ಲವನ್ನೂ ಹೊತ್ತೊಯ್ಯುತ್ತಿದ್ದೆವು, ಚಿತ್ರಕಥೆ, ಸಂಕಲನಗಳಲ್ಲಿ ಕೂಡ ಸಹಾಯ ಮಾಡುತ್ತಿದ್ದೆವು. ಅಕಸ್ಮಾತ್ ಹೆಚ್ಚುವರಿ ನಟರು ಬೇಕಿದ್ದಲ್ಲಿ ನಟರಾಗಿ ಅಭಿನಯಿಸಬೇಕಿತ್ತು ಮತ್ತು ಶೂಟಿಂಗ್ ಲೊಕೇಷನ್ ಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳಬೇಕಿತ್ತು.

ಕಂಪನಿಯ ಅಧ್ಯಕ್ಷರು ಅಮೆರಿಕಾದಲ್ಲಿ ಸಿನಿಮಾ ನಿರ್ಮಾಣ ಹೇಗೆ ಮಾಡುತ್ತಾರೆ ಎಂದು ನೋಡಲು ಹೋಗಿಬಂದರು. ಅಲ್ಲಿ ಮುಖ್ಯ ಸಹಾಯಕ ನಿರ್ದೇಶಕರಿಗೆ ನೀಡುವ ಪ್ರಾಮುಖ್ಯತೆ ಹಾಗೂ ಅವರುಗಳು ಕೆಲಸ ಮಾಡುತ್ತಿದ್ದ ರೀತಿ ನೋಡಿ ಬಹಳ ಪ್ರಭಾವಿತರಾದರು. ಅಲ್ಲಿಂದ ಬಂದ ಮೇಲೆ ಸ್ಟುಡಿಯೋದಲ್ಲಿ “ಮುಖ್ಯ ಸಹಾಯಕ ನಿರ್ದೇಶಕರ ಆದೇಶಗಳನ್ನು ರಾಷ್ಟ್ರಪತಿಯ ಆದೇಶದಂತೆ ಪಾಲಿಸಬೇಕು” ಎಂದು ಬೋರ್ಡ್ ಬರೆಸಿ ಹಾಕಿದ್ದರು. ಇದಕ್ಕೆ ಕಂಪನಿಯ ಪ್ರತಿಯೊಂದು ವಿಭಾಗದಲ್ಲೂ ಪ್ರತಿರೋಧ, ಅಸಮಾಧಾನಗಳೆದ್ದವು. ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳಲು ಸಾಕಷ್ಟು ಶ್ರಮಿಸಬೇಕಾಯಿತು.

“ನಿಮ್ಮದೇನಾದರೂ ದೂರುಗಳಿದ್ದಲ್ಲಿ ಡೆವಲಪಿಂಗ್ ಲ್ಯಾಬ್ ಹಿಂಭಾಗದಲ್ಲಿ ಬಂದು ನನ್ನನ್ನು ಭೇಟಿ ಮಾಡಿ” ಎಂದು ಮುಖ್ಯ ಸಹಾಯಕ ನಿರ್ದೇಶಕ ಹೇಳುತ್ತಿರುವುದನ್ನು ನೋಡಬಹುದಿತ್ತು. ಇದೊಂದು ರೀತಿಯಲ್ಲಿ ಕ್ಯಾಮೆರಾ ಮಂದಿ, ಲೈಟಿಂಗ್ ತಂತ್ರಜ್ಞರು, ಪ್ರಸಾಧನ, ಪರಿಕರಗಳವರು ಹಾಗೂ ರಂಗಸಜ್ಜಿಕೆಯವರು ಎಲ್ಲರೊಂದಿಗೆ ಹೋರಾಟವಾಗಿಬಿಟ್ಟಿತು.

ಇವುಗಳಲ್ಲಿ ಕೆಲವು ಅತಿಯಾದದ್ದು ನಿಜವಾದರೂ ಆಡಳಿತಮಂಡಳಿ ಸಹಾಯಕ ನಿರ್ದೇಶಕರನ್ನು ತರಬೇತಿಗೊಳಿಸಲು ಅನುಸರಿಸಿದ ವಿಧಾನ ತಪ್ಪಲ್ಲ ಅಂತ ನನಗನ್ನಿಸುತ್ತದೆ. ಇಂದಿನ ಸಹಾಯಕ ನಿರ್ದೇಶಕರು ಮೊದಲ ಬಾರಿಗೆ ನಿರ್ದೇಶನಕ್ಕಿಳಿದಾಗ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಿನಿಮಾ ನಿರ್ಮಾಣ ಪ್ರಕ್ರಿಯೆ ಒಳಗೊಂಡಿರುವ ಪ್ರತಿ ಅಂಶ ಹಾಗೂ ಹಂತವನ್ನು ತಿಳಿದಿರದಿದ್ದಲ್ಲಿ ನೀವು ನಿರ್ದೇಶಕರಾಗಲು ಸಾಧ್ಯವಿಲ್ಲ. ಪ್ರತಿಯೊಂದು ವಿಭಾಗದ ಬಗ್ಗೆ ಸಂಪೂರ್ಣ ತಿಳಿವಳಿಕೆ ಹೊಂದಿರಬೇಕು. ಪ್ರತಿ ವಿಭಾಗದ ಮೇಲೆ ಹಿಡಿತ ಸಾಧಿಸದಿದ್ದಲ್ಲಿ ಇಡಿಯಾಗಿ ಎಲ್ಲದರ ಮೇಲೆ ಹಿಡಿತ ಸಾಧಿಸುವುದು ಸಾಧ್ಯವಿಲ್ಲ.