Advertisement

ಅಂಕಣ

ಧಾರವಾಡದ ದಿನಗಳ ನೆನೆಯುತ್ತಾ…: ಲಕ್ಷ್ಮಣ ವಿ.ಎ. ಅಂಕಣ

ಧಾರವಾಡದ ದಿನಗಳ ನೆನೆಯುತ್ತಾ…: ಲಕ್ಷ್ಮಣ ವಿ.ಎ. ಅಂಕಣ

“ಎಲೆಯುದುರುವ ಕಾಲವಿದು. ರಾತ್ರಿ ಮೈಯ್ಯೆಲ್ಲ ಥರಗುಟ್ಟುವ ಚಳಿ. ಕಾಲಿಗೆ ಬರುವ ಹೊದಿಕೆ ತಲೆಗೆ ಬರುತ್ತಿರಲಿಲ್ಲ ತಲೆಗೆ ಬಂದದ್ದು ಕಾಲಿಗೆ ಬರುತ್ತಿರಲಿಲ್ಲ. ಅಷ್ಟೇ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ವಿಶೇಷವಾಗಿ ಚಳಿಗಾಲದಲ್ಲಿ ಹೀಗಾಗಿ ತಾಯ ಗರ್ಭದಲ್ಲಿ ಮಗು ಮಲಗಿರುತ್ತದಲ್ಲ ಎರಡು ಕಾಲು ಮಡಚಿ ತಲೆ ತಗ್ಗಿಸಿ ಅರ್ಧ ಬಿಲ್ಲಿನಾಕಾರಾದಲ್ಲಿ ಹಾಗೆ ಮಲಗುತ್ತಿದ್ದೆ, ಧಾರವಾಡದ ಸಪ್ತಾಪೂರದ ಮಿಚಿಗನ್ ಕಂಪೌಂಡಿನ ಸಿಂಗಲ್ ಔಟ್ ಹೌಸ್ ರೂಮಿನಲ್ಲಿ…”

read more
ಬಡತನದ ಘನತೆ ಮತ್ತು ದಯೆ ಧರ್ಮದ ಮೂಲ:ಶ್ರೀಹರ್ಷ ಸಾಲಿಮಠ ಅಂಕಣ

ಬಡತನದ ಘನತೆ ಮತ್ತು ದಯೆ ಧರ್ಮದ ಮೂಲ:ಶ್ರೀಹರ್ಷ ಸಾಲಿಮಠ ಅಂಕಣ

“ಬಡತನ ಎನ್ನುವುದೊಂದೇ ದೊಡ್ಡ ಅಡ್ಡಗಾಲಲ್ಲ. ಅತಿ ದೊಡ್ಡ ತೊಡರುಗಾಲಿರುವುದು ಮನುಷ್ಯನ ಘನತೆಯದ್ದು! ಇಂಡಿಯಾದಂತಹ ದೇಶಗಳಲ್ಲಿ ಆರ್ಥಿಕವಾಗಿ ಒಂದೇ ದಾರ್ಢ್ಯವಿದ್ದರೂ ಸಾಮಾಜಿಕವಾಗಿ ಅಂತಸ್ತು ಬೇರೆ. ಅವು ವೃತ್ತಿಯಾಧಾರಿತವಾಗಿರಬಹುದು, ಜಾತಿಯಾಧಾರಿತವಾಗಿರಬಹುದು, ಧರ್ಮಾಧಾರಿತವಾಗಿರಬಹುದು…. ಆಸ್ಟ್ರೇಲಿಯದಂತಹ ದೇಶಗಳಲ್ಲಿ ಆರ್ಥಿಕವಾಗಿ ಮೇಲು ಕೆಳಗುಗಳಿದ್ದರೂ ಸಾಮಾಜಿಕ ಅಂತಸ್ತು ಒಂದೇ…”

read more
ಶ್ರೀಸಾಮಾನ್ಯರ ಹಸಿರು ಕ್ರಾಂತಿ ಕಥೆಗಳು: ವಿನತೆ ಶರ್ಮಾ ಅಂಕಣ

ಶ್ರೀಸಾಮಾನ್ಯರ ಹಸಿರು ಕ್ರಾಂತಿ ಕಥೆಗಳು: ವಿನತೆ ಶರ್ಮಾ ಅಂಕಣ

“ಆಕೆಯ ಮನೆಯಂಗಳದ ಕೈತೋಟದಲ್ಲಿದ್ದ ಗಿಡಮರಗಳು, ಸುಮಾರು ಹದಿನೈದು ಗೊಬ್ಬರ ಡಬ್ಬಗಳು, ಬಕೆಟ್ಟುಗಳು, ಮೂರು ಗೊಬ್ಬರ ಹುಳುಗಳ ಕೇಂದ್ರಗಳು, ಒಂದು ದೊಡ್ಡ ಇಡೀ ಬಾತ್ ಟಬ್ಬನ್ನು ಗೊಬ್ಬರ ಹುಳು ಸಾಕಾಣಿಕೆ ಕೇಂದ್ರವನ್ನಾಗಿರಿಸಿದ ಪ್ರಯತ್ನ, ಮೂಲೆಯಲ್ಲಿದ್ದ ಕೋಳಿಸಾಕಾಣಿಕೆ ಕೇಂದ್ರ ಎಲ್ಲವನ್ನೂ ನೋಡಿ ಅಬ್ಬಾಬ್ಬಾ ಎಂದೆ. ನನ್ನನ್ನು ಬೆರಗಾಗಿಸಿದ ವಿಷಯವೆಂದರೆ ಆಕೆಯ ಈ ಎಲ್ಲಾ ಪ್ರಯತ್ನಗಳಲ್ಲಿ ತೊಂಭತ್ತು ಭಾಗಕ್ಕೆ ಯಾವುದೇ ಹಣ ಹೂಡಿಕೆಯಿಲ್ಲದಿದ್ದದ್ದು….”

read more
ಸಾಮಾನ್ಯಮೇ ಬಗೆಯೆ ಭವತ್ ಕೇಶಪಾಶ ಪ್ರಪಂಚಂ: ಆರ್. ದಿಲೀಪ್ ಕುಮಾರ್ ಅಂಕಣ

ಸಾಮಾನ್ಯಮೇ ಬಗೆಯೆ ಭವತ್ ಕೇಶಪಾಶ ಪ್ರಪಂಚಂ: ಆರ್. ದಿಲೀಪ್ ಕುಮಾರ್ ಅಂಕಣ

“ಹೀಗೆ ಮಾಡಿದ ಪ್ರತಿಜ್ಞೆಯನ್ನ ಕೊನೆಗಾಣಿಸಿ ಯುದ್ಧರಂಗದಲ್ಲಿ ಅವನಾಡುವ ಮಾತು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ದುಶ್ಯಾಸನನನ್ನು ಕೊಂದು ಅವಳ ಮುಡಿಯನ್ನು ಕಟ್ಟುವುದು, ಕಟ್ಟಿ ನೋಡಿ ನಗುವುದು ಇಲ್ಲಿನ ಬಹು ಮುಖ್ಯವಾದ ಭಾಗ. ಆ ಪದ್ಯವಂತೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹು ಚರ್ಚಿತವಾಗಿದೆ. ಪಂಪನೇ ದ್ರೌಪತಿಯನ್ನು ಕಾರ್ಯ ಕಾರಣದ ಮೂಲ ಅಂಶವಾಗಿ ನಿಲ್ಲಿಸಿ ನೋಡಿರುವುದಕ್ಕೆ ಈ ಪದ್ಯ ಸಾಕ್ಷಿಯಾಗಿದೆ…”

read more
ಶಹರದ ಗೋಡೆಗಳ ಕೆಡವುದು ಹೇಗೆ?: ರೂಪಶ್ರೀ ಕಲ್ಲಿಗನೂರ್ ಅಂಕಣ

ಶಹರದ ಗೋಡೆಗಳ ಕೆಡವುದು ಹೇಗೆ?: ರೂಪಶ್ರೀ ಕಲ್ಲಿಗನೂರ್ ಅಂಕಣ

“ಅವೆಲ್ಲ ಅಮ್ಮ ಬೆಳೆಸಿದ ಹೂಗಳು. ಮನೆಯ ಮುಂದೆ ಹೂ ಬೆಳೆಸಲು ಜಾಗವೂ ಇಲ್ಲ, ಹಿಡಿ ಮಣ್ಣೂ ಇಲ್ಲ. ಹಾಗಂತ ಅಮ್ಮ ಸುಮ್ಮನಿರೋಲ್ಲ. ಬೇರೆಯವರ ಟೆರೆಸ್ಸಿನ ಮೇಲೇ, ತನ್ನ ಗಾರ್ಡನ್ನನ್ನು ಬೆಳೆಸುತ್ತಿದ್ದಾರೆ. ಮನೆಯಹಾಗೆ ಇಷ್ಟಗಲ ಮೊಗವರಳಿಸಿಕೊಂಡು ನಿಲ್ಲುವ ಒಂದೊಂದೂ ಹೂಗಳನ್ನ ಅವಳು ಪ್ರೀತಿಯಿಂದ ನೋಡ್ತಾರೆ. ಮನೆಗೆ ಹೋದವರ ಮುಂದೆಲ್ಲ ಅದರ ಅಂದಚಂದದ ಗುಣಗಾನ ಮಾಡ್ತಾ, ಅಕಸ್ಮಾತ್ ಯಾರಾದ್ರೂ ಹೇಳದೇ ಕೇಳದೇ ಹೂಗಳನ್ನ ಕಿತ್ತುಬಿಟ್ರೆ ಮುಗೀತು…”

read more
ಕಚ್ಚಾ ಹಾಳೆಯಂತಹ ನನ್ನ ಊರು: ಲಕ್ಷ್ಮಣ ವಿ.ಎ. ಅಂಕಣ

ಕಚ್ಚಾ ಹಾಳೆಯಂತಹ ನನ್ನ ಊರು: ಲಕ್ಷ್ಮಣ ವಿ.ಎ. ಅಂಕಣ

“ಉತ್ತರ ದಿಕ್ಕಿನ ಅಂಗಳದ ಎಡಭಾಗದಲ್ಲಿ ಎರಡು ಹಿಂಡುವ ಎಮ್ಮೆ ಮತ್ತು ಇನ್ನೊಂದು ವಯಸ್ಸಾದ ಮುರುಕುಕೋಡಿನ ಗೊಡ್ಡೆಮ್ಮೆ. ದಕ್ಷಿಣದ ಬಾಗಿಲಿನ ಹಿತ್ತಲಿನಲ್ಲಿ ಜೋಳದ ದಂಟಿನಿಂದ ಮರೆಮಾಚಿದ ಸ್ನಾನಕ್ಕೆಂದು ಮರೆಮಾಡಿದ ಎರಡಗಲದ ಒಂದು ಜಾಗ, ಸ್ನಾನದ ನೀರು ಹೋಗಿ ಇಂಗುವಲ್ಲಿ ತಿಪ್ಪೆ, ಆ ತಿಪ್ಪೆಯಲ್ಲಿ ಎಮ್ಮೆ ಆಡುಗಳ ಯಥೇಚ್ಛ ಗೊಬ್ಬರ ಇಂತಹ ಊರಿನಲ್ಲಿ ಬಹುಬೇಗ ಬೆಳೆಯುವಂತವು ಒಂದು ತಿಪ್ಪೆಗಳು ಮತ್ತು ಇನ್ನೊಂದು ಮೈ ನೆರೆದ ಹುಡುಗಿಯರು…”

read more
ಕಪ್ಪೆಚಿಪ್ಪಿನೊಳಗೆ ಮುತ್ತಾದ ಸೋನೆಮಳೆ…: ಆಶಾ ಜಗದೀಶ್ ಅಂಕಣ

ಕಪ್ಪೆಚಿಪ್ಪಿನೊಳಗೆ ಮುತ್ತಾದ ಸೋನೆಮಳೆ…: ಆಶಾ ಜಗದೀಶ್ ಅಂಕಣ

“ಇದ್ದಕ್ಕಿದ್ದಂತೆ ಅವನೆದುರು ಮತ್ತೊಂದು ಹುಡುಗ ಧುತ್ತೆಂದು ಪ್ರತ್ಯಕ್ಷನಾಗುತ್ತಾನೆ. ಅವನ ಕೈಲಿ ಅರಳಿದ ಛತ್ರಿಯಿದೆ. ಆದರವನು ಇವನ ಅಪ್ಪನಿಗೆ ಆಗದವರ ಮಗ. ಇವನು ಇನ್ನೇನು ಸುಮ್ಮನೇ ಅವನನ್ನು ಹಾದು ಹೋಗಬೇಕು… ಅಷ್ಟರೊಳಗೆ ಅವನು ಇವನ ಬಳಿ ಬರುತ್ತಾನೆ. ಇಬ್ಬರೂ ಒಂದೇ ಛತ್ರಿಯಡಿ ನಡೆಯತೊಡಗುತ್ತಾರೆ. ಇಬ್ಬರ ನಡುವೆಯೂ ಮಾತೊಂದಿಲ್ಲ. ಮಳೆ ಸುರಿಯುತ್ತಲೇ ಇದೆ. ನಾಯಿ ಮರಿಗೆ ಒರಗಿಸಿಕೊಳ್ಳುವ ಎದೆ ಸಿಕ್ಕ ಸಂಭ್ರಮ…”

read more
ರೇಖಕ್ಕ ಕಲಿಸಿದ ಮಗ್ಗಿಯ ಲೆಕ್ಕ: ಶ್ರೀಹರ್ಷ ಸಾಲಿಮಠ ಅಂಕಣ

ರೇಖಕ್ಕ ಕಲಿಸಿದ ಮಗ್ಗಿಯ ಲೆಕ್ಕ: ಶ್ರೀಹರ್ಷ ಸಾಲಿಮಠ ಅಂಕಣ

“ನನ್ನ ಮಗ್ಗಿಯ ಪಾಠ ಇಪ್ಪತ್ನಾಲ್ಕನ್ನೂ ಮುಟ್ಟಲಿಲ್ಲ! ಅದೆಷ್ಟು ತಿಂಗಳು ಹೀಗೆ ಆಕೆಯ ಹಿಂಬಾಲಿಸಿ ಕಳೆದಿದ್ದೆನೋ ನನಗೆ ನೆನಪಿಲ್ಲ. ಆದರೆ ನಾವು ಮನೆ ಬದಲಿಸಲಾಗಿ ಮತ್ತೆಂದೂ ರೇಖಿಯ ಭೇಟಿಯಾಗಲಿಲ್ಲ. ಈಗಲೂ ಒಮ್ಮೊಮ್ಮೆ ರೇಖಿಯಂತಹ ಪ್ರತಿಭಾವಂತೆಯ ಬಳಿ ಪಾಠ ಹೇಳಿಸಿಕೊಂಡಿದ್ದಕ್ಕೆ ಆಗಾಗ ಹೆಮ್ಮೆಯೆನಿಸುತ್ತದೆ. ಆಗ ಆಕೆ ಬದುಕಿದ್ದ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕ ಹಾಕಿದರೆ ಬಹುಷಃ ಹೆಚ್ಚು ಓದಿ ಕಡಿದು ಗುಡ್ಡೆ ಹಾಕಿರಲಿಕ್ಕೆ ಆಕೆಯ ಮನೆಯವರು ಬಿಟ್ಟಿರಲಿಕ್ಕಿಲ್ಲ.”

read more
ಹೊರಾಂಗಣ ಕಲಿಕೆ ಮತ್ತು ಹೆಣ್ಣಿನ ಒಳದನಿ: ವಿನತೆ ಶರ್ಮಾ ಅಂಕಣ

ಹೊರಾಂಗಣ ಕಲಿಕೆ ಮತ್ತು ಹೆಣ್ಣಿನ ಒಳದನಿ: ವಿನತೆ ಶರ್ಮಾ ಅಂಕಣ

“ಕೇವಲ ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದಲೇ ಅದೆಷ್ಟೋ ಹೆಂಗಸರ ಗಂಡು ಜೀವನಸಂಗಾತಿಗಳು ಅವರನ್ನು ಬಿಟ್ಟುಹೋದದ್ದಿದೆ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಧೈರ್ಯವನ್ನು ತುಂಬಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಕಥೆಗಳಿವೆ. ತಮ್ಮ ಖಾಸಗಿ ಜೀವನದಲ್ಲಿನ ತಮ್ಮ ಸ್ವಲಿಂಗ ಸಂಬಂಧ ಆಯ್ಕೆಯಿಂದಾಗಿ ಕೆಲವರು ಕೆಲಸದ ಸ್ಥಳದಲ್ಲಿ ತಾರತಮ್ಯಕ್ಕೊಳಗಾಗಿ, ಬೆರಳು ತೋರಿಸುವ ಮಂದಿಯ ಕೈಯಲ್ಲಿ ಅನಿಸಿಕೊಂಡು ತಮ್ಮ ವೃತ್ತಿಜೀವನದಲ್ಲಿ ಅದೆಷ್ಟು ನರಳಿದ್ದಾರೆ…”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ