Advertisement

ಅಂಕಣ

ಲೋಕದ ಕಣ್ಣಿಗೆ ಇವಳಿನ್ನೂ ರಾಧೆಯೇ… : ಆಶಾ ಜಗದೀಶ್ ಅಂಕಣ

ಲೋಕದ ಕಣ್ಣಿಗೆ ಇವಳಿನ್ನೂ ರಾಧೆಯೇ… : ಆಶಾ ಜಗದೀಶ್ ಅಂಕಣ

“ಅವಳಾದರೂ ಯಾಕೆ ಅಷ್ಟೊಂದು ಪ್ರೀತಿಸಬೇಕಿತ್ತು… ಅದೂ ತನ್ನನ್ನೇ ಕಳೆದುಕೊಳ್ಳುವಷ್ಟು, ಮರಳಿ ಪಡೆಯಲಾರದಷ್ಟು, ಅಳಿದು ಉಳಿಯುವಷ್ಟು, ಅಳಿಯದೆ ಇರಲಾರದಷ್ಟು… ಸ್ವಾರ್ಥವನ್ನು ತುಂಬಿಕೊಂಡು ಪ್ರೇಮದ ಲೇಪ ಹಚ್ಚಿ ಜಗತ್ತನ್ನು ಮೋಡಿಗೊಳಿಸಲು ಹೊರಡುವ ಮಹತ್ವಾಕಾಂಕ್ಷಿ ಸಮರ ಸಿಂಹರ ನಡುವೆ ಒಂದೇ ಒಂದು ಕೆಂಪು ಗುಲಾಬಿಯ ಸಸಿಯನ್ನು ಆ ಕಪ್ಪು ನೆಲದ ಮೇಲೆ ನೆಟ್ಟು ಹಿಂತಿರುಗುವ ಒಂದೇ ಒಂದು ಚಿಕ್ಕಾಸೆ ಹೊತ್ತು ನಡೆದವಳ ಹೆಜ್ಜೆ ಗುರುತುಗಳು…”

read more
ಈತನ್ ಎಮ್ಮೊಂದಿಗನುಮ್ ಎಮ್ಮ ನಂಟನುಮ್ ಅಕ್ಕುಮ್: ಆರ್. ದಿಲೀಪ್ ಕುಮಾರ್ ಅಂಕಣ

ಈತನ್ ಎಮ್ಮೊಂದಿಗನುಮ್ ಎಮ್ಮ ನಂಟನುಮ್ ಅಕ್ಕುಮ್: ಆರ್. ದಿಲೀಪ್ ಕುಮಾರ್ ಅಂಕಣ

“ಯಾವುದೇ ಭಾವದ ತೀವ್ರತೆ ಅತಿಯಾದಾಗ ಕ್ರಿಯಾತ್ಮಕವಾಗಿ ಯಶಸ್ವಿಯಾಗದೆ ಹೋದಾಗ ಅದು ಶೋಕವನ್ನು ಹೊದೆಯಲು ಮುಂದಾಗುತ್ತದೆ. ಅವನಲ್ಲಿನ ಶೋಕ ಇವನಲ್ಲಿನ ಶೃಂಗಾರಕ್ಕೆ ಪುಷ್ಟಿಕೊಡುತ್ತಿದೆ. ವಿಪ್ರಲಂಭವನ್ನು ವರ್ಣಿಸುತ್ತಲೇ ಕವಿಯು ಹೊಸದಾದ ಮತ್ತೊಂದು ಭಾವವನ್ನು ಕೊನೆಯ ಭಾಗದ ಪದ್ಯದಲ್ಲಿ ತಂದುಬಿಡುತ್ತಾನೆ. ಅದು ಉತ್ಕಟವಾದ ಶೋಕವಾಗುತ್ತದೆ….”

read more
ಇಸ್ಪೀಟಾಟ್ಟ ಮತ್ತು ಕ್ರಿಕೆಟ್ಟಾಟ ಎಂಬ ಆಧ್ಯಾತ್ಮ: ಲಕ್ಷ್ಮಣ ವಿ.ಎ. ಅಂಕಣ

ಇಸ್ಪೀಟಾಟ್ಟ ಮತ್ತು ಕ್ರಿಕೆಟ್ಟಾಟ ಎಂಬ ಆಧ್ಯಾತ್ಮ: ಲಕ್ಷ್ಮಣ ವಿ.ಎ. ಅಂಕಣ

“ಮಳೆ ಬೀಳದ ಊರಿನಲ್ಲಿ ಕೂಲಿ ನಾಲಿ ಕೆಲಸ ಸಿಗುವುದೂ ಅಷ್ಟರಲ್ಲೇ ಇತ್ತು, ಅಥವ ಇದೊಂದು ನೆಪವೇನೋ.. ಈ ಇಸ್ಪೀಟೆಲೆಗಳನ್ನು ನೀಟಾಗಿ ಯಾರಿಗೂ ಕಾಣದಂತೆ ಅಷ್ಟೇ ಕಲಾತ್ಮಕವಾಗಿ ಮಡಚಿ ಹಿಡಿಯುವುದು, ಮತ್ತೆ ಜೋಕರುಗಳು ಬಂದಾಗ ಒಳಗೊಳಗೇ ಖುಷಿಪಡುವುದು, ತಮಗೆ ಬೇಕಾದ ನಂಬರು ಸಿಗದಿದ್ದಾಗ ಆಕ್ರೋಶಗೊಂಡು ಪಟ್ ಅಂತ ಇಸ್ಪೀಟಿನೆಲೆ ನೆಲಕೆ ಬಡಿಯುವುದು…”

read more
ಅಗರ್ತಲಾದ ಬೀದಿಗಳಲ್ಲಿ ಸುತ್ತಾಡಿದ ನೆನಪುಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ

ಅಗರ್ತಲಾದ ಬೀದಿಗಳಲ್ಲಿ ಸುತ್ತಾಡಿದ ನೆನಪುಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ

“ತ್ರಿಪುರಾ ವಿಶ್ವವಿದ್ಯಾಲಯದಿಂದ ನೀರ್ ಮಹಲ್ ಮೂವತ್ತು ಕಿಲೋಮೀಟರುಗಳಷ್ಟು ದೂರವಿತ್ತು. ಹಾದಿಯುದ್ದಕ್ಕೂ ಅಲ್ಲಲ್ಲಿ ಹಸುರು ಗದ್ದೆಗಳು, ಕೈಕಾಲು ಮುರಿದುಕೊಂಡು ಬೀದಿಗೆ ಬಿದ್ದ ಬಂಗಾಳಿ ದೇವತೆಯರು, ಮೆಟಲ್ ಶೀಟಿನ ಅಂಗಡಿಗಳು, ಮನೆಗಳು, ಕಾಡು ಕಡಿದು ಎದೆಯುಬ್ಬಿಸಿಕೊಂಡು ಎದ್ದು ನಿಂತಿದ್ದ ರಬ್ಬರ್ ತೋಟಗಳು ಸಿಕ್ಕವು. ಪ್ರವಾಸಿಗರ ಕೊರತೆಯಿಂದ ಹಾಗೂ ಬಡತನದ ಹೊಡೆತದಿಂದ ಅಗರ್ತಲಾ…”

read more
ಕನ್ನಡದಲ್ಲಿ ಡಾರ್ಕ್ ಹ್ಯೂಮರ್ ಪ್ರಯೋಗ: ಶ್ರೀಹರ್ಷ ಸಾಲಿಮಠ ಅಂಕಣ

ಕನ್ನಡದಲ್ಲಿ ಡಾರ್ಕ್ ಹ್ಯೂಮರ್ ಪ್ರಯೋಗ: ಶ್ರೀಹರ್ಷ ಸಾಲಿಮಠ ಅಂಕಣ

“ಡಾರ್ಕ್ ಹ್ಯೂಮರ್ ನಮ್ಮ ಸಮಾಜದಲ್ಲಿ ಬೆಳೆಯದಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಮೇಲ್ ಸಮುದಾಯದ ಜನರು ಡಾರ್ಕ್ ಹ್ಯೂಮರ್ ಅನ್ನು ಸಹಿಸಿಕೊಳ್ಳುವಷ್ಟು ಹೃದಯ ವೈಶಾಲ್ಯ ಹೊಂದಿರದಿರುವುದು. ಎರಡನೆಯದು ಕೆಲ ಸಮುದಾಯಗಳು ಡಾರ್ಕ್ ಹ್ಯೂಮರ್ ತಡೆದುಕೊಳ್ಳುವಷ್ಟು ಸಾಮಾಜಿಕ ಬಲಿಷ್ಠತೆ ಪಡೆಯದಿರುವುದು. ಜಾತಿ, ಧರ್ಮ, ಲಿಂಗ, ಭೂಗೋಳ, ಸಮಾಜ, ವೇಷಭೂಷಣ..”

read more
ಮನುಷ್ಯನ ಮನಸ್ಸಿನ ಏರಿಳಿತಗಳು:  ವಿನತೆ ಶರ್ಮ ಅಂಕಣ

ಮನುಷ್ಯನ ಮನಸ್ಸಿನ ಏರಿಳಿತಗಳು: ವಿನತೆ ಶರ್ಮ ಅಂಕಣ

“ಈ ಯೋಚನೆಗಳಲ್ಲಿ ಮುಳುಗಿದ್ದಾಗ ಮರುದಿನ ಶುಕ್ರವಾರ ತಾಯಿಯೊಬ್ಬಳು ತನ್ನ ಒಂಭತ್ತು ವರ್ಷ ವಯಸ್ಸಿನ ಮಗನನ್ನು ರಕ್ಷಿಸಲು ಕೈಗೊಂಡ ಕ್ರಮದ ಸುದ್ದಿ ಬಂತು. ಅವಳು ನನ್ನ ಸ್ನೇಹಿತೆಯೊಬ್ಬಳ ಸ್ನೇಹಿತೆ, ನನಗೂ ಪರಿಚಿತೆ. ಅವಳ ಮಗನನ್ನೂ ನಾವು ನೋಡಿದ್ದಿತ್ತು. ಅವನು ಕುಬ್ಜತೆ ಎಂಬ ದೈಹಿಕ ಸ್ಥಿತಿಗೆ ಗುರಿಯಾಗಿ ಅವನ ವಯಸ್ಸಿನ ಬೇರೆ ಮಕ್ಕಳಂತೆ ಶಾರೀರಿಕ ಬೆಳವಣಿಗೆಯನ್ನು ಪಡೆದಿಲ್ಲ. ತಲೆ ದೊಡ್ಡದು, ದೇಹ ಕುಬ್ಜ ಎಂಬಂಥ ರೂಪವಿದೆ. ಜನರ ದೃಷ್ಟಿ ಅವನೆಡೆ ಹೊರಳಿದಾಗ ಅವನನ್ನು ಎರಡೆರಡು ಬಾರಿ ದಿಟ್ಟಿಸಿ ನೋಡುತ್ತಾರೆ.”

read more
ಮೌನಕ್ಕೆ ಮೌನವೇ ಹೊರಬರುವ ಹಾದಿಯಾದಾಗ…: ಆಶಾಜಗದೀಶ್ ಅಂಕಣ

ಮೌನಕ್ಕೆ ಮೌನವೇ ಹೊರಬರುವ ಹಾದಿಯಾದಾಗ…: ಆಶಾಜಗದೀಶ್ ಅಂಕಣ

“ಒಬ್ಬ ಕವಿ ತಾನು ಪ್ರಪಂಚವನ್ನು ನೋಡಿ ಗ್ರಹಿಸಿದ್ದು ಒಂದು ಬಗೆಯ ಜ್ಞಾನವಾದರೆ ಪ್ರಪಂಚ ಅವನಿಗೆ ಅನಿವಾರ್ಯವಾಗಿ ಕಲಿಸಿದ ಅಥವಾ ನೀಡಿದ ಜ್ಞಾನ ಮತ್ತೊಂದೇ ಬಗೆಯದು. ಕವಿ ಇದೆರೆಡರ ಸಮಪಾಕದಲ್ಲಿ ಬೆಂದು ಬರೆದಾಗ ಕವಿತೆ ಯಾರನ್ನಾದರೂ ಮುಟ್ಟಿ ತಟ್ಟಬಲ್ಲದು. ಮತ್ತೆ ಗ್ರಹಿಕೆ ಯಾವ ಬಗೆಯದ್ದೇ ಇರಲಿ ನನ್ನ ಗ್ರಹಿಕೆ ಎನ್ನುವುದು ಬಹಳ ಸೀಮಿತ ಕ್ಷಿತಿಜ. ಅದನ್ನು ಸಾಮಾನ್ಯೀಕರಿಸುವ ಹೊತ್ತಿನಲ್ಲಿ ಒಂದು ಕಾಳಜಿ ಒಂದು ಜಾಗ್ರತೆ ಬೇಕೇಬೇಕಿರುತ್ತದೆ.”

read more
ವಿಳಾಸದ ಅಂದದ ಬೆಡಂಗಿನ ಪೆಂಡಿರೇ ಪೆಂಡಿರಲ್ಲಿಯಾ: ಆರ್. ದಿಲೀಪ್ ಕುಮಾರ್ ಅಂಕಣ

ವಿಳಾಸದ ಅಂದದ ಬೆಡಂಗಿನ ಪೆಂಡಿರೇ ಪೆಂಡಿರಲ್ಲಿಯಾ: ಆರ್. ದಿಲೀಪ್ ಕುಮಾರ್ ಅಂಕಣ

“ಒಂದಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಪರಿಸರವನ್ನು ಕಟ್ಟಿಕೊಡುವ ಪಂಪನ ಕಲೆ ಬಹುಮುಖ್ಯವಾಗುತ್ತದೆ. ಯಾವುದೇ ರಸವೂ ಅದು ಸ್ಪಷ್ಟವಾಗಿ ಗ್ರಹಿಕೆಗೆ ಬರುವುದು ಅಲ್ಲಿನ ಪರಿಸರದ ಆಧಾರದ ಮೇಲೆ. ಇಲ್ಲಿ ಕತ್ತಲಾಗಿದೆ, ಪೆಂಡವಾಸದ ಮನೆಯ ಮುಂದೆ ಹೋಗುತ್ತಿದ್ದಾನೆ, ಮಬ್ಬು ಗತ್ತಲು, ಬಾಗಿಲ ಮುಂದೆ ಜಗುಲಿಗಳ ಮೇಲೆ ಕುಳಿತಿರುವವರು, ಅಲ್ಲಿನ ಬಣ್ಣ ಕಪ್ಪು ಮಿಶ್ರಣ ಹಸಿರು. ಹೀಗೆ ಒಂದು ಸಂದರ್ಭದ ಬಹುಮುಖ್ಯ ಅಂಶಗಳೇ ಗಮನ ಸೆಳೆದು ಬಿಡುತ್ತದೆ.”

read more
ಧಾರವಾಡದ ದಿನಗಳ ನೆನೆಯುತ್ತಾ…: ಲಕ್ಷ್ಮಣ ವಿ.ಎ. ಅಂಕಣ

ಧಾರವಾಡದ ದಿನಗಳ ನೆನೆಯುತ್ತಾ…: ಲಕ್ಷ್ಮಣ ವಿ.ಎ. ಅಂಕಣ

“ಎಲೆಯುದುರುವ ಕಾಲವಿದು. ರಾತ್ರಿ ಮೈಯ್ಯೆಲ್ಲ ಥರಗುಟ್ಟುವ ಚಳಿ. ಕಾಲಿಗೆ ಬರುವ ಹೊದಿಕೆ ತಲೆಗೆ ಬರುತ್ತಿರಲಿಲ್ಲ ತಲೆಗೆ ಬಂದದ್ದು ಕಾಲಿಗೆ ಬರುತ್ತಿರಲಿಲ್ಲ. ಅಷ್ಟೇ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ವಿಶೇಷವಾಗಿ ಚಳಿಗಾಲದಲ್ಲಿ ಹೀಗಾಗಿ ತಾಯ ಗರ್ಭದಲ್ಲಿ ಮಗು ಮಲಗಿರುತ್ತದಲ್ಲ ಎರಡು ಕಾಲು ಮಡಚಿ ತಲೆ ತಗ್ಗಿಸಿ ಅರ್ಧ ಬಿಲ್ಲಿನಾಕಾರಾದಲ್ಲಿ ಹಾಗೆ ಮಲಗುತ್ತಿದ್ದೆ, ಧಾರವಾಡದ ಸಪ್ತಾಪೂರದ ಮಿಚಿಗನ್ ಕಂಪೌಂಡಿನ ಸಿಂಗಲ್ ಔಟ್ ಹೌಸ್ ರೂಮಿನಲ್ಲಿ…”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ