‘ಆದ್ರೂ ನೀನು ಯಾರ ಮಗಳು?’:ನಟಿ ಅಕ್ಷತಾ ದಿನಚರಿಯ ಎರಡನೇ ಕಂತು
ಹಾಗಿದ್ದರೆ ನಮ್ಮ ತಂದೆಯ ವೃತ್ತಿ ಏನು? ಮಾಡಲು ಇಷ್ಟೆಲ್ಲ ವೃತ್ತಿಗಳಿವೆ ಎಂದು ಗೊತ್ತಾಗಿದ್ದೇ ಆ ದಿನದ ತರಗತಿಯಲ್ಲಿ. ಹಾಗಿದ್ದರೆ ಈ ಯಾವ ವೃತ್ತಿಯನ್ನು ಮಾಡದ ನಮ್ಮ ತಂದೆಯ ವೃತ್ತಿ ಏನಿತ್ತು? ಇಷ್ಟೆಲ್ಲ ವೃತ್ತಿಗಳಿದ್ದರು ಯಾಕೆ ಯಾವುದನ್ನು ಮಾಡಲಿಲ್ಲ ಎಂದು ಆಗ ಯೋಚಿಸಿದ್ದೆ
ಪದ್ಮಿನಿ ಹೆಗಡೆ ಬರೆದ ‘ಶ್ರೀಹರಿಚರಿತ’ ಕಾವ್ಯ ರಸಗ್ರಹಣ
“ವಾಸ್ತವವಾಗಿ ನಮ್ಮ ಸುತ್ತಲಿನ ಸೃಷ್ಟಿಯೇ ಸೌಂದರ್ಯರಸಾನುಭವದ ಆಕರ. ಬಿರು ಬೇಸಿಗೆ.ಎಲ್ಲ ಸ್ತಬ್ಧವಾಗಿಬಿಟ್ಟಿದೆ.ಆಗ ಮೆಲ್ಲ ಮೆಲ್ಲಗೆ ಗಾಳಿ ಸುಳಿದರೆ ಸಾಕು ಆಹಾ ಎಂದು ಸಂತೋಷ ಪಡುತ್ತೇವೆ. ಎಲ್ಲೆಲ್ಲೂ ಗಾಳಿಯ ಸುಳಿವೇ ಇಲ್ಲ. ಆಗ ಇದ್ದಕಿದ್ದಂತೆ ಎನ್ನುವ ಹಾಗೆ ಗಾಳಿ ಬೀಸಿಬರುತ್ತದೆ. “
ಸುಖದ ಕಾಲದಲ್ಲಿ ಬರಹವೆಂಬ ನವಿರು ನೋವು
”ಓದುವವರಿಗಿಂತ ಬರೆಯುವವರೇ ಹೆಚ್ಚಾಗಿದ್ದಾರೆ’, ‘ಜಗತ್ತಿನ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಮುಂಚೂಣಿಯಲ್ಲಿದೆ’, ‘ಕನ್ನಡ ಪುಸ್ತಕ ಪ್ರಕಟಣೆ ಎಂಬುದು ನಷ್ಟದ ಬಾಬ್ತು’ ಎಂಬೆಲ್ಲಾ ಮಾತುಗಳು ಸತ್ಯಕ್ಕೆ ಹತ್ತಿರವಾಗಿರುವ ಈ ಕಾಲಘಟ್ಟದಲ್ಲಿ; “ನಾವು ಬರೆದು ಸಾಧಿಸುವುದಾದರೂ ಏನು? ಬರೆದದ್ದನ್ನು ಓದುವವರಾದರೂ ಯಾರು?” ಎನ್ನುವ ಪ್ರಶ್ನೆ ಉಳಿದೆಲ್ಲ ಪ್ರಶ್ನೆಗಳಿಗಿಂತ ಮುಖ್ಯವೆನಿಸಿಬಿಡುತ್ತದೆ.”
ಚೆನ್ನಿಯವರ ಪಡ್ಡೆದಿನಗಳ ಕುರಿತು ಕಥೆಗಾರ ವಸುಧೇಂದ್ರ
“ಮೊದಲೇ ತಂಪಾದ ಧಾರವಾಡದ ನೆಲ,ಜೊತೆಗೆ ಬೇಂದ್ರೆ,ಮನ್ಸೂರ್,ಬಾಳಪ್ಪ, ಪುಣೇಕರ್ ತರಹದ ಹಿರಿಯರು ಜೀವಂತ ಯಕ್ಷರಂತೆ ಆ ಮಣ್ಣಿನಲ್ಲಿ ಓಡಾಡಿಕೊಂಡಿದ್ದ ಕಾಲ.ಅದೆಲ್ಲವನ್ನೂ ಬಡಿವಾರ ಉತ್ಪ್ರೇಕ್ಷೆಗಳಿಲ್ಲದ ಪರಿಪಕ್ವವಾದ ಭಾಷೆಯಲ್ಲಿ ಚೆನ್ನಿಯವರು ಹೇಳಿರುವುದು ಓದುಗರಾದ ನಮ್ಮೆಲ್ಲರ ಅದೃಷ್ಟ.”
ಸಂಧ್ಯಾ ಟಾಕೀಸಿನಲ್ಲಿ ಚಿಲಿಯ ಚಿತ್ರ ‘ಫೆಂಟಾಸ್ಟಿಕ್ ವುಮನ್’
“ಈ ಜಗತ್ತು ತಾನು ಎಷ್ಟೇ ಪ್ರಗತಿಪರ ಎಂದು ಹೇಳಿಕೊಂಡರೂ, ಯಾವುದೇ ಬಗೆಯ ಅಲ್ಪಸಂಖ್ಯಾತರನ್ನು ಅದು ಅಹಂಕಾರದಿಂದ, ಉಪೇಕ್ಷೆಯಿಂದಲೇ ನೋಡುತ್ತದೆ.
ಬಾಗಲಕೋಟೆಯ ಅಡವಿಯಲ್ಲಿ ಬೋಸರಿಗಾಗಿ ಹುಡುಕಿದ್ದು
ನನ್ನ ಕನ ಮನಸ್ಸಿನ ಮೂಲೆಯಲ್ಲೊಂದು ಆತಂಕವೂ ತಲೆಯೆತ್ತತೊಡಗಿತ್ತು. ಸುಭಾಷ್ಚಂದ್ರರು ಕಾಣೆಯಾದದ್ದು ಎಲ್ಲಿ? ಅವರು ಇಷ್ಟುದೂರ ಈ ಬಾಗಲಕೋಟೆಗೆ ಅಡವಿಯಲ್ಲಿ ತಿರುಗಾಡುತ್ತಾ ಬಂದಿರಲು ಸಾಧ್ಯವೇ?
ನಟಿ ಅಕ್ಷತಾ ಪಾಂಡವಪುರ ಬರೆದ ದಿನಚರಿಯ ಪುಟಗಳು
ನಾ ಮಲಗುವ ಕೋಣೆಯೊಳಗೆ ಒಂದೆರಡು ಗಂಟೆಗಳನ್ನು ತೂಗು ಹಾಕಿಕೊಂಡಿದ್ದೆ. ಗಂಟೆಗಳನ್ನು ಮೆಲುವಾಗಿ ಬಾರಿಸಿ ಕಣ್ಣು ಮುಚ್ಚಿ ಉಸಿರನ್ನು ಒಳ ಎಳೆದು ಮತ್ತೆ ಹೊರ ಬಿಟ್ಟು ತಕ್ಷಣಕ್ಕೆ ಸಮಾಧಾನ ಮಾಡಿಕೊಳ್ಳುತ್ತಿದ್ದೆ.
ಮಾರ್ಕ್ವೆಜ್ ಮಹಾಶಯನ ಪೇರಳೆಯ ಪರಿಮಳಗಳು
ಅಮೆರಿಕನ್ನರಂತು ಇದನ್ನು ಎಷ್ಟು ನಂಬುತ್ತಾರೆಂದರೆ, ಅಲ್ಲಿನ ಹೋಟೆಲ್ಲುಗಳಲ್ಲಿ ಮಹಡಿಯ ನಂಬರ್ ಗಳು ೧೨ರಿಂದ ೧೪ಕ್ಕೆ ಹೋಗುತ್ತದೆ. ಅದರೆ, ಅದು ನಿಜವಾಗಿ ಅದೃಷ್ಟ ಸಂಖ್ಯೆ ಎಂದು ನನ್ನ ಅನಿಸಿಕೆ. ಹಾಗೆಯೇ, ಕಪ್ಪು ಬೆಕ್ಕುಗಳು ಕೆಟ್ಟದ್ದನ್ನು ತರುತ್ತವೆ ಮತ್ತು ಏಣಿಗಳ ಕೆಳಗೆ ನಡೆಯಬಾರದು ಎನ್ನುವುದನ್ನೂ ನಾನು ನಂಬುವುದಿಲ್ಲ.
’‘ಆದರೆ ಹಾಗಂತ ನಾನು ಸಂತೃಪ್ತ ಲೇಖಕಿಯಲ್ಲ”:ವೀಣಾ ಶಾಂತೇಶ್ವರ
ಬಹಳ ಜನ ಕೇಳಿದರು, ನಿಮಗೆ ಎಲ್ಲಾ ಗಂಡಸರ ಮೇಲೆ ಇಷ್ಟೇಕೆ ಸಿಟ್ಟು ದ್ವೇಷ? ನಾನಂದೆ ಇಲ್ಲ, ಎಲ್ಲಾ ಗಂಡಸರ ಮೇಲೆ ದ್ವೇಷವಿಲ್ಲ, ಹೆಣ್ಣು ಮಕ್ಕಳ ಶೋಷಣೆ ಮಾಡುವಂಥ ಗಂಡಸರನ್ನು ಮಾತ್ರ ಟೀಕಿಸುತ್ತೇನೆ.









