ಹೂ ಪದರ

ಗುರುತ್ವ, ಗುರುತು ಮೀರಿ
ಇಳಿಯುವುದು
ಇಳಿಸಿಕೊಳ್ಳುವುದು
ಸಂಧಿಸಿದಾಗ
ಒಳಗಿಲ್ಲ
ಹೊರಗಿಲ್ಲ
ದಿಕ್ಕು ವಾಸ್ತವಕೆ
ಅವಾಸ್ತವದಲಿ ಇರದು ದಿಕ್ಕು
ಬೆಳಕಿನ ವೇಗ
ಕಾಲದ ಚಲನೆ
ತೀವ್ರದಲಿ
ಇರದು ಮೇರೆ ಅನುಭವಕೆ
ತಟಸ್ಥ ಭಾಷೆಗೆ ಭಾಷೆಯೇ
ಇಳಿಯುತ್ತಿದೆಯೋ ಎಳೆಯುತ್ತಿದೆಯೋ
ನುಡಿಯಲು
ಗತಿಸಿ ಸ್ಥಿತಿ
ಮಿಳಿತ
ಅಣು ಪ್ರವಾಹ
ಅದರಲ್ಲಿ ಇದು ಇದರಲ್ಲಿ ಅದು
ಅದರಲ್ಲಿ ಇದರಲ್ಲಿ ಅದು
ಇದರಲ್ಲಿ ಅದರಲ್ಲಿ ಇದು
ಹೂ ಪದರಿನ ಆಕಾಶದಲಿ