Advertisement
ಡಾ. ದಿಲೀಪ್‌ ಎನ್ಕೆ ಬರೆದ ಈ ದಿನದ ಕವಿತೆ

ಡಾ. ದಿಲೀಪ್‌ ಎನ್ಕೆ ಬರೆದ ಈ ದಿನದ ಕವಿತೆ

ಸಿಡಿಲ ಚುಕ್ಕಿ

ಬಡಿದ ಸಿಡಿಲುಗಳ
ರಗ್ಗೆಸೆದು ಕವುಚುವ
ಉಮೇದು
ಸರೋವರಕೆ ಗಾಣ ತಕ್ಕುದಲ್ಲ
ಉರುಳ ಇರವನ್ನೇ
ಲೆಕ್ಕಿಸದೆ ತೊನೆದಾಡಿದ
ಹೆಜ್ಜೇನುಗಳೆಷ್ಟೋ
ಸೀಳಿ ಸುಂಯ್ಗರೆದ
ಹದ್ದುಗಳೆಷ್ಟೋ
ಸಿಕ್ಕು ಪಂಜರದ ಬಡತನದಲಿ
ನುಣುಚೆದ್ದ
ಕಾಡು ಬೆಕ್ಕುಗಳೆಷ್ಟೋ
ಉಳಿದು ಪತರಗುಟ್ಟಿದ
ಪತಂಗಗಳೆಷ್ಟೋ
ಕಾವ ಕೊಡಲಾರದೆ
ಇದೋ ಇದೇ ಕೈಯಲ್ಲಿ
ಗೋಳೆಯಾದ
ಜೀರುಂಡೆಗಳೆಷ್ಟೋ
ಕುಡಿ ಕಡೆದು
ಅಪೌಷ್ಟಿಕಾಂಶದ ಚೂರಿ ಚುಚ್ಚಿ
ಅಳಳುತ ಕೊಳೆತ
ಕಟ್ಟಿರುವೆಗಳೆಷ್ಟೋ?

ಬಂಧಿಯಾದವಿಷ್ಟು
ನನ್ನ ನೀಲಿ ನೀಲಿ
ಹೃದಯ ರಂಗದಲಿ
ಸಿಡಿಲ ಚುಕ್ಕಿ
ನನ್ನ ಕವಿತೆ

ಗಲಿಬಿಲಿಯಲಿ
ಹಸಿದ ತಲೆಯ ಜೋಳಿಗೆ
ತುಂಬುತ್ತಾ
ಕಾದು ಕುಳಿತಿದ್ದೇನೆ
ಬಡಿವ ಸಿಡಿಲ
ತಬ್ಬಿ ಹಿಡಿಯಬೇಕೆಂಬ
ಕೆಚ್ಚೆದೆಯಲಿ

ಕಡೆಗಾಲದಲಿ ಬಾಯಿಗೆ
ಮೂರು ನೀರ
ಬಿಡಲೆಂದು
ಮೈದಡವಿ ಬೀಳ್ಕೊಡಲೆಂದು
ಹೋದ ಮೇಲೆ
ನನ್ನೆಸರಿಗೆ ಉಸಿರಾಗಿರಲೆಂದು

About The Author

ಡಾ. ದಿಲೀಪ್ ಎನ್ಕೆ

ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ