`‘ನಮ್ಮ ಮನೆಯವರು ಬಚ್ಚಲದಾಗ ಗುಳಗಿ ತೊಗೊತಾರ’’
ಮುಂದ ಒಂದ ವಾರ ಅನ್ನೊದರಾಗ ಅಕಿ ತವರಮನಿ ಕಡೆ ಎಲ್ಲಾ ಸುದ್ದಿ ಹಬ್ಬಿ ಬಿಟ್ಟಿತ್ತ. ‘ಅವ್ವಕ್ಕನ ಗಂಡಗ ಗುಳಗಿ ನುಂಗಲಿಕ್ಕೆ ಬರಂಗಿಲ್ಲಾ, ಅಂವಾ ಬಚ್ಚಲದಾಗ ಗುಳಗಿ ತೊಗೊತಾನ’ ಅಂತ. ಅಲ್ಲಾ ಅದ ನನ್ನ ಹೆಂಡ್ತಿ ಕಿತಬಿ ಬಿಡ್ರಿ, ಅಕಿ ಎಲ್ಲಾರ ಮುಂದು ‘ನಮ್ಮ ಮನೆಯವರು ಬಚ್ಚಲದಾಗ ಗುಳಗಿ ತೊಗೊತಾರ’ ಅಂತ ಡಂಗರಾ ಹೊಡದ ಬಿಟ್ಟಿದ್ಲು.
ಉಗಾದಿಯ ನೆನೆಯುತ್ತ:ತರೀಕೆರೆ ಅಂಕಣ
ನಮ್ಮ ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿಯಲ್ಲಿ ಆಡಿಬಂದಂತಿರುವ ಮಗುವಿನಂತಹ ಅಂಜೂರದ ಗಿಡವನ್ನೂ ನೋಡುತ್ತಿರುವಂತೆ, ಯಾಕೊ ಈ ಸಲದ ಉಗಾದಿ ನನ್ನಲ್ಲಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ.
ಹಕ್ಕಿಯ ಹಿಕ್ಕೆ ಮತ್ತು ಆರ್ಕಿಟೆಕ್ಚರ್:ವಸ್ತಾರೆ ಪಟ್ಟಣ ಪುರಾಣ
ಛೇಂಬರಿನಲ್ಲಿ ಕ್ಲಯಂದೇವರು ತಮ್ಮೆಲ್ಲ ವಂದಿಮಾಗಧರ ಜತೆ ವಿರಾಜಿಸುತ್ತಿದ್ದರು. ಅವರೆದುರಿನ ಮಾತೆಲ್ಲ ಬರೇ ಹಕ್ಕಿಗಳ ಬಗ್ಗೆಯೇ ಜರುಗಿದ್ದವು. ಇನ್ನೇನು ಕಾದಿದೆಯೋ ಅಂತ ಅನುಮಾನಿಸುತ್ತಲೇ ಎದುರು ಕೂತಾಗ ಈ ಪ್ರಶ್ನೆ!
ಸಾಹಿತ್ಯವೇ ದುಃಖಕ್ಕೆ ಮೂಲವೆಂದ ಶ್ರೀರಾಮ್:ತಿರುಮಲೇಶ್ ಅಂಕಣ
ಇಂಥ ಅನೇಕ ನಿರೀಕ್ಷೆಗಳಲ್ಲಿ ಶ್ರೀರಾಮ್ ಕತೆಗಳು ಏನು ಮಾಡುತ್ತವೆ ಎನ್ನುವುದನ್ನು ಓದುಗರೇ ಹೇಳಬೇಕು. ಕೆ. ವಿ. ತಿರುಮಲೇಶ್ ಅಂಕಣ
ಡಾಕ್ಟರ್ ರಾಜೇಂದ್ರ ಬರೆದ ಮನೋಬೇನೆಯೊಂದರ ನೈಜಕಥೆ
ಈಕೆಯ ನೋವು-ಗೋಳುಗಳ ನಿರಂತರ ಪ್ರವಾಹದಲ್ಲಿ ನಾನು ಮುಳುಗೇ ಹೋಗುತ್ತೇನೆ. ಸಾಕು ಇಷ್ಟಕ್ಕೇ ನಿಲ್ಲಿಸಿಬಿಡಬಾರದೇ? ಊಹೂಂ… ಮುಂದುವರಿಯುತ್ತಲೇ ಇದೆ. ಒಂದೊಂದು ರೋಗಲಕ್ಷಣವನ್ನೂ ಚ್ಯೂಯಿಂಗಮ್ಮಂತೆ ಅಗಿಯುತ್ತಾ, ಹಿಗ್ಗುತ್ತಾ, ಅನುಭವಿಸುತ್ತಾ… ನನ್ನ ಬೆನ್ನು ಹುರಿಯಲ್ಲೊಂದು ಸಣ್ಣ ನಡುಕ ಶುರುವಾಗಿದೆ.
ಸಿಂಗರ್ ಮೆಶಿನ್ ಮೀನಾಕ್ಷಮ್ಮ:ವೈದೇಹಿ ಅಂಕಣ
ಮೀನಾಕ್ಷಮ್ಮ ಬಿಳಿಸೀರೆಯುಟ್ಟು ಕೆಳಗೆ ನೆಲದಲ್ಲಿ ಮಣೆಯ ಮೇಲೆ ಕುಳಿತು ಓದಲು ಸುರುಮಾಡಿದರೆಂದರೆ ಎಲ್ಲರೂ. ಕತೆ ಕೇಳುತ್ತ ಅವರವರ ಸಮಯ ಆಗುತ್ತಲೂ ಎದ್ದು ಹೋಗುವರು.
ಫ್ರೂಟ್ ಮಾರ್ಕೆಟ್ಟಿನ ಅಮೀರುನ್ನೀಸಾ:ದಯಾನಂದ ಬರೆದ ರಸ್ತೆನಕ್ಷತ್ರ
ಇಂದೂ ಮುಸ್ಲಿಂ ಗಲಾಟೆಗಳಾಗ್ತವೆ. ನಿಂಗೇನಾದ್ರೂ ಏಟು ಬೀಳ್ತವೆ, ಒಂದೆರಡು ದಿನ ಎಲ್ಲಾದ್ರೂ ಹೋಗು ಅಂತಂದ್ರು. ನಾನು ಇಲ್ಲೇ ಪಕ್ಕದಲ್ಲಿ ಮುರುಗಮಲ್ಲ ದೇವಸ್ಥಾನ ಅಂತ ಐತಲ್ಲ ಅಲ್ಲಿ ಬುರ್ಖಾ ಬದಲು ಸೀರೆ ಉಟ್ಟಿಕೊಂಡು ಒಂದೈದು ದಿನ ಇದ್ದೆ
ಅನುಪಮಾ ಬರೆದ ಡಾಕ್ಟರ ಡೈರಿಯ ಪುಟಗಳು
ಕವಯಿತ್ರಿ ಅನುಪಮಾ ಉತ್ತರ ಕನ್ನಡದ ಕವಲಕ್ಕಿಯಲ್ಲಿ ಬಡವರ ಡಾಕ್ಟರ್. ಅವರ ದಿನಚರಿಯ ಕೆಲವು ಪುಟಗಳು ಇಲ್ಲಿವೆ.
ಯಾಕೋ ಚಿಕೋರಿ ಹೆಚ್ಚೇ ಆಯಿತು:ವಿಕ್ರಂ ಬರೆಯುವ ಕಾಫಿ ಬಾರ್
ತಿಂಡಿ-ದೋಸೆ ಎಷ್ಟೇ ರುಚಿಯಿದ್ದರೂ ಕಾಫಿ ಕಲಗಚ್ಚಿನ ಹಾಗಿದ್ದರೆ ಹೋಟೆಲಿನ `ಸ್ಟಾಂಡರ್ಡ್ ಮೈಂಟೇನ್`ಮಾಡಿಲ್ಲವೆಂದೇ ಪ್ರಚಾರವಾಗಿಬಿಡುತ್ತೆ. ಬರೀ ಕಾಫಿ ಪುಡಿ ಇದ್ದರೆ ಸಾಲದು.









