ಎಂಜಿ ರೋಡಿನಲ್ಲೊಂದು ಸುತ್ತು: ವಿನಾಯಕ ಅರಳಸುರಳಿ ಅಂಕಣ
ಅದೇನೂ ಭಾರೀ ದೊಡ್ಡ ಪಬ್ಬಲ್ಲದಿದ್ದರೂ ಅಲ್ಲಿ ವೈಭವಗಳಿಗೇನೂ ಕಮ್ಮಿಯಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಆ ಪಬ್ಬು ಮುಚ್ಚಲ್ಪಟ್ಟು, ಮುಂದೊಮ್ಮೆ ಆ ರಸ್ತೆಯಲ್ಲಿ ಹೋಗುವಾಗ ಮತ್ಯಾವುದೋ ಹೆಸರಿನ ಕಂಪನಿಯೊಂದು ಬೋರ್ಡು ತೊಟ್ಟುಕೊಂಡು ನಿಂತಿರುವುದು ಕಣ್ಣಿಗೆ ಬಿದ್ದಿತ್ತು. ಈ ಮಹಾನಗರಿಯ ಚಂಚಲತೆಯೇ ಅಂಥದ್ದು. ನೆನ್ನೆ ಹಳಕಲು-ಪೊದೆಗಳಿದ್ದ ಜಾಗದಲ್ಲಿ ಬೆಳಗಾಗುವಷ್ಟರಲ್ಲಿ ರಂಗ್ ಬಿರಂಗೀ ಕಟ್ಟವೊಂದು ತಲೆಯೆತ್ತಿಬಿಡುತ್ತದೆ. ಮನೆಯಂತೆ ಕಾಣುವ ಬಿಲ್ಡಿಂಗ್ ನೊಳಗೆ ನೂರಿನ್ನೂರು ಉದ್ಯೋಗಿಗಳಿರುವ ಕಂಪನಿಯೇ ಅಡಗಿಕೊಂಡಿರುತ್ತದೆ. ನೆನ್ನೆಯಷ್ಟೇ ಪ್ರಾರ್ಥನಾ ಮಂದಿರವಾಗಿದ್ದು, ಹತ್ತಾರು ಜನರ ಓಂಕಾರದಿಂದ ತುಂಬಿಹೋಗಿದ್ದ ಸಮುಚ್ಚಯವೊಂದು ನಾಳೆಯಾಗುವಷ್ಟರಲ್ಲಿ ಹತ್ತಾರು ಬಾಡಿಬಿಲ್ಡರ್‌ಗಳ ಕಸರತ್ತು ಶಾಲೆಯಾಗಿ ಬದಲಾಗಿಬಿಡುತ್ತದೆ!
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”
ಆಸ್ಟ್ರೇಲಿಯಾ-ಭಾರತೀಯರ ಕತೆಗಳ ಜುಗಲ್ ಬಂದಿ: ಡಾ. ವಿನತೆ ಶರ್ಮ ಅಂಕಣ
ಒಮ್ಮೊಮ್ಮೆ ಇಲ್ಲಿ ಬಂದು ಸಂದ ಮೇಲೆ ಅಲ್ಲಿನ ತವರಿಗೆ ಭೇಟಿ ಕೊಟ್ಟಾಗ ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋ ಎಡಬಿಡಂಗಿತನ ಧುತ್ತನೆ ಎದುರು ನಿಲ್ಲುತ್ತದೆ. ಆದರೆ ಆ ಎಡಬಿಡಂಗಿತನದಲ್ಲಿದೆ ಒಂದಷ್ಟು ನಗು, ಹರ್ಷ, ಉಲ್ಲಾಸ, ಪರಸ್ಪರತೆ, ಜೊತೆಯಾಗುವುದು. ಕುತೂಹಲ ಮೂಡಿಸುವುದು ಕಿರಿವಯಸ್ಸಿನ ಕತೆಗಾರರ ಅನುಭವ ಮೂಸೆಯಲ್ಲಿ ಪರಿಮೂಡುವ ಆಸ್ಟ್ರೇಲಿಯನ್-ಭಾರತೀಯತೆ ಕಲ್ಪನೆ ಮತ್ತು ಹೊಂದಾಣಿಕೆ. ಇವಷ್ಟೇ ಅಲ್ಲ. ಮಧ್ಯಮ ಮತ್ತು ಹಿರಿವಯಸ್ಸಿನ ಕತೆಗಾರರ ದನಿಯಲ್ಲಿ ಚಿತ್ರಿತವಾಗುವ ಹೊಸದೇಶ, ಅಪರಿಚಿತ ಸಮಾಜದ, ಅಲ್ಲಿನ ವ್ಯವಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನಗಳು, ಅವಲ್ಲಿರುವ ಸಾಹಸಗಳು, ಸೋಲು-ಗೆಲುವು, ಆಂತರಿಕ ಒಳನೋಟಗಳು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಕಮಲಾದಾಸ್, ಅನುವಾದ ಹಾಗೂ ಬರಹವೆಂಬ ಬಿಡುಗಡೆ….: ಡಾ. ಎಲ್.ಜಿ. ಮೀರಾ ಅಂಕಣ
ಆಧುನಿಕ ಭಾರತೀಯ ಸಾಹಿತ್ಯಚರಿತ್ರೆಯ ಲೇಖಕಿಯರ ಪಟ್ಟಿಯೆಂಬ ಆಕಾಶಗಂಗೆಯಲ್ಲಿ ಎದ್ದು ಕಾಣುವ ಒಂದು ವಿಭಿನ್ನ ನಕ್ಷತ್ರವೆಂದರೆ ಅದು ಕಮಲಾದಾಸ್. ಕೇರಳದ ಮಗಳಾದ ಈ ಹೆಣ್ಣುಮಗಳು ಲೋಕವನ್ನು ಕುರಿತ ತನ್ನ ಸೂಕ್ಷ್ಮ ಗ್ರಹಿಕೆಯಿಂದ ಬೇರೆ ಲೇಖಕ, ಲೇಖಕಿಯರು ಹೋಗಲು ಹೆದರುವ ಭಾವಲೋಕಗಳಿಗೆ ದಿಟ್ಟವಾಗಿ ಕಾಲಿಟ್ಟರು. ಪ್ರೀತಿ, ಮದುವೆ, ಜೀವನ, ಸಂಬಂಧಗಳು ಇವೆಲ್ಲವನ್ನೂ ಪುರುಷ ಪ್ರಧಾನ ಜಗತ್ತಿನಲ್ಲಿ ಹುಟ್ಟಿದ್ದರೂ ಅದರ ಬಂಗಾರದ ಸರಪಳಿಗಳಲ್ಲಿ ಬಂಧಿಯಾಗಲೊಪ್ಪದ ಧೈರ್ಯದ ಹೆಣ್ಣಿನ ಕಣ್ಣಿಂದ ನೋಡಿದರು, ಬರೆದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೊಂಭತ್ತನೆಯ ಬರಹ
ಊರು ಕೇರಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಒಮ್ಮೊಮ್ಮೆ ಈ ನೆಲದ ಋಣದ ಕುರಿತು ಯೋಚಿಸುತ್ತೇನೆ. ಅಷ್ಟು ಗಾಢವಾದ ಋಣವೇ ಅದು? ಎಲ್ಲಿದ್ದರೂ ಊರಿನತ್ತ ಕೈಬೀಸಿ ಕರೆಯುವ ಮೋಹನ ಮುರಳಿಯ ಸೆಳೆತ ನಿಜವಾಗಿಯೂ ತೀವ್ರವಾದದ್ದೇ ಹೌದು. ಅದಲ್ಲದಿದ್ದರೆ ಹೋಗುವ ಯಾವುದೇ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ಮನೆಗೆ ಹೋಗ್ಬೇಕು, ನನ್ನನ್ನು ಊರಿಗೆ ಬಿಟ್ಟು ಬಾ ಅಂತ ಮತ್ತೆ ಮತ್ತೆ ಅಪ್ಪ ಹೇಳುತ್ತಿರಲಿಲ್ಲ. ನನಗಂತೂ ಬಾಲ್ಯಕ್ಕೆ ಜಿಗಿಯಬೇಕು ಅಂತ ಅನ್ನಿಸಿದ ಕೂಡಲೇ ನನ್ನೆಲ್ಲಾ ಕೆಲಸವನ್ನು ಬಿಟ್ಟು ಇಲ್ಲಿಗೆ ಬಂಡುಬಿಡುವುದು ಇತ್ತೀಚಿನ ನನ್ನಿಷ್ಟದ ಕೆಲಸಗಳಲ್ಲಿ ಒಂದಾಗಿ ಹೋಗಿದೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”
ಬಿಡುಗಣ್ಣಿನ ಎರಡು ಬಿಡಿನೋಟಗಳು: ಸುಕನ್ಯಾ ಕನಾರಳ್ಳಿ ಅಂಕಣ
ಉತ್ಪಾದನೆ ಯಾರು ಮಾಡ್ತಾರೋ ಅವರಿಗೆ ಅದರ ಮೇಲೆ ಅಧಿಕಾರ ಇರಬೇಕು ಅಂತ ಒಪ್ಪಿಕೊಂಡಿರೋ ವ್ಯವಸ್ಥೆ ಒಳಗೇ ಇದ್ದುಕೊಂಡು ತಾನು ಹೊತ್ತು, ಹೆತ್ತು, ಬೆಳೆಸಿದ ಮಕ್ಕಳ ಅಧಿಕಾರವನ್ನ ವ್ಯವಸ್ಥೆಗೆ ಬಿಟ್ಟುಕೊಡಬೇಕಾದ ಅಸಹಾಯಕತೆಯಲ್ಲಿಯೂ ಸಹ ಹೆಣ್ಣು ಬದುಕಿ ಉಳಿತಾಳೆ. ವ್ಯವಸ್ಥೆ ತಮ್ಮ ತಮ್ಮ ಹುಚ್ಚಾಟಗಳಿಗೆ ಆ ಮಕ್ಕಳನ್ನ ಯುದ್ಧಕ್ಕೆ ಕಳುಹಿಸಿ ಅವಳ ಕಣ್ಣೆದುರೇ ಅವು ಹೊಸಕಿ ಹೋದರೂ ಸಹ ಮತ್ತೆ ಮತ್ತೆ ಯಾವುದೋ ನಂಬಿಕೆಯಲ್ಲಿ ಮಕ್ಕಳನ್ನ ಹುಟ್ಟಿಸಿ ಬೆಳೆಸುತ್ತಲೇ ಹೋಗುತ್ತಾಳಲ್ಲ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಮಕ್ಕಳನ್ನು ಹೇಗೆ ಬೆಳೆಸೋದು!: ಜಯಲಕ್ಷ್ಮಿ ಪಾಟೀಲ್ ಅಂಕಣ
ಮಕ್ಕಳನ್ನು ಮಕ್ಕಳಂತೇ ಬೆಳೆಸೋಣ. ನಮಗೆ ತೋಚಿದಷ್ಟು, ಅಥವಾ ಅವರ ಮುಗ್ಧತೆಗೆ ಧಕ್ಕೆ ಬಾರದಷ್ಟು ಉತ್ತರಿಸಲು ಸಾಧ್ಯವಾದಲ್ಲಿ ಉತ್ತರಿಸಬೇಕು. ನನ್ನ ಬಲವಾದ ವಿರೋಧವಿರೋದು ಬಾಲ್ಯದಲ್ಲಿಯೇ ವ್ಯಕ್ತಿ ಸ್ವಾತಂತ್ರ್ಯದ, ಪ್ರಗತಿಯ ಹೆಸರಲ್ಲಿ ಮಕ್ಕಳ ಮುಗ್ಧತೆಯನ್ನು ಕಸಿಯುವುದರ ಬಗ್ಗೆ. ಮಕ್ಕಳು ಬೆಳೆದಂತೆ ಅವರೊಂದಿಗಿನ ನಮ್ಮ ವರ್ತನೆಯೂ ಅದೇ ಹದದಲ್ಲಿ ಬದಲಾಗುತ್ತಾ ಹೋಗುತ್ತದೆ. ನನ್ನ ಮಕ್ಕಳು ಚಿಕ್ಕವರಿದ್ದಾಗ ಅವರ ಎಲ್ಲ ಪ್ರಶ್ನೆಗಳಿಗೆ ನಾನು ಅಥವಾ ನಾವಿಬ್ಬರೂ ಉತ್ತರಿಸಿಲ್ಲ. ಕೇಳಿದ್ದೆಲ್ಲವನ್ನೂ ಅವರಪ್ಪ ತೆಗೆಸಿಕೊಡಲು ಮುಂದಾಗುತ್ತಾರೆ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಐದನೆಯ ಬರಹ
ಸಂತಾಲಿ ಕವಿಯ ಸ್ತ್ರೀ ಸಂವೇದಿ ಕಾವ್ಯ: ಸುಕನ್ಯಾ ಕನಾರಳ್ಳಿ ಅಂಕಣ
ಇಲ್ಲಿ ನಾನು-ನೀನು ಅಂದರೆ ಸಮುದಾಯ ಉಳಿಯಬೇಕು, ಅವರಿಂದ ಅಂದರೆ ಹೊರಗಿನವರಿಂದ ನನ್ನನ್ನು ಕಾಪಾಡು ಎಂಬ ಬೇಡಿಕೆ ಇದೆ. ನಿನ್ನಿಂದ ಅಂದರೆ ದೌರ್ಜನ್ಯದ ಮೂಲವಾದ ಕುಟುಂಬ ಎಂಬ ವ್ಯವಸ್ಥೆಯಲ್ಲಿರುವ ಲಿಂಗ ತಾರತಮ್ಯದಿಂದ ತನ್ನನ್ನು ಕಾಪಾಡಿಕೊಳ್ಳಬೇಕು ಎನ್ನುವ ಆಗ್ರಹವಿಲ್ಲ. ಇದು ನನ್ನ ಗ್ರಹಿಕೆಗೆ ದಕ್ಕುವ ರೀತಿಯಲ್ಲಿ ಕಾಡನ್ನು ನಂಬಿದ, ಕೃಷಿಯ ಮೇಲೆಯೇ ಬದುಕುತ್ತಿರುವ ಸಮುದಾಯಕ್ಕೆ ಕುಟುಂಬ ಹೇಗಾದರೂ ಬದುಕಿ ಉಳಿಯಬೇಕು ಎನ್ನುವ ನೆಲೆಯಿಂದ ಹೊಮ್ಮಿದ ಒಂದು ಸತ್ಯ. ಕೃಷಿ ಕೆಲಸಕ್ಕೆಂದೇ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಕೃಷಿಕ ಕುಟುಂಬಕ್ಕೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಉಪದೇಶ ಮಾಡುವುದು ಅಧಿಕಪ್ರಸಂಗತನ ತಾನೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..: ವಿನಾಯಕ ಅರಳಸುರಳಿ ಅಂಕಣ
ಕೆಲವೊಮ್ಮೆ ಅಚಾನಕ್ಕಾಗಿ ಬೆಂಗಳೂರಿನ ಮೇಲೆ ಪ್ರೀತಿಯುಕ್ಕುತ್ತದೆ. ಈ ಶಹರ ನಮಗೆ ಬದಕು ಕೊಟ್ಟಿದೆ, ಇದಿನ್ನು ನಮ್ಮ ಊರು, ನಾನಿನ್ನು ಇಲ್ಲಿಯವನು ಎಂದು ನಂಬಲು ಪ್ರಯತ್ನಿಸುತ್ತೇವೆ. ಆಗಲೇ ನಾವು ಪ್ರತಿದಿನ ವ್ಯವಹರಿಸುವ ಅಂಗಡಿಯವನು ಇದ್ದಕ್ಕಿದ್ದಂತೆ ಹತ್ತು ರೂಪಾಯಿಗಾಗಿ ಬಿರುಮಾತಾಡುತ್ತಾನೆ. ವರ್ಷದಿಂದ ಪಕ್ಕದ ಮನೆಯಲ್ಲೇ ವಾಸವಿರುವ ಹೆಂಗಸು ಯಕಶ್ಚಿತ್ ನ್ಯಾಲೆಯ ಮೇಲಿನ ಬಟ್ಟೆ ತೆಗೆದಿಲ್ಲವೆಂಬ ಕಾರಣಕ್ಕೆ ಜಗಳಕ್ಕೆ ನಿಲ್ಲುತ್ತಾಳೆ. ಹೆಗಲ ಮೇಲೆ ಕೈ ಹಾಕಿಕೊಂಡು ಜೊತೆಗೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಮಿತ್ರ ಆಫೀಸು ಬದಲಿಸಿದ ಮರುಕ್ಷಣ ಕರೆ ಸ್ವೀಕರಿಸದೇ, ಮೆಸೇಜೂ ಮಾಡದೇ ಮಾಯವಾಗಿಬಿಡುತ್ತಾನೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”
ಒಗ್ಗಟ್ಟು, ಒಡಕುಗಳ ವಿಚಲತೆ: ಡಾ. ವಿನತೆ ಶರ್ಮ ಬರೆಯುವ ಅಂಕಣ
ಆಂಗ್ಲೋ-ಆಸ್ಟ್ರೇಲಿಯನ್ ಅಂದರೆ ಬಿಳಿ-ವಸಾಹತುಶಾಹಿ-ಸೆಟ್ಟ್ಲರ್ ಸಮಾಜಕ್ಕೆ ಸೇರಿದ ಪೌಲಿನ್ ಹ್ಯಾನ್ಸನ್ ತನ್ನನ್ನು ಕಟ್ಟಾ ಆಸ್ಟ್ರೇಲಿಯನ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ಬ್ರಿಟಿಷರು ಹುಟ್ಟುಹಾಕಿದ ಬಿಳಿ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದಲ್ಲಿ ಬದುಕುತ್ತಿರುವವರು ಕಡ್ಡಾಯವಾಗಿ ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಅಂದರೆ ಬಿಳಿಯರ ಸಂಸ್ಕೃತಿಯನ್ನು ಪಾಲಿಸಬೇಕು, ಇಲ್ಲವಾದರೆ ದೇಶ ತೊರೆದು ಹೋಗಬೇಕು, ಎನ್ನುತ್ತಾರೆ. ಹಿಂದೊಮ್ಮೆ ಇಲ್ಲಿನ ಮೂಲನಿವಾಸಿಗಳು ಆಸ್ಟ್ರೇಲಿಯನ್ನರಲ್ಲ ಎಂದು, ನಂತರ ಏಷ್ಯನ್ನರಿಗೆ ಈ ದೇಶದಲ್ಲಿ ಪ್ರವೇಶ ಇಲ್ಲ ಎಂದು ಹೇಳಿ ಎಲ್ಲರ ಗಮನ ಸೆಳೆದಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ









