ಕೆ.ಎಸ್.ಅಶ್ವಥ್ ಕುರಿತು ಅಮೆರಿಕಾದಲ್ಲಿರುವ ಗೆಳೆಯ
ಅಶ್ವಥ್ ಅವರ ಪರಿಚಯವೂ ನನಗೆ ನಾಟಕದ ಮೂಲಕವೇ ಆದದ್ದು. ಆ ಕಾಲದಲ್ಲಿ ಮೈಸೂರಲ್ಲಿ ನಮಗಿದ್ದ ನಾಟಕ ಮಾಧ್ಯಮಗಳು ಎರಡೇ- ಹವ್ಯಾಸೀ ನಾಟಕ ರಂಗ (ಮುಖ್ಯವಾಗಿ ಕಾಲೇಜು ನಾಟಕ ರಂಗ), ಮತ್ತು ರೇಡಿಯೋ ನಾಟಕ ರಂಗ.
ಹೀಗೊಬ್ಬರು ಅಪರೂಪದ ರಾಜಕಾರಣಿ ಬಿ.ವಿ.ನಾಯಕ
ಉತ್ತಮ ವಾಗ್ಮಿಗಳಾಗಿದ್ದ ಇವರು ಸಂಸತ್ತಿನಲ್ಲಿ ತಮ್ಮ ಪ್ರಖರ ವಿಚಾರಧಾರೆಯಿಂದ ಮಿಂಚಿದರು. ಸ್ಥಳೀಯ, ರಾಷ್ಟೀಯ, ಅಂತರ್ರಾಷ್ಟೀಯ ಸಮಸ್ಯೆ-ವಿಷಯಗಳಿಗೆಲ್ಲ ಸಮರ್ಥವಾಗಿ ಧ್ವನಿ ನೀಡಿದರು.
ಕಿ.ರಂ. ಸಾರ್,ಸ್ಸಾರೀ….,: ರಜನಿ ಬರಹ
ನಾನವರ ಜೊತೆ ನಾಟಕ ಮತ್ತು ನಮ್ಮ ಪ್ರಯೋಗದ ಕುರಿತೇ ಮಾತಾಡಿದ್ದೇನೆಯೆ ಹೊರತು ಕಾವ್ಯದ ಬಗೆಗೆ ಮಾತಾಡಿಲ್ಲ. ಅದಕ್ಕಿಂತ ಹೆಚ್ಚೆಂದರೆ ಕಾಡು ಹರಟೆ ಹೊಡೆದಿದ್ದೇನೆ. ಇತ್ತೀಚೆಗಿನ 5-6 ವರ್ಷಗಳಿಂದ ಅವರ ಜೊತೆಗೆ ಮಾತಾಡುವ ಸಂದರ್ಭ ಬಂದಾಗೆಲ್ಲ ಬೇಕೆಂತಲೇ ತಪ್ಪಿಸಿಕೊಂಡಿದ್ದೇನೆ.
ಲಿಯು ಶಿಯಾಬೋ: ಕೆಂಪು ಚೀನಾದ ಅಶಾಂತ ಸಂತ
ಲಿಯು ಚಿಂತನೆಗಳು, ಮಾತುಗಳು ಎಂಥವರನ್ನೂ ಮಂತ್ರಮುಗ್ಧವಾಗಿಸುತ್ತವೆ. ‘ಅಕ್ಷರ, ಪದ, ವಾಕ್ಯಗಳನ್ನು ಅಪರಾಧವೆಂದು ಭಾವಿಸುವುದನ್ನು ಮೊದಲು ನಿಲ್ಲಿಸಬೇಕು’ ಎಂದು ವಿನಂತಿಸಿಕೊಂಡಿದ್ದವನು ಲಿಯು.
ಗುರುಗಳ ದಿನ ನಾಯಕರ ನೆನಪು:ಸುಮಿತ್ರಾ ಬರಹ
ಮೊದಲನೇ ಸೆಮೆಸ್ಟರ್ ನಲ್ಲಿ ಜಿ.ಎಚ್. ನಾಯಕರು ಹರಿಶ್ಚಂದ್ರ ಕಾವ್ಯ ಪಾಠ ಮಾಡುವಾಗ ಆ ಕಾವ್ಯದ ಪ್ರತಿಯೊಂದು ಮಗ್ಗುಲನ್ನೂ ವಿಶ್ಲೇಷಿಸಿದ ರೀತಿ ದಶಕಗಳ ನಂತರವೂ ನೆನಪಿನಲ್ಲಿ ಉಳಿದಿದೆ. ಈಗ ನಾನು ಪಾಠ ಮಾಡುವಾಗಲೂ ಆ ವಿಚಾರಗಳ ನೆರಳು ಇರುತ್ತದೆ.
ದೇವನೂರು ಬರೆದ ಮಾಜೀ ಪೈಲ್ವಾನನ ಹಾಲಿ ಜೀವನ
ಅವರು ಮಿಕ ಮಿಕ ಕಣ್ಬಿಡುತ್ತಾ ಕೂತಿದ್ದರು. ಕುಸ್ತಿ ಕಲಿಸುತ್ತಿದ್ದಾಗ ಅವರು ಹೊಟ್ಟೆಗೆ ಬಟ್ಟೆಗೆ ನೇರವಾಗಿದ್ದರು. ಜನಗಳೂ ಸಹಾ ಇವರನ್ನು ಗುರುಗಳು ಎಂದು ಪರಿಗಣಿಸಿ ಎರಡು ಹೊತ್ತಿನ ಊಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು.
ಮುಕ್ತ ಮನಸ್ಸಿನ ನಿಜಪತ್ರಕರ್ತ- ಕನ್ನಡಪ್ರಭ ಸತ್ಯನಾರಾಯಣ
ಒಂದೇ ಪ್ರೆಸ್ ನಲ್ಲಿ ಮೂವತ್ತು ಪತ್ರಿಕೆಗಳು ಪ್ರಿಂಟಾಗವು. ಅದೂ ಏನು, ನ್ಯೂಸ್ ಎಲ್ಲ ಒಂದೆ, ಮಾಸ್ಟ್ ಹೆಡ್ ಮಾತ್ರ ಬೇರೆ. ಇನ್ನು ಕೆಲವಿದ್ದೊ, ಈ ವಾರ ಪ್ರಿಂಟಾಕಿದ್ದ ನ್ಯೂಸನ್ನೇ ಮುಂದಿನವಾರವೂ ಪ್ರಿಂಟಾಕ್ತಿದ್ದೊ.
ಈ ನೆಲದ ಜಾಲಿ ಹೂ : ರೈತ ಹೋರಾಟಗಾರ್ತಿ ಅನಸೂಯಮ್ಮ
ನನಗೆ ನಮ್ಮ ಹೋರಾಟವೆಲ್ಲ ಹೊಳೇಲಿ ಹುಣಸೇಹಣ್ಣು ಕಲಸಿದ ಹಾಗಾಗಿಹೋಯ್ತಲ್ಲ ಅಂತ ಯೋಚನೆ ಶುರುವಾಯ್ತು. ತಕ್ಷಣವೇ ಮುಂದೆ ಹೋಗಿ ನಿಂತ್ಕಂಡೆ, `ಅವರ ಜೇಬಲ್ಲಿ ಐವತ್ತು ನೂರು ರೂಪಾಯಿ ಇದ್ರು ರಸೀತಿ ಹಾಕ್ಸಲ್ಲ, ನಿಮಗೆ ಕೊಡಕೆ ಬುಡದಿಲ್ಲ.
ಬಾಯರಿ ಮಾಸ್ತರು ಪೆಜತ್ತಾಯರಿಗೆ ದಯಪಾಲಿಸಿದ ಚಿತ್ರ
ಬಾಯರಿ ಮಾಸ್ತರದು ಆಕರ್ಷಕ ವ್ಯಕ್ತಿತ್ವ. ಅವರು ಕರುಣಾಮಯಿ ಮತ್ತು ಮೃದು ಭಾಷಿ. ಗಾಂಧಿವಾದಿಯಾಗಿದ್ದ ಅವರು ಸದಾ ಖಾದಿ ಬಟ್ತೆಗಳನ್ನು ಧರಿಸುತ್ತಾ ಇದ್ದರು. ಚಿತ್ರಕಲೆಗೇ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದ ಬಾಯರಿ ಮಾಸ್ತರನ್ನು ಕಂಡರೆ ನಮಗೆ ಎಂದೂ ಭಯ ಆಗುತ್ತಿರಲಿಲ್ಲ.









