ವಿಷ್ಣು ಚಕ್ರ ಮಹಿಮೆ!: ಪೂರ್ಣೇಶ್ ಮತ್ತಾವರ ಸರಣಿ
ಪಾಪ, ನಮ್ಮ ಪ್ರೀತಿಯ ತಮ್ಮಂದಿರು ತಟ್ಟೆ ತಿರುಗಿಸುವ ಪ್ರಯತ್ನದಿಂದಿರಲಿ ಅಪ್ಪಿತಪ್ಪಿ ಕೈ ಜಾರಿ ತಟ್ಟೆ ಕೆಳಗೆ ಬೀಳಿಸಿಕೊಂಡರೂ ‘ಕಂಡಲ್ಲಿ ಗುಂಡು’ ಎಂಬಂತೆ ಒಡನೆಯೇ ಒಂದಿನಿತು ಯೋಚಿಸದೇ ಮನಸೋ ಇಚ್ಛೆ ಅವರಿಗೆ ಥಳಿಸಿ ನಮ್ಮ ಮೇಲಿನ ಕೋಪವನ್ನೆಲ್ಲಾ ತಣ್ಣಗಾಗಿಸಿಕೊಳ್ಳುತ್ತಿದ್ದರು. ಆದರೂ ಅವರ ಈ ಕೋಪ ಸಂಪೂರ್ಣವಾಗಿ ತಣ್ಣಗಾದಂತೆ ಕಾಣಲಿಲ್ಲ.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಆರನೆಯ ಬರಹ
ಚಿಕ್ಕರಾಮಪ್ಪ: ಸುಮಾ ಸತೀಶ್ ಸರಣಿ
ನಮ್ಮ ರಾಮಪ್ಪ ಊರ್ ಮಂದೀಗೆಲ್ಲಾ ಬೋ ಒಳ್ಳೆವ್ನೂಂತ ಹೆಸ್ರು ತಕಂಡಿದ್ದ. ಯಾರೂ ಶತ್ರುಗ್ಳೆ ಇರ್ಲಿಲ್ಲ. ಯಾರಿಗಾನಾ ಮನ್ಯಾಗೆ ಮದ್ವಿ ಮುಂಜೀ ಅಂದ್ರೆ ವಸಿ ಸ್ಯಾನೆ ನೀರು ಬಿಡೋದು, ನಲ್ಲಿ ತಾವ ಹೆಂಗುಸ್ರು, ನಾನ್ ಬಿಂದಿಗೆ ಮಡಗಿದ್ದೆ, ನಾನು ಮೊದ್ಲು ಅಂತ ಜಗ್ಳ ಪಗ್ಳ ತೆಗುದ್ರೋ ನಾಜೂಕಾಗಿ ಬಿಡುಸ್ತಿದ್ದ. ಯಾರ್ನೂ ರೇಗ್ದೇ, ಕ್ವಾಪಾ ಮಾಡ್ ಕಣ್ದೆ ಸಲೀಸಾಗಿ ತಮಾಸಿ ಮಾಡ್ಕಂಡು, ರೇಗುಸ್ಕಂಡು ಜೀವ ತಣ್ಣಗೆ ಮಾಡ್ತಿದ್ದ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಕರಾಮಪ್ಪ ಎಂಬುವವರ ಕುರಿತು ಬರಹ ನಿಮ್ಮ ಓದಿಗೆ
ನೇಪಾಳವೆಂಬ ಮತ್ತೊಂದು ಭಾರತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ನೇಪಾಳದ ಜನರು ಶ್ರಮಜೀವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪರ್ವತ ಪ್ರದೇಶಗಳನ್ನು ಅವರು ಏರುವ ಮತ್ತು ಇಳಿಯುವ ರೀತಿ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ. ಮೊದಮೊದಲು ಪರ್ವತಾರೋಹಣಕ್ಕೆ ಹೊರಟವರಿಗೆ ಖಾಲಿ ಕೈಯ್ಯಲ್ಲಿ ಪರ್ವತದ ತುದಿ ತಲುಪುವುದೇ ಅಬ್ಬಬ್ಬಾ ಎನಿಸಿಬಿಡುತ್ತದೆ. ಆದರೆ ನೇಪಾಳದವರು ತಮ್ಮ ಬೆನ್ನ ಮೇಲೆ ಭಾರವಾದ ಚೀಲಗಳನ್ನು ಇಲ್ಲವೇ ವಸ್ತುಗಳನ್ನು ಹೊತ್ತುಕೊಂಡು ಪರ್ವತವನ್ನು ಏರುತ್ತಾರೆ; ಇಳಿಯುತ್ತಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ನೇಪಾಳದ ಕುರಿತ ಬರಹ ನಿಮ್ಮ ಓದಿಗೆ
ಊರುಗಳ ಹೆಸರಿನ ಸುತ್ತ: ಸುಮಾವೀಣಾ ಸರಣಿ
ವಾರದ ಸಂತೆ ಆಗುವ ಅದೇ ದಿನದ ಹೆಸರುಗಳು ಊರುಗಳಾಗಿವೆ. ಸೋಮವಾರಪೇಟೆ, ಶನಿವಾರಸಂತೆ, ಶುಕ್ರವಾರಸಂತೆ ಇತ್ಯಾದಿಗಳು. ‘ಅಂಗ’ಡಿ ಎಂಬ ಹೆಸರನ್ನು ಕಡೆಯಲ್ಲಿ ಹೊಂದಿರುವ ಬೆಳ್ತಂಗಡಿ, ಉಪ್ಪಿನಂಗಡಿ, ಹಳೆಯಂಗಡಿ, ಹಟ್ಟಿಯಂಗಡಿ ಎಂಬ ಊರುಗಳಿವೆ. ‘ಅಂಗಡಿ’ ಎನ್ನುವ ಹೆಸರಿಗೂ ಹೊಯ್ಸಳ ಸಾಮ್ರಾಜ್ಯಕ್ಕೂ ಅವಿನಾಭಾವ ನಂಟು. ಇದಕ್ಕೂ ಅನನ್ಯ ಹೆಸರಿನ ಊರುಗಳಿವೆ. ರಸ್ತೆಯಲ್ಲಿರುವ ಪಾಲವನ್ನು ಸೇರಿಸಿಕೊಂಡು ಜೋಡುಪಾಲವೆಂದೂ ಕರೆಯುತ್ತಾರೆ. ‘ಪಾಲ’ ಅಂದರೆ ಸಂಕ /ಕಾಲುಸಂಕ ಅರ್ಥಾತ್ ಚಿಕ್ಕ ಸೇತುವೆ ಎಂದರ್ಥ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಆರನೆಯ ಬರಹ
“ಹೊಸ ಸರಳತೆ”ಯ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ
“ಆರಂಭದಲ್ಲಿ ನಾನು ಧ್ವನಿಯಿಂದ ವಿಶೇಷವಾಗಿ ಆಕರ್ಷಿತನಾಗಿದ್ದೆ, ಆದ್ದರಿಂದ ನನ್ನ ಆರಂಭಿಕ ಕವಿತೆಗಳು ಧ್ವನಿಗೆ ಹತ್ತಿರವಾಗಿದ್ದ ಮೂರ್ತ ಕವನಗಳಾಗಿದ್ದವು. ಈ ರೂಪದಲ್ಲಿ ನನಗೆ ಮುಖ್ಯವಾದ ವಿಷಯಗಳ ಬಗ್ಗೆ ಬರೆಯಲು ಸಾಧ್ಯವಿಲ್ಲ ಎಂದು ನಂತರ ನಾನು ಅರಿತುಕೊಂಡೆ. ನಿಧಾನವಾಗಿ ನನ್ನ ಶೈಲಿಯನ್ನು ಹೆಚ್ಚು ನಿರೂಪಣಾ ಕಾವ್ಯದ ಕಡೆಗೆ ಬದಲಾಯಿಸಿದೆ. ”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ಲೊವೀನಿಯಾ ದೇಶದ ಕವಿ ಪೀಟರ್ ಸೆಮೊಲಿಕ್-ರವರ (Peter Semolič) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಕಳೆದ ನೆನಪಿನ ಬಾನಿನ ಮೇಲಿನ ಮಿನುಗುವ ಭಾವಲೋಕ: ರಾಮ್ ಪ್ರಕಾಶ್ ರೈ ಕೆ ಸರಣಿ
ತಂಜಾವೂರಿನ ದೇವಸ್ಥಾನ. ಕಲ್ಲುಗಂಬಗಳು ಮನ ಮೋಹಕವಾಗಿ ಸಿಂಗರಿಸಿಕೊಂಡಿವೆ. ಶಿರವೆತ್ತಿ ನಗುವ ಗೋಪುರಗಳು, ಅನಂತ ಅಗಲದ ಅಂಗಣ, ಎಲ್ಲವೂ ಮಾಯೆಯೆನ್ನುವ ಗರ್ಭ ಗುಡಿಯಲ್ಲಿ ಕುಳಿತ ಆತ್ಮ. ಅಲ್ಲಿಯ ಜಗುಲಿಯ ಮೇಲೆ ಅಂಗಾತ ಆಗಸಾಭಿಮುಖವಾದ ಅರುಲ್ ಕಣ್ಣಲ್ಲಿ ನೀರು ಕದ ತೆರೆದು ಹೊರ ಪ್ರವಹಿಸಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಮೆಯ್ಯಳಗನ್’ ಸಿನಿಮಾದ ವಿಶ್ಲೇಷಣೆ
ದೀಪಾವಳಿ ನೋಪಿ ಮತ್ತು ಹಬ್ಬದ ಹೂರಣ: ಸುಮಾ ಸತೀಶ್ ಸರಣಿ
ದೀಪಾವಳಿ ಟೇಮ್ನಾಗೆ ಉಚ್ಚೆಳ್ಳು ಗಿಡಗಳಲ್ಲಿ ಅಚ್ಚ ಅರಿಶಿನ ಬಣ್ಣ ಹುಯ್ದಂಗೆ ಹುವ್ವ ತುಂಬಕಂತಿತ್ತು. ಅವು ದೀಪಾವಳಿ ಹಬ್ಬದಾಗೆ ಶ್ರೇಷ್ಠವಂತೆ. ಅವುನ್ನ ತಂದು ಹೊಸಿಲಿಗೆ ಇಟ್ಟು ದೀಪ ಮುಟ್ಟಿಸ್ತಿದ್ರು. ಎಲ್ಲಾ ಹೊಸಿಲಿಗೂ ದೀಪ ಮುಟ್ಟಿಸ್ಬೇಕು. ತುಳಸಿ ಗಿಡದ ಹತ್ರ, ದೀಪದ ಸಾಲು ಇಡ್ತಿದ್ರು. ಉಚ್ಚೆಳ್ಳು ಗಿಡ ಸಿಗ್ದೇ ಇದ್ದೋರು ತಂಗಡಿ ಗಿಡದ ಹುವ್ವ ತಂದು ಇಡ್ತಿದ್ರು. ಅದೂ ಹಳದೀ ಬಣ್ವೇಯಾ. ಸಣ್ಣ ಸಣ್ಣ ಹುವ್ವ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಹಬ್ಬಗಳ ಸಂಭ್ರಮಗಳ ವಿವರಗಳು ಇಲ್ಲಿದೆ
ಕೂರಾಪುರಾಣ ೯: ಕಾರು ಪ್ರಯಾಣವೆಂದರೆ ಮೇಲೇಳುತ್ತವೆ ಕಿವಿಗಳು..
ಕೂರಾ ಇಲ್ಲದಿದ್ದಾಗ ತರಕಾರಿ, ಕಿರಾಣಿ, ಮತ್ತಿತರೆ ಸಾಮಾನುಗಳನ್ನು ಹಿಂದಿನ ಸೀಟಿನಲ್ಲಿ ತುಂಬುತ್ತಿದ್ದ ನಾವು ಈಗ ಅವೆಲ್ಲವನ್ನು ಡಿಕ್ಕಿಯಲ್ಲಿ ಹೇರಿ ಅಲ್ಲಿ ಜಾಗ ಸಾಲದಾದರೆ ನಮ್ಮ ಕಾಲ ಬಳಿಯೇ ಇಟ್ಟುಕೊಂಡು ಇಕ್ಕಟ್ಟು ಮಾಡಿಕೊಳ್ಳುತ್ತೆವೆಯೇ ಹೊರತು ಹಿಂದೆ ಪವಡಿಸುವ ನಮ್ಮ ಮಹಾರಾಜರಿಗೆ ಒಂದಿನಿತು ಅಸೌಕರ್ಯ ಮಾಡುವುದಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಒಂಭತ್ತನೆಯ ಕಂತು
ಓದೋ ಜರ್ನಿಯಲಿ ಅಡ್ಡಿಯಾದ ಸಮಸ್ಯೆಗಳ ‘ಹಂಪ್ಸ್’ಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ
ಪಿಯುಸಿಯಲ್ಲಿ ಇದ್ದ 24 ವಿದ್ಯಾರ್ಥಿಗಳು ಅಷ್ಟೇನೂ ಸೀರಿಯಸ್ಸಾಗಿ ಓದುತ್ತಿರಲಿಲ್ಲ. ಇವರೊಡನೆ ನಾನು ಸೇರಿದ ಕಾರಣ ಹೇಸಿಗೆ ತಿನ್ನೋ ಎಮ್ಮೆ ಜೊತೆ ಆಕಳು ಸೇರಿ ಆಕಳೂ ಸಹ ಹೇಸಿಗೆ ತಿನ್ನೋದನ್ನ ಕಲೀತಂತೆ ಅನ್ನೋ ಹಾಗೆ ನಾನೂ ಸಹ ಓದುವುದನ್ನು ಕಮ್ಮಿ ಮಾಡಿದೆ. ನಾನು ತುಂಬಾ ಕ್ಲೋಸ್ ಆಗಿದ್ದು ಲಿಂಗರಾಜ ಹಾಗೂ ಸುಧಾಕರ ಜೊತೆ. ಲಿಂಗರಾಜ ನಮ್ಮದೇ ಕಾಲೇಜು ಆದರೆ ಸುಧಾಕರ ಮಾತ್ರ ಡಿಆರ್ ಎಂ ಕಾಲೇಜು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ









