ಸಣ್ಣಗೆ ಹನಿವ ಮಳೆಯ ಸದ್ದಲ್ಲಿ ಕಾಡು ಮತ್ತಷ್ಟು ಮಾತಾಡಿತು
ಜಲಪಾತದ ದಾರಿ ಹಿಡಿದರೆ ಬೇಸಿಗೆಯಲ್ಲಿ ನಿರಾಳವಾಗಿದ್ದ ಆ ದಾರಿ ಈಗ ಮುಚ್ಚಿ ಹೋಗಿತ್ತು. ಅಲ್ಲಿರುವ ಪೊದೆಯನ್ನೆಲ್ಲಾ ಸವರುತ್ತಾ ಇರುವಾಗ ಮಳೆ ಜೋರಾಯಿತು. ಎದುರಿಗೆ ತೀರಾ ಇಳಿಜಾರಿನ ಪ್ರಪಾತದಂತಹ ದಾರಿ. ಬೆನ್ನು ಬಗ್ಗಿಸಿ ತೆವಳುತ್ತಾ ಸಾಗುತ್ತಿರುವಾಗ ಸುತ್ತಲೂ ಇರುಳಂತೆ ಮೋಡದ ಕತ್ತಲು.”
ಅರ್ಧಕ್ಕೇ ಮುಗಿದುಹೋದ ‘ಅಮೃತಯಾನ’ ನಟಿ ಅಕ್ಷತಾ ದಿನಚರಿಯ ಮೂರನೇ ಕಂತು
“ನಿಜ ಆ ಸಮಯ ನನ್ನದಾಗಲೇ ಇಲ್ಲ. ಆ ಘಟನೆ ನಡೆದು ಹತ್ತು ವರ್ಷಗಳಾಗಿ ಹೋಗಿವೆ. ಆದರೆ ಅಜ್ಜಿಯ ಮುಖ ನೋಡದೆ ಕಳೆದುಕೊಂಡ ಆ ದಿನ ಇಂದಿಗೂ ನನ್ನನ್ನು ಬಹಳ ಕಾಡುತ್ತಿದೆ. ನಿಜವಾಗಿಯೂ ಈ ನಾನು ಎಂಬ ಪಾತ್ರಕ್ಕೆ ಜೀವತುಂಬಿದ್ದವರಲ್ಲಿ ಆ ನನ್ನ ಅಜ್ಜಿಯು ಕೂಡ ಒಬ್ಬರು.”
ಫೇಸಬುಕ್ಕಿನಾಗ ಹೆಸರ ಹಚ್ಚ:ಪ್ರಶಾಂತ್ ಆಡೂರ ಪ್ರಹಸನ.
“ನೋಡ ಮಾಮಾ ಹಂಗ ಒಂದ ಸರತೆ ನಿನ್ನ ಮಗಳ ಸೋಷಿಯಲ್ ಮೀಡಿಯಾದಾಗ ಟ್ರೆಂಡಿಂಗ್ ಆದಳು ಅಂದ್ರ ವರಾ ತಾಂವ ಮೆಸೆಂಜರ್ ನಾಗ ಮೆಸೇಜ್ ಕಳಸ್ತಾರ. ನೀ ಭಾಳ ತಲಿಕೆಡಿಸ್ಕೊ ಬ್ಯಾಡಾ, ಆಮ್ಯಾಲೆ ಚಾಟಿಂಗ್ ಒಳಗ ಸರಿ ಹೊಂದತು ಅಂದ್ರ ಮುಂದ ಎಫ್.ಬಿ. ಲೈವ್ ಒಳಗ ಕನ್ಯಾ ತೋರಿಸಿ ಬಿಡ”.
ಒಳ್ಳೆಯ ಹುಡುಗಿಯರ ಇನ್ನಿತರ ಗುಟ್ಟುಗಳು
”ಹೆಂಗಸರ ಜೀವನಗಳು ನದಿಗಳಿದ್ದಂತೆ. ಅವುಗಳು ಹುಟ್ಟಿದ್ದು, ಬೆಳೆದಿದ್ದು, ಹರಿದಿದ್ದು, ಇನ್ನೂ ಹರಿಯುತ್ತಿರುವುದು ಅನೇಕ ಸ್ಥಳಗಳಲ್ಲಿ, ಭಿನ್ನತೆಗಳೊಂದಿಗೆ, ದೇಶಗಳನ್ನು ವ್ಯಾಪಿಸಿ. ತೀರಾ ಸಾಮಾನ್ಯವೆನಿಸುವ ಘಟನೆಗಳು, ನುಂಗಿದ್ದ ಅವಮಾನ, ಹೆತ್ತವರ ಕಷ್ಟಗಳನ್ನು ಪುಟ್ಟಕಣ್ಣುಗಳಿಂದ ನೋಡಿದ್ದು, ಅವನ್ನೇ ಈಗ ಪಳಗಿದ ದೃಷ್ಟಿಯಿಂದ ಹೇಳುವುದು ಆಗಾಗ ನಮ್ಮದೂ ಹೌದು ಎನ್ನಿಸಿಬಿಡುತ್ತದೆ. “
ಕೇಶವ ಡೋಂಗ್ರೆಯವರು ಮಹಾನಗರವನ್ನು ಪರಿತ್ಯಜಿಸಿ ಬಂದ ಪ್ರಸಂಗ
”ನಮ್ಮ ಪಯಣಕ್ಕೆ ಅಂತದ್ದೇನೂ ಉದ್ದೇಶವಿರಲಿಲ್ಲ. ನಾವಿಬ್ಬರೂ ಸುಮ್ಮನೇ ಬೈಕನ್ನೇರಿ ಮಾಳದ ಹಸಿರಿನಲ್ಲಿ ಕರಗಿಬಿಟ್ಟರೆ, ರಾಧಾಕೃಷ್ಣ ಜೋಶಿಯವರ ಮನೆಗೆ ಹೋಗಿ ಮಾಳದ ವಿಶೇಷ ಕೇಳುತ್ತಿದ್ದೆವು. ಅವರಿಂದಲೇ ನಮಗೆ ಹೊಸ ದಾರಿಗಳು ಸಿಕ್ಕುತ್ತಿತ್ತು. ಇವತ್ತೂ ಅವರ ಮನೆಗೆ ಹೋದಾಗ ಮಳೆ ಹಗುರಕ್ಕೆ ಸುರಿದು ಅವರ ಗದ್ದೆ ಮನೆಯು ಒದ್ದೆಯಾಗುತ್ತಿತ್ತು.”
ನಗುವ ಹೂಗಳ ಕಿನ್ನರ ದೇಶ ನೆದರ್ ಲ್ಯಾಂಡ್ಸ್
”ಡಚ್ಚರ ದಿನನಿತ್ಯದ ಜೀವನದಲ್ಲಿ ಹೂವಿಗೊಂದು ಪಾತ್ರ ಇದ್ದೇ ಇದೆ. ಆ್ಯಮ್ಸ್ಟರ್ ಡ್ಯಾಮ್ ನಲ್ಲಿ ಸುಮಾರು ಪ್ರತಿ ಐನೂರು ಮೀಟರಿಗೊಂದರಂತೆ ಹೂವಿನ ಅಂಗಡಿ ಕಾಣಿಸುತ್ತದೆ.ಇಲ್ಲಿನ ಜನರಿಗೆ ಹೆಂಗಸರು, ಗಂಡಸರೆನ್ನದೆ ಎಲ್ಲರಿಗೂ ಹೂವಿನಮೇಲೆ ಪ್ರೀತಿ. ಮನೆಗೆ ಅತಿಥಿಗಳು ಬರುತ್ತಾರೆಂದರೆ ಟೇಬಲ್ ಮೇಲೆ ಹೂಗಳನ್ನಿಟ್ಟು ಸಿಂಗರಿಸಿರುತ್ತಾರೆ.”
ಜೀರಗಿ ಗಂಟ ಕಳ್ಳಿ:ಪ್ರಶಾಂತ್ ಆಡೂರ ಪ್ರಹಸನ
ಅಲ್ಲಾ ಹಂಗ ನನ್ನ ಲಗ್ನದಾಗೂ ಜೀರಗಿ ಗಂಟ ಕಳುವು ಮಾಡಿದ್ರು, ಹಂಗ ನಮ್ಮ ಹೆಂಡತಿ ಮನೆ ಕಡೆ ಒಬ್ಬಕ್ಕಿ ಇದ್ದಾಳ. ಅಕಿ ಪ್ರೋಫೆಶನ್ ಜೀರಗಿ ಗಂಟ ಕಳುವು ಮಾಡೋದ. ಅಕಿಗೆ ಎಲ್ಲಾರೂ ಜೀರಗಿ ಗಂಟ ಕಳ್ಳಿನ ಅಂತಾರ, ಈಗ ಏನಿಲ್ಲಾಂದರ ಅಕಿಗೆ ೩೬-೩೮ ವಯಸ್ಸ. ಆದರ ಅಕಿ ಹತ್ತ ವರ್ಷದೋಕಿ ಇದ್ದಾಗಿಂದ ಕಳ್ಳತನಾ ಶುರು ಮಾಡ್ಯಾಳ. ಇವತ್ತಿಗೂ ನನ್ನ ಹೆಂಡತಿ ಪೈಕಿ ಯಾರದರ ಲಗ್ನ ಇದ್ದರ ಅಕಿಗೆ ಒಂದ ಮದ್ವಿ ಕಾರ್ಡ ಜೊತಿ ಪತ್ಲಾ ಬಡದ ಜೀರಗಿ ಗಂಟ ಕಳುವ ಮಾಡಲಿಕ್ಕೆ ಗುತ್ತಲದಿಂದ ಗಾಡಿ ಖರ್ಚ್ ಕೊಟ್ಟ ಕರಸ್ತಾರ. “
ಹಸಿರು ನೆಲದ ಮೇಲೂ ರೊಕ್ಕದ ಕಣ್ಣು:ರೂಪಶ್ರೀ ಅಂಕಣ
ಮನೆಯ ಮುಂದೆ ಮರವಿದ್ದರೆ ಸಂತೋಷಪಡುವ ಬದಲು, ಅದರ ಮುಂದೆ ತಮ್ಮ ಮನೆಯ “ಸೌಂದರ್ಯ”! ಕಾಣುವುದಿಲ್ಲವೆಂಬ ಕಾರಣಕ್ಕೆ ಮರ ಕಡಿಸುವ ಮೂರ್ಖರಿರುವುದು ಇಂಥ ಪಟ್ಟಣಗಳಲ್ಲಿ ಮಾತ್ರವೇ ಅನ್ನಿಸುತ್ತೆ.
ಆಸ್ಟ್ರೇಲಿಯಾ ಕಲಿಸಿದ ಸಣ್ಣಪುಟ್ಟ ಜೀವನ ಪಾಠಗಳು
“ನಿನ್ನ ಪ್ರಶ್ನೆ ಅರ್ಥವಾಗಲಿಲ್ಲ. ನನಗೆ ನನ್ನ ಗಂಡನ ಜೊತೆ ಇರುವ ಸಂಬಂಧವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ನೀನು ಪ್ರಶ್ನಿಸುತ್ತೀಯಾ? ಇಬ್ಬರು ವಯಸ್ಕರ ನಡುವೆ ಇರುವ ಸಂಬಂಧಕ್ಕೆ ಅವರ ಮಧ್ಯೆ ಪರಸ್ಪರ ಒಪ್ಪಿಗೆಯಿರುವುದು ಮುಖ್ಯವೇ ಹೊರತು, ಅದನ್ನು ಅರ್ಥಮಾಡಿಕೊಳ್ಳುವ ಗೋಜು ಮೂರನೆಯ ವ್ಯಕ್ತಿಗೆ ಯಾಕೆ?









