ವೆರೋನಾ: ಅಮರ ಪ್ರೇಮದ ನಿದರ್ಶನ
ರೋಮಿಯೋ ಜೂಲಿಯೆಟ್ ದುರಂತ ಪ್ರೇಮ ಕಥೆಯ ಎಳೆಯ ಮೇಲೆ ಇಂದಿಗೂ ಬರುತ್ತಿವೆ, ಮುಂದೆಯೂ ಬರುತ್ತವೆ. ಆದರೆ ಈ ಕಥೆ ಕಾಲ್ಪನಿಕವಲ್ಲ ಎಂಬುದು ಗೊತ್ತೇ? ಇದು ನಿಜವಾಗಿಯೂ ಇಟಾಲಿಯ “ವೆರೋನಾ” ಎಂಬಲ್ಲಿ ನಡೆದಿರುವ ಘಟನೆ! ಈ ಅಮರ ಪ್ರೇಮದ ಘಟನೆಗಳು ಅನೇಕ ಸಾಹಿತಿಗಳನ್ನು ಪ್ರಭಾವಿಸಿದೆ. ಅದರಲ್ಲಿ ವಿಲಿಯಂ ಷೇಕ್ಸ್ಪಿಯರ್ ಕೂಡ ಒಬ್ಬರು!
‘ದೂರದ ಹಸಿರು’ ಸರಣಿಯಲ್ಲಿ ರೋಮೀಯೋ-ಜೂಲಿಯಟ್ ಕಥೆ ನಡೆದ ಸ್ಥಳದ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ
‘ಬದಲಾಗದೆ ಉಳಿದವರು ಮಾತ್ರ ಪುರುಷರು’
ಬಹುತೇಕ ಎಲ್ಲಾ ವಸ್ತು ಸಂಗ್ರಹಾಲಯಗಳಲ್ಲಿ ಇರುವಂತೆ ಇಲ್ಲಿಯೂ ಸಹ ಕಜಾರ್ ಮಹಿಳೆಯರು ಕರಕುಶಲದಲ್ಲಿ, ಅಡುಗೆ ವಿಧಾನದಲ್ಲಿ, ಸೌಂದರ್ಯ ಕಲೆಯಲ್ಲಿ, ಕಾವ್ಯ ಕಟ್ಟುವಿಕೆಯಲ್ಲಿ ಬೆಳೆದು ಬಂದ ಬಗೆಗಳ ಬಗ್ಗೆ ಸಾಕ್ಷಿಸಹಿತ ಪ್ರದರ್ಶನ ಇತ್ತು. 1789-1925 ಈ ಕಾಲದಲ್ಲಿ ಇರಾನ್ ದೇಶವನ್ನು ಆಳಿದ ಕಜಾರ್ ಮನೆತನದ ಹೆಣ್ಣು ಮಕ್ಕಳು ಇಸ್ಲಾಮೀಯರಲ್ಲೇ ಅತ್ಯಂತ ಆಧುನಿಕ ಆಲೋಚನೆ ಇದ್ದವರು ಎಂದು ಹೆಸರಾಗಿದ್ದಾರೆ. ಅಂಜಲಿ ರಾಮಣ್ಣ ಬರಹ
ಪಂಜಾಬಿಗೆ ಹೋಗಿ ಲಸ್ಸಿ ಕುಡಿಯದಿರೆ ಮೆಚ್ಚನಾ ಪರಮಾತ್ಮನು
ಅಮೃತಸರ ಸಿಖ್ಖರ ಮುಖ್ಯ ಸ್ಥಳವಾದರೂ ಇಲ್ಲಿಂದ 11 ಕಿಲೋಮೀಟರ್ ದೂರದಲ್ಲಿ ಇದೆ ಲವ-ಕುಶರ ಜನ್ಮಸ್ಥಾನ. ಈಗ ಅದನ್ನು ರಾಮತೀರ್ಥ ಮಂದಿರ ಎಂದು ಗುರುತಿಸಲಾಗಿದೆ. ಅಲ್ಲೊಂದು ಸಣ್ಣ ಗುಡಿ ಇದೆ. ಅದರ ಮುಂದೆ ಕುಳಿತಿದ್ದ ಹಿರಿಯರೊಬ್ಬರು ‘ಇಲ್ಲಿಗೆ ಯಾರೂ ಬರುವುದೇ ಇಲ್ಲ ಅದಕ್ಕೇ ನಿತ್ಯ ಪೂಜೆಯೂ ಇಲ್ಲ’ ಎಂದರು. ಸಲಾಕೆಯಿಂದ ಮಾಡಿದ್ದ ಬಾಗಿಲಿಗೆ ಬೀಗ ಹಾಕಿತ್ತು. ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ
ಹಿಮಹಾಸಿನ ಮೇಲೆ ಚುಕ್ಕಿ ಎಣಿಸಿದ ಖುಷಿ
ಚಾರಣ ಪ್ರಾಂಭವಾದ ಸುಮಾರು ಒಂದು ಘಂಟೆಯ ನಂತರ ಎಲ್ಲರನ್ನೂ ಹಿಮದ ಮೇಲೆ ಮಲಗಿ ಸುಧಾರಿಸಲು ಹೇಳಿದ ನಮ್ಮ ಗೈಡ್ ಇನ್ನೊಂದು ಸೂಚನೆಯನ್ನೂ ಕೊಟ್ಟರು. ಕಣ್ಣು ಮುಚ್ಚಿ ಮೌನವನ್ನು ಆನಂದಿಸಬೇಕು. ಅಲ್ಲಿಯವರೆಗೂ ಗಿಜಿ ಗಿಜಿ ಎನ್ನುತ್ತಿದ್ದ ಗುಂಪು ತಕ್ಷಣ ಮೌನವಾಯಿತು. ಮೌನ ಆಚರಿಸಿ ಅಂತರ್ಮುಖಿಯಾಗುವುದೊ ಅಥವಾ ಕಣ್ಣಿನ ಮೇಲಿರುವ ತಾರಾಗಣವನ್ನು ಲೆಕ್ಕ ಹಾಕುವುದೋ ಎನ್ನುವ ಗೊಂದಲ. ಗುರುದತ್ ಅಮೃತಾಪುರ ಪ್ರವಾಸ ಕಥನ
ಆನೆಗಳ ಅನಾಥಾಶ್ರಮದಲ್ಲಿ ಮಂಡೋದರಿಯ ನೆನಪಾಯಿತು
ರಾಜೀವ್ ಗಾಂಧಿಯ ನಡೆಯನ್ನು ಕಂಡ ಈ ನೆಲದ ಜನರಿಗೆ ಭಾರತದ ವಿಸ್ತಾರತೆಯ ಬಗ್ಗೆ ಆಸ್ಥೆ ಏನಿಲ್ಲ, ಬೆಂಗಳೂರು ಗೊತ್ತಿಲ್ಲ ಮತ್ತು ಚೆನ್ನೈ ತಮ್ಮದು ಎನ್ನುವುದನ್ನು ಬಿಟ್ಟಿಲ್ಲ. ಎಲ್ಟಿಟಿಈ ಜೊತೆ ಸಂಬಂಧ ಇತ್ತು ಎಂದು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವವರು ಸಂಸದರಾಗಿದ್ದಾರೆ ಎಂದರೆ ನಾವೆಲ್ಲರೂ ಒಂದೇ ಎಂದು ಹಾಡಿಕೊಳ್ಳಲು ಅಡ್ಡಿಯಿಲ್ಲ ಎನ್ನಿಸಿತು. ನಮ್ಮಲ್ಲಿ ಸಿಗುವ ನಾಗಣ್ಣ ಸ್ಟೋರ್ಸ್, ಮಲ್ಲಪ್ಪನ ಅಂಗಡಿ ವಗೈರೆಗಳಂತೆ ಅಲ್ಲಿಯೂ ಗಲ್ಲಿಗಲ್ಲಿಗಳಲ್ಲಿ ಹೇರಳವಾಗಿ ಸಿಗುತ್ತವೆ ಕಾಕಾ ಅಂಗಡಿಗಳು ಮತ್ತು ಮ್ಯಾಗಿ ಮ್ಯಾಗಿ ಮ್ಯಾಗಿ ಟು ಮಿನಿಟ್ಸ್ನಲ್ಲೇ ಸಿಗುತ್ತವೆ. ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.
ವಾಟರ್ ಸ್ಟೋನ್ಸ್ ಪುಸ್ತಕ ಮಳಿಗೆಯೆಂಬ ಜಾಗತಿಕ ಕಿಟಕಿ
ಎಲ್ಲಿಯೇ ಹೋದರೂ ಅಲ್ಲಿನ ನ್ಯೂಸ್ಪೇಪರ್ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ನೋಡುವುದು, ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಮತ್ತೊಂದು ಇಷ್ಟದ ಕೆಲಸ. ಈ ಬಾರಿ ಹಾಗೆ ಹೋಗಿದ್ದು ಲಂಡನ್ನ ಹೃದಯ ಭಾಗದಲ್ಲಿ ಪಿಕಡೆಲಿ ರಸ್ತೆಯಲ್ಲಿ ‘ವಾಟರ್ಸ್ಟೋನ್ಸ್’ ಎನ್ನುವ ಹೆಸರು ಹೊತ್ತು, ವರ್ಷ ಒಂದಕ್ಕೆ ಎಪ್ಪತ್ತೆರಡು ಸಾವಿರ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಸರಸ್ವತಿ ಪ್ರತಿಮೆಯಂತೆ ಕಂಗೊಳಿಸುತ್ತಿರುವ ಪುಸ್ತಕ ಸ್ವರ್ಗಕ್ಕೆ.
ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.
ಮಂಜಿನೂರಿನಲ್ಲಿ ಹಿಮಸಾರಂಗದ ಸ್ನೇಹ
ಶರತ್ಕಾಲದ ಪ್ರಾರಂಭದಲ್ಲಿ ಹಿಮಸಾರಂಗಗಳನ್ನು ಮತ್ತೆ ಫಾರ್ಮ್ ಹೌಸ್ ಗೆ ತರಲು ಹೇಗೆ ಪತ್ತೆ ಹಚ್ಚಲಾಗುತ್ತದೆ ಎನ್ನುವುದನ್ನೆಲ್ಲಾ ವಿವರಿಸುತ್ತಾರೆ. ಇದೂ ಒಂದು ಕೌತುಕದ ಸಂಗತಿ. ನಾವು ಸೊಳ್ಳೆ ಕಂಡರೆ ಹೊಡೆದು ಅಥವಾ ಸೊಳ್ಳೆ ಬತ್ತಿ ಹಾಕಿ ಸಾಯಿಸುತ್ತೇವೆ. ಆದರೆ ಬೇಸಿಗೆಯ ಅತಿಯಾದ ಸೊಳ್ಳೆ ಕಾಟ ಇವರಿಗೆ ವರದಾನವಾಗಿದೆ. ಸೊಳ್ಳೆಯ ಕಾಟ ಎಷ್ಟಿರುತ್ತದೆ ಎಂದರೆ, ಸೊಳ್ಳೆಯ ಕಾಟದಿಂದ ತಪ್ಪಿಸಿಕೊಳ್ಳಲು ಹಿಮಸಾರಂಗಗಳು ಹಿಂಡು ಹಿಂಡಾಗಿ ಗುಂಪಿನಲ್ಲಿ ಚಲಿಸುತ್ತವೆ.
‘ದೂರದ ಹಸಿರು’ ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ
ಇಲ್ಲಿಂದಲೇ ಪಾಂಡವರು ಸ್ವರ್ಗಾರೋಹಣ ಮಾಡಿದರು
ಸರಸ್ವತಿ ನದಿ ಕಣ್ಣಿಗೆ ಕಾಣಸಿಗುವುದು ಇಲ್ಲಿ ಮಾತ್ರ ಮತ್ತು ಶ್ವೇತಶುಭ್ರವಾಗಿ, ರಭಸದಲ್ಲಿ ಹರಿಯುತ್ತಿದ್ದಾಳೆ. ಜ್ಞಾನದಾಯಿನಿ ಸರಸ್ವತಿ ಮಾತೆಗಿಲ್ಲೊಂದು ಅಪರೂಪದ ಮಂದಿರವಿದೆ. ಅಲ್ಲೇ ಅದರೆದುರೇ ಕಾಣುವ ಒಂದು ಹೆಬ್ಬೆರಳು ಗಾತ್ರದ ನೀರಿನ ಝರಿಯು ಮಾನಸ ಸರೋವರದಿಂದ ಬರುತ್ತಿದೆ ಎಂದು ತೋರುತ್ತಾರೆ ಇಲ್ಲಿನ ಜನ. ಇಲ್ಲಿ ಸರಸ್ವತಿ ಹುಟ್ಟಿ, ಹೆಚ್ಚಿನ ಆರ್ಭಟದಿಂದ ಕುಣಿಕುಣಿದು ಹರಿಯುತ್ತಿದ್ದಳಂತೆ. ಮಹಾಭಾರತ ರಚನೆಯಲ್ಲಿ ಮಗ್ನರಾಗಿದ್ದ ವ್ಯಾಸರಿಗೆ ಇವಳ ಸದ್ದು ಕೋಪ ತರಿಸಿತಂತೆ. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.
ಕರೆಂಟು ಬಂದರೆ ಆರೋಗ್ಯ ಹಾಳಾಗುತ್ತಾ?
‘ಜಬ್ ವಿ ಮೆಟ್’ ಸಿನೆಮಾ ನೋಡಿದಾಗಲಿಂದ ಕೂಡ ಆ ಕರೀನ ಕಪೂರ್ಳ ಸ್ಟೈಲ್ನಲ್ಲೇ ಶಾಹಿದ್ನಂತಹ ಬೆಣ್ಣೆ ಹುಡುಗನೊಬ್ಬನ ಜೊತೆ ಒಂದು ರಾತ್ರಿ ಹಳ್ಳಿಯೊಂದರಲ್ಲಿ ಎಗ್ಸ್ಯಾಕ್ಟ್ಲೀ ಹಾಗೇ ಕಳೆಯಬೇಕೆನ್ನುವ ಬಯಕೆ ಉಂಟಾಗಿದ್ದದ್ದು ಸುಳ್ಳಲ್ಲ. ಅದೇ ಆಸೆಯಲ್ಲಿ ಹೊಕ್ಕೆ ರತ್ನಾಲ್ ಎನ್ನುವ ಹಳ್ಳಿಯೊಂದನ್ನು. ಕಚ್ ಎನ್ನುವ ಬಿಳಿ ಮರಳುಗಾಡಿನ ಪುಟ್ಟದಾದ ಚೊಕ್ಕವಾದ ಹಳ್ಳಿಯದು. ಆ ಬೆಳದಿಂಗಳಲ್ಲಿ ಸಿನೆಮಾದಲ್ಲಿ ಆಗೋ ಹಾಗೆ ಬೆಂಕಿಗೆ ಬೆಣ್ಣೆ ಕರಗಲೇ ಇಲ್ಲ ಕಾರಣ ನನ್ನ ವಾಚಾಳಿತನ!