ಬ್ಯಾಗಡಿ ಕವರಲ್ಲಿ ಮಡಸಿಟ್ಟಿದ್ದ ಸೀರೆಗಳಂತ ಕನಸು
ಕಟ್ರಗುಳ್ಳಿ ಕಲ್ಲು ಎಂದು ಯಮುನಿಯ ಬಾಯಲ್ಲಿ ನಾಮಕರಣ ಮಾಡಿಸಿಕೊಂಡಿದ್ದ ಟಾರು ರೋಡಿನ ಒತ್ತುವ ಹರಳುಗಳನ್ನು ಬರಿಗಾಲಲ್ಲಿ ತುಳಿಯುತ್ತ ಅಜ್ಜಿ ಮೊಮ್ಮಗಳಿಬ್ಬರು ಬಟ್ಟೆಯಂಗಡಿಗೆ ಕಾಲಿಟ್ಟರು. ಕಸಬರಿಗೆಯಲ್ಲಿ ಕಸವಡೆದು ಬಯಲುಸೀಮೆಯ ಮಳೆಯ ಕಂತ್ರಾಟ ಗೊತ್ತಿದ್ದ ಅಂಗಡಿಯ ಹುಡುಗ ಯಾವುದಕ್ಕೂ ಇರಲಿ ಎಂದು ಅಂಗಡಿ ಮುಂದಿನ ಬಯಲಿಗೆ ನಾಲ್ಕು ಚೊಂಬು ನೀರುಗ್ಗುವ ಶಾಸ್ತ್ರ ಮಾಡುತ್ತಿದ್ದ. ಶೇಟಿ ಲಕ್ಷ್ಮಿ ಫೋಟೋಗೆ ಊದಿನಕಡ್ಡಿ ಬೆಳಗಿ ಕೈಮುಗಿಯುವ ತರಾತುರಿಯಲ್ಲಿದ್ದವನು ಇವರನ್ನು ನೋಡಿ ಐದು ಮಿನಟ್ ಕೂತ್ಗಳ್ರಿ ಎಂದು ತನ್ನ ಪೂಜಾ ಸಿದ್ಧತೆಯನ್ನು ಮುಂದುವರೆಸಿದ. ಇವರು ಬೇರೆ ಆಯ್ಕೆಯೇ ಇಲ್ಲದಂತೆ ಕಾಯುತ್ತ ನಿಂತರು.
ದಾದಾಪೀರ್ ಜೈಮನ್ ಬರೆಯುವ “ಜಂಕ್ಷನ್ ಪಾಯಿಂಟ್” ಅಂಕಣ
ಬೆಳಕು ಬಣ್ಣದ ಭ್ರಮಾಲೋಕ ರಿವರ್ ಫೈರ್
ಬ್ರಿಸ್ಬೇನ್ ಫೆಸ್ಟಿವಲ್ ಎನ್ನುವ ಆನಂದದ ಲೋಕದಲ್ಲಿ ಈ ಬಾರಿ ಉತ್ಸಾಹ ಒಂದು ತೂಕ ಹೆಚ್ಚೇ. ಕಳೆದೆರಡು ವರ್ಷಗಳಲ್ಲಿ ನಡೆಯದ ಉತ್ಸವ ಈ ಬಾರಿ ಹೆಚ್ಚು ರಂಗಿನಿಂದ ನಡೆಯುತ್ತಿದೆ. ಕಳೆದದ್ದನ್ನ ಗಿಟ್ಟಿಸಿಕೊಳ್ಳಲು ಹಬ್ಬದ ತಯಾರಿ ಜೋರಾಗೆ ನಡೆದಿದೆಯೆಂದು ಟಿವಿ ವಾಹಿನಿಗಳು ಬಿತ್ತರಿಸುತ್ತಿವೆ. ಈ ಫೆಸ್ಟಿವಲ್ ನಡೆಯುವ ಮೂರು ವಾರಗಳ ಕಾಲದಲ್ಲಿ ಬರಹಗಾರರ ಶಿಬಿರ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನ, ಕಲೆಗಳ ಪ್ರದರ್ಶನ, ಸೌತ್ ಬ್ಯಾಂಕಿನಲ್ಲಿ ಆಹಾರ ಮೇಳ ಇನ್ನೂ ಹಲವಾರು ವೈವಿಧ್ಯತೆಗಳುಳ್ಳ ಕಾರ್ಯಕ್ರಮಗಳಿರುತ್ತವೆ.ಇವೆಲ್ಲಕ್ಕೂ ಕಳಶವಿಡುವಂತೆ ಇಂದು ಉದ್ಘಾಟನೆಯ ಶನಿವಾರದಂದು ರಾತ್ರಿ River Fire ನಡೆಯುತ್ತದೆ. ಬ್ರಿಸ್ಬೇನ್ ನದಿಯು ಪಟಾಕಿಗಳ ಬಣ್ಣಗಳನ್ನು ಪ್ರತಿಫಲಿಸುವ ಖುಷಿಯಲ್ಲಿ ಹರಿಯುತ್ತಿದೆ. ಈ ಬಾರಿಯ ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮ ಸಡಗರದ ಸುದ್ದಿಯನ್ನು ಬರೆದಿದ್ದಾರೆ.
ನಿಂತಲ್ಲಿ ಕುಂತಲ್ಲಿ ಕಾಡುವ ಕಥೆ ಬರೆದ ದಾದಾ
ಇಲ್ಲಿರುವ ಎಲ್ಲಾ ಕತೆಗಳಿಗಿಂತ ಕೊನೆಯ ಕತೆ ‘ಎಲ್ಲೋ ಯಲ್ಲೋ’
ಕಥೆಯೇ ಯಾಕೆ ಜಾಸ್ತಿ ಇಷ್ಟವಾಯಿತು ಅಂದುಕೊಂಡರೂ ಯಾವುದ್ಯಾವುದೋ ಕಾರಣಗಳು ತೋಚುತ್ತವೆ. ಆದರೆ ಮುಖ್ಯವಾಗಿ ಇಷ್ಟವಾಗಿದ್ದು ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರಬಹುದಾದ ಸಹಜವಾದ ಗೆಳೆತನದ ರೀತಿ ಮತ್ತು ಒಬ್ಬಳು ಶಿಕ್ಷಕಿಯ ಗಂಡನಾಗಿ ಅವರ ಕಷ್ಟನಷ್ಟಗಳ ಬಗ್ಗೆ ಅರಿವಿರುವುದು. ಹೇಗೆ ಹುಡುಗ ಹುಡುಗ ಆತ್ಮೀಯ ಗೆಳೆಯರಾಗಿರಲು ಸಾಧ್ಯವೋ ಅದೇ ರೀತಿ ಹುಡುಗ ಹುಡುಗಿ ಕೂಡಾ ಅದೇ ಆತ್ಮೀಯತೆಯಲ್ಲಿರಲು ಸಾಧ್ಯ. ಸಮಾಜ ಈ ವಿಷಯದಲ್ಲಿ ಮುಂಚಿನಷ್ಟು ಮಡಿವಂತಿಕೆ ಇಟ್ಟುಕೊಂಡಿಲ್ಲವಾದರೂ ಪೂರ್ತಿ ಬದಲಾಗಿಯೂ ಇಲ್ಲ.
ಗಿರಿಧರ್ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ
ನಾಗಶ್ರೀ ಅಜಯ್ ಹೊಸ ಅಂಕಣ ಲೋಕ ಏಕಾಂತ ಆರಂಭ
ಮನೆ, ನೆಂಟರಿಷ್ಟರು, ಎಫ್ ಬಿ ಯಲ್ಲಿ ಸಾವಿರಾರು ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಪರಿಚಿತರ ಸಂಖ್ಯೆ ಹೆಚ್ಚಿರಬಹುದು. ಆದರೆ ನಮ್ಮ ಅಂತರಂಗದ ಪಿಸುಮಾತಿಗೆ ಕಿವಿಯಾಗುವವರು, ದುರ್ಬಲ ಘಳಿಗೆಯಲ್ಲಿ ಹೆಗಲಾಗುವವರು, ನೀನೇನೇ ಆಡಿದರೂ, ಮೌನವಾಗುಳಿದರೂ ಅರ್ಥಮಾಡಿಕೊಳ್ಳಬಲ್ಲೆ ಎನ್ನುವವರು ಎಷ್ಟು ಜನರಿಗಿದ್ದಾರೆ ಹೇಳಿ? ಅವರಿವರ ಮಾತು ಬಿಡಿ. ಮೊಬೈಲ್ ಬಂದ ಮೇಲಂತೂ ನಮಗೆ ನಾವು ದೊರಕುವುದೂ ಅಪರೂಪವೇ.ಯಾವುದೋ ಪುಟವೊಂದರಲ್ಲಿ ಮುಳುಗಿ ಹೋಗಿರುತ್ತೇವೆ. -ಹೀಗೆ ಬದುಕಿನ ಮಾಮೂಲಿ ಕ್ಷಣಗಳ ನಡುವೆ ನುಸುಳಿಕೊಂಡಿರುವ ಸೂಕ್ಷ್ಮಗಳನ್ನು ಗುರುತಿಸಿ ಬರೆದಿದ್ದಾರೆ ಎಸ್. ನಾಗಶ್ರೀ ಅಜಯ್.
ಇಸ್ಮಾಯಿಲ್ ಬರೆಯುವ ತಳಕಲ್ ಡೈರಿಯ ಮೊದಲ ಪುಟ
ಮಂಗಳೇಶಪ್ಪನವರ ಶ್ರೀಮತಿಯವರಾಗಿದ್ದ ದೇವಮ್ಮ ನಿಜಕ್ಕೂ ದೇವತೆಯಂತವರು. ತಮಗಿದ್ದ ನಾಲ್ಕು ಜನ ಮಕ್ಕಳ ಹಾಗೆ ನಾವು ನಾಲ್ಕು ಜನರನ್ನೂ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆಯೇ ಎರಡು ವರ್ಷ ಜತನ ಮಾಡಿದವರು. ಅವರ ತಾಯಿಗರಳು ನಮ್ಮೆಡೆಗೆ ಸದಾ ಮಿಡಿಯುತ್ತಿತ್ತು. ಡಿ.ಇಡಿ ಓದಿದ ಆ ಎರಡೂ ವರ್ಷ ನಮ್ಮ ಊರು, ನಮ್ಮ ತಂದೆ ತಾಯಿ ಯಾರೂ ಅಂದರೆ ಯಾರೂ ನೆನಪಾಗದಂತೆ ನಮ್ಮ ಮೇಲೆ ಪ್ರೀತಿ ತೋರಿಸಿದ್ದೇಕೆಂದು ಈವರೆಗೂ ತಿಳಿದಿಲ್ಲ. ಯಾಕೆಂದರೆ ಆ ಊರಿನಲ್ಲಿ ಇವರ ಕುಟುಂಬವೆಂದರೆ ಒಂದು ಘನತೆ ಮತ್ತು ಗಾಂಭಿರ್ಯವಿತ್ತು. ನಮಗೆ ತಮ್ಮ ಎದೆಯಲ್ಲಿ ವಿಶೇಷ ಜಾಗ ಕೊಟ್ಟಿದ್ದು ನಮ್ಮ ಅದೃಷ್ಟವೆಂದೆ ಹೇಳಬೇಕು. ಮನುಷ್ಯ ಪ್ರೀತಿಯ ಸುಂದರ ಕ್ಷಣಗಳನ್ನು ಸೆರೆಹಿಡಿದು ಬರೆಯುವ ಇಸ್ಮಾಯಿಲ್ ತಳಕಲ್ ಅವರ ಹೊಸ ಅಂಕಣ ತಳಕಲ್ ಡೈರಿ
ತೇರು, ಅಲಾಯಿ ದೇವರು ಮತ್ತು ಚವಂಗಿ ಕಲ್ಲು
ರಂಜಾನ್ ಹಬ್ಬದ ದಿನ ಅಮ್ಮ ನನ್ನನ್ನು ಬೆಳಿಗ್ಗೆಯೇ ಎಬ್ಬಿಸಿ ಗುಡಿಸಲಿನ ನೆರಕೆಯ ಪುಟ್ಟ ಬಚ್ಚಲಲ್ಲಿ ಎಂಟಾಣೆ ಕ್ಲಿನಿಕ್ ಪ್ಲಸ್ ಶಾಂಪೂ ಎಂಬ ಲಕ್ಷುರಿ ಬೆರೆಸಿ ಸ್ನಾನ ಮಾಡಿಸಿ, ಸಕ್ಕರೆ ರೇಟು ಜಾಸ್ತಿ ಎಂದು ಬೆಲ್ಲ ಹಾಕಿದ ಶಾವಿಗೆ ಖೀರು ಮಾಡಿ ಒಂದು ಪುಟ್ಟ ಟಿಫನ್ ಕ್ಯಾರಿಯರಲ್ಲಿ ಇಡೀ ಓಣಿಗೆಲ್ಲಾ ತುಂಬಿಕೊಡುತ್ತಿದ್ದಳು. ಚಿಕನ್ ಕೊಳ್ಳಲು ದುಡ್ಡಿಲ್ಲದೆ ಇದ್ದರೂ ಆಲೂಗಡ್ಡೆ ಸಾರನ್ನೇ ಮಾಡಿ ಅದನ್ನೇ ಚಿಕನ್ ಎಂದು ಅಮ್ಮ ನೂರಿ ನಂಬಿಸಬಲ್ಲವಳಾಗಿದ್ದಳು. ನಮ್ಮ ಓಣಿಯ ಛಲವಾದಿಗಳಾಗಿದ್ದ ರೂಪ, ರೇಖಿ, ಪರುಸ, ಕೆಂಚತ್ತಿ, ಸುಶೀಲತ್ತಿ, ಹಾಲಪ್ಪ ಮಾಮ ಎಲ್ಲರೂ ಶಾವಿಗೆ ಖೀರಿಗಾಗಿ ಕಾಯುತ್ತಿದ್ದರು.
ದಾದಾಪೀರ್ ಜೈಮನ್ ಬರೆಯುವ ಜಂಕ್ಷನ್ ಪಾಯಿಂಟ್ ಅಂಕಣ
ಜಗತ್ತಿನಾದ್ಯಂತ ಹರಡಿಕೊಂಡ ಗಾಂಧೀಜಿಯ ಅವಿನಾಶೀ ಆತ್ಮ
“ಅದ್ಯಾಕೆ ಗಾಂಧಿಯನ್ನು ಮಾತ್ರ ನೆಲದಲ್ಲಿ ನಿಲ್ಲಿಸಿದ್ದೀರ?” ಎಂದು ಕೇಳಲು ಬಾಯಿ ತೆರೆದೆ. ಆತನೇ ಹೇಳಿ ಬಿಟ್ಟ “ಅಲ್ಲಿ ನೋಡಿ ಗಾಂಧಿ ಮತ್ತು ಮಂಡೇಲಾ ಇಬ್ಬರು ಬರೀ ನೆಲದ ಮೇಲಿದ್ದಾರೆ. ಈ ಜಗತ್ತು ಕಂಡ ಅತ್ಯಂತ ಸರಳ ಜೀವಿಗಳು. ಅಬ್ಬರ, ಆಡಂಬರದಿಂದ ದೂರವೇ ಉಳಿದ ಇವರಿಬ್ಬರು ಎಲ್ಲರಿಗಿಂತ ಎತ್ತರದಲ್ಲಿ ನಿಲ್ಲಲು ಎಂದೂ ಬಯಸರು, ಆ ಕಾರಣಕ್ಕಾಗಿಯೇ ಹೀಗೆ ನಿಲ್ಲಿಸಲಾಗಿದೆ”. ಆತನ ಮಾತನ್ನು ಕೇಳಿ ದೇವರನ್ನೂ ವೈಭವದಲ್ಲಿ ಸ್ಥಾವರಗೊಳಿಸುವ ನನ್ನ ಅಲ್ಪಮತಿಯ ತಲೆಯ ಮೇಲೊಂದು ಮೊಟಕಿಕೊಂಡು ಮುಂದ್ಮುಂದೆ ನಡೆದೆ. ʼಕಂಡಷ್ಟೂ ಪ್ರಪಂಚʼ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ
ಓದಿ ತಿಳಿ ಗಿಡವ ನೆಟ್ಟು ಕಲಿ
ಮಣ್ಣು ನಿರ್ಜೀವ ವಸ್ತು ಅಲ್ಲ ಅದು ಜೀವಂತ! ಅದರಲ್ಲಿ ಎಷ್ಟೋ ಕ್ರಿಮಿ ಕೀಟಗಳು, ಶಿಲೀಂದ್ರಗಳು, ಬಹುಮುಖ್ಯವಾಗಿ ಎರೆ ಹುಳುಗಳು ಇವೆಲ್ಲ ಇರಲೇಬೇಕು, ಅವುಗಳನ್ನು ಹೇಗೆ ಹೆಚ್ಚಿಸಬೇಕು, ಮಣ್ಣಿಗೆ ಹೊದಿಕೆ ಹೇಗೆ ಮಾಡಬೇಕು, ಸಸ್ಯಗಳನ್ನು ಸಹಜವಾಗಿ ಹೇಗೆ ಪೋಷಿಸಬೇಕು ಎಂಬೆಲ್ಲ ಹೊಸ ಹೊಸ ವಿಷಯಗಳ ಅರಿವು ನನಗೆ ಈ ಮಹಾನುಭಾವರು ಬರೆದ ಪುಸ್ತಕಗಳ ಮೂಲಕ ತಿಳಿದಿತ್ತು. ಇನ್ನೂ ಹಲವಾರು ಟಿಪ್ಪಣಿ ಮಾಡಿಟ್ಟುಕೊಂಡ ನನ್ನ ಹೊತ್ತಿಗೆಗಳು ಬೃಹದಾಕಾರವಾಗಿ ಬೆಳೆದಿದ್ದವು. ಈಗ ಗಿಡಗಳನ್ನು ಬೆಳೆಯುವ ಸಮಯ ಬಂದಿತ್ತು! ಇದು ಹೊಸದಾಗಿ ರೈತರಾಗುವವರಿಗೆ ಎದುರಾಗುವ ಸಮಸ್ಯೆ. ಸಿಕ್ಕಾಪಟ್ಟೆ ಮಾಹಿತಿಗಳ ಕೇಳಿ ತಬ್ಬಿಬ್ಬಾಗಿ ಬಿಡುತ್ತಾರೆ. ಗುರುಪ್ರಸಾದ್ ಕುರ್ತಕೋಟಿ ಬರೆಯುವ ಅಂಕಣ “ಗ್ರಾಮ ಡ್ರಾಮಾಯಣ”
ಸಮಾನತೆಯ ಆಶಯವನ್ನು ಒರೆಗೆ ಹಚ್ಚುವ ಕತೆ
ಸಿದ್ಧಾಂತಗಳು ಎಷ್ಟೇ ಉದಾತ್ತವಾಗಿದ್ದರೂ ಅದನ್ನು ಜಾರಿಗೊಳಿಸುವ ವಿಧಾನ ಸರಿಯಿಲ್ಲದಿದ್ದರೆ ಎಲ್ಲಾ ಅನರ್ಥವೇ ಆಗುತ್ತದೆ ಎಂಬುದು ಇದರ ಮುಖ್ಯ ಸಾರ. ಒಂದು ತೋಟದಲ್ಲಿರುವ ಪ್ರಾಣಿಗಳೆಲ್ಲಾ ದುಷ್ಟ ಒಡೆಯನ ವಿರುದ್ಧ ಬಂಡೆದ್ದು ತೋಟವನ್ನು ವಶಪಡಿಸಿಕೊಂಡು ಸಮಾನತೆಯ ಸಮಾಜ ಕಟ್ಟಲು ಹೊರಡುವ ಕತೆಯಿದು. ಆದರೆ ಕಾಲಕಳೆಯುತ್ತಾ ಹೋದಂತೆ ನಾಯಕನ ಆದರ್ಶಗಳೆಲ್ಲಾ ಮಣ್ಣುಪಾಲಾಗಿ ಅವನೂ ಒಬ್ಬ ಭ್ರಷ್ಟನೇ ಆಗುತ್ತಾನೆ. ಒಂದು ಕೆಟ್ಟ ಸಮಾಜದಲ್ಲಿನ ಎಲ್ಲಾ ಗುಣಗಳು ಅಲ್ಲೂ ಬರುತ್ತದೆ. ಪ್ರಬಲರಾದ ಹುದ್ದೆಯಲ್ಲಿರುವವರಿಂದ ದುರ್ಬಲರ ಶೋಷಣೆ ನಿರಂತರವಾಗಿ ನಡೆಯುತ್ತದೆ. ಗಿರಿಧರ್ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ









