ಉಗಾದಿಯ ಮೂರು ಚಿತ್ರಗಳು : ರಹಮತ್ ಬರಹ
ತರೀಕೆರೆಯ ಕೆರೆಕೋಡಿ ಪಕ್ಕದ ಒಂದು ಬೀದಿಯಲ್ಲಿ ನನ್ನ ಬಾಲ್ಯ ಕಳೆಯಿತು. ಅಲ್ಲಿ ತಮಿಳು ಬೆಸ್ತರು, ತೆಲುಗು ಮಾತಿನ ಈಡಿಗರು, ಬಡಗಿ ಕೆಲಸ ಮಾಡುವ ಆಚಾರಿಗಳು, ಕಮ್ಮಾರರು, ಮಂಡಕ್ಕಿ ಹುರಿಯುವ ಮರಾಠಿಗರು, ಬಿದಿರಬುಟ್ಟಿ ಮಾಡುವ ಮೇದಾರರು ಇದ್ದರು.
ಜಯಂತ ಕಾಯ್ಕಿಣಿಯವರ `ಸ್ವಪ್ನದೋಷ’ದ ಕುರಿತು ವಿವೇಕ ಶಾನಭಾಗ
ಮಾಲಕೀತನದ ದುರಾಸೆಯಿಂದಾಗಿ, ಗೊತ್ತಿರುವ ಚೌಕಟ್ಟುಗಳಲ್ಲಿ ಕೂರಿಸುವ ಹಟದಿಂದಾಗಿ ಹುಡಿಗೊಳ್ಳುವ ದಾಂಪತ್ಯ ಜಯಂತರ ಕತೆಗಳಲ್ಲಿ ಹಲವು ಬಾರಿ ಬಂದಿದೆ. ಒಂದು ಮದುವೆಯಿಂದ ತಪ್ಪಿಸಿಕೊಂಡು ಇನ್ನೊಂದು ಕನಸಿನಲ್ಲಿ ಸಿಕ್ಕಿಬಿದ್ದ ದಗಡೂ ಇದ್ದಾನೆ.
ಭಾರತ ಗಣತಂತ್ರ- ಯು.ಆರ್.ಎ ಹೇಳಿದ ಒಂದು ಕಥಾ ರೂಪಕ
ಒಂದು ಕಥಾ ರೂಪಕವಾಗಿ ನಮ್ಮ ಗಣರಾಜ್ಯದ ಮಹತ್ವವನ್ನು ವಿವರಿಸಲು ಬಯಸುತ್ತೇನೆ. ಕೆಲವು ತಿಂಗಳುಗಳ ಹಿಂದೆ ಡಾ. ಹಮೀದ್ ಅನ್ಸಾರಿಯವರು ಇನ್ನೂ ಉಪರಾಷ್ಟ್ರಪತಿಯಾಗುವ ಮೊದಲು ಬೆಂಗಳೂರಿಗೆ ಬಂದು ನನ್ನನ್ನು ನೋಡಲು ಬಯಸಿದ್ದರು. ಅವರೊಂದಿಗೆ ಪ್ರಸಿದ್ದ ಪತ್ರಕರ್ತ ದಿಲೀಪ್ ಪಡ್ಗಾಂವ್ಕರ್ ಇದ್ದರು. ನಾವು ಉಪಾಹಾರಕ್ಕೆಂದು ಒಂದು ಕಡೆ...
ವಸ್ತಾರೆ ವಿರಚಿತ ಅತಿಥಿ ಸಂಪಾದಕೀಯ
ಈ ಘಟನೆಯನ್ನು ಇಲ್ಲಿ- ಹೀಗೆ ಹಂಚಿಕೊಂಡಿದ್ದಕ್ಕೆ ಬಲವಾದ ಕಾರಣವೇನಿಲ್ಲ. ಯಾವತ್ತಿಗೂ ತಾನು, ತನ್ನದೊಂದಿಷ್ಟು ಉಸಾಬರಿ ಅಂತ ತನ್ನಷ್ಟಕ್ಕೆ ಇದ್ದುಬಿಡುವ ಈ ನನ್ನ ತಂಗಿಯನ್ನು ಯಾವ ವಿಚಾರವೂ ಕಾಡುವುದೇ ಇಲ್ಲವೇನೋ.
ನನ್ನ ಗುಲಾಬಿ,ಕಾಸರವಳ್ಳಿ ಟಾಕೀಸು:ವೈದೇಹಿ ಬರಹ
ಬದಲಾದ ಸಂದರ್ಭದಲ್ಲಿ ಸೂಲಗಿತ್ತಿ ಗುಲಾಬಿಯನ್ನು ಅನಾಮತ್ತಾಗಿ ಊರಿಂದ ಹೊರ ತಳ್ಳುತ್ತಾರೆ. ಅಂದಿನಂತೆ ಇಂದೂ ಅವಳ ವೃತ್ತಿಯೇ ಅವಳಿಗೆ ಮತ್ತೆ ಆತ್ಮವಿಶ್ವಾಸ ನೀಡಿ ಕುಸಿಯದಂತೆ ನೋಡಿಕೊಳ್ಳುತ್ತದೆ. ನನ್ನ ಲಿಲ್ಲೀಬಾಯಿ ಚಿತ್ರದಲ್ಲಿ ಗುಲಾಬಿಯಾಗಿದ್ದಾಳೆ.
ದೀವಳಿಗೆಯ ಹಿಂದಿನ ಇರುಳು ಸಂಗಣ್ಣ ಹೋದರು
ಬೆಳಿಗ್ಗೆ ಫೋನು ಕಿಣಿಕಿಣಿ ಎಂದು ‘ನಾನು ಅಶೋಕರೀ' ಎಂದಾಗ ಮಾಮೂಲಿನಂತೆ ‘ಹೊ. ತಂದೆ ಹೇಗಿದ್ದಾರೆ?' ಅಂತ ಕೇಳಿದೆ. ಆತ ಎಂದಿನಂತಾದರೆ ಅವರಿಗೆ ಕೊಡುತ್ತಾನೆ, ಅವರು ‘ದೀಪಾವಳಿ, ಎಲ್ಲ ಒಳಿತಾಗಲಿ ಅವ್ವಾ' ಅಂತ ಹರಸುತ್ತಾರೆ. ಮತ್ತೆ ನಮ್ಮ ಮಾತು ಮುಂದುವರಿಯುತ್ತದೆ. ಆದರೆ ಈಗ ಹಾಗಾಗಲಿಲ್ಲ. ಬದಲು ಸಿಕ್ಕ ಉತ್ತರ ‘ತಂದೆ ಹೋದರವ್ವಾ,...
ವಾಗ್ಮತೀ ತೀರದ ಸೂತಕ ಕಥೆಗಳು:ವೈದೇಹಿ ಬರಹ
ಕಾಶಿಯಲ್ಲಿ ಗಂಗೆಯಂತೆ ನೇಪಾಲದಲ್ಲಿ ವಾಗ್ಮತೀ ನದಿ. ನದಿಯ ಅಲ್ಲೇ ಆಚೆ ಸ್ಮಶಾನ. ಶಿವನೆಂಬವ ಸ್ಮಶಾನವಾಸಿಯಲ್ಲವೇ? ಅಲ್ಲಿ ಹೊಗೆ ಎದ್ದಾಗೆಲ್ಲ ಶಿವ ಸಂತುಷ್ಟನಾಗುತ್ತಾನೆ ಅಂತ ನಂಬಿಕೆ. ಕಾಶಿಯಷ್ಟು ಇಲ್ಲದಿದ್ದರೂ ದಿನಾ ಕನಿಷ್ಠ ಎರಡೋ ಮೂರೋ ಶವದಹನ ಆಗುತ್ತಲೇ ಇರುತ್ತದೆ ಅಲ್ಲಿ. ಅರ್ಚಕರು ಅದೇ ದಾರಿಯಾಗಿ ಹೋಗುತ್ತ ಬರುತ್ತ...
ಬ್ಯಾಂಕಾಕ್ನಲ್ಲೂ ಆಲೂ ಗೋಬಿ ಮತ್ತು ಖೀರು
ಒಳಗೆ ಕಾಲಿಟ್ಟರೆ ಹಿ೦ದಿ ಸಿನೆಮಾ ಸೆಟ್ ಒ೦ದರಲ್ಲಿ ಪ್ರವೇಶಿಸಿದ ಅನುಭವ. ಬಣ್ಣಬಣ್ಣದ ತೂಗುದೀಪಗಳ ಬೆಳಕಿನಲ್ಲಿ ಮಿರುಗುವ ತೆಳು ಪರದೆಗಳು.
ರಾಡಾ ಸೆಸಿಕ್ ಮತ್ತು ನಿರಾಶ್ರಿತರ ಹೊಟ್ಟೆಪಾಡಿನ ಕಥೆಗಳು
‘ಇದ್ದಕ್ಕಿದ್ದ೦ತೆ ಅಪ್ಪಳಿಸಿದ ಯುದ್ಧ ಜನರ ಬದುಕನ್ನು ಬುಡಮೇಲು ಮಾಡಿತ್ತು. ನಾನೊಬ್ಬ ಪೊಲಿಟಿಕಲ್ ರೆಫ್ಯೂಜಿಯಾಗಿ ದೇಶ ಬಿಡಲು ಕೆಲವು ಗ೦ಟೆಗಳ ಕಾಲ ನೀಡಲಾಯಿತು.'









