ಇ.ಆರ್. ರಾಮಚಂದ್ರನ್ ಹೊಸ ಅಂಕಣ “ಕ್ರಿಕೆಟಾಯ ನಮಃ” ಇಂದಿನಿಂದ ಶುರು
‘ನೋಡಿ. ಇಂಗ್ಲೆಂಡಿನಲ್ಲೂ ಇದೆ ಪ್ರಾಬ್ಲಮ್ ಆಗಿತ್ತು. ಅದಕ್ಕೆ ಅಲ್ಲಿ ಸೋತರು. ನನಗೆ ಒಂದು ಐಡಿಯಾ ಹೊಳೆದಿದೆ. ರಾಣಿ ಎಲಿಜಬೆತ್ ಕಾಲವಾದಮೇಲೆ ಬಕಿಂಗ್ಹ್ಯಾಮ್ ಪ್ಯಾಲೇಸ್ ಅರ್ದಕ್ಕರ್ಧ ಖಾಲಿ ಇರುತ್ತೆ. ಮುಂದಿನ ಟೂರ್ನಲ್ಲಿ ನಮ್ಮ ಪ್ಲೇಯರ್ಸ್ ಅಲ್ಲಿ ತಂಗಿದರೆ ಸೇಫ್ ಮತ್ತು ಕಿರಿಕಿರಿ- ಫ್ರಿ. ಅಲ್ಲಿ ಕರೀಪ್ಯಾಂಟು ಕೆಂಪು ಕೋಟು ಮತ್ತು ಮೂತಿ ಮುಚ್ಚಿತೋ ಅನ್ನುವ ಹಾಗೆ ಕರಿ ಟೋಪಿ ಹಾಕಿರುವ ‘ರಾಯಲ್ ಗಾರ್ಡ್ಸ್’ ನ ಸೆಕ್ಯುರಿಟಿಗೆ ಹಾಕಬಹುದು.
ಆಂಗ್ಲ ಭಾಷೆಯ ಹಿರಿಯ ಕ್ರಕೆಟ್ ಅಂಕಣಕಾರ ಇ. ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಲಘು ಬರಹಗಳ ಅಂಕಣ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ…
ಕೃಷಿಯ ಖುಷಿ ಬಲ್ಲವರೇ ಬಲ್ಲರು…
ಬೆಂಗಳೂರಿನಲ್ಲಿ ಇನ್ನೂ ಕೆಲಸದಲ್ಲಿದ್ದ ಅವರಿಗೆ ಕೃಷಿಯ ಹುಚ್ಚು. ಅವರಿಗೆ ಮನೆಯಲ್ಲಿ ಹೊಲ ಇದ್ದರೂ ಕೂಡ ಮಾಡಲಾಗದ ಪರಿಸ್ಥಿತಿ. ಅವರ ತಂದೆ ಹೊಲ ಮಾಡಲು ಕೊಡುತ್ತಿರಲಿಲ್ಲ. ಬೆಂಗಳೂರಿನಲ್ಲಿ ಆರಾಮಾಗಿ ಇರು, ನಮ್ಮ ಹಾಗೆ ಯಾಕೆ ಕಷ್ಟ ಪಡುತ್ತೀಯ ಎಂಬುದು ಒಂದು ಕಾರಣವಾದರೆ, ಅವರಿಗೆ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದರು ಅನ್ನುವುದು ಇನ್ನೊಂದು ಬಲವಾದ ಕಾರಣ! ಕೃಷಿಕ ಅಂತ ಗೊತ್ತಾದರೆ ಅವರ ಮದುವೆ ಆಗಲು ಸಾಧ್ಯವೇ ಇರಲಿಲ್ಲ! ಅರೆ ಯಕಶ್ಚಿತ ಒಬ್ಬ ರೈತನನ್ನು ಮದುವೆಯಾಗಲು ಹುಡುಗಿಯರಿಗೇನು ಹುಚ್ಚೆ?!
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ
ಹಾಯ್ ಅಂಗೋಲಾ!
ಅಂಗೋಲಾದ ಜನರ ಬಗ್ಗೆ ಹೇಳುವುದು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವುದು, ಅಲ್ಲಿನ ಊಟ ತಿಂಡಿ ಬಗ್ಗೆ ಹೇಳುವುದು ಇದೆಲ್ಲಾ ಸಹಜ. ನಿರೂಪಣೆ ಅದ್ಭುತವಾಗಿದೆ, ಹೊಸ ವಿಷಯ ತಿಳಿಯುತ್ತದೆ ಎಲ್ಲಾ ನಿಜವೇ. ಆದರೆ ಅತ್ಯಂತ ವಿಶಿಷ್ಟವಾದ ಅಧ್ಯಾಯವಿದೆ. ಮೊದಲ ಬಾರಿ ಓದಿದಾಗ ಬಹಳ ವಿಚಿತ್ರ ಅನ್ನಿಸಿತ್ತು. ಒಂದು ಕ್ಷೌರ ಮಾಡಿಸಿಕೊಳ್ಳಲು ಮುನ್ನೂರು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದ ಪ್ರಸಾದರ ಅವಸ್ಥೆ ಬಗ್ಗೆ ಕೇಳಿದಾಗ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ಆಫ್ರಿಕನ್ನರ ಕೂದಲ ರೀತಿಗೂ ಭಾರತೀಯರ ಕೂದಲ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಿರುವ ಸಂಗತಿ.
ಗಿರಿಧರ್ ಗುಂಜಗೋಡು ಬರೆಯುವ ಓದುವ ಸುಖ ಅಂಕಣ
ಆವರ್ತನ…
ಏನೇನೋ ಅನ್ನುವಂಥದ್ದು ನಾನು ಮಾಡಲಿಲ್ಲ. ನಾನೂ ಕೂಡ ಏನೇನೋ ಆಗಲಿಲ್ಲ. ಕಡಿಮೆ ಭ್ರಷ್ಟ ಅನಿಸಿಕೊಳ್ಳಲಿಕ್ಕೆ ಮೇಷ್ಟ್ರಾದೆ. ಮಕ್ಕಳಿಗೆ ಕವಿತೆ ಹೇಳಿಕೊಟ್ಟೆ. ಆದರೆ ಯಾಕೋ ನನ್ನ ಕೈಯಲ್ಲಿ ಬರೆಯಲಾಗಲೇ ಇಲ್ಲ. ನಿತ್ಯದ ಯಾಂತ್ರಿಕತೆ ನುಂಗಿಕೊಂಡುಬಿಟ್ಟಿತು. ನನಗೆ ಗೊತ್ತು. ಈ ಸುದೀರ್ಘ ಸ್ವಗತಗಳನ್ನು ಬರೆಯುವುದರ ಭಯವೆಂದರೆ ಓದುಗ ಒಂದು ಹಂತದ ನಂತರ ಕತೆಗಾರನ ಪ್ರಾಮಾಣಿಕತೆಯನ್ನು ಅನುಮಾನಿಸತೊಡಗುತ್ತಾನೆ. ನಿಜ. ಪ್ರಾಮಾಣಿಕತೆಯನ್ನು ಒಪ್ಪಿಸಲು ನಮ್ಮ ಬಳಿಯಿರುವ ಪರಿಮಾಣಗಳಾದರೂ ಏನು? ಆಣೆ ಹಾಕಬಹುದು. ನಂಬಿ ಎಂದು ಕೈ ಜೋಡಿಸಬಹುದು.
ದಾದಾಪೀರ್ ಜೈಮನ್ ಬರೆಯುವ ಜಂಕ್ಷನ್ ಪಾಯಿಂಟ್ ಅಂಕಣ
ವಸತಿ ಸಮಸ್ಯೆ, ರಾಜಕೀಯ ಪ್ರಶ್ನೆಗಳ ಕಥೆಗಳು
ಆಸ್ಟ್ರೇಲಿಯಾದಲ್ಲಿ ಕೋವಿಡ್-೧೯ ನಂತರದ ಪರಿಸ್ಥಿತಿ ಸುಧಾರಿಸಿದೆ, ಜನರ ಹರಿದಾಟ ಸುಗಮವಾಗಿದೆ. ಆದರೆ ಧುತ್ತೆಂದು ದೇಶದಾದ್ಯಂತ, ಅದರಲ್ಲೂ ನಮ್ಮ ರಾಣಿರಾಜ್ಯದಲ್ಲಿ ಇನ್ನೂ ನಿಚ್ಚಳವಾಗಿ, ವಸತಿ ಸಮಸ್ಯೆ ಎನ್ನುವುದು ಹೊಸದಾಗಿ ತಲೆದೋರಿದೆ. ಪ್ರಪಂಚದ ಬೇರೆಬೇರೆ ಭಾಗಗಳಿಂದ ದೇಶದೊಳಕ್ಕೆ ಬರುತ್ತಿರುವವರ ಮತ್ತು ಅಂತರಾಜ್ಯ ವಲಸೆಗಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಕೇಂದ್ರ ಸರಕಾರವು ಇತ್ತೀಚೆಗೆ ಹೆಚ್ಚು ಸಂಖ್ಯೆಯ ವಿದ್ಯಾರ್ಥಿ ಮತ್ತು ಉದ್ಯೋಗ ವೀಸಾಗಳನ್ನು ಕೊಡುತ್ತ ಉತ್ತೇಜನಕಾರಿಯಾಗಿದೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ಅಂತಃಕರಣದ ಹಣತೆ ಬೆಳಗುವ ಸಮಯ
ಮಕ್ಕಳು ಈಗಲ್ಲದೆ ಮತ್ಯಾವಾಗ ತಂಟೆ ಮಾಡಬೇಕು? ಇನ್ನೆಂದು ಮನಸೋ ಇಚ್ಚೆ ತಿಂದು ಕುಡಿದು ಖುಷಿಪಡಬೇಕು? ಎಂದು ಅಪ್ಪನಿಗೆ ಎದುರಾಡುತ್ತಿದ್ದ ಅವಳಿಗೆ ನಮ್ಮ ಬಾಲ್ಯ ಅವಳ ಬಾಲ್ಯದ ಕಿಟಕಿಯಾಗಿತ್ತು. ಮಕ್ಕಳನ್ನು ಓದಿಸುವ, ಬೆಳೆಸುವ, ಜವಾಬ್ದಾರಿಯಲ್ಲಿ ಮುಳುಗಿಹೋದ ಆಕೆ ಬಿಡುವು ಮಾಡಿಕೊಂಡು ಹೊಲಿಯುತ್ತಿದ್ದ ಬಟ್ಟೆ, ಹಾಕುತ್ತಿದ್ದ ರಂಗೋಲಿ, ಕಸೂತಿ, ಓದುತ್ತಿದ್ದ ಪುಸ್ತಕಗಳು ದಿನಕಳೆದಂತೆ ಕಡಿಮೆಯಾಯಿತು. ಸ್ವಂತಕ್ಕೆ ಸಮಯ ಕೊಟ್ಟುಕೊಳ್ಳಲಾಗದ ಸಾದಾ ಗೃಹಿಣಿಯಾಗಿ ಹಲವು ಕಾಲ ಕಳೆದಳು.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ
ಉದ್ದೇಶಪೂರ್ವಕವಲ್ಲದ ಒಂದು ಮಾತು ಕೊಲ್ಲಬಹುದು
ನಮ್ಮಲ್ಲಿನ್ನೂ ಮಾನವೀಯ ಸಂಬಂಧಗಳಿಗೆ ಬಹಳಷ್ಟು ಮೌಲ್ಯವಿದೆ, ಅರ್ಥವಿದೆ. ಯಾವುದೋ ಒಂದು ಅಪನಂಬಿಕೆ, ತಪ್ಪುಕಲ್ಪನೆ, ಅಪಾರ್ಥ ಎಲ್ಲವನ್ನು ಮುರಿದು ಹಾಕಬಾರದು. ಸಂಬಂಧಗಳೇನು ಪಟಕ್ಕನೇ ಕತ್ತರಿಸುವಷ್ಟು ತೆಳುವಾಗಿರುತ್ತವೆಯೇ? ತಾಳ್ಮೆಯಿಂದ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಯುದ್ಧಗಳೆ ನಿಂತಿರುವ ಉದಾಹರಣೆಗಳು ಕಣ್ಣಮುಂದಿವೆ. ಸಣ್ಣ ಪುಟ್ಟ ತಪ್ಪುಗಳಿಗೆ, ಜಗಳಗಳಿಗೆ, ಮುನಿಸುಗಳಿಗೆ ಮತ್ಯಾವುದೋ ಉದ್ದೇಶಪೂರ್ವಕವಲ್ಲದ ಮಾತಿಗೆ ಸಂಬಂಧಗಳು ಮುರಿದು ಬೀಳುತ್ತವೆ ಎಂದರೆ ಸಂಬಂಧಗಳಿಗೆ ಬೆಲೆ ಏನು?
ಇಸ್ಮಾಯಿಲ್ ತಳಕಲ್ ಅಂಕಣ
“ಜೀವಾಮೃತ” ಘಳಿಗೆ ಬಂದೇಬಿಟ್ಟಿತು…
ಶಂಭುಲಿಂಗ ಮಾವನ ಮನೆಯಲ್ಲಿ ಎರಡು ಹಸುಗಳಿದ್ದವು; ಆದರೆ ಅವು ನಾಟಿ ಆಗಿರಲಿಲ್ಲ. ಹೀಗಾಗಿ ನಾಟಿ ಹಸುಗಳ ಹುಡುಕಾಟ ಶುರು ಆಯ್ತು. ಮಲೆನಾಡು ಗಿಡ್ಡ ಎಂಬ ತಳಿ ಅಲ್ಲಿನ ನಾಟಿ ಹಸು. ಹಳ್ಳಿಯಲ್ಲಿ ಎಲ್ಲೋ ಒಂದು ಕಡೆ ಸಿಕ್ಕೆ ಸಿಗುತ್ತದೆ ಅಂದುಕೊಂಡಿದ್ದ ನನಗೆ ಹುಡುಕಿದ ಕಡೆಯೆಲ್ಲ ಅವುಗಳನ್ನು ಕಾಣದೆ ಭ್ರಮನಿರಸನವಾಯ್ತು. ವಿಚಿತ್ರ ಅಂದರೆ ಈಗ ಬೆಂಗಳೂರಿನಲ್ಲೇ ಬೇಕಾದಷ್ಟು ನಾಟಿ ಹಸುಗಳ ಹಾಲಿನ ಡೈರಿಗಳು ಇವೆ, ಆದರೆ ಹಳ್ಳಿಯಲ್ಲಿ ತುಂಬಾ ಅಪರೂಪ. ಇದೊಂದು ದುರಂತ ಅಂತ ನನಗೆ ಅನಿಸಿತು.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣ
ಪೇಟೇಸರದಲ್ಲಿ ನೋಡಿದ ಯಕ್ಷಗಾನ ಬಯಲಾಟದ ಸುತ್ತಮುತ್ತ
ಮಂಡಕ್ಕಿ ಅಂಗಡಿ ಇಡುವವರು ನಮ್ಮ ಚರ್ಚೆಯಲ್ಲಿ ಭಾಗವಹಿಸಿದರು, ಆದರೆ ಅವರು ಫೋಟೊ ತೆಗೆಯೋದು ಬೇಡ ಅಂದರು. ಮುಂಚೆ ಬಳೆ ವ್ಯಾಪಾರ ಮಾಡುತ್ತಿದ್ದರು. ಯಕ್ಷಗಾನವು ಇಷ್ಟ ಆಗುವುದರಿಂದ ಮಂಡಕ್ಕಿ ವ್ಯಾಪಾರ ಮಾಡುತ್ತಾರೆ. ಟೆಂಟ್ ಮೇಳದಲ್ಲಿ ಬರಿ ಭಾಗವತಿಕೆ ಕೇಳೋಕಾಗತ್ತೆ. ಭಾಗವತಿಕೆನೆ ಮುಖ್ಯ ಅವರ ಪ್ರಕಾರ. ‘ಯಕ್ಷಗಾನ ನೋಡಿದ ಹಾಗೂ ಆತು, ಗಂಜಿಗೆ ಕಾಸು ಆತು’, ಅದಕ್ಕೆ ಮಂಡಕ್ಕಿ ವ್ಯಾಪಾರ ಶುರುಮಾಡಿದೆ ಅಂದರು. ಇಲ್ಲಿಯ ಎಲ್ಲಾ ಕಲಾವಿದರೂ ಯಾವ ಪಾತ್ರವನ್ನಾದರೂ ಪದ್ಯ ನೋಡಿಕೊಂಡು ಮಾಡಬಲ್ಲವರಾಗಿದ್ದರು.
ಕೃತಿ ಪುರಪ್ಪೇಮನೆ ಬರಹ










