‘ಕಾವ್ಯದ ಕನ್ನಡಿಯಲ್ಲಿ ಕಂಡ ಜೀವನಪಥ’
ಅನುಭವಕ್ಕೆ ಸ್ವತಃ ಯಾವುದೇ ರೀತಿಯ ಆಕೃತಿ ಇಲ್ಲ. ಆದರೆ ನಾವು ಮಾತ್ರ ಇದು ಸುಖದ ಅನುಭವ, ಇದು ದುಃಖದ ಅನುಭವ, ಇದು ವಿಹ್ವಲತೆ, ತಲ್ಲಣ, ಇದು ವಿಷಾದದ ಅನುಭವ ಎಂದೆಲ್ಲ ಹೆಸರಿಡುತ್ತೇವೆ ಎಂದು ಹೇಳುವ ಆನಂದ ಝುಂಜರವಾಡ ಮೂಲತಃ ಕಾವ್ಯಶಕ್ತಿಯನ್ನು ಒಲಿಸಿಕೊಂಡ ಕವಿ. ಇತ್ತೀಚೆಗೆ ಅವರ ಹೊಸ ಕವನ ಸಂಕಲನ ಶಬ್ದ ಸುಪಾರಿ ಬಿಡುಗಡೆಯಾಯಿತು.
ತೀರಿಹೋದ ಗೋವಿಂದ ರಾವ್ ಕುರಿತು…
ಸಾಮಾಜಿಕ ವ್ಯವಸ್ಥೆಯ ಕಡೆಗೆ ಚಿಕಿತ್ಸಕ ನೋಟ ಹೊಂದಿದ್ದ, ತಪ್ಪುಗಳ ಕಂಡರೆ ಮನೆಯ ಹಿರಿಯರಂತೆ ಗದರುತ್ತಿದ್ದ ಜಿ.ಕೆ. ಗೋವಿಂದ ರಾವ್ ಇಂದು ತೀರಿಕೊಂಡರು. ಇಂಗ್ಲಿಷ್ ಪ್ರಾಧ್ಯಾಪಕರಾದ ಅವರು ನಾಟಕ, ಸಿನಿಮಾ, ಬರಹಗಳ ಜೊತೆ ಒಡನಾಟ ಹೊಂದಿದ್ದವರು. ಅದಕ್ಕೂ ಮಿಗಿಲಾಗಿ ಯುವಜನತೆಯ ಜೊತೆಗೆ ಸದಾ ಬೆರೆಯುತ್ತಿದ್ದವರು. ಚಿಂತಕ ಡಾ. ರಾಜೇಂದ್ರ ಚೆನ್ನಿ ತಮ್ಮ ಗೆಳೆಯನ ಕುರಿತ ನೆನಪುಗಳನ್ನು ಬರೆದಿದ್ದಾರೆ. 
ಸಾರಾ ಉಮ್ಮಾಗೆ ಈಗ ಎಂಭತ್ತೈದು
‘ಚಂದ್ರಗಿರಿಯ ತೀರದಲ್ಲಿ’ ಕೃತಿಯ ಮೂಲಕ ಸಾಹಿತ್ಯ ಪಯಣ ಆರಂಭಿಸಿದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ತಮ್ಮ ಎಂಭತ್ತೈದರ ಹರೆಯಲ್ಲಿದ್ದಾರೆ. ಕತೆ, ಕಾದಂಬರಿ, ಅನುವಾದ, ಪ್ರಬಂಧ ಮುಂತಾಗಿ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಅವರು ತಮ್ಮ ನಿಲುವಿಗೆ ಎದುರಾದ ಹಲವು ಪ್ರತಿರೋಧಗಳ ನಡುವೆ ಜೀವನ್ಮುಖಿ ಚಿಂತನೆಗಳನ್ನು ಉಳಿಸಿಕೊಂಡವರು. ಈಗ ಸೊಸೆಯ ಆರೈಕೆಯಲ್ಲಿ ಸಮುದ್ರವನ್ನು ನೆನಪಿಸಿಕೊಳ್ಳುತ್ತಾ ಇರುವ ಸಾರಾ ಅವರ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.
ಸಜ್ಜನ ಸವ್ಯಸಾಚಿ ಯಕ್ಷಗುರು ಕೃಷ್ಣ ಭಂಡಾರಿಯ ನೆನಪುಗಳು
ಸಂಗೀತದ ತಿಳುವಳಿಕೆ ಇರುವರೆಲ್ಲಾ ಉತ್ತಮ ಭಾಗವತರಾಗಬಹುದು, ಆದರೆ ಅವರು ರಂಗದಲ್ಲಿ ಯಶಸ್ವೀ ಭಾಗವತರಾಗುವುದಿಲ್ಲ. ಯಕ್ಷಗುರು ಕೃಷ್ಣ ಭಂಡಾರಿಯವರಿಗೆ ಸ್ವತಃ ವೇಷದ ನಡೆಯ ಅನುಭವವಿರುವ ಕಾರಣ ಮುಮ್ಮೇಳದ ಕಲಾವಿದನಿಗೆ ಯಾವ ಯಾವ ಭಾಗದಲ್ಲಿ ಪದ್ಯದ ಮೂಲಕ ಕುಣಿಸಬೇಕೆನ್ನುವದು ಚೆನ್ನಾಗಿ ಗೊತ್ತಿತ್ತು. ಭಾಗವತಿಕೆಯಲ್ಲಿ ಯಾವ ಕಸರತ್ತುಗಳನ್ನು ಮಾಡದೇ ಕಲಾವಿದನನ್ನು ಹುರಿದುಂಬಿಸುತ್ತಿದ್ದರು.”
ನವೋದಯದ ಕವಿರಾಜಹಂಸ ಸಾಂತ್ಯಾರು ವೆಂಕಟರಾಜ
ಉಡುಪಿಯ ಸಾಂತ್ಯಾರು ವೆಂಕಟರಾಜರು ಪತ್ರಿಕೆಗಳಲ್ಲಿ 1930 ರಿಂದ (ತಮ್ಮ 17 ನೆಯ ವರ್ಷದಿಂದ) ನಿರಂತರವಾಗಿ ಕವಿತೆಗಳನ್ನು ಪ್ರಕಟಿಸುತ್ತಾ ಬಂದಿದ್ದರು. ಅವರ ಕಾವ್ಯದಲ್ಲಿ ಅವರ ಬದುಕಿನ ನಾಲ್ಕು ಕಾಲಘಟ್ಟದಲ್ಲಿ ನಾಲ್ಕು ಬಗೆಯ ವಸ್ತುಗಳಿಗೆ ಪ್ರಾಮುಖ್ಯ ಸಿಕ್ಕಿರುವುದನ್ನು ಅಥವಾ ವಸ್ತುವಿನ ಪರಿಶೀಲನೆಯ ಕ್ರಮದಲ್ಲಿ ಆಗಿರುವ ಬದಲಾವಣೆಯನ್ನು ಕಾಣಬಹುದು: -ಡಾ.ಬಿ. ಜನಾರ್ದನ ಭಟ್ ನವೋದಯದ ಕವಿರಾಜಹಂಸ ಸಾಂತ್ಯಾರು ವೆಂಕಟರಾಜರ ಕುರಿತು ಬರೆದಿದ್ದಾರೆ.
ಕಥನ ಶಕ್ತಿಯನ್ನು ಒಲಿಸಿಕೊಂಡ ಕನ್ನಡದ ಚೇತನ ತರಾಸು
ಬರೆದು ಬದುಕಿದ ಕನ್ನಡದ ಬೆರಳೆಣಿಕೆಯ ಲೇಖಕರರಲ್ಲಿ ತ.ರಾ.ಸು. ಕೂಡ ಒಬ್ಬರು. ಜೊತೆಗೆ ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುವಲ್ಲಿ ಅವರು ಸದಾ ಮುಂದು. ಅವರಿಗೆ ಅದರ ಕುರಿತು ವ್ಯಸನವಿರಲಿಲ್ಲ ಬದಲಾಗಿ ಹೆಮ್ಮೆಯಿತ್ತು. ಬಾಳಿನಲ್ಲಿ ಸುಖಕ್ಕಿಂತ ಹೆಚ್ಚಾಗಿ ಕಷ್ಟಗಳನ್ನೇ ಅನುಭವಿಸಿದ ಅವರು ಯಾವತ್ತೂ ಸುಖಕ್ಕಾಗಿ ಹಂಬಲಿಸಿದವರಲ್ಲ.”
‘ಶುದ್ಧಕತ್ತಲಿಲ್ಲ, ಶುದ್ಧಬೆಳಕೂ ಇಲ್ಲ’
ಡೋಗ್ರಿ ನವೋದಯ ಚಳವಳಿಯ ಪ್ರಮುಖರಾದ ಪ್ರೊ. ನೀಲಾಂಬರ್ ದೇವ್ ಶರ್ಮಾ ಅವರದು ಪ್ರಶಾಂತ ವ್ಯಕ್ತಿತ್ವ. ಸುಂದರವಾದ ನಿಲುವು. ಸ್ವತಃ ಬರಹಗಾರರಾಗಿ ಗುರುತಿಸಿಕೊಂಡದ್ದಲ್ಲದೆ ಡೋಗ್ರಿ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಸಲು ಇತರರಿಗೆ ಪ್ರೋತ್ಸಾಹ ನೀಡಿದವರು. ಡೋಗ್ರಿ ಜನಪದ ಸಾಹಿತ್ಯದ ದಾಖಲೀಕರಣ ಯೋಜನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.
ಸಜ್ಜನಿಕೆಗೆ ಮತ್ತೊಂದು ಹೆಸರು ಪ್ರೊ.ಜೆ. ಲಕ್ಕಪ್ಪ ಗೌಡ
೨೦ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಶೈಕ್ಷಣಿಕ ವಲಯಗಳ ಕನ್ನಡದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸಿದ ಪ್ರೊ. ಎಚ್.ಜೆ. ಲಕ್ಕಪ್ಪ ಗೌಡರು ಸೋಮವಾರ ಸಂಜೆ ನಮ್ಮನ್ನು ಅಗಲಿದ್ದಾರೆ. ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕ ಜಾನಪದ ಅಧ್ಯಯನವು ಸಾಕಷ್ಟು ವಿಸ್ತೃತವೂ ಗಂಭೀರವೂ ಆಗಿರುವುದಕ್ಕೆ ಕಾರಣಕರ್ತರಾದವರಲ್ಲಿ ಲಕ್ಕಪ್ಪ ಗೌಡರಿಗೆ ಪ್ರಮುಖ ಸ್ಥಾನವಿದೆ. ಅವರ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ್ದಾರೆ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ.
ಅಭಿನಯ ಶಾರದೆ ಜಯಂತಿಯ ಬದುಕಿನ ಪುಟಗಳು…
ಕಮಲಕುಮಾರಿಯಾಗಿದ್ದ ಅವರು ಬಳ್ಳಾರಿ ಮೂಲದವರು. ಜಯಂತಿ ಎಂಬ ಹೆಸರಿನೊಂದಿಗೆ ಸಿನಿಮಾ ಲೋಕ ಪ್ರವೇಶಿಸಿದ ಬಳಿಕ, ಕನ್ನಡದ ಕ್ಲಾಸಿಕ್ಸ್ ಎಂದು ಗುರುತಿಸಿಕೊಳ್ಳುವ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಅವರಿಗೆ ದೊರೆತಿತ್ತು. ಅವರ ಸುದೀರ್ಘವಾದ ಸಿನಿಮಾ ಪಯಣವನ್ನು ನೆನಪಿಸಿಕೊಂಡು ಭಾರತಿ ಹೆಗಡೆ ಬರೆದ ಲೇಖನ ಇಲ್ಲಿದೆ.
						








