ನಾಲ್ಗೆ ಚಪ್ಲ ತೀರಿಸ್ತಿದ್ದ ತಿಂಡಿಗ್ಳು: ಸುಮಾ ಸತೀಶ್ ಸರಣಿ
ಹಬ್ದಾಗೆ ಒಬ್ಬಟ್ಟು ಮಾಡ್ದಾಗೆಲ್ಲಾ ಒಬ್ಬಟ್ಟಿನ್ ಸಾರೂ ಮಾಡ್ತಿದ್ರು. ಒಬ್ಬಟ್ ಎಂಗೆ ಪಿರೂತೀನೋ ಆ ಸಾರೂ ಆಟೇಯಾ. ಒಬ್ಬಟ್ಟು ಸೀಗಿರ್ತಿತ್ತಲ್ಲ, ಅದುಕ್ಕೆ ನಮ್ಮನ್ಯಾಗೆ ಎಲ್ರೂವೇ ಸಾರು ಹಾಕ್ಕಂಡು ತಿನ್ನಾರು. ನಂಗೇ ಮಾತ್ರ ಅದು ಹಿಡುಸ್ತಿರ್ಲಿಲ್ಲ. ನಾನು ಹಾಲೂ ತುಪ್ಪ ಹಾಕ್ಕಂಡೇ ತಿಂಬ್ತಿದ್ದೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಆಗಿನ ಕಾಲದ ತಿಂಡಿಗಳ ಕುರಿತ ಬರಹ ನಿಮ್ಮ ಓದಿಗೆ
ವಿಭಜನೆ, ಅಸ್ತಿತ್ವವಾದ ಮತ್ತು ಪೋಲಂಡ್: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಈಗಿನ ಕಾಲಘಟ್ಟದಲ್ಲಿ ಪೋಲಂಡ್‌ನ ಸಾಂಸ್ಕೃತಿಕ ಬಹುತ್ವ ಕ್ಷೀಣಿಸತೊಡಗಿದೆ. ನಗರಕೇಂದ್ರಿತವಾದ ಸಂಸ್ಕೃತಿಯೇ ಪ್ರಾಬಲ್ಯ ಮೆರೆಯುತ್ತಾ, ಎಲ್ಲರ ಜೀವನ ವಿಧಾನವನ್ನು ಅದೇ ಬಗೆಯಲ್ಲಿ ರೂಪಿಸತೊಡಗಿದೆ. ಪೋಲಂಡ್‌ನ ಆಧುನಿಕ ಮಾಧ್ಯಮಗಳೂ ಸಹ ಏಕರೂಪದ ಸಂಸ್ಕೃತಿಯೆಡೆಗೆ ಒತ್ತು ನೀಡುತ್ತಿವೆ. ಪೋಲಂಡ್‌ನ ಪರಂಪರೆಯನ್ನು ಸಂರಕ್ಷಿಸಬೇಕೆಂಬ ಮನೋಭಾವದ ಕೆಲವರು ಜಾನಪದ ಸಂಸ್ಕೃತಿಯಲ್ಲಿ ಕಂಡುಬರುವ ಧಾರ್ಮಿಕ ಸಂಗತಿಗಳ ಕಡೆಗೆ ಗಮನಹರಿಸುತ್ತಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಪೋಲಂಡ್ ದೇಶದ ಕುರಿತ ಬರಹ ನಿಮ್ಮ ಓದಿಗೆ
‘ಮೈಕ್ರೊಗ್ರಾಮ್’ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
“ಚಲಿಸುವ ಹಿಮದಂತೆ ಕಾಣುವ ಫ್ಲೆಮಿಂಗೊ ಪಕ್ಷಿಯ ಉತ್ಸಾಹ, ಕಳ್ಳಿಗಿಡದ ಸಸ್ಯಜನ್ಯ ಮಾನವದ್ವೇಷ, ಮರದಲ್ಲಿ ಕಂಬಳಿಹುಳಗಳು ನಡೆಸುವ ಗುಪ್ತಕಾರ್ಯ – ಇವೆಲ್ಲ ನನ್ನನ್ನು ಪಕ್ಷಿಗಳ ವರ್ಣಮಾಲೆಯನ್ನು ಅರ್ಥಮಾಡಿಕೊಳ್ಳಲು ಬ್ರಹ್ಮಾಂಡದ ಏಣಿಯ ಮೇಲೆ ಏರಲು ಕರೆದೊಯ್ದವು; ಇವು ಈ ಗ್ರಹದ ಆಧ್ಯಾತ್ಮಿಕ ಕ್ರಮವನ್ನು ಕಾಪಾಡುವ ಉಚ್ಛ ಸಂಕೇತಗಳಾಗಿವೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ಸಾದೃಶಾಭಾಸ ಪದಗಳೊಂದಿಗೆ ಸೆಣಸಾಟ: ಸುಮಾವೀಣಾ ಸರಣಿ
ಮಕ್ಕಳಿಗೆ ಕನ್ನಡ ಪುಸ್ತಕವನ್ನು ಓದುವುದೆಂದರೆ ಬಹಳ ತ್ರಾಸಿನ ಕೆಲಸ. ಕಾರ್ಟೂನನ್ನು ನೋಡಿದ ಗುಂಗಿನಲ್ಲಿ ಇದ್ದ ಮಗುವೊಂದು ಸಭಾಸದ ಎಂದೋದಲು ಸಬಾಸ್ಟಿಯನ್ ಎಂದು ಓದಿದ್ದು ನೆನಪಾಗುತ್ತದೆ. ಎಲೆ ಅಡಿಕೆ ಮೆಲ್ಲುತ್ತಿದ್ದ ಎಂದು ಓದಬೇಕಾದ್ದನ್ನು ಎಲೆ ಅಡಿಕೆ ಮೇಯುತ್ತಿದ್ದ ಎಂದರೆ ಆಭಾಸವೇ ತಾನೆ! ರಂಗ ನಾಯಕಿ > ಲಂಗನಾಯಕಿ, ಆಸ್ಥಾನದ ದಾಸಿ ಹಾಸನದ ಆಶ ಆಂದರೆ ರಕ್ಷಿಸ ಬೇಕು ಎನ್ನಲು ಹೋಗಿ ರಸ್ಕ್ ಬೇಕು ಎಂದರೆ ಎಲ್ಲಿಕೊಡಕ್ಕಾಗುತ್ತೆ?
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಏಳನೆಯ ಬರಹ
ಅಮೆರಿಕದಲ್ಲಿ ಭಾರತೀಯ ಮಕ್ಕಳು: ಗುರುಪ್ರಸಾದ ಕುರ್ತಕೋಟಿ ಸರಣಿ
ನನಗೆ ಆ ದೇಶದಲ್ಲಿ ಇರುವ ಇರಾದೆ ಇರಲಿಲ್ಲವಾದರೂ ಅಕಸ್ಮಾತ್ತಾಗಿ ಇರುವ ಪ್ರಸಂಗ ಬಂದುಬಿಟ್ಟರೆ ಎಂಬ ಭಯಕ್ಕೆ ಹಾಗೆ ಕೆಲ ವಿಷಯಗಳನ್ನು ಕೇಳಿ ಇಟ್ಟುಕೊಂಡಿದ್ದೆ! ಮುಂದೊಮ್ಮೆ ಅವರ ಮನೆಗೂ ನಮ್ಮನ್ನು ಊಟಕ್ಕೆ ಕರೆದಿದ್ದರು. ಆಗಲೂ ಕೂಡ ಅವರ ಮಗಳು ನಮ್ಮೆಲ್ಲರ ಜೊತೆಗೆ ಬೆರೆತು ಹರಟೆ ಹೊಡೆದಿದ್ದು ನಮಗೆ ತುಂಬಾ ಖುಷಿ ಕೊಟ್ಟಿತ್ತು. ನನ್ನ ಮಗಳೇನಾದರೂ ಅಮೆರಿಕೆಯಲ್ಲಿ ಬೆಳೆದರೆ ನಿಮ್ಮ ಮಗಳ ತರಹ ಬೆಳೆಯಬೇಕು ಎಂಬ ನನ್ನಆಸೆಯನ್ನು ಮುರಳಿ ಅವರ ಎದುರು ನಾನು ಹೇಳಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ
ಹಾಳು ಮೂಳು ಮತ್ತು ನಾವುಗಳು…: ಸುಮಾ ಸತೀಶ್ ಸರಣಿ
ಕಾರೆಕಾಯಿ ಬೆಂಕಿ ಪೆಟ್ಯಾಗಿಕ್ಕಿ ಸಣ್ಣ ಸಣ್ಣ ಕಲ್ಲು ಹಾಕಿ ಮುಚ್ಚಿಕ್ಕಿದ್ರೆ ಬಂಗಾರ್ದ ಬಣ್ಣ ಬತ್ತಿತ್ತು. ಬುಡುಮೆ ಕಾಯಿ ನೋಡಾಕೆ ತೊಂಡೆ ಹಣ್ಣಿನ್ ತರುಕ್ಕೇ ಇದ್ರೂ ವಸಿ ಬುಡ್ಡಕ್ಕೆ, ಹಸೂರ್ಗೆ ಇರ್ತಿತ್ತು. ತೊಂಡೆಹಣ್ಣು ಕಾಯಿ ಹಸೂರ್ಗೆ ಇದ್ರೂವೆ ಹಣ್ಣಾದ್ ಮ್ಯಾಕೆ ಕೆಂಪುಕ್ಕೆ ಹೊಳೀತಿತ್ತು. ಇಸ್ಕೂಲ್ ಮಗ್ಗುಲಾಗೆ ಒಂದು ಶರಬತ್ ಹಣ್ಣಿನ ಗಿಡ ಇತ್ತು. ಅದ್ರಾಗೆ ಹಣ್ಣು ಬಿಟ್ಟರೆ ಸಾಕೂಂತ ನೂರಾರು ಕಣ್ಣು ಕಾಯ್ತಿದ್ವು. ಸಿಕ್ಕಿದೋರ್ಗೆ ಸೀರುಂಡೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಬಾಲ್ಯಕಾಲದ “ಹಾಳೂ ಮೂಳು” ತಿನಿಸುಗಳ ಕುರಿತ ಬರಹ ನಿಮ್ಮ ಓದಿಗೆ
ಕೂರಾಪುರಾಣ ೧೦: ಬೆಳ್ಳಿ ಮೂಡಿತೋ ಕೋಳಿ ಕೂಗಿತೋ, ಫ್ರೆಂಡು ಊಳಿಟ್ಟಿತೋ..
ಪಾರ್ಕಿನಲ್ಲಿ ಹಲವಾರು ನಾಯಿಗಳು ಬಂದರು ಅವನು ಆಟವಾಡುವುದು ಕೆಲವೊಂದು ನಾಯಿಗಳ ಜೊತೆಗೆ ಮಾತ್ರ. ಶಾಲೆಯಲ್ಲಿ ನಡೆಯುವ ಹಾಗೆ ಇಲ್ಲಿಯೂ ಬುಲ್ಲಿ ಆಗುತ್ತದೆ. ಕೆಲವೊಂದು ಡಾಮಿನೇಟಿಂಗ್ ನಾಯಿಗಳಿರುತ್ತವೆ. ತಮ್ಮ ಮಟ್ಟದ ನಾಯಿಗಳ ಜೊತೆಗೆ ಮಾತ್ರ ಬೆರೆಯುವ ಇವು ಉಳಿದವುಗಳನ್ನ ತುಚ್ಛವಾಗಿ ನೋಡುತ್ತ ಕೆಲವೊಮ್ಮೆ ಗುಂಪು ಕಟ್ಟಿಕೊಂಡು ಅಟ್ಟಾಡಿಸುತ್ತವೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಹತ್ತನೆಯ ಕಂತು
ಸ್ಥಿತಿಪ್ರಜ್ಞೆಯ ಲಂಡನ್ ಮಹಾದೇವಯ್ಯನವರು: ರಂಜಾನ್ ದರ್ಗಾ ಸರಣಿ
ಹಳ್ಳಿಗರ ಅಭ್ಯುದಯಕ್ಕಾಗಿ ಅವರ ಮನಸ್ಸು ತುಡಿಯುತ್ತಲೇ ಇರುತ್ತದೆ. ವಿವಿಧ ಕ್ಷೇತ್ರತಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಲಂಡನ್‌ಗೆ ಕರೆಯಿಸಿಕೊಳ್ಳುವ ಅವರ ಆಸಕ್ತಿ ಅಗಾಧವಾದುದು. ಬಸವ ಪ್ರಣೀತ ಸ್ವಾಮಿಗಳನ್ನು, ವಚನ ಸಾಹಿತ್ಯ ಪರಿಣತರನ್ನು, ತಾವೇ ಮೂರೂವರೆ ದಶಕಗಳ ಹಿಂದೆ ಸ್ಥಾಪಿಸಿದ ಬಸವ ಅಂತರ‍್ರಾಷ್ಟ್ರೀಯ ಸಂಶೋಧನಾ ಕೇಂದ್ರಕ್ಕೆ ಆಹ್ವಾನಿಸಿ ಲಂಡನ್‌ನಲ್ಲಿ ಬಸವತತ್ತ್ವ ಪ್ರಸಾರ ಮಾಡುವ ಅವರ ಬಯಕೆ ಅದಮ್ಯವಾದುದು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಸೈನ್ ಹಾಕೋ ಫ್ರೆಂಡು…: ಎಚ್. ಗೋಪಾಲಕೃಷ್ಣ ಸರಣಿ
ಏನು ನೀನಿಲ್ಲಿ… ಅಂತ ಕೇಳಿದವರಿಗೆ ನನ್ನ ಹುಡುಕಾಟ ವಿವರಿಸಿ ವಿವರಿಸಿ ಬಾಯಿಪಾಠ ಆಗಿತ್ತು. ಬರೀ ಜಾಲಹಳ್ಳಿ ಅಂತ ಇದ್ದರೆ ಹುಡುಕೋದು ಅಸಾಧ್ಯ. ಆದರೂ ಇಂತ ಕಡೆ ಕೇಳು ಅಂತ ಅವರು ಸಿಕ್ಕಿದ ಜಾಗದಿಂದ ಒಂದು ಕಿಮೀ ದೂರ ಇರುವ ಮತ್ತೊಂದು ಜಾಗಕ್ಕೆ ಕಳಿಸಿ ಕೈ ತೊಳೆದವರು ಹೆಚ್ಚು. ಎಷ್ಟು ಉತ್ಸಾಹದಿಂದ ಬೆಳಿಗ್ಗೆ ಸೈಕಲ್ ಹತ್ತಿ ಹೊರಟಿದ್ದೆನೋ ಅಷ್ಟರ ನೂರು ಪಾಲು ಬೇಸರದಿಂದ ಮನೆಗೆ ವಾಪಸ್ ಆದೆ. ಅಣ್ಣನಿಗೆ ಈ ವಿಷಯ ವರದಿ ಮಾಡಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೇಳನೆಯ ಕಂತು ನಿಮ್ಮ ಓದಿಗೆ









