ತತ್ವಗಳ ಚರ್ಚಿಸುತ್ತಾ…: ಮಧುಸೂದನ್ ವೈ ಎನ್ ಅಂಕಣ
“ಪಶ್ಚಿಮರು ಅನುಭವಿಸುತ್ತಿದ್ದಂಥ ಕಷ್ಟಗಳನ್ನು ನಮ್ಮಲ್ಲಿ ಯಾರೂ ಅನುಭವಿಸಿಯೇ ಇಲ್ಲವೇ? ಇದ್ದಾರೆ ಆದರೆ ಇಲ್ಲಿನವರ ಕಷ್ಟಗಳ ಕಾರಣೀಕರ್ತನು ಬೇರೆ ಅಲ್ಲಿನ ಕಷ್ಟಗಳ ಕಾರಣೀಕರ್ತನು ಬೇರೆ. ಅಲ್ಲಿ ಶಿಕ್ಷೆ ಕೊಡುತ್ತಿದ್ದುದು ಪ್ರಕೃತಿ. ಪ್ರಕೃತಿ ಎಲ್ಲಾರಿಗೂ ಒಂದೇ ಮಾದರಿಯಲ್ಲಿ ಒಂದೇ ಮೊತ್ತದಲ್ಲಿ ಶಿಕ್ಷೆ ಕೊಡುವಂತಹ ವಿಶಿಷ್ಟ ಚಿತ್ರಗುಪ್ತ.”
‘ಕಾಣೆಯಾದವರ ವಾರ’ಕ್ಕೆ ಕಾಣೆಯಾದವರ ಎರಡು ಕತೆ: ವಿನತೆ ಶರ್ಮ ಅಂಕಣ
“ಕೆಲ ನಿಮಿಷಗಳ ನಂತರ ಬಂದ ಯಾರೋ ಆಗಂತುಕರ ಅವನನ್ನು ಕಾರಿನಲ್ಲಿ ಕೂರಿಸಿಕೊಂಡು ಎಲ್ಲಿಗೋ ಹೊರಟುಬಿಟ್ಟಿದ್ದರು. ಅಲ್ಲಿಂದ ಮುಂದೆ ಎಂದೆಂದಿಗೂ ಅವನು ಯಾರಿಗೂ ಕಾಣಿಸಲಿಲ್ಲ. ಕೇಳಿದ ಎಲ್ಲರ ಎದೆ ಢವಢವಿಸಿತ್ತು, ರಕ್ತ ತಣ್ಣಗಾಗಿತ್ತು. ಅವನ ಅಪ್ಪ-ಅಮ್ಮಂದಿರು, ಸರ್ಕಾರ, ಪೊಲೀಸರು ಅವನನ್ನು ಹುಡುಕುತ್ತಾ ಇಡೀ ಒಂದು ದಶಕವನ್ನೇ ಕಳೆದರು.”
ವಿಭಾ ಟೀಚರ್ ಕಥೆಗಳು ಮತ್ತು ನಿಧಿ ಹುಡುಕಾಟ: ಮುನವ್ವರ್ ಜೋಗಿಬೆಟ್ಟು ಕಥನ
“ನಾನು ನಿಧಿ ನಿಕ್ಷೇಪದ ಗುಂಗಿನಲ್ಲಿ ಸುಮ್ಮನೆ ಕಬ್ಬಿಣದ ರಾಡಿನಿಂದ ಅಗೆಯುತ್ತಲೇ ಇದ್ದೆ. ಅದೇನಾಯಿತೋ ಒಮ್ಮೆಲೆ ‘ಟನ್’ ಎಂಬ ಸದ್ದಾಯಿತು. ಮೈಯೆಲ್ಲಾ ಒಮ್ಮೆ ಮಿಂಚು ಪ್ರವಹಿಸಿದಂತಾಯಿತು. ಖಂಡಿತಾ ಚಿನ್ನದ ಮಡಕೆಯನ್ನು ಮಾರಿ ದೊಡ್ಡ ಮನೆ, ಮತ್ತೊಂದು ಕಾರು ಖರೀದೀಸಬೇಕೆಂದು ಲೆಕ್ಕ ಹಾಕಿ…”
ಬ್ರಿಸ್ಟಲ್ ಬಾನಿನಲ್ಲಿ ಬಿಸಿಗಾಳಿಯ ಬಲೂನುಗಳು: ಯೋಗೀಂದ್ರ ಮರವಂತೆ ಅಂಕಣ
“ಹತ್ತೋ ಇಪ್ಪತ್ತೋ ಜನರು ಹಿಡಿಸಬಲ್ಲ ಲೋಹದ ಬುಟ್ಟಿ ಬಲೂನಿಗೆ ಜೋತುಬಿದ್ದು ಗಾಳಿಸಂಚಾರ ಮಾಡುತ್ತದೆ. ವರ್ಷಕ್ಕೊಮ್ಮೆ ಬರುವ ನಾಲ್ಕು ದಿನಗಳ ಈ ಬಲೂನು ಹಬ್ಬದ ದಿನಗಳಲ್ಲಿ ಊಹೆಗೆ ನಿಲುಕದ “ಬ್ರಿಟಿಷ್ ವೆದರ್” ಸಹಕರಿಸದೇ ನಿರಾಶೆ ಹುಟ್ಟಿಸುವುದಿದೆ. ಹಾಗಂತ ಒಮ್ಮೆ ಹಾರಿದ್ದೆ ಹೌದಾದರೆ ನೆಲದ ಮೇಲೂ ಅಲ್ಲ, ವಿಮಾನಗಳಷ್ಟು ಎತ್ತರದಲ್ಲೂ…”
ಮಾಜಿ ಸಿಪಾಯಿಯೊಬ್ಬನ ಬದುಕು-ಬವಣೆಯ ಕತೆ :ಲಕ್ಷ್ಮಣ ವಿ.ಎ. ಅಂಕಣ
“ಆ ಇಕ್ಕಟ್ಟಿನಲ್ಲೇ ಹಿಮಗಟ್ಟಿದ ನೀರು ಕಾಯಿಸಿ, ಅಡುಗೆ ಬೇಯಿಸಿ ತಿನ್ನಬೇಕು. ಅಪ್ಪಿ ತಪ್ಪಿಯೂ ಆ ಒಲೆಯಿಂದ ಬರುವ ಹೊಗೆ ಬೆಂಕಿ ಕಾಣಿಸಕೂಡದು. ಒಂದು ವೇಳೆ ಕಂಡರೆ ಕೆಲವೇ ನಿಮಿಷಗಳಲ್ಲಿ ಈ ಡ್ರ್ಯಾಗನ್ ಸೈನಿಕರ ಶೆಲ್ ದಾಳಿಗೆ ತುತ್ತಾಗಿ ಬಂಕರುಗಳ ಇವರ ಶವ ಎಣಿಸಲು ಬರುವವರಿಗಾಗಿ ಒಂದು ವಾರ ತಿಂಗಳಾದರೂ ಕಾಯಬೇಕು.”
ನಿರಾಕಾರಣವಾಗಿ ಹೃದಯದಿಂದ ಹೊರಟ ಕಣ್ಣೀರು….: ಆಶಾ ಜಗದೀಶ್ ಅಂಕಣ
“ಇಲ್ಲಿನ ತಾಯಿ ಏಕೆ ಮುಖ್ಯವಾಗುತ್ತಾಳೆಂದರೆ, ಇವಳು ತನ್ನ ಬಾಲ್ಯವನ್ನಾಗಲೀ, ತಾರುಣ್ಯವನ್ನಾಗಲೀ ಅನುಭವಿಸಿ ಕಂಡವಳಲ್ಲ. ಜಗತ್ತನ್ನು ಬೆರಗಿನಿಂದ ಕಂಡು ಅರಿತವಳಲ್ಲ. ನಲವತ್ತು ವರ್ಷ ವಯಸ್ಸಿಗೇ ತನ್ನನ್ನು ತಾನು ಮುದುಕಿ ಎಂದುಕೊಂಡುಬಿಟ್ಟವಳು. ತನ್ನ ನಲವತ್ತು ವರ್ಷ ವಯಸ್ಸನ್ನು ದಾಟಿದ ಮೇಲೆ ಬದುಕನ್ನು ಅರ್ಥ ಮಾಡಿಕೊಂಡವಳು. ಆಗ ಅವಳು ತನ್ನ ಬದುಕಿನಲ್ಲಿ ತಾನು ಏನನ್ನು ಕಳೆದುಕೊಂಡಿದ್ದಳೋ ಅದನ್ನು ಹುಡುಕಿಕೊಂಡು ಹೊರಡುತ್ತಾಳೆ.”
ಪೂರ್ವಸೂರಿಗಳ ಪ್ರಾರ್ಥನೆಗಳು: ಕೃಷ್ಣ ದೇವಾಂಗಮಠ ಅಂಕಣ
“ಕಾವ್ಯದ ಆರಂಭದ ಭಾಗದಲ್ಲಿ ಮಾತ್ರವಲ್ಲದೇ ಕಾವ್ಯದ ಮುಂದುವರಿದ ಕೆಲ ಭಾಗಗಳಲ್ಲೂ ಸ್ತುತಿ ಪದ್ಯಗಳು ರಚನೆಗೊಂಡಿವೆ. ಷಡಕ್ಷರ ಕವಿ ತನ್ನ ಮೂರು ಕಾವ್ಯಗಳಾದ ವೃಷಭೇಂದ್ರ ವಿಜಯದಲ್ಲಿ ನಲವತ್ತಕ್ಕೂ ಹೆಚ್ಚು, ಶಬರ ಶಂಕರ ವಿಳಾಸದಲ್ಲಿ ಐದು ಮತ್ತು ರಾಜಶೇಖರ ವಿಳಾಸದಲ್ಲಿ ಹನ್ನೆರೆಡು, ಹೀಗೆ ಒಟ್ಟಿನಲ್ಲಿ ಐವತ್ತೈದಕ್ಕೂ ಹೆಚ್ಚು ಶಿವ ಸ್ತುತಿಗಳು, ಮತ್ತು ಅಷ್ಟೇ ಸಮನಾಗಿ ಪಾರ್ವತಿ ಪ್ರಾರ್ಥನೆಗಳು ಸಿಗುತ್ತವೆ.”
ಈಡಿಪಸ್ ಕಾಂಪ್ಲೆಕ್ಸ್ ಮತ್ತು ದಾರ್ಶನಿಕ ಸಾಹಿತ್ಯ : ಮಧುಸೂದನ್ ಅಂಕಣ
“ದಾರ್ಶನಿಕ ಸಾಹಿತ್ಯ ರಚಿಸಲು ಲೇಖಕ ಸ್ವತಃ ತಾನುದಾರ್ಶನಿಕ ಮೌಲ್ಯಗಳನ್ನು ಹೊಂದಿರಬೇಕಾಗುತ್ತದೆ. ಆದ್ದರಿಂದಲೇ ಎಲ್ಲರೂ ಮೆಚ್ಚುವಂತಹ ಓದುವಂತಹ ದಾರ್ಶನಿಕ ಸಾಹಿತ್ಯವೆಲ್ಲವೂ ದಾರ್ಶನಿಕರಿಂದಲೇ ಬರೆಸಿಕೊಂಡಿರುವುದು.ಯಾವ ದಾರ್ಶನಿಕ ಸಾಹಿತ್ಯ ಸತ್ತುಹೋಗಿದೆಯೋ ಅದು ದಾರ್ಶನಿಕನಿಂದ ಬರೆಸಿಕೊಂಡಿಲ್ಲವೆಂದರ್ಥ. ಗಮನಿಸಿ, ಇಂತಹ ಸಾಹಿತ್ಯವೆಲ್ಲವೂ ಹಿರಿಯ ವಯಸ್ಸಿನಲ್ಲಿ ಬರೆದಿರುವುದು.”
ಸಾವು ಬದುಕೆಂಬ ಹಸಿರು ಹಳದಿ ಎಲೆಗಳು: ಡಾ.ವಿನತೆ ಶರ್ಮ ಅಂಕಣ
“ಸುದ್ದಿಮಾಧ್ಯಮಗಳಿಗೆ ಪೊಲೀಸರು ತಿಳಿಸಿದ್ದು ಏನೆಂದರೆ ಆ ವ್ಯಕ್ತಿ ತನ್ನ ಜೀವಹಾನಿಗೆ ಮುಂದಾಗಿದ್ದ. ಅವರು ಅವನು ತನ್ನ ಪ್ರಾಣ ತೆಗೆದುಕೊಳ್ಳದಂತೆ ಮಾತನಾಡಿಸುತ್ತಾ ಪುಸಲಾಯಿಸುತ್ತಾ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದರು. ರೇಡಿಯೋ ಡೀಜೆಗಳು ಪಟಪಟನೆ ಪರಿಸ್ಥಿತಿಯ ವಿಶ್ಲೇಷಣೆ ಶುರುಮಾಡಿದರು. ಅವನ್ಯಾರು, ಯಾತಕ್ಕೆ ಪ್ರಾಣ ತೆಗೆದುಕೊಳ್ಳಲು ಮುಂದಾದ…”









